Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಸಂಪಾದಕೀಯ
  4. ಪ್ರೀತಿಸುವವರನ್ನು ದ್ವೇಷಿಸುವವರು!

ಪ್ರೀತಿಸುವವರನ್ನು ದ್ವೇಷಿಸುವವರು!

ವಾರ್ತಾಭಾರತಿವಾರ್ತಾಭಾರತಿ6 Oct 2025 7:26 AM IST
share
ಪ್ರೀತಿಸುವವರನ್ನು ದ್ವೇಷಿಸುವವರು!

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

‘ಐ ಲವ್ ಮುಹಮ್ಮದ್’ ಎನ್ನುವ ಪದವನ್ನು ಅರ್ಥಮಾಡಿಕೊಳ್ಳದಷ್ಟು ಅನಕ್ಷರಸ್ಥ ರಾಜ್ಯವೇನಲ್ಲ ಉತ್ತರ ಪ್ರದೇಶ. ದ್ವೇಷವನ್ನೇ ಮೈ ತುಂಬಾ ಹೊದ್ದುಕೊಂಡವರಿಗೆ ಲವ್ ಮತ್ತು ಮುಹಮ್ಮದ್ ಈ ಎರಡೂ ಪದಗಳು ಅಪಥ್ಯವಾಗುವುದು ಸಹಜ. ಈ ಕಾರಣಕ್ಕಾಗಿಯೇ ಉತ್ತರ ಪ್ರದೇಶದಲ್ಲಿ ಮುಹಮ್ಮದರನ್ನು ಪ್ರೀತಿಸುತ್ತೇವೆ ಎಂದು ಹೇಳಿದವರ ವಿರುದ್ಧ ಸರಕಾರ ಎಫ್‌ಐಆರ್ ದಾಖಲಿಸಿ ಅವರನ್ನು ಬಂಧಿಸುತ್ತಿದೆ. ಸೆಪ್ಟಂಬರ್ 4ರಂದು ಕಾನ್ಪುರದ ರಾವತ್‌ಪುರದಲ್ಲಿ ಪ್ರವಾದಿ ಮುಹಮ್ಮದರ ಹುಟ್ಟು ಹಬ್ಬ ದಿನದ ಮೆರವಣಿಗೆಯಲ್ಲಿ ‘ಐ ಲವ್ ಮುಹಮ್ಮದ್’ ಎನ್ನುವ ಬ್ಯಾನರ್ ಕಂಡು ಬಂದಿರುವುದು ಕೆಲವು ಸಂಘಪರಿವಾರ ಕಾರ್ಯಕರ್ತರಿಗೆ ಸಹಿಸಲು ಕಷ್ಟವಾಯಿತು. ಸಮಾಜದಲ್ಲಿ ಪರಸ್ಪರ ದ್ವೇಷಿಸಲು ಹಗಲು ರಾತ್ರಿ ನಾವಿಲ್ಲಿ ದುಡಿಯುತ್ತಿರುವಾಗ ಸಾರ್ವಜನಿಕ ಮೆರವಣಿಗೆಯೊಂದರಲ್ಲಿ ‘ಮುಹಮ್ಮದರನ್ನು ಪ್ರೀತಿಸುತ್ತೇವೆ’ ಎಂಬ ಘೋಷಣೆಯನ್ನು ಮಾಡಲು ಎಷ್ಟು ಧೈರ್ಯ?

ಎಂದು ದೂರುಗಳನ್ನು ದಾಖಲಿಸಿದರು. ಇದನ್ನೇ ಕಾಯುತ್ತಿದ್ದ ಉತ್ತರ ಪ್ರದೇಶದ ಪೊಲೀಸರು ತಕ್ಷಣ ಸಂಘಟಕರ ವಿರುದ್ಧ ಪ್ರಕರಣ ದಾಖಲಿಸಿದರು. ಅವರು ‘ಐ ಲವ್ ಮುಹಮ್ಮದ್’ ಎಂದು ಬ್ಯಾನರ್ ಹಿಡಿದು ಯಾವುದೇ ಪ್ರಾರ್ಥನಾ ಮಂದಿರಕ್ಕೆ ಹಾನಿ ಮಾಡಿರಲಿಲ್ಲ. ಅಥವಾ ಐ ಲವ್ ಮುಹಮ್ಮದ್ ಎಂದು ಯಾವನೋ ಅಮಾಯಕ ರೈತನನ್ನು ಗೋ ಸಾಗಣೆಯ ಹೆಸರಿನಲ್ಲಿ ಕೊಂದು ಹಾಕಿರಲಿಲ್ಲ. ಅಥವಾ ಯಾವುದೇ ದಲಿತನನ್ನು ದೇವಸ್ಥಾನ ಪ್ರವೇಶಿಸದನೆಂದು ಥಳಿಸಿ, ಬೆಂಕಿ ಹಚ್ಚಿ ಕೊಂದಿರಲಿಲ್ಲ. ಆ ಮೆರವಣಿಗೆಯಲ್ಲಿ ಸಾಗುತ್ತಿದ್ದ ನೂರಾರು ಜನರ ಪಾಲಿಗೆ ಮುಹಮ್ಮದ್ ಎಂದರೆ ಬಿಡುಗಡೆಯ ಬೆಳಕು. ಮುಹಮ್ಮದ್ ಎಂದರೆ ಬಡ್ಡಿ ನಿಷೇಧ, ಮುಹಮ್ಮದ್ ಎಂದರೆ ಮದ್ಯ ನಿಷೇಧ, ಮುಹಮ್ಮದ್ ಎಂದರೆ ಗುಲಾಮಿ ವ್ಯವಸ್ಥೆಗೆ ಪ್ರತಿರೋಧ, ಮುಹಮ್ಮದ್ ಎಂದರೆ ಜಾತಿ, ಪಂಗಡ ರಹಿತ ಸಮಾನ ಸಮಾಜ, ಮುಹಮ್ಮದ್ ಎಂದರೆ ಆರ್ಥಿಕ ಸಮಾನತೆ, ಮುಹಮ್ಮದ್ ಎಂದರೆ ಜ್ಞಾನ, ತಿಳಿವು. ಮುಹಮ್ಮದರನ್ನು ಪ್ರೀತಿಸುವುದೆಂದರೆ ಸಮಾಜದಲ್ಲಿ ಸಹೋದರತ್ವವನ್ನು ಹರಡುವುದು, ಸಮಾನತೆಯ ಸಮಾಜವನ್ನು ನಿರ್ಮಿಸುವುದು. ಬಡ್ಡಿ, ಮದ್ಯ, ಗುಲಾಮಿ ವ್ಯವಸ್ಥೆ, ಜಾತೀಯತೆ ಮೊದಲಾದವುಗಳನ್ನೇ ಮೌಲ್ಯಗಳೆಂದು ನಂಬಿದ ಉತ್ತರ ಪ್ರದೇಶದ ಕೆಲವು ರಾಜಕಾರಣಿಗಳಿಗೆ ಇದು ವ್ಯವಸ್ಥೆಯ ವಿರುದ್ಧದ ಪ್ರತಿರೋಧ ಎಂದು ಅನ್ನಿಸಿರಬೇಕು. ಆ ಕಾರಣಕ್ಕಾಗಿಯೇ ‘ಐ ಲವ್ ಮುಹಮ್ಮದ್’ ಎನ್ನುವ ಘೋಷಣೆ ಉತ್ತರ ಪ್ರದೇಶದಲ್ಲಿ ಏಕಾಏಕಿ ನಿಷೇಧಕ್ಕೊಳಗಾಯಿತು. ಪ್ರೀತಿಯ ಗಾಳಿಯನ್ನು ಬಂಧಿಸಲು ಸಾಧ್ಯವಿಲ್ಲ. ಇಂದು ಉತ್ತರ ಪ್ರದೇಶ ಮಾತ್ರವಲ್ಲ, ದೇಶಾದ್ಯಂತ ಈ ಗಾಳಿ ಬೀಸತೊಡಗಿದೆ. ಉತ್ತರ ಪ್ರದೇಶ ಸರಕಾರದ ಸಂವಿಧಾನ ವಿರೋಧಿ ಕ್ರಮದ ವಿರುದ್ಧ ಎಲ್ಲ ಜಾತಿ, ಧರ್ಮ, ವರ್ಗದ ಜನರು ಒಂದಾಗಿ ‘ಐ ಲವ್ ಮುಹಮ್ಮದ್’ ಎನ್ನುವ ಘೋಷಣೆಯನ್ನು ಕೂಗುತ್ತಿದ್ದಾರೆ.

ಗಾಂಧಿಯನ್ನು ಕೊಂದ ನಾಥೂರಾಂ ಗೋಡ್ಸೆಯನ್ನು ಮಾತ್ರ ಪ್ರೀತಿಸಬಲ್ಲ ಈ ಶಕ್ತಿಗಳಿಗೆ, ಮಂದಿಗೆ ಇಂದು ಐ ಲವ್ ಮುಹಮ್ಮದ್ ಎನ್ನುವುದನ್ನು ಮಾತ್ರವಲ್ಲ, ಐ ಲವ್ ಬಸವಣ್ಣ, ಐ ಲವ್ ನಾರಾಯಣ ಗುರು, ಐ ಲವ್ ಅಂಬೇಡ್ಕರ್, ಐ ಲವ್ ಮಹಾತ್ಮ್ಮಾಗಾಂಧಿ ಎನ್ನುವ ಯಾವುದೇ ಪದಗಳು ಇಷ್ಟವಾಗುತ್ತಿಲ್ಲ. ಬಸವಣ್ಣನನ್ನು, ಆತನ ಚಿಂತನೆಗಳು ವಿರೂಪಗೊಳಿಸಲು ಕರ್ನಾಟಕದೊಳಗೆ ಕೆಲವು ಶಕ್ತಿಗಳು ಸಂಚು ನಡೆಸುತ್ತಿದ್ದರೆ, ನಾರಾಯಣ ಗುರುಗಳ ಚಿಂತನೆಗಳು ತಳಸ್ತರವನ್ನು ತಲುಪದಂತೆ ಮಾಡಲು ಕೇರಳದಲ್ಲೂ ಶತ ಪ್ರಯತ್ನ ಮಾಡಲಾಗುತ್ತಿದೆ. ಅಂಬೇಡ್ಕರ್ ಬಗ್ಗೆ ತಪ್ಪು ಮಾಹಿತಿಗಳನ್ನು ಹರಡುವ ಪ್ರಯತ್ನಗಳು ವ್ಯವಸ್ಥಿತವಾಗಿ ನಡೆಯುತ್ತಿದೆ. ಶ್ರೀರಾಮನ ಪಿತೃಪರಿಪಾಲನೆ, ವಚನ ಪಾಲನೆ, ತ್ಯಾಗ, ವೈರಾಗ್ಯಗಳನ್ನು ಬದಿಗೆ ತಳ್ಳಿ ಆತನ ಹೆಸರನ್ನು ಕೂಡ ತಮ್ಮ ದ್ವೇಷದ ಚಟುವಟಿಕೆಗಳ ಸಂದರ್ಭದಲ್ಲಷ್ಟೇ ಬಳಸಿಕೊಂಡು ಅಪಚಾರವೆಸಗಲಾಗುತ್ತಿದೆೆ. ‘ರಾಮರಾಜ್ಯ’ದ ಕನಸುಕಂಡ ಗಾಂಧಿಯನ್ನು ಈ ಶಕ್ತಿಗಳು ಅದಕ್ಕೇ ಕೊಂದು ಮುಗಿಸಿದವು. ಅವರಿಗೆ ರಾಮನ ಹೆಸರಿನಲ್ಲಿ ದ್ವೇಷ ಬೇಕೇ ಹೊರತು ಪ್ರೀತಿಯಲ್ಲ. ಈ ಕಾರಣಕ್ಕೇ ಉತ್ತರ ಪ್ರದೇಶದಲ್ಲಿ ‘ಐ ಲವ್ ಮುಹಮ್ಮದ್’ ಘೋಷಣೆಯ ವಿರುದ್ಧ ಅಲ್ಲಿನ ಕಾನೂನು ವ್ಯವಸ್ಥೆಯನ್ನು ಬಳಸಿಕೊಂಡು ಸಂಘಪರಿವಾರ ಮುಗಿ ಬಿದ್ದಿದೆ. ಇದು ಹೀಗೆ ಮುಂದುವರಿದರೆ ಮುಂದಿನ ದಿನಗಳಲ್ಲಿ, ಬಸವಣ್ಣ, ಅಂಬೇಡ್ಕರ್, ಗಾಂಧಿ, ನಾರಾಯಣಗುರು ಮೊದಲಾದ ಚಿಂತಕರು, ಮಹಾತ್ಮರನ್ನು ಪ್ರೀತಿಸುವುದು ಈ ದೇಶದಲ್ಲಿ ಅಪರಾಧವಾಗಿ ಬಿಡಬಹುದು.

ಸಾರ್ವಜನಿಕವಾಗಿ ಐ ಲವ್ ಮುಹಮ್ಮದ್ ಎಂದಾಗ ಅದರಲ್ಲಿ ಧಾರ್ಮಿಕ ಮೂಲಭೂತವಾದವನ್ನು ಹುಡುಕುವ ಉತ್ತರ ಪ್ರದೇಶ ಸರಕಾರ ಧರ್ಮದ ಹೆಸರಿನಲ್ಲಿ ನಡೆಸುವ ಹಿಂಸಾಚಾರಗಳನ್ನು ಹೇಗೆ ಪ್ರೋತ್ಸಾಹಿಸುತ್ತಾ ಬಂದಿದೆ ಎನ್ನುವುದನ್ನು ದೇಶ ನೋಡುತ್ತಿದೆ. ಇತ್ತೀಚೆಗೆ ಇದೇ ಉತ್ತರ ಪ್ರದೇಶದಲ್ಲಿ ಸರಕಾರ ಜಾತಿ ರ್ಯಾಲಿಗಳ ವಿರುದ್ಧ ಹೊಸತೊಂದು ಕಾನೂನನ್ನು ಜಾರಿಗೊಳಿಸಿದೆ. ಪೊಲೀಸ್ ದಾಖಲೆಗಳು ಮತ್ತು ಸಾರ್ವಜನಿಕ ಸೂಚನೆಗಳಲ್ಲಿ ಮಾಡಿರುವ ಎಲ್ಲ ರೀತಿಯ ಜಾತಿ ಉಲ್ಲೇಖಗಳನ್ನು ತಕ್ಷಣವೇ ತೆಗೆದು ಹಾಕಲು ಸರಕಾರ ಸುತ್ತೋಲೆ ಹೊರಡಿಸಿದೆ. ಜಾತಿ ಆಧಾರಿತ ರ್ಯಾಲಿಗಳು, ಸಾರ್ವಜನಿಕ ಉದ್ದೇಶಗಳನ್ನು ಹೊಂದಿರುವ ಸಾರ್ವಜನಿಕ ಜಾತಿ ಕಾರ್ಯಕ್ರಮಗಳನ್ನು ರಾಜ್ಯಾದ್ಯಂತ ನಿಷೇಧಿಸಲಾಗಿದೆ. ಜಾತಿಯ ಕುರಿತು ಹೊಗಳುವ ಅಥವಾ ದ್ವೇಷವನ್ನು ಉತ್ತೇಜಿಸುವ ಸಾಮಾಜಿಕ ಮಾಧ್ಯಮ ಪೋಸ್ಟ್ ಗಳ ಮೇಲೂ ಕ್ರಮ ತೆಗೆದುಕೊಳ್ಳುವುದಾಗಿ ಅದು ಹೇಳಿದೆ. ಮೇಲ್ನೋಟಕ್ಕೆ ಉತ್ತರ ಪ್ರದೇಶ ಸರಕಾರ ಜಾತೀಯತೆಯನ್ನು ವಿರೋಧಿಸುತ್ತಿದೆ ಎಂದು ಭ್ರಮೆ ಹುಟ್ಟಿಸುವ ಆದೇಶಗಳು ಇವು. ಆದರೆ ದುರದೃಷ್ಟವಶಾತ್, ದುರ್ಬಲ ಜಾತಿಗಳ ಸಂಘಟಿತ ಹೋರಾಟಗಳನ್ನು ದಮನಿಸುವುದಕ್ಕಾಗಿ ಈ ಕಾನೂನನ್ನು ಜಾರಿಗೆ ತರಲಾಗಿದೆ.

ಉತ್ತರ ಪ್ರದೇಶ ಸರಕಾರಕ್ಕೆ ಜಾತಿಗಳ ವಿರುದ್ಧ ನಿಜಕ್ಕೂ ಅಸಮಾಧಾನ ಇದೆ ಎಂದಾದರೆ, ದೇವಸ್ಥಾನಗಳಲ್ಲಿ ಜಾತಿಯ ಹೆಸರಿನಲ್ಲಿ ಪ್ರವೇಶ ನಿರಾಕರಿಸುವುದಕ್ಕೆ ಕಾನೂನನ್ನು ತರಬೇಕಾಗಿತ್ತು. ಹೊಸ ಕಾನೂನಿನಲ್ಲಿ ಇಂದಿನಿಂದ ಎಲ್ಲ ಜಾತಿಗಳು ಎಲ್ಲ ದೇವಸ್ಥಾನಗಳಿಗೂ ಪ್ರವೇಶಿಸುವು ಹಕ್ಕನ್ನು ಹೊಂದಿರುತ್ತವೆೆ ಎನ್ನುವ ಯಾವುದೇ ಸೂಚನೆಗಳಿಲ್ಲ. ಉತ್ತರ ಪ್ರದೇಶವ ಇಡೀ ದೇಶದಲ್ಲಿ ಜಾತಿ ದೌರ್ಜನ್ಯಗಳಿಗಾಗಿ ಅತಿ ಹೆಚ್ಚು ಸುದ್ದಿಯಲ್ಲಿದೆ. ದಲಿತ ಮಹಿಳೆಯರ ಮೇಲೆ ಅತ್ಯಾಚಾರ -ಕೊಲೆಗಳು ಉತ್ತರ ಪ್ರದೇಶದಲ್ಲಿ ನಡೆದಷ್ಟು ಇನ್ನೆಲ್ಲೂ ನಡೆಯುವುದಿಲ್ಲ. ಅಸ್ಪಶ್ಯತೆ, ಜಾತೀಯತೆ ಉತ್ತರ ಪ್ರದೇಶದಲ್ಲಿ ಅತಿ ಹೆಚ್ಚು ತಾಂಡವವಾಡುತ್ತಿದೆ. ಹೊಸ ಕಾನೂನು ಉತ್ತರ ಪ್ರದೇಶದಲ್ಲಿ ಈ ದೌರ್ಜನ್ಯಗಳ ವಿರುದ್ಧ ದಲಿತರು, ದುರ್ಬಲ ಜಾತಿಗಳು ಸಂಘಟಿತರಾಗುವುದನ್ನು ತಡೆಯುತ್ತದೆ. ಮೇಲ್‌ಜಾತಿಯ ದೌರ್ಜನ್ಯಗಳನ್ನು ಪ್ರಶ್ನಿಸುವುದೂ ಮುಂದಿನ ದಿನಗಳಲ್ಲಿ ಉತ್ತರ ಪ್ರದೇಶದಲ್ಲಿ ಶಿಕ್ಷಾರ್ಹವಾಗಲಿದೆ. ದಲಿತರು, ದುರ್ಬಲ ಜಾತಿಗಳು ರಾಜಕೀಯ ಶಕ್ತಿಯಾಗಿ ಮೇಲ್‌ಜಾತಿಯ ದರ್ಪವನ್ನು ಎದುರಿಸುವುದನ್ನು ಈ ಕಾನೂನು ಪರೋಕ್ಷವಾಗಿ ತಡೆಯುತ್ತದೆ. ಒಟ್ಟಿನಲ್ಲಿ ಈ ಕಾನೂನು ಪ್ರಬಲ ಜಾತಿಗಳಿಗೆ ಇನ್ನಷ್ಟು ಶಕ್ತಿಯನ್ನು ಕೊಟ್ಟಿದೆ ಮಾತ್ರವಲ್ಲ, ಇದು ದುರ್ಬಲರ ಸಂಘಟಿತ ಹೋರಾಟಗಳಿಗೆ ಕಡಿವಾಣ ಹಾಕಲು ಮುಂದಾಗಿದೆ. ‘ಐ ಲವ್ ಮುಹಮ್ಮದ್’ ವಿರುದ್ಧ ಪೊಲೀಸ್ ಇಲಾಖೆಯ ಕ್ರಮ ಇದರ ಮುಂದುವರಿದ ಭಾಗವಾಗಿದೆ. ಸಂಘಪರಿವಾರದ ಈ ದ್ವೇಷ ಆಂದೋಲನದ ವಿರುದ್ಧ ದೇಶಾದ್ಯಂತ ‘ಐ ಲವ್ ಮುಹಮ್ಮದ್’ ‘ಐ ಲವ್ ಅಂಬೇಡ್ಕರ್’ ‘ಐ ಲವ್ ಬಸವಣ್ಣ’ ಮೊದಲಾದ ಪ್ರೀತಿ, ಸಹೋದರತ್ವ, ಸಮಾನತೆಗಳನ್ನು ಎತ್ತಿ ಹಿಡಿಯುವ ಘೋಷಣೆಗಳು ಮೊಳಗಬೇಕಾಗಿದೆ.

ಇದೇ ಸಂದರ್ಭದಲ್ಲಿ ‘ಐ ಲವ್ ಮುಹಮ್ಮದ್’ ಘೋಷಣೆಯನ್ನು ಮುಂದಿಟ್ಟು ಆಂದೋಲನ ನಡೆಸುವ ಮುಸ್ಲಿಮರು ಕೂಡ ಮುಹಮ್ಮದರ ಆದರ್ಶಗಳಿಗೆ ಧಕ್ಕೆಯಾಗದಂತೆ ನೋಡಿಕೊಳ್ಳಬೇಕಾಗಿದೆ. ಈ ಘೋಷಣೆ ಯಾವತ್ತೂ ಬೀದಿ ಚೀರಾಟವಾಗದಂತೆ ನೋಡಿಕೊಳ್ಳಬೇಕು. ಬರೇ ಘೋಷಣೆಗಳಿಂದ ಮುಹಮ್ಮದರನ್ನು ಪ್ರೀತಿಸಲಾಗುವುದಿಲ್ಲ. ಹಾಗೆ ಘೋಷಣೆ ಮಾಡುತ್ತಾ ಸಾರ್ವಜನಿಕ ಜನರಿಗೆ ತೊಂದರೆ ನೀಡುವುದರಿಂದ ಅಥವಾ ಪ್ರತಿಭಟನೆಯ ಹೆಸರಿನಲ್ಲಿ ದಾಂಧಲೆ ನಡೆಸುವುದರಿಂದ ಪ್ರವಾದಿಯವರ ಮೌಲ್ಯಗಳಿಗೆ ಧಕ್ಕೆ ತಂದಂತಾಗುತ್ತದೆಯೇ ಹೊರತು, ಅವರನ್ನು ಪ್ರೀತಿಸಿದಂತಾಗುವುದಿಲ್ಲ. ಜೈಶ್ರೀರಾಮ್ ಘೋಷಣೆ ಕೂಗುತ್ತಾ ಸಾರ್ವಜನಿಕ ದಾಂಧಲೆ ನಡೆಸುವ ಸಂಘಪರಿವಾರ ಕಾರ್ಯಕರ್ತರು ‘ಐ ಲವ್ ಮುಹಮ್ಮದ್’ ಎನ್ನುವವರಿಗೆ ಮಾದರಿಯಾಗಬಾರದು. ಪ್ರವಾದಿಯವರು ಬೋಧಿಸಿದ ಆದರ್ಶಗಳನ್ನು, ಸತ್ಯಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳುವುದೇ ಪ್ರವಾದಿ ಮುಹಮ್ಮದರನ್ನು ಪ್ರೀತಿಸುವುದಕ್ಕೆ ಇರುವ ಅತ್ಯುತ್ತಮ ದಾರಿಯಾಗಿದೆ. ಈ ನಿಟ್ಟಿನಲ್ಲಿ ಪ್ರತಿಭಟನೆ ಯಾವ ರೀತಿಯಲ್ಲೂ ಹಿಂಸೆಗೆ ತಿರುಗದಂತೆ, ಸಾರ್ವಜನಿಕರಿಗೆ ಹಾನಿಯನ್ನುಂಟು ಮಾಡದಂತೆ ನೋಡಿಕೊಳ್ಳುವ ಹೊಣೆಗಾರಿಕೆ ‘ಮುಹಮ್ಮದ್’ ಎನ್ನುವ ಹೆಸರನ್ನು ಪ್ರೀತಿಸುವ ಪ್ರತಿಯೊಬ್ಬ ವ್ಯಕ್ತಿಯದ್ದೂ ಆಗಿದೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X