window.googletag = window.googletag || {cmd: []}; googletag.cmd.push(function() { googletag.pubads().enableSingleRequest(); googletag.pubads().disableInitialLoad(); googletag.pubads().collapseEmptyDivs(); googletag.enableServices(); });
Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
    • ಕ್ರೈಂ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ಪುಸ್ತಕ ಸಾಂಗತ್ಯ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಸಂಪಾದಕೀಯ
  4. ಮಕ್ಕಳ ಪಾಲಿಗೆ ಮನೆಯೇ ಮಾರಕವಾದರೆ?

ಮಕ್ಕಳ ಪಾಲಿಗೆ ಮನೆಯೇ ಮಾರಕವಾದರೆ?

ವಾರ್ತಾಭಾರತಿವಾರ್ತಾಭಾರತಿ10 Jun 2026 8:45 AM IST
share
ಮಕ್ಕಳ ಪಾಲಿಗೆ ಮನೆಯೇ ಮಾರಕವಾದರೆ?

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

ರಾಜ್ಯವೇ ಬೆಚ್ಚಿ ಬೀಳುವಂತಹ ಭಯಾನಕ ಘಟನೆಯೊಂದು ಇತ್ತೀಚೆಗೆ ಗಂಗಾವತಿಯಲ್ಲಿ ನಡೆದಿದೆ. ಗಂಗಾವತಿಯ ಅಯೋಧ್ಯೆ ಗ್ರಾಮದಲ್ಲಿ ಅಪ್ರಾಪ್ತ ವಯಸ್ಸಿನ ಹುಡುಗನೊಬ್ಬ ತಂದೆ ಮತ್ತು ಸಹೋದರಿಯನ್ನು ಚಾಕುವಿನಿಂದ ಇರಿದು ಕೊಲೆ ಮಾಡಿದ್ದು, ತಾಯಿಯನ್ನು ಗಂಭೀರಗಾಯಗೊಳಿಸಿದ್ದಾನೆ. ಇಷ್ಟಕ್ಕೂ ಈತ ಈ ಭೀಕರ ಕೃತ್ಯ ಎಸಗುವುದಕ್ಕೆ ಕಾರಣ, ಪೋಷಕರು ಪಬ್ ಜಿ ಗೇಮ್ ಆಡುವುದನ್ನು ಆಕ್ಷೇಪಿಸಿರುವುದು. ಡ್ರಗ್ಸ್‌ನಂತಹ ಭೀಕರ ಚಟಗಳಿಗೆ ಬಲಿಯಾದ ಹುಡುಗರು ಎಸಗುವ ಅಪರಾಧ ಕೃತ್ಯಗಳು ಆಗಾಗ ಮಾಧ್ಯಮಗಳಲ್ಲಿ ಪ್ರಕಟವಾಗುತ್ತವೆ. ಆನ್‌ಲೈನ್ ಗೇಮಿಂಗ್ ಚಟಗಳಿಗೆ ಬಿದ್ದವರು ಸಾಲ ಸೋಲ ಮಾಡಿ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ಕೃತ್ಯಗಳು ಸಾಮಾನ್ಯ ಎಂಬಂತಾಗಿದೆ. ಇದೀಗ ಆನ್‌ಲೈನ್ ಗೇಮಿಂಗ್ ಒಬ್ಬ ಬಾಲಕನ ಕೈಯಲ್ಲಿ ತನ್ನ ಪೋಷಕರನ್ನು ಭೀಕರವಾಗಿ ಹತ್ಯೆ ಮಾಡಿಸಿದೆ. ಈ ಮೂಲಕ ಆನ್‌ಲೈನ್ ಗೇಮಿಂಗ್ ಎನ್ನುವುದು ಯಾವುದೇ ಮಾದಕ ಚಟಗಳಿಗಿಂತ ಕಡಿಮೆಯಿಲ್ಲ ಎನ್ನುವುದು ಸ್ಪಷ್ಟವಾಗಿದೆ. ಗ್ರಾಮೀಣ ಪ್ರದೇಶಗಳಲ್ಲೇ ಇಂತಹ ಬರ್ಬರ ಘಟನೆಗಳು ನಡೆಯುತ್ತವೆ ಎಂದ ಮೇಲೆ, ನಗರಗಳಲ್ಲಿ ಯುವಕ, ಯುವತಿಯರ ಗತಿ ಏನಾಗಬೇಕು? ಎಂದು ಗಾಬರಿ ಪಡುವಂತಾಗಿದೆ. ಇದೇ ಸಂದರ್ಭದಲ್ಲಿ ಡ್ರಗ್ಸ್ ಮತ್ತು ಆನ್‌ಲೈನ್ ಗೇಮಿಂಗ್ ಎರಡೂ ಜೊತೆಗೂಡಿ ನಮ್ಮ ಯುವಕರ ಬದುಕಿನಲ್ಲಿ ಆಟವಾಡತೊಡಗಿದರೆ ಅದರ ಪರಿಣಾಮ ಏನಾಗಬಹುದು? ಆನ್‌ಲೈನ್ ಗೇಮಿಂಗ್ ಚಟಕ್ಕೆ ಬಲಿಯಾಗುವ ಯುವಕರು ತಮ್ಮ ಜೊತೆಗೇ ಇಡೀ ಸಮಾಜವನ್ನೇ ದುರಂತದ ಕಡೆಗೆ ಕೊಂಡೊಯ್ಯುತ್ತಿರುವುದನ್ನು ಸರಕಾರ ಇನ್ನಾದರೂ ಗಂಭೀರವಾಗಿ ತೆಗೆದುಕೊಳ್ಳಬೇಕಾಗಿದೆ.

ಸಾಧಾರಣವಾಗಿ ಗಾಂಜಾ, ಡ್ರಗ್ಸ್‌ನಂತಹ ಚಟಗಳಿಗೆ ವಿದ್ಯಾರ್ಥಿಗಳು ಬಲಿಯಾಗುವುದು ಹೊರಗಿನ ಶಕ್ತಿಗಳಿಂದ. ಶಾಲೆ, ಕಾಲೇಜುಗಳಿಗೆಂದು ಮನೆಯಿಂದ ಹೊರಗೆ ಕಾಲಿಟ್ಟ ಸಂದರ್ಭದಲ್ಲಿ ತುಸು ದಾರಿತಪ್ಪಿದರೆ ಈ ಮಾರಕ ವ್ಯಸನ ಯುವಕರನ್ನು ಬಲಿ ತೆಗೆದುಕೊಳ್ಳಬಹುದು. ಈಗಾಗಲೇ ಡ್ರಗ್ಸ್ ಎನ್ನುವ ಮಹಾಮಾರಿ ಯುವ ಸಮೂಹವನ್ನು ಹೆಬ್ಬಾವಿನಿಂತೆ ನುಂಗಿ ಹಾಕುತ್ತಿವೆ. ಯುವಕರ ಭವಿಷ್ಯವನ್ನು ಸರ್ವನಾಶ ಮಾಡುತ್ತಿದೆ ಮಾತ್ರವಲ್ಲ, ಅವರನ್ನು ಅಪರಾಧಿಗಳನ್ನಾಗಿ, ಕೊಲೆಗಾರರನ್ನಾಗಿ ಮಾರ್ಪಡಿಸುತ್ತಿದೆ. ಮಾದಕ ವ್ಯಸನದಿಂದ ಯುವ ಸಮೂಹವನ್ನು ರಕ್ಷಿಸಲು ಸರಕಾರ, ಕಾನೂನು ವ್ಯವಸ್ಥೆ ಸಾಕಷ್ಟು ಕ್ರಮಗಳನ್ನು ತೆಗೆದುಕೊಳ್ಳುತ್ತಿದೆಯಾದರೂ ಎಲ್ಲ ಪ್ರಯತ್ನಗಳು ನೀರ ಮೇಲಿನ ಹೋಮದಂತಾಗಿದೆ. ಇದೀಗ ಇದರ ಬೆನ್ನಿಗೇ ಯುವಕರನ್ನು ಆನ್‌ಲೈನ್ ಗೇಮಿಂಗ್‌ಗಳೂ ಕಾಡತೊಡಗಿವೆ. ವಿಪರ್ಯಾಸವೆಂದರೆ, ಈ ಚಟವನ್ನು ಅವರು ಅಂಟಿಸಿಕೊಳ್ಳುವುದು ಹೊರಗಿನವರಿಂದಲ್ಲ. ಬಹುತೇಕ ಮನೆಯೊಳಗಿನ ಜನರೇ ಪರೋಕ್ಷ ಅಥವಾ ನೇರವಾಗಿ ಇದಕ್ಕೆ ಹೊಣೆಯಾಗಿರುತ್ತಾರೆ. ಮಕ್ಕಳನ್ನು ಸುಮ್ಮನಿರಿಸಲು, ಅವರನ್ನು ಆಟವಾಡಿಸಲು ಅಥವಾ ಸಮಯ ಕಳೆಯಲು ಮಕ್ಕಳ ಕೈಗೆ ಮೊಬೈಲ್ ಫೋನ್‌ಗಳನ್ನು ನೀಡುವುದರೊಂದಿಗೆ ಈ ಚಟ ಆರಂಭವಾಗುತ್ತದೆ. ಪೋಷಕರು ಹಗಲು ರಾತ್ರಿ ಮೊಬೈಲ್ ಜೊತೆಗೆ ಕಾಲ ಕಳೆಯುತ್ತಿರುವುದು, ಮಕ್ಕಳಲ್ಲಿ ಮೊಬೈಲ್ ಮೋಹ ಹುಟ್ಟಲು ಇನ್ನೊಂದು ಕಾರಣ. ಮೊಬೈಲ್ ಕೊಡದೇ ಇದ್ದರೆ ಮಕ್ಕಳು ಅಳುವುದಕ್ಕೆ ಆರಂಭಿಸುತ್ತವೆ. ನಿಧಾನಕ್ಕೆ ಈ ಮೊಬೈಲ್ ಮಕ್ಕಳನ್ನು ತನ್ನೊಳಗೆ ಸೆಳೆದುಕೊಳ್ಳುತ್ತದೆ. ಆರಂಭದಲ್ಲಿ ಕಾರ್ಟೂನ್‌ಗಳನ್ನು ನೋಡುವ ಮಕ್ಕಳು ನಿಧಾನಕ್ಕೆ ಮೊಬೈಲ್‌ನೊಳಗಿನ ಬೇರೆ ಬೇರೆ ಜಾಲಗಳ ಒಳಗೆ ಬಿದ್ದು ಬಿಡುತ್ತಾರೆ. ಮೊಬೈಲ್ ಆಟದ ಚಟಕ್ಕೆ ಬಿದ್ದ ಮಕ್ಕಳು ನಿಧಾನಕ್ಕೆ ಇತರ ಆನ್‌ಲೈನ್ ಗೇಮಿಂಗ್ ಕಡೆಗೆ ಹೊರಳುತ್ತಾರೆ. ಅದು ಚಟವಾಗಿ ಬೆಳೆದ ಮೇಲಷ್ಟೇ, ತಮ್ಮ ಮಕ್ಕಳು ಎಷ್ಟು ಆಳವಾದ ಖೆಡ್ಡಾದೊಳಗೆ ಬಿದ್ದು ಬಿಟ್ಟಿದ್ದಾರೆ ಎನ್ನುವುದು ಪೋಷಕರ ಅರಿವಿಗೆ ಬರುತ್ತದೆ. ಆದರೆ ಅವರನ್ನು ಮೇಲೆತ್ತುವುದು ಕಷ್ಟವಾಗಿ ಬಿಡುತ್ತದೆ. ಪೋಷಕರು ಒಮ್ಮೆಗೆ ಕಂಗಾಲಾಗಿ ಮಕ್ಕಳ ಮೇಲೆ ಒತ್ತಡ ಹಾಕಿದಾಗ ಅದು ಒಂದೋ ಆತ್ಮಹತ್ಯೆಯಲ್ಲಿ ಕೊನೆಯಾಗುತ್ತದೆ ಅಥವಾ ಗಂಗಾವತಿಯಲ್ಲಿ ನಡೆದಂತೆ ಭೀಕರ ದುರಂತಕ್ಕೆ ಕಾರಣವಾಗುತ್ತದೆ.

ಕಳೆದ ಫೆಬ್ರವರಿಯಲ್ಲಿ ಉತ್ತರ ಪ್ರದೇಶದ ಘಾಝಿಯಾಬಾದ್‌ನಲ್ಲಿ ಮೂವರು ಅಪ್ರಾಪ್ತ ವಯಸ್ಸಿನ ಸಹೋದರಿಯರು ಒಂಬತ್ತನೇ ಮಹಡಿಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡರು. ಆತ್ಮಹತ್ಯೆ ಮಾಡಿಕೊಂಡ ಸಹೋದರಿಯರಲ್ಲಿ ಒಬ್ಬಳಿಗೆ 12 ವಯಸ್ಸಾದರೆ ಇನ್ನೊಬ್ಬಳಿಗೆ 14 ವರ್ಷ. ಮೂರನೆಯವರಿಗೆ 16 ವರ್ಷ. ಮೂವರೂ ಆನ್‌ಲೈನ್ ಗೇಮಿಂಗ್ ಚಟಕ್ಕೆ ಬಲಿಯಾಗಿದ್ದರು. ಈ ಬಾಲಕಿಯರಿಂದ ಪೋಷಕರು ಏಕಾಏಕಿ ಮೊಬೈಲ್ ಕಿತ್ತುಕೊಂಡಿರುವುದು ಆತ್ಮಹತ್ಯೆ ಮಾಡಿಕೊಳ್ಳುವುದಕ್ಕೆ ಕಾರಣವಾಯಿತು. ಆನ್‌ಲೈನ್ ಗೇಮಿಂಗ್ ಎನ್ನುವುದು ಜೂಜಾಟಕ್ಕಿಂತ ಯಾವ ರೀತಿಯಲ್ಲೂ ಕಡಿಮೆಯಿಲ್ಲ. ಒಂದು ಕಾಲದಲ್ಲಿ ರಾಜ್ಯದಲ್ಲಿ ಒಂದಂಕಿ ಲಾಟರಿಗಳು ನೂರಾರು ಮನೆಗಳನ್ನು ಸರ್ವನಾಶ ಮಾಡಿದವು. ಅದರ ಬೆನ್ನ ಹಿಂದೆ ಹೋದ ನೂರಾರು ಯುವಕರು ಆತ್ಮಹತ್ಯೆಯ ದಾರಿ ಹಿಡಿದರು. ನೂರಾರು ಉದ್ಯಮಿಗಳು ಒಂದಂಕಿ ಲಾಟರಿಯಿಂದ ಸಾಲಸೋಲಕ್ಕೆ ಸಿಲುಕಿ ದುರಂತವನ್ನು ಕಂಡರು. ಬಳಿಕ ಅದನ್ನು ನಿಷೇಧಿಸಲಾಯಿತು. ಆದರೆ, ಹೋದೆಯಾ ಪಿಶಾಚಿ ಎಂದರೆ ಬಂದೆ ಗವಾಕ್ಷಿಯಿಂದ ಎನ್ನುವಂತೆ ಬೀದಿಯಲ್ಲಿದ್ದ ಈ ಜೂಜು ಇದೀಗ ನೇರ ಮನೆಯನ್ನೇ ಹೊಕ್ಕಿದೆ. ಈ ಹಿಂದೆ ಪೋಷಕರಿಗೆ, ವಯಸ್ಕರಿಗೆ ಸೀಮಿತವಾಗಿದ್ದ ಈ ಚಟ ಇಂದು ಸಣ್ಣ ಪುಟ್ಟಮಕ್ಕಳನ್ನೂ ಬಿಡದೆ ಬಲಿ ತೆಗೆದುಕೊಳ್ಳುತ್ತಿದೆ. ಆನ್‌ಲೈನ್ ಗೇಮಿಂಗ್ ಎನ್ನುವುದು ಬೃಹತ್ ಉದ್ಯಮ ರೂಪದಲ್ಲಿ ಭಾರತದಲ್ಲಿ ನೆಲೆ ನಿಂತಿರುವ ಕಾರಣ ಇದರ ವಿರುದ್ಧ ಸರಕಾರ ಯಾವುದೇ ಕಠಿಣ ಕ್ರಮ ತೆಗೆದುಕೊಳ್ಳುವುದು ಕಷ್ಟವಾಗುತ್ತಿದೆ. ದೇಶದಲ್ಲಿ ಆನ್‌ಲೈನ್ ಗೇಮಿಂಗ್ ಉದ್ಯಮದಲ್ಲಿ 3.7 ಶತಕೋಟಿ ಡಾಲರ್‌ಗಳನ್ನು ಹೂಡಿಕೆ ಮಾಡಲಾಗಿದ್ದು, 2 ಲಕ್ಷ ಕೋಟಿ ರೂ. ಮೌಲ್ಯದ ವಹಿವಾಟು ನಡೆಯುತ್ತಿದೆ. ವಾರ್ಷಿಕ 31 ಸಾವಿರ ಕೋಟಿ ರೂ. ಆದಾಯ ಬರುತ್ತಿದೆ. ಇದರಲ್ಲಿ 20 ಸಾವಿರ ಕೋಟಿ ಯಷ್ಟು ಹಣ ನೇರ ಹಾಗೂ ಪರೋಕ್ಷ ತೆರಿಗೆ ರೂಪದಲ್ಲಿ ಪಾವತಿಯಾಗುತ್ತಿದೆ.

ಇತ್ತೀಚೆಗೆ ಸರಕಾರ ಆನ್‌ಲೈನ್‌ಗೇಮಿಂಗ್ ವಿರುದ್ಧ ವಿಧೇಯಕವೊಂದನ್ನು ಜಾರಿಗೆ ತಂದಿದೆ. ಮೇ 1ರಿಂದ ಇದು ಜಾರಿಗೆ ಬಂದಿದೆ. ಆನ್‌ಲೈನ್ ಗೇಮಿಂಗ್ ಪ್ರಾಧಿಕಾರ ರಚನೆಯಾಗಿದ್ದು, ಇದು ಗೇಮಿಂಗ್ ಮೇಲೆ ಕಣ್ಗಾವಲು ನಡೆಸಲು ಮುಂದಾಗಿದೆ. ಆದರೆ ಆನ್‌ಲೈನ್ ಎನ್ನುವುದು ಮೂಗುದಾರಕ್ಕೆ ಸಿಗದ ಗೂಳಿ. ಕಾನೂನು ಚಾಪೆಯಡಿ ತೂರಿದರೆ, ಈ ಆನ್‌ಲೈನ್ ಆಟಗಳು ರಂಗೋಲಿಯಡಿಗೆ ತೂರುತ್ತವೆ. ಯಾವುದೋ ಲಾಟರಿ ಅಥವಾ ಮದ್ಯದಂಗಡಿಗಳ ಮೇಲೆ ಕಠಿಣ ಕ್ರಮ ತೆಗೆದುಕೊಂಡಂತೆ ಆನ್‌ಲೈನ್ ಆಟಗಳ ಮೇಲೆ ಕ್ರಮ ತೆಗೆದುಕೊಳ್ಳುವುದು ಸಾಧ್ಯವಿಲ್ಲ. ಕೆಲವು ನಿಯಮಗಳನ್ನು ಅನುಷ್ಠಾನಕ್ಕೆ ತರಬಹುದು. ದೂರುಗಳ ಆಧಾರದಲ್ಲಿ ಕಂಪೆನಿಗಳ ಮೇಲೆ ಕ್ರಮ ತೆಗೆದುಕೊಳ್ಳಬಹುದು. ಆದರೆ ತಮ್ಮ ಮನೆಯ ಮಕ್ಕಳು ಆನ್‌ಲೈನ್ ಚಟಗಳಿಗೆ ಬೀಳದಂತೆ ನೋಡಿಕೊಳ್ಳುವ ಹೊಣೆಗಾರಿಕೆ ಅಂತಿಮವಾಗಿ ಪೋಷಕರದ್ದೇ ಆಗಿದೆ. ಮೊಬೈಲ್ ಮತ್ತು ಮಕ್ಕಳ ನಡುವೆ ಒಂದು ಅಂತರವನ್ನು ಕಾಪಾಡುವುದು ಅತ್ಯಗತ್ಯವಾಗಿದೆ. ಈ ನಿಟ್ಟಿನಲ್ಲಿ ಸರಕಾರ, ಕಾನೂನು ವ್ಯವಸ್ಥೆ ಕ್ರಮ ತೆಗೆದುಕೊಳ್ಳುವುದಕ್ಕಿಂತ ಪೋಷಕರು ಕ್ರಮ ತೆಗೆದುಕೊಳ್ಳುವುದು ಮುಖ್ಯವಾಗಿದೆ. ಮೊಬೈಲ್ ಎಂದರೆ ಬರೇ ಆನ್‌ಲೈನ್ ಗೇಮಿಂಗ್ ಚಟವಷ್ಟೇ ಅಲ್ಲ, ಮಕ್ಕಳು ನೋಡಬಾರದ ನೂರಾರು ವಿಷಯಗಳು ಅದರಲ್ಲಿವೆ. ಮಕ್ಕಳನ್ನು ಬಾಲ್ಯದಲ್ಲೇ ಓದು, ಸೃಜನಶೀಲ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವಂತೆ ಮಾಡುವುದರಿಂದ ಈ ಮೊಬೈಲ್ ಗೀಳುಗಳಿಂದ ಅವರನ್ನು ಪಾರು ಮಾಡಬಹುದಾಗಿದೆ. ಈ ನಿಟ್ಟಿನಲ್ಲಿ ಶಿಕ್ಷಕರ ಪಾತ್ರವೂ ಬಹುದೊಡ್ಡದಿದೆ. ತಮ್ಮ ಮಕ್ಕಳನ್ನು ಮೊಬೈಲ್ ಚಟದಿಂದ ರಕ್ಷಿಸಲು ಪೋಷಕರೇ ವಿಫಲರಾದರೆ, ಕಾನೂನನ್ನು ದೂರಿ ಏನು ಪ್ರಯೋಜನವಿದೆ?

Tags

Editorialhomechildren
share
ವಾರ್ತಾಭಾರತಿ
ವಾರ್ತಾಭಾರತಿ
Next Story
X