Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಸಂಪಾದಕೀಯ
  4. ಬಿಪಿಎಲ್ ರದ್ದು ಎನ್ನುವ ಅನಗತ್ಯ ವಿವಾದ

ಬಿಪಿಎಲ್ ರದ್ದು ಎನ್ನುವ ಅನಗತ್ಯ ವಿವಾದ

ವಾರ್ತಾಭಾರತಿವಾರ್ತಾಭಾರತಿ30 Nov 2024 8:16 AM IST
share
Photo of  Ration card

ಬಿಪಿಎಲ್ ಅಂದರೆ ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳು. ಈ ಕುಟುಂಬಗಳಿಗೆ ಕಲ್ಯಾಣ ರಾಜ್ಯದ ಪರಿಕಲ್ಪನೆಗನುಗುಣವಾಗಿ ಸರಕಾರ ಆಹಾರ ಧಾನ್ಯಗಳಿಂದ ಹಿಡಿದು ಆರೋಗ್ಯ ಸೇವೆವರೆಗೆ ಸೌಲಭ್ಯ ಒದಗಿಸುತ್ತಿದೆ. ಈ ಕಾರಣಕ್ಕೇ ಈ ಕಾರ್ಡ್ ಪಡೆದವರಲ್ಲಿ ನಕಲಿ ಫಲಾನುಭವಿಗಳು ಇದ್ದರೆ, ಇವರನ್ನು ಪತ್ತೆ ಹಚ್ಚಿ ಅಂತಹ ಕಾರ್ಡುಗಳನ್ನು ರದ್ದುಪಡಿಸುವುದು ಸರಕಾರವೊಂದರ ಸದಾ ಜಾರಿಯಲ್ಲಿರುವ ಪ್ರಕ್ರಿಯೆ.

2011ರ ಜನಗಣತಿ ಪ್ರಕಾರ ಕರ್ನಾಟಕದ ಜನ ಸಂಖ್ಯೆ 6.1 ಕೋಟಿ. ಇವರಲ್ಲಿ 5.2 ಕೋಟಿ ಮಂದಿ ಪಡಿತರ ಫಲಾನುಭವಿಗಳು. ಅಂದರೆ ಶೇ.80ಕ್ಕೂ ಹೆಚ್ಚು. ಇಷ್ಟು ಮಂದಿ ಬಡವರಿರುವುದು ಅಸಹಜ ಎಂಬುದು ಸಕಾರಣ ವಾದ. ನಿಜವಾದ ಅರ್ಹ ಫಲಾನುಭವಿಗಳಿಗೆ ತಲುಪಬೇಕಾದದ್ದನ್ನು ಅನರ್ಹರು ಪಡೆಯುವುದು ತಪ್ಪು. ಅದು ಆಡಳಿತಾತ್ಮಕ ಲೋಪ. ಈ ಕಾರ್ಡನ್ನು ಮಂಜೂರು ಮಾಡುವಲ್ಲೇ ಈ ಕಳ್ಳಾಟ ನಡೆದಿರುತ್ತದೆ ಎಂಬುದು ಸರಕಾರದ ಆಡಳಿತಾತ್ಮಕ ವಿಚಕ್ಷಣಾ ವರ್ಗದ ನಿಲುವು. ಅದಕ್ಕಿರುವ ಪರಿಹಾರವೆಂದರೆ ಈ ಕಾರ್ಡುದಾರರನ್ನು ಆಗಾಗ ಪರಿಶೀಲಿಸಿ ನಕಲಿಯೋ, ಅಸಲಿಯೋ ಎಂದು ಪತ್ತೆ ಹಚ್ಚಿ ನಕಲಿ ಕಾರ್ಡುಗಳನ್ನು ರದ್ದುಗೊಳಿಸುವುದು.

ಈ ಬಿಪಿಎಲ್‌ಗೆ ಅರ್ಹರು ಯಾರು ಎಂಬುದಕ್ಕೆ ಕೇಂದ್ರ ಸರಕಾರವೇ ಕೆಲವು ಮಾನದಂಡಗಳನ್ನು ನಿಗದಿಪಡಿಸಿದೆ. ದ್ವಿಚಕ್ರ/ನಾಲ್ಕು ಚಕ್ರದ ವಾಹನ ಹೊಂದಿರುವುದು, ಸರಕಾರಿ ನೌಕರಿ, 7.5 ಎಕರೆ ಜಮೀನು (ಒಣಭೂಮಿ) ಅಥವಾ ಅದರ ತತ್ಸಮಾನ ನೀರಾವರಿ ಜಮೀನು ಹೊಂದಿರುವುದು, ವರ್ಷಕ್ಕೆ 1.2 ಲಕ್ಷ ರೂಪಾಯಿಗಿಂತ ಹೆಚ್ಚು ಆದಾಯ ಹೊಂದಿರುವವರು ಈ ಬಿಪಿಎಲ್ ಕಾರ್ಡ್ ಹೊಂದುವಂತಿಲ್ಲ. ಈ ಮಾನದಂಡಗಳಲ್ಲೇ ಇರುವ ಗೋಜಲುಗಳನ್ನು ಬಹುತೇಕ ಮಂದಿ ಬೊಟ್ಟು ಮಾಡಿ ತೋರಿಸುತ್ತಿದ್ದಾರೆ. ಉದಾ: ಆದಾಯ ಮಿತಿ. ಕರ್ನಾಟಕದ ಮಲೆನಾಡು/ಕರಾವಳಿ ಪ್ರದೇಶದ ಕೂಲಿಯೇ ದಿನಕ್ಕೆ ರೂ. 500ರ ಆಸುಪಾಸಿನಲ್ಲಿದೆ. ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುವ ವ್ಯಕ್ತಿಯ ಸಂಬಳ ರೂ. 10-15 ಸಾವಿರವಿದ್ದರೆ ಈ ಕಾರ್ಡ್ ಹೊಂದುವುದು ಸಾಧ್ಯವಿಲ್ಲ. ಆದರೆ ಈ ಆದಾಯವೂ ಅಭದ್ರ ಉದ್ಯೋಗದ್ದಷ್ಟೇ ಅಲ್ಲ, ಈಗಿನ ಬೆಲೆಏರಿಕೆಯ ಸಂದರ್ಭದಲ್ಲಿ ತಿಂಗಳಿಗೆ ರೂ. 15 ಸಾವಿರ ಆದಾಯ ಇರುವ ಕುಟುಂಬ ಘನತೆಯ ಬದುಕು ಸಾಗಿಸುವುದೂ ಕಷ್ಟ.

ಆದ್ದರಿಂದ ಈ ಆದಾಯ ಮಿತಿಯೇ ಹಾಸ್ಯಾಸ್ಪದವಾಗಿದೆ. ಆದರೆ ಇದನ್ನು ಪತ್ತೆ ಹಚ್ಚಲು ಸರಕಾರದಲ್ಲಿ ಯಾವ ತಂತ್ರಜ್ಞಾನವೂ ಇಲ್ಲ, ಇದ್ದರೂ ಅದು ಕಾರ್ಯಸಾಧುವಲ್ಲ. ಈ ನಿಯಮವನ್ನು ಮೀರಲು ಇರುವ ಮಾರ್ಗವೆಂದರೆ ಒಂದಷ್ಟು ಅಡ್ಡ ದಾರಿ ಬಳಸಿ ಆದಾಯ ಮಿತಿಗಿಂತ ಕಡಿಮೆ ಎಂಬ ಆದಾಯ ಸರ್ಟಿಫಿಕೇಟು ಪಡೆಯುವುದು. ಗ್ರಾಮೀಣ ಪ್ರದೇಶದ ಕುಟುಂಬಗಳಲ್ಲಿ ಪ್ರಾಯಶಃ ಬಿಪಿಎಲ್ ಕಾರ್ಡಿನ ಅಸಲಿತನ ಪತ್ತೆ ಮಾಡಲು ಭೂಮಿ ಒಡೆತನದ ಪ್ರಮಾಣ ವನ್ನು ಬಳಸಬಹುದು. ಆದರೆ ನಗರಪ್ರದೇಶದಲ್ಲಿ ಇದೂ ಕಷ್ಟ. ಅಷ್ಟೇಕೆ ನಗರ ಪ್ರದೇಶದಲ್ಲಿ ಬದುಕುವ ಕುಟುಂಬಗಳ ಆದಾಯ ತಿಂಗಳಿಗೆ ರೂ. 15 ಸಾವಿರ ಇದ್ದರೂ ಬಡತನದ ರೇಖೆಗಿಂತ ಮೇಲೆ ಎನ್ನಲು ಸಾಧ್ಯವಿಲ್ಲ. ಈ ಗೋಜಲು ಹೇಗಿದೆಯೆಂದರೆ ಸರಕಾರಕ್ಕೊಂದು ತರ್ಕಬದ್ಧ ಮಾನದಂಡ ನಿಗದಿಪಡಿಸಲೂ ಆಗದೆ ಅಧಿಕಾರಿಗಳಿಗೆ ಅದನ್ನು ಕಾಲಕಾಲಕ್ಕೆ ತಿದ್ದುವ ಸಾಮಾನ್ಯ ಜ್ಞಾನವೂ ಇಲ್ಲದೆ ದಿನದೂಡುವಂತಾಗಿದೆ.

ಇನ್ನು ಈ ಕಾರ್ಡುಗಳ ಸಂಖ್ಯೆ ಬಗ್ಗೆಯೂ ಎದ್ದಿರುವ ಸಂಶಯದ ಬಗ್ಗೆ, ಜನಸಂಖ್ಯೆಯ ಆಧಾರವೇನೋ 2011ರದ್ದು. ಆದರೆ ಈ ಕಾರ್ಡನ್ನು ಕಾಲಕಾಲಕ್ಕೆ ಕುಟುಂಬಗಳು ಪಡೆಯಬಹುದಾದ ಕಾರಣ 2021ರ ಗಣತಿ ಆಧಾರವಾಗಬಹುದಿತ್ತು. ಆದರೆ ಮೋದಿ ಸರಕಾರ ಈ ಶಿಸ್ತಿನ ಜನಗಣತಿಯನ್ನು ಮುಂದೂಡಿದ ಕಾರಣ ಅಂಕಿಅಂಶಗಳೂ ಲಭ್ಯ ಇಲ್ಲ.

ದೇಶದಲ್ಲೇ ಎರಡನೇ ಅತಿ ದೊಡ್ಡ ಒಣ ಭೂಮಿ ಕೃಷಿ ಹೊಂದಿರುವ ರಾಜ್ಯವಾದ ಕರ್ನಾಟಕದಲ್ಲಿ ಸಣ್ಣ/ಅತಿ ಸಣ್ಣ ಹಿಡುವಳಿ ಹೊಂದಿರುವವರ ಸಂಖ್ಯೆಯೂ ಜಾಸ್ತಿ. ಹಾಗೆಯೇ ಭೂರಹಿತ ಕುಟುಂಬಗಳ ಸಂಖ್ಯೆ ಕೂಡಾ. ನಗರ, ಅರೆನಗರ ವ್ಯಾಪ್ತಿಗೆ ಉದ್ಯೋಗ ಹುಡುಕಿ ಬಂದಿರುವ ಕುಟುಂಬಗಳೂ ಸುಭದ್ರ ಉದ್ಯೋಗ ಪಡೆದಿರುವ ಪುರಾವೆಗಳೂ ಇಲ್ಲ. ಈ ಕುರಿತಾದ ಅಂಕಿಅಂಶಗಳೂ ನೆಟ್ಟಗೆ ಲಭ್ಯವಿಲ್ಲ. ಆದಾಯ ಮತ್ತು ಸೌಲಭ್ಯಗಳಿವೆಯೇ ಎಂಬುದನ್ನು ಪತ್ತೆ ಹಚ್ಚಲು ತಂತ್ರಜ್ಞಾನವೇನೋ ಇದೆ. ಆಧಾರ್ ಲಿಂಕ್ ಮಾಡುವುದು. ಅದರ ಮೂಲಕ ವಾಹನ ಹೊಂದಿರುವ ದಾಖಲೆ, ಆದಾಯದ ದಾಖಲೆಗಳನ್ನು ಪತ್ತೆ ಮಾಡಬಹುದು. ಆದರೆ ಆದಾಯದ ಮೂಲವಾದ ಉದ್ಯೋಗದ ಖಾಯಂತನವನ್ನು ಸರಕಾರ ಖಚಿತಪಡಿಸಲು ಸಾಧ್ಯವಿಲ್ಲದ ಕಾರಣ ಇಂದು ಎಪಿಎಲ್ ಆಗಿರುವ ಕುಟುಂಬ ಮೂರೇ ತಿಂಗಳಿಗೆ ಬಿಪಿಎಲ್ ಆಗುವ ಸಾಧ್ಯತೆ ನಮ್ಮಲ್ಲಿದೆ. ಕೋವಿಡ್ ಕಾಲದಲ್ಲಿ ಇದು ಕಣ್ಣಿಗೆ ರಾಚಿದೆ.

ಬಿಪಿಎಲ್ ಕಾರ್ಡ್ ಹೊಂದಿರುವವರಲ್ಲಿ ಅನರ್ಹರನ್ನು ಗುರುತಿಸುವುದು ಎಂಬುದೇ ಬಲು ದೊಡ್ಡ ಆಡಳಿತಾತ್ಮಕ ಸವಾಲಷ್ಟೇ ಅಲ್ಲ ನೈತಿಕ ಸವಾಲಾಗಿಯೂ ಪರಿಣಮಿಸಿದೆ.

ಇದಕ್ಕಿಂತ ಗಂಭೀರವಾದ ಸಂಗತಿ ಎಂದರೆ ರಾಜ್ಯದ ಕಾಂಗ್ರೆಸ್ ಸರಕಾರದ ಕಾರ್ಯ ವೈಖರಿ. ಸಾರ್ವಜನಿಕವಾಗಿ ಜನರಲ್ಲಿ ಅಭಿಪ್ರಾಯ ಮೂಡಿಸುವುದು ಒಂದು ಕಲೆ. ಮೋದಿಯವರು ಈ ಕಲೆಯಲ್ಲಿ ನಿಷ್ಣಾತರು ಎಂಬುದು ಈಗಾಗಲೇ ಸಾಬೀತಾಗಿದೆ. ಕಳೆದೊಂದು ದಶಕದಲ್ಲಿ ದೇಶದಲ್ಲಿ 5 ಕೋಟಿ ಅನರ್ಹರನ್ನು ಗುರುತಿಸಿ ಅವರ ಕಾರ್ಡುಗಳನ್ನು ರದ್ದುಗೊಳಿಸಲಾಗಿದೆ ಎಂಬುದನ್ನು ಮೋದಿ ಸರಕಾರ ಮತ್ತು ಭಾಜಪ ಅತಿ ದೊಡ್ಡ ಸಾಧನೆಗಳಲ್ಲೊಂದು ಎಂದು ಬಿಂಬಿಸಲು ಶಕ್ಯವಾಗಿದೆ. 2017ರ ಬಳಿಕ ಉತ್ತರ ಪ್ರದೇಶ ಒಂದರಲ್ಲೇ ಒಂದು ಕೋಟಿಗೂ ಹೆಚ್ಚು ನಕಲಿ ಕಾರ್ಡುದಾರರನ್ನು ಪತ್ತೆ ಹಚ್ಚಿ ಆ ಕಾರ್ಡುಗಳನ್ನು ರದ್ದುಪಡಿಸಲಾಗಿದೆ ಎಂದೂ ಭಾಜಪ ಹೇಳಿ ಮಾನ್ಯತೆ ಗಿಟ್ಟಿಸಿಕೊಂಡಿದೆ.

ಆದರೆ ರಾಜ್ಯದ ಕಾಂಗ್ರೆಸ್ ಸರಕಾರಕ್ಕೆ ಇದನ್ನು ನಿರ್ವಹಿಸುವ ಬಗೆಯೇ ಗೊತ್ತಿಲ್ಲದೇ ಸೋತಿದೆ. ಬಿಪಿಎಲ್ ಕಾರ್ಡ್ ಮಂಜೂರು ಮಾಡುವ ಭ್ರಷ್ಟಾಚಾರದಷ್ಟೇ ಅದನ್ನು ರದ್ದು ಮಾಡುವ ಅಧಿಕಾರ ಯಂತ್ರದ ಕುರುಡು ಕ್ರಮಗಳಿಂದಾಗಿ ಇಡೀ ಪ್ರಕ್ರಿಯೆಯೇ ಸ್ಟಾರ್ಟ್/ ಸ್ಟಾಪ್ ಸ್ಥಿತಿಯಿಂದ ಮುಂದಕ್ಕೆ ಹೋಗಿಲ್ಲ. ಸರಕಾರಕ್ಕೆ ವಸ್ತುಸ್ಥಿತಿಯೇ ಗೊತ್ತಿಲ್ಲ ಅಥವಾ ಅದನ್ನು ಸುಧಾರಿಸುವ ಮಾರ್ಗೋಪಾಯಗಳೂ ಗೊತ್ತಿಲ್ಲ ಎಂಬುದಷ್ಟೇ ಸದ್ಯಕ್ಕೆ ಗೋಚರಿಸುತ್ತಿರುವುದು. ಅಂದರೆ, ಸರಕಾರಕ್ಕೆ ಈ ಫಲಾನುಭವಿಗಳನ್ನು ಗುರುತಿಸುವ ದೀರ್ಘಾವಧಿ, ಕಾರ್ಯತಂತ್ರವಾಗಲೀ ಸೂಚಿಗಳಾಗಲೀ ಸ್ಪಷ್ಟವಿಲ್ಲ. ಇಲಾಖೆಗಳ ನಡುವೆ ದಕ್ಷ ಸಂಯೋಜನೆಯೂ ಇಲ್ಲ. ದೋಷಪೂರ್ಣ ದಾಖಲೆ ನೀಡಿದ್ದಕ್ಕೆ ಅಧಿಕಾರಿಗಳನ್ನು ಶಿಕ್ಷಿಸುವ ವ್ಯವಸ್ಥೆಯೂ ಇಲ್ಲದಿದ್ದರೆ ಈ ಗೋಣಿ ತೂತು ಮಾಡುವ ಇಲಿಗಳ ಸಂಖ್ಯೆ ಹೆಚ್ಚುತ್ತಿರುತ್ತದೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X