Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
    • ಕ್ರೈಂ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ಪುಸ್ತಕ ಸಾಂಗತ್ಯ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಸಂಪಾದಕೀಯ
  4. ಅಡ್ಡಮತದಾನದ ಖೆಡ್ಡಾಕ್ಕೆ ಬಿದ್ದ ರಾಜ್ಯ...

ಅಡ್ಡಮತದಾನದ ಖೆಡ್ಡಾಕ್ಕೆ ಬಿದ್ದ ರಾಜ್ಯ ಬಿಜೆಪಿ

ವಾರ್ತಾಭಾರತಿವಾರ್ತಾಭಾರತಿ26 Jun 2026 8:30 AM IST
share
ಅಡ್ಡಮತದಾನದ ಖೆಡ್ಡಾಕ್ಕೆ ಬಿದ್ದ ರಾಜ್ಯ ಬಿಜೆಪಿ

ವಿಧಾನ ಪರಿಷತ್ ಚುನಾವಣೆ ಮುಗಿದು ರಾಜ್ಯ ಕಾಂಗ್ರೆಸ್ ತನ್ನ 5ನೇ ಅಭ್ಯರ್ಥಿಯನ್ನು ಗೆಲ್ಲಿಸಿ ಮೀಸೆ ತಿರುವುತ್ತಿದೆ. ಫಲಿತಾಂಶ ಹೊರ ಬಿದ್ದು ವಾರವಾಗಿದೆಯಾದರೂ, ಅಡ್ಡ ಮತದಾನದ ರಹಸ್ಯವನ್ನು ಭೇದಿಸಲು ಬಿಜೆಪಿ ವರಿಷ್ಠರಿಗೆ ಸಾಧ್ಯವಾಗಿಲ್ಲ. ಈ ಚುನಾವಣೆಯಲ್ಲಿ ತನ್ನ ಅಭ್ಯರ್ಥಿಯನ್ನು ಗೆಲ್ಲಿಸುವುದರ ಜೊತೆ ಜೊತೆಗೇ ಬಿಜೆಪಿಯೊಳಗಿರುವ ಭಿನ್ನಮತದ ಪಟಾಕಿ ಗೋದಾಮಿಗೆ ಬೆಂಕಿ ಹಚ್ಚುವಲ್ಲೂ ಕಾಂಗ್ರೆಸ್ ಯಶಸ್ವಿಯಾಗಿದೆ. ಬಿಜೆಪಿಯೊಳಗೆ ಎಲ್ಲರೂ ಪರಸ್ಪರರನ್ನು ಅನುಮಾನದಿಂದ ನೋಡುವ ಸ್ಥಿತಿ ನಿರ್ಮಾಣವಾಗಿದೆ. ವಿಜಯೇಂದ್ರ ನಾಯಕತ್ವದ ಬಗ್ಗೆ ಅಸಮಾಧಾನ ಹೊಂದಿರುವ ಬಿಜೆಪಿ ನಾಯಕರು ಇದೇ ಸಂದರ್ಭವನ್ನು ಬಳಸಿಕೊಂಡು ಮತ್ತೆ ಹೊಸದಾಗಿ ಭಿನ್ನಮತದ ರಾಗ ಎಳೆದಿದ್ದಾರೆ. ವಿಧಾನ ಪರಿಷತ್ ಚುನಾವಣೆಯನ್ನು ಬಿಜೆಪಿಯ ನಾಯಕತ್ವಕ್ಕಾದ ಹಿನ್ನಡೆ ಎಂದು ವ್ಯಾಖ್ಯಾನಿಸುವುದಕ್ಕೆ ಬಿಜೆಪಿಯೊಳಗಿರುವ ಒಂದು ಗುಂಪು ಪ್ರಯತ್ನಿಸುತ್ತಿದೆ. ಅಡ್ಡಮತದಾನಗೈದವರ ಬಗ್ಗೆ ವರಿಷ್ಠರಿಗೆ ಮಾಹಿತಿ ನೀಡಲಾಗಿದೆ ಎಂದು ರಾಜ್ಯಾಧ್ಯಕ್ಷ ರು ಹೇಳಿದ್ದರೆ, ಭಿನ್ನಮತೀಯ ಗುಂಪು ಅಡ್ಡಮತದಾನಕ್ಕೆ ರಾಜ್ಯಾಧ್ಯಕ್ಷರನ್ನೇ ಹೊಣೆ ಮಾಡಿ ವರಿಷ್ಠರಿಗೆ ದೂರು ಸಲ್ಲಿಸಿದೆ. ಬಿಜೆಪಿಯೊಳಗೆ ನಾಯಕತ್ವ ಬದಲಾವಣೆಯ ಅಗತ್ಯವನ್ನು ಈ ಚುನಾವಣೆಯ ಫಲಿತಾಂಶ ಎತ್ತಿ ಹಿಡಿದಿದೆ ಎಂದು ವರಿಷ್ಠರಿಗೆ ಮನವರಿಕೆ ಮಾಡುವ ಪ್ರಯತ್ನ ನಡೆಯುತ್ತಿದೆ. ಸದ್ಯಕ್ಕೆ ಅಡ್ಡಮತದಾನ ಮಾಡಿರುವ ಯಾವುದೇ ಬಿಜೆಪಿ ಶಾಸಕರೂ ತುಟಿ ಬಿಚ್ಚಿಲ್ಲ. ‘ನಾವು ಅವರಲ್ಲ’ ಎಂದೇ ಎಲ್ಲರೂ ಹೇಳುತ್ತಿದ್ದಾರೆ. ಇದೇ ಸಂದರ್ಭದಲ್ಲಿ, ಮತದಾನದ ಗೌಪ್ಯವನ್ನು ಬಹಿರಂಗ ಪಡಿಸುವುದಕ್ಕೆ ಒತ್ತಾಯಿಸುವುದು ಎಷ್ಟಮಟ್ಟಿಗೆ ಸರಿ ? ಎನ್ನುವ ಪ್ರಶ್ನೆಯೂ ಸಾಂವಿಧಾನಿಕ ನೆಲೆಯಲ್ಲಿ ಮುನ್ನೆಲೆಗೆ ಬಂದಿದೆ.

ಅಡ್ಡಮತದಾನವನ್ನು ಮುಂದಿಟ್ಟು ತನ್ನ ನಾಯಕತ್ವ ಪ್ರಶ್ನೆಗೀ ಡಾಗುತ್ತಿರುವಂತೆಯೇ, ವಿಜಯೇಂದ್ರ ಪ್ರಕರಣಕ್ಕೆ ಟ್ವಿಸ್ಟ್ ನೀಡಿದ್ದಾರೆ. ಹಾಗಾದರೆ ‘ನಾವು ಅಡ್ಡಮತದಾನ ಮಾಡಿಲ್ಲ ’ ಎಂದು ಎಲ್ಲ ಶಾಸಕರು ಧರ್ಮಸ್ಥಳದಲ್ಲಿ ಪ್ರಮಾಣ ಮಾಡಲಿ ಎಂದು ಸವಾಲು ಹಾಕಿದ್ದಾರೆ. ಮಾತ್ರವಲ್ಲ, ಧರ್ಮಸ್ಥಳದಲ್ಲಿ ಪಕ್ಷದ ಶಾಸಕಾಂಗ ಸಭೆ ನಡೆಸುವುದಾಗಿಯೂ ಬೆದರಿಸಿದ್ದಾರೆ. ಯಡಿಯೂರಪ್ಪ ಬಿಟ್ಟ ಬಾಣ ನೇರವಾಗಿ ದಿಲ್ಲಿಯಲ್ಲಿ ಅಡಗಿ ಕೂತ ವಿರೋಧ ಬಣಕ್ಕೆ ತಾಗಿದೆ. ಧರ್ಮಸ್ಥಳದ ಆಣೆ ಪ್ರಮಾಣದ ವಿಷಯ ಮುನ್ನೆಲೆಗೆ ಬರುತ್ತಿದ್ದಂತೆಯೇ ದಿಲ್ಲಿಯ ವರಿಷ್ಠರು ಏಕಾಏಕಿ ಮಧ್ಯ ಪ್ರವೇಶಿಸಿದ್ದಾರೆ. ಧರ್ಮಸ್ಥಳ, ಮಂಜುನಾಥ ಎನ್ನುತ್ತಿದ್ದಂತೆಯೇ ಅಡ್ಡಮತದಾನ ಮಾಡಿದ ಶಾಸಕರು ಬೆದರಿ ಬಾಯಿ ಬಿಟ್ಟರೆ ದಿಲ್ಲಿಯಲ್ಲಿ ಅಡಗಿ ಕೂತ ಅಡ್ಡಮತದಾನದ ರೂವಾರಿಗಳ ಹೆಸರೂ ಬಹಿರಂಗಗೊಳ್ಳುವ ಸಾಧ್ಯತೆಯಿತ್ತು. ‘ರಾಜಕೀಯ ಕಾರಣಗಳಿಗಾಗಿ ಧರ್ಮಸ್ಥಳವನ್ನು ಎಳೆದು ತರುವುದು ಸರಿಯಲ್ಲ’ ಎನ್ನುವ ಉಪದೇಶವನ್ನು ದಿಲ್ಲಿಯ ವರಿಷ್ಠರು ರಾಜ್ಯ ನಾಯಕರಿಗೆ ಮಾಡಿ ಅವರನ್ನು ತಡೆದಿದ್ದಾರೆ ಎನ್ನಲಾಗಿದೆ. ತಮ್ಮ ತಮ್ಮ ರಾಜಕೀಯ ಲಾಭಕ್ಕಾಗಿ ದೇವರನ್ನು ಅತ್ಯಂತ ಹೀನಾಯವಾಗಿ ಬಳಸಿಕೊಂಡು ಬಂದಿರುವ ಬಿಜೆಪಿ ನಾಯಕರು, ಅಡ್ಡಮತದಾನ ವಿಷಯದಲ್ಲಿ ಮಾತ್ರ ದೇವರನ್ನು ದೂರ ಇಡಲು ಮುಂದಾಗಿರುವುದು ಬಿಜೆಪಿಯೊಳಗೆ ಕೆಲವು ನಾಯಕರಲ್ಲಿ ಸೋಜಿಗವುಂಟು ಮಾಡಿದೆ.

ಬಿಜೆಪಿಯ ಆರೆಸ್ಸೆಸ್ ಕೂಸು ‘ಸಜ್ಜನ ರಾಜಕಾರಣಿ’ ಎಂದು ಕುಖ್ಯಾತರಾಗಿರುವ ಎಸ್. ಸುರೇಶ್ ಕುಮಾರ್ ಹೇಳಿಕೆ ನೀಡಿದ್ದು ‘‘ನಮ್ಮ ಪಕ್ಷದ ರಾಜ್ಯಾಧ್ಯಕ್ಷರ ಈ ಘೋಷಣೆ ನನಗೆ ನಿಜಕ್ಕೂ ದಿಗ್ಭ್ರಮೆ ಉಂಟು ಮಾಡಿದೆ. ಶ್ರೀ ಕ್ಷೇತ್ರ ಧರ್ಮಸ್ಥಳ ಅದರದೇ ಆದ ಪಾವಿತ್ರ್ಯ ಹೊಂದಿದೆ. ರಾಜಕಾರಣದ ಕೀಳು ಮಟ್ಟದ ಅಡ್ಡಮತದಾನದ ಅಪಚಾರಕ್ಕೆ ಮಂಜುನಾಥ ಸ್ವಾಮಿಯವರನ್ನು ಎಳೆದು ತರುವುದು ತಪ್ಪು’’ ಎಂದಿದ್ದಾರೆ. ಅವರಿಗೆ ಸಂವಿಧಾನಕ್ಕಾಗುವ ಅಪಚಾರದ ಬಗ್ಗೆ ಇಲ್ಲಿ ಯಾವುದೇ ತಕರಾರೂ ಇಲ್ಲ. ಇಷ್ಟಕ್ಕೂ ರಾಮನ ಹೆಸರಿನಲ್ಲಿ, ಆಂಜನೇಯನ ಹೆಸರಿನಲ್ಲಿ ಗಲಭೆ ಎಬ್ಬಿಸಿ ರಾಜಕೀಯ ಅಪಚಾರಗಳನ್ನು ಸರಣಿ ರೂಪದಲ್ಲಿ ಮಾಡಿಕೊಂಡು ಬಂದಾಗ ಸುಮ್ಮನಿದ್ದ ಈ ಸಜ್ಜನ ರಾಜಕಾರಣಿ, ಪ್ರಮಾಣ ವಿಷಯದಲ್ಲಿ ಮಾತ್ರ ಯಾಕೆ ಒಮ್ಮೆಲೇ ಮುಂದೆ ಬಂದು ಹೇಳಿಕೆ ನೀಡಿದ್ದಾರೆ? ಎಂದು ಕೆಲವರು ಕೇಳುತ್ತಿದ್ದಾರೆ. ಇದೇ ಸಂದರ್ಭದಲ್ಲಿ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರು ಹೇಳಿಕೆ ನೀಡಿ ‘‘ಕೇಂದ್ರದ ವರಿಷ್ಠರಿಗೆ ಯಾರು ಅಡ್ಡಮತದಾನ ಮಾಡಿರುವುದು ಎನ್ನುವುದು ಈಗಾಗಲೇ ಗೊತ್ತಿದೆ. ಆದುದರಿಂದ ಪ್ರಮಾಣ ಮಾಡುವ ಅಗತ್ಯವಿಲ್ಲ. ಅವರು ಸೂಕ್ತ ಕ್ರಮ ತೆಗೆದುಕೊಳ್ಳುತ್ತಾರೆ’’ ಎಂದು ಸಮಜಾಯಿಶಿ ನೀಡಿದ್ದಾರೆ. ದಿಲ್ಲಿಯ ವರಿಷ್ಠರು ರಾಜ್ಯದ ಶಾಸಕರಿಗೆ ಸೂಕ್ತ ಎಚ್ಚರಿಕೆ ನೀಡಿದ್ದರೆ ಈ ಅಡ್ಡಮತದಾನವನ್ನು ತಪ್ಪಿಸಬಹುದಿತ್ತು. ಮಾಜಿ ಮುಖ್ಯಮಂತ್ರಿ ಸದಾನಂದ ಗೌಡ ಅವರೂ ‘‘ಅಡ್ಡ ಮತದಾನದ ಬಗ್ಗೆ ನನಗೆ ಸುಳಿವು ಸಿಕ್ಕಿದಾಗಲೇ ಸಂಬಂಧ ಪಟ್ಟವರಿಗೆ ತಿಳಿಸಿದ್ದೆ. ಆದರೆ ಅವರಾರೂ ಗಂಭೀರವಾಗಿ ತೆಗೆದುಕೊಂಡಿಲ್ಲ’’ ಎಂದು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಂದರೆ, ಅಡ್ಡಮತದಾನ ನಡೆಯಬೇಕು ಎನ್ನುವುದು ಕೆಲವು ವರಿಷ್ಠರ ಒಳಗಿನ ಇಂಗಿತವಾಗಿತ್ತು. ಈ ಮೂಲಕ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರ ಬಣಕ್ಕೆ ಮುಜುಗರವನ್ನು ಸೃಷ್ಟಿಸುವುದು ಅವರ ಉದ್ದೇಶವಾಗಿತ್ತು. ಪ್ರಹ್ಲಾದ್‌ಜೋಶಿ, ಸಂತೋಷ್ ಮೊದಲಾದ ವರಿಷ್ಠರು ದಿಲ್ಲಿಯಲ್ಲಿ ಕುಳಿತು ಆಡಿದ ರಾಜಕೀಯದ ಫಲವೇ ಈ ಅಡ್ಡಮತದಾನ ಎನ್ನುವುದು ಬಿಜೆಪಿಯೊಳಗಿರುವ ಕೆಲವು ನಾಯಕರ ಅಭಿಮತ . ಆದುದರಿಂದಲೇ ದಿಲ್ಲಿಯ ವರಿಷ್ಠರಿಗೇ ಈ ಅಡ್ಡಮತದಾನದ ಹಿಂದಿರುವ ಶಾಸಕರ ಹೆಸರು ಹೊರ ಬೀಳುವುದು ಬೇಡವಾಗಿದೆ.

ಅಡ್ಡಮತದಾನಕ್ಕೆ ಸಂಬಂಧಿಸಿ ಸತ್ಯಶೋಧನಾ ತಂಡವೊಂದನ್ನು ರಚಿಸಲಾಗಿದ್ದು ಅದು ಈಗಾಗಲೇ ತನ್ನ ಸತ್ಯದ ಹುಡುಕಾಟವನ್ನು ಮುಗಿಸಿ ವರದಿ ಸಿದ್ಧ್ದಪಡಿಸಿದೆ ಎನ್ನಲಾಗುತ್ತಿದೆ. ‘‘ಅಡ್ಡಮತದಾನಕ್ಕೆ ಸಂಬಂಧಿಸಿದ ಸಂಪೂರ್ಣ ವರದಿಯನ್ನು ಸಿದ್ಧಪಡಿಸಲಾಗಿದೆ. ಅದನ್ನು ಗೋಪ್ಯವಾಗಿ ಸೀಲ್ಡ್ ಕವರ್‌ನಲ್ಲಿ ಇಡಲಾಗಿದೆ. ಈ ವರದಿ ಯಾವ ಆಧಾರದ ಮೇಲೆ, ಹೇಗೆ ಸಿದ್ಧಪಡಿಸಲಾಗಿದೆ ಎಂಬ ವಿವರಣೆ ನೀಡಿದ ಬಳಿಕ ಅದನ್ನು ಪಕ್ಷದ ಮುಖಂಡರಿಗೆ ಒಪ್ಪಿಸಲಾಗುತ್ತದೆ. ವರದಿ ಸಿದ್ಧತೆಗಾಗಿ ಹಲವು ವ್ಯಕ್ತಿಗಳೊಂದಿಗೆ ಚರ್ಚೆ ನಡೆಸಲಾಗಿದ್ದು, ಲಭ್ಯವಾದ ನಿಖರ ಮಾಹಿತಿಯನ್ನು ಆಧರಿಸಿ ವರದಿ ಸಿದ್ಧಪಡಿಸಲಾಗಿದೆ’’ ಎಂದು ತಂಡದ ಅಧ್ಯಕ್ಷ ಸಿ.ಟಿ. ರವಿ ಮಾಧ್ಯಮಕ್ಕೆ ತಿಳಿಸಿದ್ದಾರೆ. ‘‘ಗೋಪ್ಯ ಮತದಾನ ಆಗಿರುವುದರಿಂದ ಕೇವಲ ಸಾಂದರ್ಭಿಕ ಸಾಕ್ಷ್ಯಗಳ ಆಧಾರದ ಮೇಲೆ ಕೆಲವರನ್ನು ಅನುಮಾನಿಸಬಹುದೇ ಹೊರತು ಯಾರನ್ನೂ ನೇರವಾಗಿ ಆರೋಪಿಸ್ಥಾನದಲ್ಲಿ ನಿಲ್ಲಿಸಲು ಸಾಧ್ಯವಿಲ್ಲ’’ ಎಂದೂ ಅವರು ಸ್ಪಷ್ಟಪಡಿಸಿದ್ದಾರೆ. ಅಡ್ಡಮತದಾನ ಮಾಡಿದವರ ಹೆಸರು ಈಗಾಗಲೇ ನಾಡಿನ ಜನತೆ ಊಹಿಸಿದ್ದಾರೆ. ಅವರನ್ನು ಗುರುತಿಸಿ ಬಿಜೆಪಿ ಶಿಸ್ತುಕ್ರಮ ತೆಗೆದುಕೊಳ್ಳುತ್ತದೆಯೇ ಎನ್ನುವುದು ಬಿಜೆಪಿ ಕಾರ್ಯಕರ್ತರ ಮುಂದಿರುವ ಪ್ರಶ್ನೆ. ಬರೇ ಊಹೆ ಮಾಡಿ ವರದಿ ಸಲ್ಲಿಸುವುದಕ್ಕೆ ಒಂದು ತಂಡವನ್ನು ಯಾಕೆ ರಚಿಸಬೇಕಾಗಿತ್ತು ? ಎಂದು ಬಿಜೆಪಿಯೊಳಗಿರುವ ಕೆಲವು ನಾಯಕರು ಕೇಳುತ್ತಿದ್ದಾರೆ.

Tags

EditorialBJPcross-voting
share
ವಾರ್ತಾಭಾರತಿ
ವಾರ್ತಾಭಾರತಿ
Next Story
X