Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಸಂಪಾದಕೀಯ
  4. ಇನ್ನೂ ಅನುರಣಿಸುತ್ತಿರುವ ‘ತಪರಾಕಿ’...

ಇನ್ನೂ ಅನುರಣಿಸುತ್ತಿರುವ ‘ತಪರಾಕಿ’ ಸದ್ದು

ವಾರ್ತಾಭಾರತಿವಾರ್ತಾಭಾರತಿ10 Jun 2024 9:21 AM IST
share
ಇನ್ನೂ ಅನುರಣಿಸುತ್ತಿರುವ ‘ತಪರಾಕಿ’ ಸದ್ದು

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

ನಟಿ, ಬಿಜೆಪಿ ಸಂಸದೆ ಕಂಗನಾ ರಣಾವತ್‌ಗೆ ಸಿಐಎಸ್‌ಎಫ್ ಮಹಿಳಾ ಕಾಸ್ಟೇಬಲ್ ಕುಲ್ವಿಂದರ್ ನೀಡಿರುವ ತಪರಾಕಿಯ ಸದ್ದು ಬೇರೆ ರೂಪದಲ್ಲಿ ಅನುರಣನಗೊಳ್ಳುತ್ತಿದೆ. ಇದು ಕಂಗನಾ ಮತ್ತು ಸಿಬ್ಬಂದಿಯ ನಡುವಿನ ವೈಯಕ್ತಿಕ ಜಗಳವಾಗಿ ಉಳಿಯದೆ ತನ್ನ ವ್ಯಾಪ್ತಿಯನ್ನು ದಿನದಿಂದ ದಿನಕ್ಕೆ ಹಿಗ್ಗಿಸಿಕೊಳ್ಳುತ್ತಿದೆ. ಒಬ್ಬ ಭದ್ರತಾ ಸಿಬ್ಬಂದಿಯಾಗಿ ಕೌರ್ ಎಸಗಿರುವ ಕೃತ್ಯ ಕಾನೂನು ವಿರೋಧಿಯಾದುದು ಮತ್ತು ಶಿಕ್ಷಾರ್ಹವಾದುದು ಮತ್ತು ಈ ಕೃತ್ಯಕ್ಕಾಗಿ ಆಕೆಯನ್ನು ತಕ್ಷಣದಿಂದ ಅಮಾನತುಗೊಳಿಸಲಾಗಿದೆಯಲ್ಲದೆ, ಘಟನೆಯ ಬಗ್ಗೆ ತನಿಖೆಗೆ ಆದೇಶ ನೀಡಲಾಗಿದೆ. ಆದರೆ ಕೌರ್ ತನ್ನ ಕೃತ್ಯವನ್ನು ಸಮರ್ಥಿಸಿಕೊಂಡಿದ್ದಾರೆ. ‘ಹರ್ಯಾಣ ಗಡಿಯಲ್ಲಿ ಹಲವು ತಿಂಗಳಿಂದ ಧರಣಿ ಕೂತಿರುವ ರೈತ ಸಮುದಾಯದಲ್ಲಿ ತನ್ನ ತಂದೆ ತಾಯಿಯರೂ ಇದ್ದಾರೆ. ಆ ಧರಣಿ ನಿರತರನ್ನು ‘ಉಗ್ರರು, ನೂರು ರೂಪಾಯಿಗಾಗಿ ಧರಣಿ ಕೂತಿರುವವರು’ ಎಂದು ಕಂಗನಾ ನಿಂದಿಸಿದ್ದಾರೆ. ನನ್ನ ತಂದೆ ತಾಯಿಗಳ ಗೌರವಕ್ಕಾಗಿ ಉದ್ಯೋಗ ಕಳೆದುಕೊಳ್ಳಲು ನಾನು ಸಿದ್ಧ’ ಎಂದು ಮಾಧ್ಯಮಗಳಲ್ಲಿ ಹೇಳಿಕೆ ನೀಡಿದ್ದಾರೆ. ಇದೇ ಸಂದರ್ಭದಲ್ಲಿ ಕೌರ್ ಅವರನ್ನು ಶಿಕ್ಷಿಸಬಾರದು ಎಂದು ರೈತ ಸಂಘಟನೆಗಳು ಬೀದಿಗಿಳಿದಿವೆ. ತಮಿಳುನಾಡಿನ ಒಂದು ಸಂಘಟನೆ ಆಕೆಯ ಧೈರ್ಯವನ್ನು ಮೆಚ್ಚಿ, ಚಿನ್ನದ ಉಂಗುರವನ್ನು ಉಡುಗೊರೆಯಾಗಿ ಕೊಟ್ಟಿದೆ. ಕೌರ್ ಕಾನೂನು ಕೈಗೆತ್ತಿಕೊಂಡಿರುವುದು ತಪ್ಪೇ ಆಗಿದ್ದರೂ, ಕಂಗನಾ ಅವರ ಸಡಿಲ ನಾಲಗೆಗೆ ಸರಿಯಾದ ಪಾಠವನ್ನು ಕಲಿಸಿದ್ದಾರೆ ಎನ್ನುವ ಇಂಗಿತವನ್ನು ಹಲವರು ವ್ಯಕ್ತಪಡಿಸುತ್ತಿದ್ದಾರೆ. ಬಾಲಿವುಡ್‌ನಲ್ಲಿ ಹಲವು ಸೂಪರ್ ಸ್ಟಾರ್‌ಗಳು ಕಂಗನಾ ಬೆಂಬಲಕ್ಕೆ ನಿಂತಿದ್ದರೆ, ಕೆಲವರು ಕೌರ್ ಪರವಾಗಿಯೂ ಹೇಳಿಕೆಗಳನ್ನು ನೀಡಿದ್ದಾರೆ.

ಚುನಾವಣೆಯ ಗದ್ದಲದಿಂದ ಮರೆಗೆ ಸರಿದಿದ್ದ ರೈತ ಹೋರಾಟವನ್ನು ಕೌರ್‌ನ ತಪರಾಕಿ ಸದ್ದು ಮತ್ತೆ ದೇಶದ ಕೇಂದ್ರಕ್ಕೆ ತಂದು ನಿಲ್ಲಿಸಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಕೌರ್ ಎಸಗಿದ ಕೃತ್ಯವನ್ನು ಕಂಗನಾ ಅವರು ‘ಉಗ್ರವಾದ’ಕ್ಕೆ ಹೋಲಿಸಿದ್ದಾರೆ. ಇದೇ ಸಂದರ್ಭದಲ್ಲಿ ‘‘ಆಕೆ ಧರಿಸಿದ ಬಟ್ಟೆಗೆ ಗೌರವ ಕೊಟ್ಟಿದ್ದೇನೆ. ಇಲ್ಲದೇ ಇದ್ದರೆ ಆಕೆಗೆ ತಿರುಗಿ ನಾನೂ ಬಾರಿಸುತ್ತಿದ್ದೆ’’ ಎಂದೂ ಕಂಗನಾ ಹೇಳಿದ್ದಾರೆ. ಕಾನೂನಿನ ಬಗ್ಗೆ ಕಂಗನಾಗೆ ಇರುವ ನಂಬಿಕೆಯ ಮಿತಿಯನ್ನು ಇದು ಹೇಳುತ್ತಿದೆ. ಭದ್ರತಾ ಸಿಬ್ಬಂದಿಯಾಗಿ ಒಬ್ಬ ಸಂಸದೆಯ ಮೇಲೆ ಕೈ ಮಾಡುವುದು ತಪ್ಪು ಮತ್ತು ಅದು ಶಿಕ್ಷಾರ್ಹ. ಈಗಾಗಲೇ ಆಕೆಯನ್ನು ಕೆಲಸದಿಂದ ವಜಾಗೊಳಿಸುವುದರೊಂದಿಗೆ ಆಕೆಯನ್ನು ಶಿಕ್ಷಿಸುವ ಪ್ರಕ್ರಿಯೆಯೂ ಆರಂಭವಾಗಿದೆ. ಆದರೆ ಇದೇ ಸಂದರ್ಭದಲ್ಲಿ ಕಂಗನಾ ಮತ್ತು ಅವರಂತಹ ಇತರ ರಾಜಕಾರಣಿಗಳನ್ನು ಈ ತಪರಾಕಿ ಆತ್ಮ ವಿಮರ್ಶೆಗೆ ದೂಡುವಂತೆ ಮಾಡಬೇಕು.

ಸಂವಿಧಾನ ಬದ್ಧವಾಗಿ, ಪ್ರಜಾಸತ್ತಾತ್ಮಕ ದಾರಿಯಲ್ಲಿ ಧರಣಿ ಮಾಡುತ್ತಿರುವ, ಸತ್ಯಾಗ್ರಹ ಮಾಡುತ್ತಿರುವ ಜನರನ್ನು ‘ಉಗ್ರವಾದಿಗಳು’ ‘ಭಯೋತ್ಪಾದಕರು’ ‘ನೂರು ರೂಪಾಯಿ ಹಣ ಪಡೆದು ಧರಣಿ ಕೂತವರು’ ಎಂದೆಲ್ಲ ನಿಂದಿಸುವುದು ನೇರವಾಗಿ ಪ್ರಜಾಸತ್ತೆಗೆ ಮಾಡುವ ಅವಮಾನ ಎನ್ನುವ ಅರಿವು ಕಂಗನಾ ಮತ್ತು ಅವರ ಸಂಗಡಿಗರಿಗೆ ಇರಬೇಕಾಗಿದೆ. ಈ ದೇಶದಲ್ಲಿ ಕಳೆದ ಹತ್ತು ವರ್ಷಗಳಿಂದ ಉಗ್ರವಾದ, ಭಯೋತ್ಪಾದನೆಯ ಹಣೆಪಟ್ಟಿಯನ್ನು ಕಟ್ಟಿಕೊಂಡು ನೂರಾರು ಅಮಾಯಕರು ಜೈಲಿನಲ್ಲಿದ್ದಾರೆ. ಅವೆರೆಲ್ಲರೂ ನಾವು ಉಗ್ರರಲ್ಲ ಎನ್ನುವುದನ್ನು ನ್ಯಾಯಾಲಯದಲ್ಲಿ ಸಾಬೀತು ಮಾಡುತ್ತಲೇ ಹಲವು ವರ್ಷಗಳನ್ನು ಜೈಲಿನಲ್ಲಿ ಕಳೆದಿದ್ದಾರೆ. ಕೆಲವರು ವಿಚಾರಣೆ ಎದುರಿಸುತ್ತಾ ಜೈಲಿನಲ್ಲೇ ಮೃತರಾಗಿದ್ದಾರೆ. ಇಂತಹ ಸಂದರ್ಭದಲ್ಲಿ ಒಬ್ಬ ಕಲಾವಿದೆಯಾಗಿರುವ ಕಂಗನಾ ಅವರು ಯಾವುದೇ ಶ್ರೀಸಾಮಾನ್ಯನನ್ನು ಅಥವಾ ತನ್ನ ಹಕ್ಕಿಗಾಗಿ ಬೀದಿಯಲ್ಲಿ ನಿಂತು ಹೋರಾಡುತ್ತಿರುವ ರೈತರನ್ನು ‘ಉಗ್ರವಾದಿಗಳು’ ಎಂದು ಕರೆಯುವಾಗ ಅದರ ಪರಿಣಾಮವನ್ನು ಸಾವಿರ ಬಾರಿ ಯೋಚಿಸಬೇಕು. ನಾಳೆ ಸರಕಾರ ಅವರನ್ನು ಉಗ್ರವಾದಿಗಳು ಎಂದು ಬಂಧಿಸಿದರೆ, ಅದರಿಂದ ಅವರು ಅನುಭವಿಸಬೇಕಾದ ದೈಹಿಕ ಮತ್ತು ಮಾನಸಿಕ ಯಾತನೆ ಕಂಗನಾ ಸ್ವೀಕರಿಸಿದ ತಪರಾಕಿಗಿಂತಲೂ ಭೀಕರವಾಗಿರುತ್ತದೆ. ತನ್ನ ತಂದೆ ತಾಯಿಗಳು ಭಯೋತ್ಪಾದಕರು, ಉಗ್ರರು ಎಂದು ಗುರುತಿಸಿಕೊಂಡು ಜೈಲು ಪಾಲಾಗುವುದನ್ನು ಯಾವ ಮಗಳಾದರೂ ಯಾಕೆ ಸಹಿಸಬೇಕು? ಆ ನೋವನ್ನು ಆಕೆ ತಪರಾಕಿ ರೂಪದಲ್ಲಿ ಕಂಗನಾಗೆ ಮರಳಿಸಿದರೆ ಅದನ್ನು ಕಂಗನಾ ಸ್ವೀಕರಿಸಲೇಬೇಕಾಗುತ್ತದೆ ಅಥವಾ ತಾನು ರೈತರ ವಿರುದ್ಧ ನೀಡಿದ ಹೇಳಿಕೆಯನ್ನು ಆಕೆ ಸಾಬೀತು ಮಾಡಬೇಕು. ಕನಿಷ್ಟ ನೀಡಿದ ಹೇಳಿಕೆಗಾಗಿ ಕ್ಷಮೆಯಾಚಿಸಬೇಕು. ರೈತರ ಹೋರಾಟವನ್ನು ನಿಂದಿಸಿದಾಗ, ಅವಮಾನಿಸಿದಾಗ ಕಂಗನಾ ವಿರುದ್ಧ ಕ್ರಮ ತೆಗೆದುಕೊಳ್ಳದ ಕಾನೂನು, ಕೌರ್‌ನ ವಿರುದ್ಧ ಮಾತ್ರ ಯಾಕೆ ಬಳಕೆಯಾಗುತ್ತದೆ ಎನ್ನುವುದು ಕೂಡ ಚರ್ಚೆಗೆ ಅರ್ಹವಾಗುತ್ತದೆ.

ಕಳೆದ ಐದು ವರ್ಷಗಳಿಂದ ದೇಶಾದ್ಯಂತ ನಡೆಯುತ್ತಿರುವ ರೈತ ಚಳವಳಿಯಲ್ಲಿ ನೂರಕ್ಕೂ ಅಧಿಕ ರೈತರು ಮೃತಪಟ್ಟಿದ್ದಾರೆ. ಪೊಲೀಸರ ದೌರ್ಜನ್ಯಗಳಿಗೆ ಈಡಾಗಿದ್ದಾರೆ. ರಾಜಕಾರಣಿಗಳ ಕಾರಿನಡಿಗೆ ಬಿದ್ದು ಸತ್ತಿದ್ದಾರೆ. ಇವರೆಲ್ಲರ ಜೀವಕ್ಕೆ ಕಂಗನಾ ಅವರು ‘ನೂರು ರೂಪಾಯಿ’ ಬೆಲೆಯನ್ನು ಕಟ್ಟಿದರೆ, ಹೋರಾಟಗಾರರ ಮೇಲೆ ಅದು ಬೀರುವ ಪರಿಣಾಮವೇನು? ಎನ್ನುವ ಅರಿವು ಆಕೆಗೆ ಇರಬೇಕು. ಉಗ್ರವಾದಿಗಳನ್ನು ಮುಖ್ಯವಾಹಿನಿಗೆ ಬನ್ನಿ ಎಂದು ಕರೆಯುವ ಸರಕಾರ, ಪ್ರಜಾಸತ್ತಾತ್ಮಕ ದಾರಿಯಲ್ಲಿ ಹೋರಾಟ ಮಾಡುವವರನ್ನು ಉಗ್ರವಾದಿಗಳೆಂದು ಕರೆದು ಅವರನ್ನು ಉಗ್ರವಾದಕ್ಕೆ ಪ್ರಚೋದಿಸುವುದು ಅಪರಾಧವಲ್ಲವೆ? ರೈತರ ಹೋರಾಟಕ್ಕೆ ಸ್ಪಂದಿಸುವುದು ಬೇಡ, ಕನಿಷ್ಠ ಅವರನ್ನು ಅಪಮಾನಿಸುವುದು ಎಷ್ಟು ಸರಿ? ಇದು ಯಾಕೆ ಶಿಕ್ಷಾರ್ಹವಾಗುವುದಿಲ್ಲ? ರೈತರು ಪರೋಕ್ಷವಾಗಿ ಹಿಂಸೆಗಿಳಿಯಬೇಕು ಎನ್ನುವುದು ಇವರ ಬಯಕೆಯೆ? ಒಂದು ತಪರಾಕಿಗೇ ಇಷ್ಟೊಂದು ನೊಂದು ಬೆಂದಿರುವ ಕಂಗನಾಗೆ ಬೀದಿಯಲ್ಲಿ ಪೊಲೀಸರ ದೌರ್ಜನ್ಯಗಳಿಗೆ ಈಡಾಗುತ್ತಿರುವ ರೈತರ ನೋವು, ಸಂಕಟಗಳು ಯಾಕೆ ತಟ್ಟುವುದಿಲ್ಲ. ಕೌರ್‌ನ ಸೇನೆಯ ಬಟ್ಟೆಗೆ ಗೌರವ ಕೊಟ್ಟು ಆಕೆಗೆ ತಿರುಗಿ ಬಾರಿಸಲಿಲ್ಲ ಎನ್ನುವ ಕಂಗನಾಗೆ, ಧರಣಿ ಕೂತ ರೈತ ಕುಟುಂಬದ ಸಾವಿರಾರು ಯುವಕರು ಸೈನಿಕರಾಗಿ ಗಡಿಯಲ್ಲಿ ಸೇವೆ ಸಲ್ಲಿಸುವುದು ಗೊತ್ತಿಲ್ಲವೆ? ಧರಣಿ ಕೂತ ರೈತರನ್ನು ಅವಮಾನಿಸುವುದು ಬೇರೆಯಲ್ಲ, ಆ ಸೈನಿಕರ ಬಟ್ಟೆಯನ್ನು ಅವಮಾನಿಸುವುದು ಬೇರೆಯಲ್ಲ.

ವರ್ಷಗಳ ಹಿಂದೆ ಮುಂಬೈಯ ರೈಲಿನಲ್ಲಿ ಭದ್ರತಾ ಸಿಬ್ಬಂದಿಯೊಬ್ಬ ಒಂದು ನಿರ್ದಿಷ್ಟ ಸಮುದಾಯಕ್ಕೆ ಸೇರಿದ ಮೂವರು ಅಮಾಯಕರನ್ನು ಯಾವುದೇ ಕಾರಣವಿಲ್ಲದೆ ಗುಂಡು ಹಾರಿಸಿ ಕೊಂದು ಹಾಕಿದ. ಗುಂಡು ಹಾರಿಸಿದ ಬಳಿಕ ಆತ ಪ್ರಧಾನಿ ಮೋದಿಗೆ ಜೈಕಾರವನ್ನು ಹಾಕಿದ್ದ. ಅಂದರೆ ಆತ ಆ ಕೃತ್ಯವನ್ನು ಎಸಗಲು ನಿಜವಾದ ಸ್ಫೂರ್ತಿ ಯಾರು ಎನ್ನುವುದನ್ನು ಆತನ ಆ ಘೋಷಣೆಯಿಂದ ನಾವು ಅರ್ಥ ಮಾಡಿಕೊಳ್ಳಬೇಕು. ಕಳೆದ ಚುನಾವಣೆಯಲ್ಲಿ ಹಿಂದೂ-ಮುಸ್ಲಿಮ್ ಎಂದು ದ್ವೇಷವನ್ನು ಕಕ್ಕಿದ್ದ ಪ್ರಧಾನಿ ಮೋದಿಯವರು ಆ ಮೂಲಕ ಯಾರ್ಯಾರಿಗೆಲ್ಲ ಹಿಂಸೆಯನ್ನು ಎಸಗಲು ಸ್ಫೂರ್ತಿಯಾಗಿದ್ದಾರೆ ಎನ್ನುವ ವಿಪರ್ಯಾಸವನ್ನು ನಾವು ಗಮನಿಸಬೇಕು. ಭದ್ರತಾ ಸಿಬ್ಬಂದಿ ಜೈಲು ಶಿಕ್ಷೆ ಅನುಭವಿಸಿದ್ದಾನೆ. ಆದರೆ, ಆತನನ್ನು ಅಂತಹದೊಂದು ಕೃತ್ಯವೆಸಗಲು ಕಾರಣವಾದ ಶಕ್ತಿಗಳಿಗೆ ಯಾವ ಶಿಕ್ಷೆಯೂ ಆಗಿಲ್ಲ. ಕೌರ್‌ಗೆ ಶಿಕ್ಷೆಯಾಗಬೇಕು ನಿಜ. ಆದರೆ ಆಕೆಯನ್ನು ಅಂತಹ ಸ್ಥಿತಿಗೆ ಇಳಿಸಿದ ಕಂಗನಾಗೆ ಶಿಕ್ಷೆಯಾಗಬೇಡವೆ? ಕಾನೂನು ಈ ದಿಕ್ಕಿನಲ್ಲೂ ಯೋಚಿಸಬೇಕಾಗಿದೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X