Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಸಂಪಾದಕೀಯ
  4. ಬಿಜೆಪಿಯ ಕೊರಳಿಗೆ ಉರುಳಾದ ವಕ್ಫ್!

ಬಿಜೆಪಿಯ ಕೊರಳಿಗೆ ಉರುಳಾದ ವಕ್ಫ್!

ವಾರ್ತಾಭಾರತಿವಾರ್ತಾಭಾರತಿ27 Nov 2024 9:34 AM IST
share
ಬಿಜೆಪಿಯ ಕೊರಳಿಗೆ ಉರುಳಾದ ವಕ್ಫ್!

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ


ರಾಜ್ಯದಲ್ಲಿ ನಡೆದ ಉಪಚುನಾವಣೆಯ ಫಲಿತಾಂಶ ಹೊರ ಬಿದ್ದ ಬೆನ್ನಿಗೇ ಬಿಜೆಪಿಯೊಳಗಿನ ಭಿನ್ನಮತ ಉಲ್ಬಣಗೊಂಡಿದೆ. ಮೂರೂ ಕ್ಷೇತ್ರಗಳಲ್ಲಿ ಬಿಜೆಪಿ ಹೀನಾಯ ಸೋಲನುಭವಿಸಿದ ಬೆನ್ನಿಗೇ, ಬಿಜೆಪಿಯೊಳಗಿರುವ ಭಿನ್ನಮತೀಯರು ಸೋಲಿನ ಸಂಪೂರ್ಣ ಹೊಣೆಯನ್ನು ಯಡಿಯೂರಪ್ಪ ಮತ್ತು ಅವರ ಪುತ್ರ ವಿಜಯೇಂದ್ರ ಅವರ ಕೊರಳಿಗೆ ಕಟ್ಟಿದ್ದಾರೆ. ಚುನಾವಣೆಯಲ್ಲಿ ಎನ್‌ಡಿಎಯಿಂದ ಸ್ಪರ್ಧಿಸಿದ್ದ ಇಬ್ಬರು ಮಾಜಿ ಮುಖ್ಯಮಂತ್ರಿಗಳ ಸುಪುತ್ರರು ಸೋಲನುಭವಿಸಿರುವುದರಿಂದ, ಬಿಜೆಪಿ ತೀವ್ರ ಮುಜುಗರಕ್ಕೆ ಸಿಲುಕಿಕೊಂಡಿದೆ. ಚುನಾವಣೆಗೆ ಮುನ್ನ, ಉಪಚುನಾವಣೆಯ ಫಲಿತಾಂಶವನ್ನು ಸಿದ್ದರಾಮಯ್ಯ ಅವರ ಸರಕಾರದ ವಿರುದ್ಧ ಹೊರ ಬೀಳಲಿರುವ ಜನಾದೇಶ ಎಂಬಂತೆ ಬಿಂಬಿಸಿದ್ದ ನಾಯಕರು, ಫಲಿತಾಂಶ ಹೊರ ಬಿದ್ದ ಬಳಿಕ ‘ಇದೇನೂ ಜನಾದೇಶವಲ್ಲ’ ಎಂಬ ಹೇಳಿಕೆಯನ್ನು ನೀಡಿ, ಅಡಿಗೆ ಬಿದ್ದರೂ ಮೂಗು ಮಣ್ಣಾಗಲಿಲ್ಲ ಎನ್ನುತ್ತಿದ್ದಾರೆ. ಉಪಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು, ಸಿದ್ದರಾಮಯ್ಯ ವಿರುದ್ಧ ಬಿಜೆಪಿ ಭಾರೀ ಪ್ರತಿಭಟನೆಗಳನ್ನು ಹಮ್ಮಿಕೊಂಡಿತ್ತು. ಉಪಚುನಾವಣೆಯ ಹಿನ್ನೆಲೆಯಲ್ಲೇ ‘ವಕ್ಫ್’ ವಿವಾದವನ್ನು ಸೃಷ್ಟಿಸಿ ಆಂದೋಲನವನ್ನು ಆರಂಭಿಸಿತ್ತು. ಆದರೆ, ಬಿಜೆಪಿ ಎತ್ತಿದ ಯಾವ ವಿಷಯಗಳೂ ಚುನಾವಣೆಯಲ್ಲಿ ಫಲ ನೀಡಲಿಲ್ಲ. ವಿಪರ್ಯಾಸವೆಂದರೆ, ಬಿಜೆಪಿ ಸೃಷ್ಟಿಸಿದ ವಕ್ಫ್ ವಿವಾದ, ಇದೀಗ ಬಿಜೆಪಿಯ ಕೊರಳನ್ನೇ ಸುತ್ತಿಕೊಂಡಿದೆ. ವಕ್ಫ್ ವಿಚಾರದಲ್ಲಿ ಬಿಜೆಪಿ ಒಡೆದ ಮನೆಯಾಗಿದೆ. ಒಂದೆಡೆ ವಕ್ಫ್ ವಿಚಾರವನ್ನು ಮುಂದಿಟ್ಟು ಯಡಿಯೂರಪ್ಪ ನೇತೃತ್ವದ ಬಿಜೆಪಿ ಪ್ರತಿಭಟನೆ ನಡೆಸುತ್ತಿರುವಾಗಲೇ, ಇತ್ತ ಯತ್ನಾಳ್ ನೇತೃತ್ವದಲ್ಲಿ ಪರ್ಯಾಯ ಹೋರಾಟವೊಂದು ಆರಂಭವಾಗಿದೆ. ಈ ಮೂಲಕ ರಾಜ್ಯದಲ್ಲಿ ಎರಡು ಬಿಜೆಪಿ ಸೃಷ್ಟಿಯಾಗಿದೆ. ಕಾರ್ಯಕರ್ತರು ಯಾವುದು ನಿಜವಾದ ಬಿಜೆಪಿ ಎನ್ನುವ ಗೊಂದಲದಲ್ಲಿದ್ದಾರೆ.

ಉಪಚುನಾವಣೆಯ ಫಲಿತಾಂಶದ ಬಳಿಕ ಬಿಜೆಪಿಯ ಒಂದು ಗುಂಪಿನ ವಕ್ಫ್ ವಿರೋಧಿ ಹೋರಾಟ, ನಿಧಾನಕ್ಕೆ ಯಡಿಯೂರಪ್ಪ ವಿರೋಧಿ ಹೋರಾಟವಾಗಿ ಪರಿವರ್ತನೆಯಾಗುತ್ತಿದೆ. ವಕ್ಫ್ ಅವರಿಗೆ ನೆಪ ಮಾತ್ರವಾಗಿದ್ದು, ಸದ್ಯಕ್ಕೆ ವಿಜಯೇಂದ್ರ ಅವರ ನಾಯಕತ್ವವನ್ನು ನಿರಾಕರಿಸುವುದು ಅವರ ಉದ್ದೇಶವಾಗಿದೆ. ಮುಡಾ ಹಗರಣವನ್ನು ಮುಂದಿಟ್ಟುಕೊಂಡು ಸಿದ್ದರಾಮಯ್ಯ ವಿರುದ್ಧ ಪಾದಯಾತ್ರೆ ಹಮ್ಮಿಕೊಂಡಾಗ ಅದಕ್ಕೆ ಯತ್ನಾಳ್ ನೇತೃತ್ವದ ಬಣ ಬಹಿರಂಗವಾಗಿಯೇ ಆಕ್ಷೇಪ ವ್ಯಕ್ತಪಡಿಸಿತ್ತು. ಇದಾದ ಬಳಿಕ ಉಪಚುನಾವಣೆಗೆ ಬಿರುಸಿನ ಪ್ರಚಾರ ನಡೆಯುತ್ತಿರುವಾಗಲೇ ಯತ್ನಾಳ್ ನೇತೃತ್ವದ ಗುಂಪು ವಕ್ಫ್ ವಿರುದ್ಧ ಪರ್ಯಾಯ ಪ್ರತಿಭಟನೆಯನ್ನು ನಡೆಸುವುದಾಗಿ ಎಚ್ಚರಿಕೆ ನೀಡಿತ್ತು. ಇದೀಗ ಈ ಪ್ರತಿಭಟನೆಯನ್ನು ನಿಲ್ಲಿಸಬೇಕು ಎಂದು ಯಡಿಯೂರಪ್ಪ ಅವರು ಕೇಂದ್ರ ವರಿಷ್ಠರಿಗೆ ಮನವಿ ಮಾಡಿದ್ದಾರೆ. ಬೀದರ್‌ನಿಂದ ಬೆಳಗಾವಿಯವರೆಗೆ ನಡೆಯುತ್ತಿರುವ ಜನಜಾಗೃತಿ ಹೋರಾಟಕ್ಕೆ ವರಿಷ್ಠರು ಹೇಗೆ ಸ್ಪಂದಿಸುತ್ತಾರೆ ಎನ್ನುವ ಆಧಾರದಲ್ಲಿ ರಾಜ್ಯದಲ್ಲಿ ಬಿಜೆಪಿಯ ಭವಿಷ್ಯ ನಿರ್ಧಾರವಾಗಲಿದೆ. ಒಂದು ವೇಳೆ, ಈ ಅಭಿಯಾನದ ವಿರುದ್ಧ ದಿಲ್ಲಿ ವರಿಷ್ಠರು ಮೌನ ಮುರಿಯದೇ ಇದ್ದರೆ, ಇದನ್ನು ಪರೋಕ್ಷವಾಗಿ ಬೆಂಬಲಿಸಿದಂತೆಯೇ ಸರಿ. ಅಷ್ಟೇ ಅಲ್ಲ, ಬಿಜೆಪಿಯ ರಾಜ್ಯಾಧ್ಯಕ್ಷರ ಮೇಲೆ ಯತ್ನಾಳ್ ಮಾಡಿರುವ ಎಲ್ಲ ಆರೋಪಗಳಿಗೂ ಸಮ್ಮತಿಯ ಮೊಹರು ಒತ್ತಿದಂತಾಗುತ್ತದೆ. ಒಂದು ವೇಳೆ ಈ ಅಭಿಯಾನವನ್ನು ತಡೆದರೆ ಯತ್ನಾಳ್ ಆಕ್ರೋಶಕ್ಕೆ ಇನ್ನಷ್ಟು ತುಪ್ಪ ಸುರಿದಂತಾಗುತ್ತದೆ. ಬಿಜೆಪಿ ಮತ್ತು ಸಂಘಪರಿವಾರದ ದ್ವೇಷ ರಾಜಕಾರಣವನ್ನು ಉತ್ತರ ಕರ್ನಾಟಕದಾದ್ಯಂತ ವಿಸ್ತರಿಸಲು ಯತ್ನಾಳ್‌ನ ಅಗತ್ಯ ಬಿಜೆಪಿಗಿದೆ. ಅವರನ್ನು ಸುಲಭವಾಗಿ ಬಿಟ್ಟುಕೊಡುವ ಸ್ಥಿತಿಯಲ್ಲಿ ವರಿಷ್ಠರು ಇದ್ದಂತಿಲ್ಲ,

ಕಾಂಗ್ರೆಸ್‌ನೊಳಗೆ ಸಿದ್ದರಾಮಯ್ಯ-ಡಿಕೆಶಿ ಬಣಗಳ ಬಗ್ಗೆ ಬಿಜೆಪಿ ನಾಯಕರು ಪದೇ ಪದೇ ಹೇಳಿಕೆಗಳನ್ನು ನೀಡುತ್ತಾ ಬಂದಿದ್ದಾರೆ. ಆರಂಭದಲ್ಲಿ, ಲೋಕಸಭಾ ಚುನಾವಣೆಯ ಫಲಿತಾಂಶ ಹೊರಬಿದ್ದ ಬೆನ್ನಿಗೇ ಕಾಂಗ್ರೆಸ್‌ನಲ್ಲಿ ಬಿರುಕು ಕಾಣಿಸಿಕೊಳ್ಳುತ್ತದೆ ಎಂದು ಬಿಜೆಪಿ ನಾಯಕರು ಭವಿಷ್ಯ ನುಡಿದಿದ್ದರು. ಆದರೆ ಅಂತಹದು ಯಾವುದೂ ಸಂಭವಿಸಲಿಲ್ಲ. ಬದಲಿಗೆ, ಸಿದ್ದರಾಮಯ್ಯ ಮತ್ತು ಡಿಕೆಶಿ ಒಂದೇ ವೇದಿಕೆಯಲ್ಲಿ ಪದೇ ಪದೇ ಕಾಣಿಸಿಕೊಂಡರು ಮಾತ್ರವಲ್ಲ, ಪರಸ್ಪರರನ್ನು ಬೆಂಬಲಿಸಿ ಹೇಳಿಕೆಗಳನ್ನು ನೀಡತೊಡಗಿದರು. ಗ್ಯಾರಂಟಿ ಯೋಜನೆಯ ವಿರುದ್ಧ ಕಾಂಗ್ರೆಸ್‌ನೊಳಗೆ ಅಪಸ್ವರ ಕೇಳಿ ಬಂದಾಗ, ವರಿಷ್ಠರು ತಕ್ಷಣವೇ ಮಧ್ಯ ಪ್ರವೇಶಿಸಿ ಸ್ಪಷ್ಟೀಕರಣ ನೀಡಿದರು. ಯಾರೂ ಅದರ ವಿರುದ್ಧ ಬಾಯಿ ತೆರೆಯದಂತೆ ಸೂಚನೆಗಳನ್ನು ನೀಡಿದರು. ಆದರೆ ವಿಜಯೇಂದ್ರ ಅವರು ರಾಜ್ಯಾಧ್ಯಕ್ಷರಾದ ದಿನದಿಂದ, ಬಿಜೆಪಿಯೊಳಗೆ ಅವರ ವಿರುದ್ಧ ಮೂರನೆಯ ದರ್ಜೆಯ ಭಾಷೆಯಲ್ಲಿ ಯತ್ನಾಳ್ ಟೀಕೆಗಳನ್ನು ಮಾಡುತ್ತಾ ಬಂದಿದ್ದಾರೆ. ಆದರೆ ಈವರೆಗೆ ರಾಜ್ಯ ವರಿಷ್ಠರಾಗಲಿ, ದಿಲ್ಲಿಯ ವರಿಷ್ಠರಾಗಲಿ ಇದರ ವಿರುದ್ಧ ಯಾವುದೇ ಕ್ರಮವನ್ನು ತೆಗೆದುಕೊಂಡಿಲ್ಲ. ಉಪಚುನಾವಣೆ ನಡೆಯುತ್ತಿರುವ ಹೊತ್ತಿನಲ್ಲಿ ರಾಜ್ಯಾಧ್ಯಕ್ಷರ ವಿರುದ್ಧವೇ ಹಿರಿಯ ನಾಯಕರು ಹೇಳಿಕೆಗಳನ್ನು ನೀಡಿದರೆ ಅದು ಚುನಾವಣೆಯ ಮೇಲೆ ವ್ಯತಿರಿಕ್ತ ಪರಿಣಾಮಗಳನ್ನು ಬೀರುವುದು ಸಹಜವೇ ಆಗಿದೆ. ಮೂರು ಕ್ಷೇತ್ರಗಳಲ್ಲಿ ಹೀನಾಯ ಸೋಲಿಗೆ ಈ ಭಿನ್ನಮತದ ಕೊಡುಗೆಯೂ ಸಾಕಷ್ಟಿದೆ. ಉಪಚುನಾವಣೆ ಮುಗಿದ ಬೆನ್ನಿಗೇ ವರಿಷ್ಠರು ಯತ್ನಾಳ್ ವಿರುದ್ಧ ಕ್ರಮ ತೆಗೆದುಕೊಳ್ಳಬೇಕಾಗಿತ್ತು. ಯಡಿಯೂರಪ್ಪ ಅವರು ಪದೇ ಪದೇ ಇದನ್ನು ವರಿಷ್ಠರ ಗಮನಕ್ಕೆ ತಂದರೂ ಅವರು ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳುತ್ತಿಲ್ಲ ಎನ್ನುವುದರ ಅರ್ಥವೇ, ಈ ಭಿನ್ನಮತದ ಹಿಂದೆ ದಿಲ್ಲಿಯ ಕೈವಾಡವಿದೆ ಎಂದಾಗಿದೆ.

ಯಡಿಯೂರಪ್ಪ ಅವರನ್ನು ಮೂಲೆಗುಂಪು ಮಾಡುವ ಸಕಲ ಪ್ರಯತ್ನಗಳು ವಿಫಲವಾದ ಬಳಿಕ, ಅವರ ಕೈಗೆ ಮತ್ತೆ ಬಿಜೆಪಿಯ ಚುಕ್ಕಾಣಿಯನ್ನು ಒಲ್ಲದ ಮನಸ್ಸಿನಿಂದ ನೀಡಲಾಯಿತು. ಮಗನನ್ನು ರಾಜ್ಯಾಧ್ಯಕ್ಷನಾಗಿಸುವ ಮೂಲಕ ಪಕ್ಷದಲ್ಲಿ ತನ್ನ ಹಿಡಿತವನ್ನು ಅವರು ಮರುಸ್ಥಾಪಿಸಿದರು. ಹಲವು ಹಿರಿಯ ನಾಯಕರು ಬಿಜೆಪಿಯೊಳಗಿದ್ದೂ, ವಿಜಯೇಂದ್ರ ಅವರನ್ನು ರಾಜ್ಯಾಧ್ಯಕ್ಷರನ್ನಾಗಿ ಮಾಡಿರುವುದು ಸಹಜವಾಗಿಯೇ ಬಹುತೇಕರನ್ನು ಕೆರಳಿಸಿದೆ. ರಾಜ್ಯ ಬಿಜೆಪಿಯನ್ನು ತನ್ನ ತೆಕ್ಕೆಗೆ ತೆಗೆದು ಕೊಳ್ಳಲು ವಿಫಲ ಪ್ರಯತ್ನ ನಡೆಸಿದ ‘ಕೇಶವ ಕೃಪ’ದ ಮಂದಿಗಂತೂ ಇದು ಹತಾಶೆಯನ್ನುಂಟು ಮಾಡಿತ್ತು. ಆದುದರಿಂದಲೇ, ಯಡಿಯೂರಪ್ಪ ವಿರುದ್ಧ ಕೆಲವು ಶೂದ್ರ ನಾಯಕರಿಂದ ಪದೇ ಪದೇ ಹೇಳಿಕೆಯನ್ನು ನೀಡಿಸುತ್ತಾ ಬಂತು. ಯಡಿಯೂರಪ್ಪ ವಿರುದ್ಧ ಯತ್ನಾಳ್ ಗುಂಪು ನಡೆಸುತ್ತಿರುವ ಎಲ್ಲ ಹುನ್ನಾರಗಳು ಆರೆಸ್ಸೆಸ್ ಮುಖಂಡರಿಗೆ ಪೂರಕವಾಗಿದೆ. ಪ್ರಹ್ಲಾದ್ ಜೋಶಿಯೂ ಸೇರಿದಂತೆ ಹಲವು ನಾಯಕರು ಯತ್ನಾಳ್ ಗುಂಪಿನ ವಿರುದ್ಧ ಕ್ರಮ ತೆಗೆದುಕೊಳ್ಳಲು ತಡೆಯಾಗಿ ನಿಂತಿದ್ದಾರೆ. ತನ್ನ ವಿರುದ್ಧ ನಡೆಯುತ್ತಿರುವ ಈ ಎಲ್ಲ ಮಸಲತ್ತುಗಳು ಯಡಿಯೂರಪ್ಪ ಅವರಿಗೆ ಗೊತ್ತಿಲ್ಲದೇ ಇರುವ ವಿಷಯವಲ್ಲ. ಉಪಚುನಾವಣೆಯ ಸೋಲನ್ನು ಮುಂದಿಟ್ಟುಕೊಂಡು ಇದೀಗ ಬಿಜೆಪಿಯೊಳಗೆ ಯಡಿಯೂರಪ್ಪ ವಿರುದ್ಧ ಮತ್ತೆ ಹೋರಾಟಗಳು ಆರಂಭವಾಗಿವೆೆ. ಆದರೆ, ಈ ಸೋಲಿಗಾಗಿ ತನ್ನ ಪುತ್ರನನ್ನು ಹರಕೆಯ ಕುರಿಯಾಗಿಸಿದರೆ ಯಡಿಯೂರಪ್ಪ ಸುಮ್ಮನಿರುವವರಂತೂ ಅಲ್ಲ. ಸದ್ಯಕ್ಕೆ, ಯಾವ ವಕ್ಫನ್ನು ಮುಂದಿಟ್ಟುಕೊಂಡು ನಾಡಿನ ಜನತೆಯನ್ನು ಪರಸ್ಪರ ಎತ್ತಿಕಟ್ಟಲು ಬಿಜೆಪಿ ನಾಯಕರು ಮುಂದಾದರೋ, ಈಗ ಅವರೇ ವಕ್ಫ್‌ನ ಹೆಸರಿನಲ್ಲಿ ಪರಸ್ಪರ ಹೊಡೆದಾಡಿಕೊಳ್ಳುತ್ತಿರುವುದು ವಿಶೇಷವಾಗಿದೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X