Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಸಂಪಾದಕೀಯ
  4. ಮೀನುಗಾರಿಕಾ ಸಚಿವರೋ, ನಕಲಿ ಗೋರಕ್ಷಕ...

ಮೀನುಗಾರಿಕಾ ಸಚಿವರೋ, ನಕಲಿ ಗೋರಕ್ಷಕ ಪಡೆಯ ಅಧ್ಯಕ್ಷರೋ?

ವಾರ್ತಾಭಾರತಿವಾರ್ತಾಭಾರತಿ5 Feb 2025 9:21 AM IST
share
ಮೀನುಗಾರಿಕಾ ಸಚಿವರೋ, ನಕಲಿ ಗೋರಕ್ಷಕ ಪಡೆಯ ಅಧ್ಯಕ್ಷರೋ?

ರಾಜ್ಯದ ಆರ್ಥಿಕತೆಯಲ್ಲಿ ಪ್ರಮುಖ ಪಾತ್ರವನ್ನು ವಹಿಸಿರುವ ಕರಾವಳಿ ಮೀನುಗಾರಿಕೆ ಹತ್ತು ಹಲವು ಸಮಸ್ಯೆಗಳಿಂದ ನರಳುತ್ತಿದೆ. ಮಲ್ಪೆ, ಗಂಗೊಳ್ಳಿ, ಕೊಡೇರಿ, ಶಿರೂರು ಬಂದರುಗಳ ಅಭಿವೃದ್ಧಿ ಬೇಡಿಕೆ ಬೇಡಿಕೆಯಾಗಿಯೇ ಉಳಿದಿದೆ. ಏಕರೀತಿಯ ಮೀನುಗಾರಿಕಾ ನೀತಿ, ಅಂತರ್‌ರಾಜ್ಯ ಸಮನ್ವಯ, ಬೋಟ್‌ಗಳಿಗೆ ವಿಧಿಸುವ ಸೆಸ್‌ಗಳ ಹಿಂದೆಗೆತ, ಡೀಸೆಲ್ ಸಬ್ಸಿಡಿ ಹೆಚ್ಚಳ, ಬುಲ್‌ಟ್ರಾಲ್-ಲೈಟ್ ಫಿಶಿಂಗ್‌ಗಳಿಗೆ ನಿಯಂತ್ರಣ, ಮೀನುಗಾರರಿಗೆ ವಸತಿ ಇವೆಲ್ಲವೂ ಕರಾವಳಿಯ ಮೀನುಗಾರರ ದಶಕಗಳ ಬೇಡಿಕೆಯಾಗಿವೆ. ಆದರೆ ಈ ಬೇಡಿಕೆಗಳಿಗೆ ಸ್ಪಂದಿಸಬೇಕಾಗಿದ್ದ ಮೀನುಗಾರಿಕಾ ಸಚಿವರು ಮಾತ್ರ ನಾಪತ್ತೆಯಾಗಿದ್ದಾರೆ. ಮೀನುಗಾರರು ತಮ್ಮ ಸಮಸ್ಯೆಗಳನ್ನು ತೋಡಿಕೊಳ್ಳಲು ಸಚಿವರನ್ನು ಹುಡುಕುತ್ತಿರುವ ಹೊತ್ತಿಗೇ, ಮಂಕಾಳ ವೈದ್ಯರು ನಕಲಿ ಗೋರಕ್ಷಕರ ಭಾಷೆಯಲ್ಲಿ ಹೇಳಿಕೆಗಳನ್ನು ನೀಡುತ್ತಾ ಮಾಧ್ಯಮಗಳಲ್ಲಿ ಸುದ್ದಿಯಾಗಿದ್ದಾರೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ನಡೆದಿರುವ ಗೋಕಳ್ಳತನವೊಂದಕ್ಕೆ ಸಂಬಂಧಿಸಿ ಪ್ರತಿಕ್ರಿಯಿಸುತ್ತಾ ‘‘ಗೋಕಳ್ಳತನ ಮುಂದುವರಿದರೆ ಅವರನ್ನು ಸರ್ಕಲ್‌ನಲ್ಲಿ ನಿಲ್ಲಿಸಿ ಗುಂಡು ಹಾರಿಸಲಾಗುವುದು’’ ಎಂದು ಹೇಳಿದ್ದಾರೆ. ‘‘ಉತ್ತರ ಕನ್ನಡ ಜಿಲ್ಲೆಯಲ್ಲಿ ಗೋಕಳ್ಳತನ ಈ ಹಿಂದಿನಿಂದಲೂ ನಡೆಯುತ್ತಾ ಬಂದಿದೆ. ಆದರೆ ಈಗ ನಾವು ಸುಮ್ಮನಿರಲು ಸಾಧ್ಯವಿಲ್ಲ. ಈ ರೀತಿಯ ಪ್ರಕರಣ ಮುಂದುವರಿದರೆ ಗೋಕಳ್ಳರ ಮೇಲೆ ಸರ್ಕಲ್‌ನಲ್ಲಿ ನಿಲ್ಲಿಸಿ ಶೂಟೌಟ್ ಮಾಡಲು ಪೊಲೀಸರಿಗೆ ಆದೇಶ ನೀಡಬೇಕಾಗುತ್ತದೆ’’ ಎಂದು ಅವರು ಎಚ್ಚರಿಸಿದ್ದಾರೆ.

ಗೋವು ಎಂದಲ್ಲ ಯಾವುದೇ ರೀತಿಯ ಕಳ್ಳತನವೂ ಕಾನೂನು ಪ್ರಕಾರ ಅಪರಾಧವಾಗಿದೆ. ಗೋವುಗಳು ರಾಜಕೀಯ ವಿಷಯವಾಗಿರುವುದರಿಂದ, ಅದರ ಕಳ್ಳತನ ಸೂಕ್ಷ್ಮ ವಿಷಯವಾಗಿ ಪರಿಣಮಿಸಿದೆ. ಈ ರಾಜ್ಯದಲ್ಲಿ ಗೋವುಗಳನ್ನು ಕದ್ದು ಸಾಗಿಸಿದ ಆರೋಪಗಳನ್ನು ನಿರ್ದಿಷ್ಟ ಸಮುದಾಯದ ಜನರ ತಲೆಗೆ ಕಟ್ಟಲಾಗುತ್ತದೆಯಾದರೂ, ಕರಾವಳಿಯಲ್ಲಿ ಗೋಕಳ್ಳತನಕ್ಕಾಗಿ ಸಂಘಪರಿವಾರದ ಕಾರ್ಯಕರ್ತರೂ ಪೊಲೀಸರ ಕೈಗೆ ಸಿಕ್ಕಿ ಬಿದ್ದ ಉದಾಹರಣೆಗಳಿವೆ. ದೇಶದಲ್ಲಿ ಗೋಮಾಂಸ ಸಂಸ್ಕರಣೆ ಘಟಕಗಳಿಗಾಗಿ, ಗೋ ಮಾಂಸ ರಫ್ತಿಗಾಗಿ ಬಿಜೆಪಿಯ ನಾಯಕರೂ ಗುರುತಿಸಿಕೊಂಡಿದ್ದಾರೆ. ಬಿಜೆಪಿ ಅಧಿಕಾರದಲ್ಲಿರುವ ಗೋವಾದಲ್ಲಿ ಗೋಮಾಂಸ ಮುಕ್ತವಾಗಿ ಸಿಗುತ್ತದೆ ಮಾತ್ರವಲ್ಲ, ಇದೀಗ ಮಧ್ಯಪ್ರಾಚ್ಯಕ್ಕೆ ಗೋವಾದಿಂದಲೇ ನೇರವಾಗಿ ಬೀಫ್ ರಫ್ತಾಗತೊಡಗಿದೆ. ಗೋಶಾಲೆಗಳಿಂದಲೂ ಅಕ್ರಮವಾಗಿ ಗೋಸಂಸ್ಕರಣಾ ಘಟಕಗಳಿಗೆ ಗೋವುಗಳನ್ನು ಸಾಗಿಸಲಾಗುತ್ತದೆ ಎನ್ನುವ ಆರೋಪಗಳಿವೆ. ಇಂತಹ ಆರೋಪವನ್ನು ಬಿಜೆಪಿಯ ನಾಯಕಿಯಾಗಿರುವ ಮೇನಕಾಗಾಂಧಿಯವರೇ ಮಾಡಿದ್ದಾರೆ. ‘‘ಇಸ್ಕಾನ್ ಸಂಸ್ಥೆ ಗೋವುಗಳನ್ನು ಕಸಾಯಿಖಾನೆಗೆ ಮಾರುತ್ತದೆ’’ ಎನ್ನುವ ಆರೋಪ ಮಾಡಿರುವುದಕ್ಕಾಗಿ ಇಸ್ಕಾನ್ ಮುಖ್ಯಸ್ಥರು ಮೇನಕಾ ಗಾಂಧಿಯ ವಿರುದ್ಧ ಮಾನನಷ್ಟ ಮೊಕದ್ದಮೆಯನ್ನೂ ಹೂಡಿದ್ದಾರೆ. ಕೇಂದ್ರ ಸರಕಾರ ‘ಗೋರಕ್ಷಣೆಯನ್ನು’ ಮಾಡಿದಂತೆ ನಟಿಸುತ್ತಲೇ ಗೋಮಾಂಸ ರಫ್ತಿಗೆ ಪ್ರೋತ್ಸಾಹ ನೀಡುತ್ತಿದೆ. ಬಡ ರೈತರು ತಮ್ಮ ಹಟ್ಟಿಯಲ್ಲಿದ್ದ ಅನುಪಯುಕ್ತ ಗೋವುಗಳನ್ನು ಮಾರಾಟ ಮಾಡುವಾಗ, ವ್ಯಾಪಾರಿಗಳು ಗೋವುಗಳನ್ನು ಕಸಾಯಿಖಾನೆಗೆ ಮಾರುವಾಗ, ಜನಸಾಮಾನ್ಯರು ಗೋಮಾಂಸವನ್ನು ಸೇವಿಸುವಾಗ ಮಾತ್ರ ಈ ರಾಜಕೀಯ ಪಕ್ಷಗಳಿಗೆ ಗೋವುಗಳಲ್ಲಿ ‘ಮಾತೆ’ ಕಾಣ ಸಿಗುತ್ತಾಳೆ.

ಗೋವಿನ ಹೆಸರನ್ನು ದ್ವೇಷ ರಾಜಕಾರಣಕ್ಕೆ ಬಳಸುವ ಶಕ್ತಿಗಳು ವಿಜೃಂಭಿಸುತ್ತಿರುವ ಈ ಸಂದರ್ಭದಲ್ಲಿ ಗೋವಿನ ಕಳ್ಳತನವಾದರೆ ಅದು ಹತ್ತು ಹಲವು ರಾಜಕೀಯ ಆಯಾಮಗಳನ್ನು ಪಡೆದುಕೊಳ್ಳುತ್ತವೆೆ. ‘ಗೋವನ್ನು ಕದ್ದು ಮಾರುತ್ತಾರೆ’ ಎನ್ನುವುದನ್ನೇ ಮುಂದಿಟ್ಟುಕೊಂಡು ಸಂಘಪರಿವಾರ ‘ನಕಲಿ ಗೋರಕ್ಷಕ ಪಡೆ’ ಗಳನ್ನು ಕಟ್ಟಿಕೊಂಡು ದಾಂಧಲೆಗಳನ್ನು ನಡೆಸುತ್ತಿವೆ. ‘ಗೋರಕ್ಷಣೆ’ಯ ಮುಖವಾಡದಲ್ಲಿ ಹಲ್ಲೆ, ದರೋಡೆ, ಹತ್ಯೆಗಳನ್ನು ನಿರಂತರವಾಗಿ ನಡೆಸುತ್ತಾ ಬರುತ್ತಿವೆ. ನಿಜವಾದ ಅರ್ಥದಲ್ಲಿ ಗೋವುಗಳ ಪಾಲನೆ ಮಾಡಿ ಹೈನೋದ್ಯಮ ನಡೆಸುವ ರೈತರೂ ಇವರ ಕಾಟದಿಂದ ಬೇಸತ್ತಿದ್ದಾರೆ. ಈ ನಕಲಿ ಪಡೆಗಳು ಗಲಭೆ ನಡೆಸುವುದಕ್ಕಾಗಿಯೇ ಗೋವುಗಳನ್ನು ಕೊಂದು ಹಾಕಿದ ಉದಾಹರಣೆಗಳಿವೆ. ಇಂತಹ ಸಂದರ್ಭದಲ್ಲಿ ಗೋಕಳ್ಳತನವಾದರೆ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಪೊಲೀಸರಿಗೆ ಆದೇಶ ನೀಡುವುದು ಸರಕಾರದ ಹೊಣೆಗಾರಿಕೆಯಾಗಿದೆ. ಆದರೆ ಮೀನುಗಾರಿಕಾ ಸಚಿವರಾಗಿರುವ ಮಂಕಾಳ ವೈದ್ಯರು, ಒಬ್ಬ ಸಚಿವರಂತೆ ಸಂವಿಧಾನದ ಭಾಷೆಯಲ್ಲಿ ಮಾತನಾಡದೆ, ‘ನಕಲಿ ಗೋರಕ್ಷಕ ದಳದ ಮುಖಂಡ’ನ ಭಾಷೆಯಲ್ಲಿ ಮಾತನಾಡಿದ್ದಾರೆ. ಒಬ್ಬ ಸಚಿವರೇ ಪೊಲೀಸರಿಗೆ ಕಾನೂನನ್ನು ಕೈಗೆತ್ತಿಕೊಳ್ಳಿ ಎಂದು ಬಹಿರಂಗವಾಗಿ ಕರೆ ನೀಡುವುದು ಎಷ್ಟರಮಟ್ಟಿಗೆ ಸರಿ? ಎನ್ನುವ ಪ್ರಶ್ನೆಯನ್ನು ಇದೀಗ ಉತ್ತರ ಕನ್ನಡ ಜಿಲ್ಲೆಯ ಜನತೆ ಕೇಳುತ್ತಿದ್ದಾರೆ. ರಾಜ್ಯದಲ್ಲಿ ಗೋರಕ್ಷಣೆಯ ಹೆಸರಿನಲ್ಲಿ ಒಂದು ಗುಂಪು ನಡೆಸುತ್ತಿರುವ ಕಾನೂನು ಬಾಹಿರ ಚಟುವಟಿಕೆಗಳು ಸಚಿವ ಮಂಕಾಳ ವೈದ್ಯರಿಗೆ ತಿಳಿಯದ್ದೇನೂ ಅಲ್ಲ. ಈ ರಾಜ್ಯದಲ್ಲಿ ನಡೆಯುವ ಅಕ್ರಮ ಗೋಸಾಗಾಟದಲ್ಲಿ ಪರೋಕ್ಷವಾಗಿ ಈ ಸಂಘಟನೆಗಳ ಪಾಲಿದೆ ಎನ್ನುವ ಆರೋಪ ಬಹುಕಾಲದಿಂದಿದೆ. ಗೋಕಳ್ಳರಲ್ಲಿ ಎಲ್ಲ ಧರ್ಮೀಯರೂ ಸೇರಿದ್ದಾರೆ. ಇಷ್ಟಾದರೂ, ಈ ಸಚಿವರು ಇತ್ತೀಚೆಗೆ ನೀಡುತ್ತಿರುವ ಹೇಳಿಕೆಗಳು ಒಂದು ನಿರ್ದಿಷ್ಟ ಧರ್ಮವನ್ನು ಗುರಿ ಮಾಡುತ್ತಿವೆೆ. ಮಾತ್ರವಲ್ಲ ಈ ಮೂಲಕ ಸಂಘಪರಿವಾರವನ್ನು ಮೆಚ್ಚಿಸುವ ಪ್ರಯತ್ನವನ್ನು ಮಾಡುತ್ತಿದ್ದಾರೆ. ಪೊಲೀಸ್ ಇಲಾಖೆ ಮತ್ತು ಸಂಘಪರಿವಾರದ ನಡುವಿನ ಅನೈತಿಕ ಸಂಬಂಧದ ಅರಿವಿದ್ದ ಯಾರೂ ಸಚಿವರ ‘ಗೋಕಳ್ಳರನ್ನು ಕಂಡಲ್ಲಿ ಗೋಲಿಬಾರ್ ನಡೆಸಿ’ ಎನ್ನುವ ಹೇಳಿಕೆ ಮಾಡಬಹುದಾದ ಅನಾಹುತಗಳನ್ನು ಊಹಿಸಬಹುದಾಗಿದೆ.

ಇಂತಹದೊಂದು ಬೇಜವಾಬ್ದಾರಿ ಹೇಳಿಕೆ ನೀಡಿರುವ ಸಚಿವರ ವಿರುದ್ಧ ಮುಖ್ಯಮಂತ್ರಿ ಸಿದ್ದರಾಮಯ್ಯ ತಕ್ಷಣ ಕ್ರಮ ಕೈಗೊಳ್ಳಬೇಕಾಗಿದೆ. ತನ್ನ ಖಾತೆಯ ಜವಾಬ್ದಾರಿಯನ್ನು ನಿಭಾಯಿಸಲು ಸಂಪೂರ್ಣ ವಿಫಲರಾಗಿರುವ ಮಂಕಾಳ ವೈದ್ಯರು, ಉತ್ತರ ಕನ್ನಡದಲ್ಲಿ ಬಿಜೆಪಿಯನ್ನು ಮತ್ತೆ ಬಲಿಷ್ಠಗೊಳಿಸಲು ಗರಿಷ್ಠ ಸಹಾಯವನ್ನು ಮಾಡುತ್ತಿದ್ದಾರೆ. ಇವರ ವೈಫಲ್ಯದ ಕಾರಣದಿಂದಲೇ, ಕಳೆದ ಲೋಕಸಭಾ ಚುನಾವಣೆಯಲ್ಲಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಕಾಂಗ್ರೆಸ್ ಹೀನಾಯ ಸೋಲನುಭವಿಸಿತು. ಉಡುಪಿ ಜಿಲ್ಲೆಗೆ ಈ ಸಚಿವರು ಹೋದರೆ, ಕಾಂಗ್ರೆಸ್ ಕಾರ್ಯಕರ್ತರನ್ನು ಭೇಟಿ ಮಾಡದೇ, ಗುಟ್ಟಾಗಿ ಬಿಜೆಪಿ ನಾಯಕ ಪ್ರಮೋದ್ ಮಧ್ವರಾಜರನ್ನು ಭೇಟಿಯಾಗಿ ನಾಪತ್ತೆಯಾಗುತ್ತಾರೆ. ಮೀನುಗಾರರ ರಕ್ಷಣೆ ಮಾಡಿ ಎಂದು ಕೇಳಿಕೊಂಡರೆ, ಅವರು ಗೋರಕ್ಷಕ ಪಡೆಗಳ ಜೊತೆಗೆ ಗುರುತಿಸಿಕೊಳ್ಳುತ್ತಿದ್ದಾರೆ. ಮಂಕಾಳ ವೈದ್ಯರನ್ನು ಸಚಿವ ಸ್ಥಾನದಿಂದ ಇಳಿಸಿದರೆ ಏಕಕಾಲದಲ್ಲಿ ಗೋವುಗಳನ್ನು ,ಮೀನುಗಾರರನ್ನು ಮತ್ತು ಉತ್ತರ ಕನ್ನಡದಲ್ಲಿ ಕಾಂಗ್ರೆಸ್‌ನ್ನು ಒಟ್ಟಾಗಿ ರಕ್ಷಿಸಿದಂತಾಗುತ್ತದೆ. ಜೊತೆಗೆ ಈ ನಾಡಿನ ಕಾನೂನು ಸುವ್ಯವವಸ್ಥೆಯನ್ನು ಕೂಡ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X