Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
    • ಕ್ರೈಂ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ಪುಸ್ತಕ ಸಾಂಗತ್ಯ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಮಾಹಿತಿ ಮಾರ್ಗದರ್ಶನ
    • ಆರೋಗ್ಯ
    • ಓ ಮೆಣಸೇ
    • ಕೃತಿ ಪರಿಚಯ
    • ಝಲಕ್
    • ಬುಡಬುಡಿಕೆ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಸಂಪಾದಕೀಯ
  4. ಪ್ರಧಾನಮಂತ್ರಿಯೇ ಹುದ್ದೆಯ ಘನತೆ ಮರೆತರೆ?

ಪ್ರಧಾನಮಂತ್ರಿಯೇ ಹುದ್ದೆಯ ಘನತೆ ಮರೆತರೆ?

ವಾರ್ತಾಭಾರತಿವಾರ್ತಾಭಾರತಿ12 Sept 2026 8:26 AM IST
share
ಪ್ರಧಾನಮಂತ್ರಿಯೇ ಹುದ್ದೆಯ ಘನತೆ ಮರೆತರೆ?

ಜುಲೈಯಲ್ಲಿ ಸಂಭವಿಸಿದ ಯುವಜನರ ಪ್ರತಿಭಟನೆಯ ನಂತರ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ದೇಶದ ಹಲವೆಡೆ ಮಾಡಿದ ಭಾಷಣಗಳು ಈಗ ತೀವ್ರ ಚರ್ಚೆಗೆ ಗ್ರಾಸವಾಗಿವೆ. ಆಗಸ್ಟ್ 15ರಂದು ದಿಲ್ಲಿಯ ಕೆಂಪುಕೋಟೆಯಲ್ಲಿ ದೇಶವನ್ನು ಉದ್ದೇಶಿಸಿ ಮಾಡಿದ ಭಾಷಣದಲ್ಲಿ ತನ್ನ ವಿರೋಧಿಗಳಿಗೆ ‘ವೈಚಾರಿಕ ನಕ್ಸಲ್’ (ದಿಮಾಗಿ ನಕ್ಸಲ್) ಎಂದು ಬಿರುದು ನೀಡಿದರು. ಸೆಪ್ಟಂಬರ್ 5ರಂದು ದಿಲ್ಲಿಯ ಶ್ರೀರಾಮ ಕಾಲೇಜಿನ ಶತಮಾನೋತ್ಸವದ ಸಂದರ್ಭದಲ್ಲಿ ಸರಕಾರದ ನೀತಿಯನ್ನು ಟೀಕಿಸುವವರನ್ನು ವ್ಯಂಗ್ಯವಾಗಿ ಚುಚ್ಚಿದರು. ಕೆಂಪು ಕೋಟೆಯ ಭಾಷಣದಲ್ಲಿ ತಾನು ದಿಮಾಗಿ ನಕ್ಸಲ್ ಎಂಬ ಚಿಕ್ಕ ಹೋಮಿಯೋಪತಿ ಔಷಧಿಯನ್ನು ಅವರಿಗೆ ನೀಡಿದ್ದೇನೆ ಎಂದರು ಮಾತ್ರವಲ್ಲ ಉತ್ತರ ಭಾರತದಲ್ಲಿ ವಾಡಿಕೆಯಲ್ಲಿರುವ ‘ನಾರಾಝ್ ಫೂಫಾ’ (ಸೋದರತ್ತೆಯ ಗಂಡ- ಮದುವೆ ಮುಂಜಿ ಮುಂತಾದ ಕೌಟುಂಬಿಕ ಸಮಾರಂಭಗಳಲ್ಲಿ ಸಣ್ಣ ಪುಟ್ಟ ಎಡವಟ್ಟಿಗೂ ಮುನಿಸಿಕೊಳ್ಳುವವನು!) ಎಂಬ ಪದಪುಂಜವನ್ನು ತನ್ನ ರಾಜಕೀಯ ವಿರೋಧಿಗಳಿಗೆ ಬಳಸಿದರು.

ಈ ವಾರದ ಆರಂಭದಲ್ಲಿ ಗುಜರಾತ್ ಮತ್ತು ಮುಂಬೈಯ ವಿವಿಧ ಸಾರ್ವಜನಿಕ ಸಮಾರಂಭಗಳಲ್ಲಿ ಭಾಗವಹಿಸಿದ ಮೋದಿಯವರು ಅದೇ ಧಾಟಿಯಲ್ಲಿ ಮತ್ತೆ ಭಾಷಣ ಮಾಡಿದರು. ಪ್ರಧಾನಿಯ ನೆಲೆಯಲ್ಲಿ ವಿಭಿನ್ನ ಸರಕಾರಿ ಮತ್ತು ಸರಕಾರೇತರ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದು ಉತ್ತಮ ಸಂಪ್ರದಾಯ. ಸಂದರ್ಭೋಚಿತವಾಗಿ ದೇಶದ ವಿದ್ಯಮಾನಗಳ ಬಗ್ಗೆ ಆ ಸನ್ನಿವೇಶಗಳಲ್ಲಿ ಸರಕಾರದ ಧೋರಣೆಯನ್ನು ವಿವರಿಸುವುದು ತಪ್ಪಲ್ಲ. ಆದರೆ ಮಾತನಾಡುವಾಗ ತಮ್ಮ ಸ್ಥಾನದ ಘನತೆಯನ್ನು ಕಾಪಾಡುವಂತಿರಬೇಕು.

ದೇಶದ ಸಂವಿಧಾನದ ಪ್ರಕಾರ ಲೋಕಸಭೆಯ ಚುನಾವಣೆಯಲ್ಲಿ ಬಹುಮತ ಗಳಿಸಿದ ಪಕ್ಷದ ನಾಯಕರು ಪ್ರಧಾನ ಮಂತ್ರಿಯಾಗಿ ರಾಷ್ಟ್ರಾಧ್ಯಕ್ಷರಿಂದ ನೇಮಕಗೊಳ್ಳುತ್ತಾರೆ. ಅವರು ಆ ಸ್ಥಾನಕ್ಕೆ ಸಂಬಂಧಿಸಿದ ಪ್ರತಿಜ್ಞೆಯನ್ನು ಮಾಡುವಾಗ ಸಂವಿಧಾನಕ್ಕೆ ತನ್ನ ಬದ್ಧತೆಯನ್ನು ಅಂಗೀಕರಿಸುತ್ತಾರೆ. ಈ ಕಾರಣಕ್ಕಾಗಿ ಪ್ರಧಾನಿಯಾದವರು ಸಂವಿಧಾನದ ಚೌಕಟ್ಟಿನಲ್ಲಿಯೇ ವರ್ತಿಸಬೇಕು. ಅವರು ಇಡೀ ದೇಶದ ಪ್ರಧಾನಿಗಳು, ಒಂದು ಪಕ್ಷದವರಲ್ಲ. ತಮ್ಮ ಸ್ಥಾನದ ಗೌರವವನ್ನು ಕಾಯ್ದುಕೊಳ್ಳುವ ನೈತಿಕ ಹೊಣೆಗಾರಿಕೆ ಪ್ರಧಾನಿ ಪಟ್ಟ ಏರಿದವರಲ್ಲಿರಬೇಕು.

ಮೇಲೆ ಉಲ್ಲೇಖಿಸಿದ ಗುಜರಾತ್‌ನ ಕಾರ್ಯಕ್ರಮಗಳು ಸರಕಾರದ ಯೋಜನೆಗಳಿಗೆ ಸಂಬಂಧಿಸಿದವು. ಹೀಗಾಗಿ ಆ ಸನ್ನಿವೇಶದಲ್ಲಿ ಪ್ರಧಾನಿಯ ಮಾತು ಆ ಯೋಜನೆಗಳಿಗೆ ಸೀಮಿತವಾಗಿರಬೇಕು. ಕೆಲವೊಮ್ಮೆ ಪೂರ್ಣಗೊಂಡ ಯೋಜನೆಯ ನಂತರ ಸರಕಾರವು ಏನು ಹೊಸ ಯೋಜನೆಗಳನ್ನು ಕೈಗೊಳ್ಳಲಿದೆ ಎಂದು ಪ್ರಧಾನಿಯವರು ಅಲ್ಲಿ ಘೋಷಿಸಬಹುದು. ಇದಕ್ಕೆ ವಿರುದ್ಧವಾಗಿ ಮೋದಿಯವರು ದೇಶದಲ್ಲಿ ಈಗ ಸುದ್ದಿಯಾಗುತ್ತಿರುವ ಯುವಜನರ ಅಸಹನೆಯ ಬಗ್ಗೆ, ತಮ್ಮ ಸರಕಾರದ ವೈಫಲ್ಯಗಳ ಬಗ್ಗೆ ಸಾರ್ವಜನಿಕವಾಗಿ ಬರುತ್ತಿರುವ ಟೀಕೆ ಟಿಪ್ಪಣಿಗಳ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಟೀಕೆಗಳಿಗೆ ಸಕಾರಾತ್ಮಕವಾಗಿ ಉತ್ತರವನ್ನು ಈ ಸಂದರ್ಭಗಳಲ್ಲಿ ನೀಡಿದರೆ ತಪ್ಪೇನಿಲ್ಲ. ಆದರೆ ತಮ್ಮ ಧೋರಣೆಯನ್ನು ಟೀಕಿಸಿದವರ, ತಮ್ಮ ಸರಕಾರದ ಲೋಪಗಳನ್ನು ಎತ್ತಿ ತೋರಿಸಿದವರ ಬಗ್ಗೆ ಲಘುವಾಗಿ ಮಾತನಾಡುವುದು, ಅವರನ್ನು ಹೀಗಳೆಯುವುದು ಪ್ರಧಾನಿ ಸ್ಥಾನಕ್ಕೆ ಶೋಭೆ ತರುವುದಿಲ್ಲ.

ಮೋದಿಯವರ ಈ ತೆರನಾದ ವರ್ತನೆ ಹೊಸದೇನಲ್ಲ. ಸಂಸತ್ತಿನಲ್ಲಿ ತಮ್ಮ ಭಾಷಣದ ವೇಳೆ, ಸ್ವಾತಂತ್ರ್ಯೋತ್ಸವ ಮತ್ತು ಗಣರಾಜ್ಯೋತ್ಸವದಂತಹ ವಿಶೇಷ ಸಂದರ್ಭಗಳಲ್ಲಿ ಹಾಗೂ ವಿದೇಶಗಳಲ್ಲಿ ಅನಿವಾಸಿ ಭಾರತೀಯರನ್ನು ಉದ್ದೇಶಿಸಿ ಮಾತನಾಡುವಾಗಲೂ ತಮ್ಮನ್ನು ಟೀಕಿಸಿದವರ ಮತ್ತು ಪ್ರಶ್ನಿಸಿದವರ ಬಗ್ಗೆ ನಿಕೃಷ್ಟವಾದ ಮಾತುಗಳನ್ನು ಆಡಿದ್ದಾರೆ. ಪ್ರಧಾನಿ ಪದಕ್ಕೆ ಏರುವ ಮೊದಲು ಗುಜರಾತ್‌ನ ಮುಖ್ಯಮಂತ್ರಿಯಾಗಿದ್ದಾಗಲೂ ವಿದೇಶಯಾತ್ರೆಯ ಸಂದರ್ಭದಲ್ಲಿ ದೇಶವನ್ನು ಹೀಯಾಳಿಸಿದ್ದರು. ಪ್ರಧಾನಿಯಾದ ಹೊಸತರಲ್ಲಿ ಪೌರ್ವಾತ್ಯ ರಾಷ್ಟ್ರ ಒಂದಕ್ಕೆ ಭೇಟಿ ನೀಡಿದಾಗ ಈ ಮಾತು ಹೇಳಿದ್ದರು: ‘‘2014ರ ಮೊದಲು, ವಿದೇಶದಲ್ಲಿರುವ ಅನೇಕ ಭಾರತೀಯರ ಪ್ರಕಾರ ಭಾರತದಲ್ಲಿ ಹುಟ್ಟಿದ್ದೇ ಪಾಪ ಎಂಬ ಭಾವನೆ ಪ್ರಚಲಿತವಾಗಿತ್ತು, ನಾವು ಅಧಿಕಾರಕ್ಕೆ ಬಂದ ಮೇಲೆ ಈ ಚಿಂತನೆ ಬದಲಾಗಿದೆ’’.

ವಿದೇಶದಲ್ಲಿ ಭಾರತದ ಪ್ರಧಾನಿಯವರು ದೇಶವನ್ನು ಪ್ರತಿನಿಧಿಸುತ್ತಾರೆ. ಅವರು ಅಲ್ಲಿ ಪಕ್ಷಾತೀತರಂತೆ ವರ್ತಿಸಬೇಕು. ಆತಿಥೇಯ ದೇಶದ ರಾಜಕೀಯದ ಬಗ್ಗೆ ಅಲ್ಲಿ ಮಾತನಾಡುವುದು ಮತ್ತು ಅಲ್ಲಿನ ಒಬ್ಬ ವ್ಯಕ್ತಿಯ ಬಗ್ಗೆ ಪ್ರಚಾರ ಮಾಡುವುದು ತಾವು ಪ್ರತಿನಿಧಿಸುವ ದೇಶದ ಬಗ್ಗೆ ಆ ದೇಶದಲ್ಲಿ ಕೆಟ್ಟ ಅಭಿಪ್ರಾಯವನ್ನು ಮೂಡಿಸುತ್ತದೆ. ಪ್ರಧಾನಿಯಾಗಿದ್ದಾಗ ಅಮೆರಿಕಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಹ್ಯೂಸ್ಟನ್‌ನಲ್ಲಿ ಅನಿವಾಸಿ ಭಾರತೀಯರ ಬೃಹತ್ ಸಭೆಯಲ್ಲಿ ಜಗಜ್ಜಾಹೀರಾಗಿ, ‘ಅಬ್ ಕೀ ಬಾರ್ ಟ್ರಂಪ್ ಕೀ ಸರಕಾರ್’ (ಈ ಬಾರಿ ಟ್ರಂಪ್ ಸರಕಾರ) ಎಂದು ಸಭಿಕರಿಗೆ ಕರೆಕೊಟ್ಟದ್ದು ತಮ್ಮ ಸ್ಥಾನಕ್ಕೆ ಮಾಡಿದ ಅಗೌರವ.

ದೇಶದ ಸ್ವಾತಂತ್ರ್ಯೋತ್ಸವ ಮತ್ತು ಗಣರಾಜ್ಯೋತ್ಸವವನ್ನು ಪಕ್ಷಾತೀತರಾಗಿ ಎಲ್ಲರೂ ಆಚರಿಸಬೇಕು. ಸ್ವತಂತ್ರ ರಾಷ್ಟ್ರವಾಗಿ ಅಸ್ತಿತ್ವಕ್ಕೆ ಬಂದುದರ ಸಂಭ್ರಮಾಚರಣೆಯ ದಿನಗಳವು. ಇಡೀ ರಾಷ್ಟ್ರವನ್ನು ಪ್ರತಿನಿಧಿಸುವ ಪ್ರಧಾನ ಮಂತ್ರಿ ಮತ್ತು ರಾಷ್ಟ್ರಪತಿಯವರು ದೇಶವನ್ನು ಉದ್ದೇಶಿಸಿ ಮಾತನಾಡುವ ಸಂಪ್ರದಾಯ ಅನೂಚಾನವಾಗಿ ಬೆಳೆದು ಬಂದಿದೆ. ಆ ಸಂದರ್ಭದಲ್ಲಿ ಪ್ರಧಾನಿಯವರು ಸಂಯಮದಿಂದ, ಎಲ್ಲರೂ ಸಮಾನರು ಎಂಬ ಭಾವನೆಯನ್ನು ಉತ್ತೇಜಿಸಲು ಮುತ್ಸದ್ದಿಯಂತೆ ಮಾತನಾಡಬೇಕು.

ಸಂಸತ್ತಿನ ಚರ್ಚೆಗಳ ಸಂದರ್ಭದಲ್ಲಿಯೂ ಮೋದಿಯವರ ವರ್ತನೆ ಅನೇಕ ಬಾರಿ ಬಾಲಿಶವಾಗಿರುತ್ತದೆ. ದಿ. ಮನಮೋಹನ್ ಸಿಂಗರು ‘ರೈನ್ ಕೋಟು’ ಹಾಕಿ ಸ್ನಾನ ಮಾಡುತ್ತಾರೆ ಎಂದಿದ್ದು, ಸಂಸದೆ ರೇಣುಕಾ ಚೌಧರಿಯವರನ್ನು ಶೂರ್ಪನಖಿಗೆ ಹೋಲಿಸಿ ಅವಹೇಳನ ಮಾಡಿದುದು-ಇಂತಹ ಉದ್ಗಾರಗಳು ಸದನಕ್ಕೂ, ಪ್ರಧಾನಿಯವರ ಸ್ಥಾನಕ್ಕೂ ಗೌರವ ತರುವುದಿಲ್ಲ. ಸಂಸತ್ತಿನ ಹೊರಗೆ ರಾಜಕೀಯ ಸಮಾವೇಶಗಳಲ್ಲಿ ವಿರೋಧಿಗಳನ್ನು ಟೀಕಿಸಬಹುದು; ಆದರೆ ಅಲ್ಲಿಯೂ ಪ್ರಧಾನಿಯವರು ತಮ್ಮ ಸ್ಥಾನದ ಘನತೆಯನ್ನು ಉಳಿಸಿಕೊಳ್ಳುವುದಿಲ್ಲ .

ರಾಷ್ಟ್ರದ ಪ್ರಮುಖ ನಾಯಕರಾಗಿ ತನ್ನ ಸಾರ್ವಜನಿಕ ಸಭೆಗಳಲ್ಲಿ, ಸಂಸತ್ತಿನಲ್ಲಿ, ವಿದೇಶಗಳಲ್ಲಿ ಶಿಷ್ಟಾಚಾರ ಮತ್ತು ಸಂದರ್ಭದ ಔಚಿತ್ಯಕ್ಕೆ ಅನುಸಾರವಾಗಿ ಮಾತನಾಡಬೇಕು. ಅಭಿಪ್ರಾಯ ಭೇದಗಳನ್ನು ಗೌರವಿಸುವ ಮನೋವೃತ್ತಿಯನ್ನು ಹೊಂದಿರುವುದು ಮುತ್ಸದ್ದಿಯ ಲಕ್ಷಣ. ತನ್ನ ಮಾತುಗಳಲ್ಲಿ ವ್ಯಂಗ್ಯ, ಕುಚೋದ್ಯ, ಪರಿಹಾಸ್ಯ, ಹಿಂದಿನ ನಾಯಕರನ್ನು ಹೀಯಾಳಿಸುವ ಗುಣಗಳು ಅಪ್ರಬುದ್ಧತೆಯ ಸಂಕೇತಗಳು. ಅಧಿಕಾರ ಯಾವತ್ತೂ ಶಾಶ್ವತವಲ್ಲ; ಆದರೆ ಅಧಿಕಾರಾವಧಿಯಲ್ಲಿ ತನ್ನ ಸ್ಥಾನದ ಗೌರವವನ್ನು ಹೇಗೆ ಕಾಪಾಡಿದರು ಮತ್ತು ಸಾರ್ವಜನಿಕ ಜೀವನದಲ್ಲಿ ಮಾದರಿಯಾದ ಕೊಡುಗೆ ಏನು ನೀಡಿದ್ದಾರೆ ಎಂಬುದನ್ನು ಮುಂದಿನ ಪೀಳಿಗೆಯವರು ಗಮನಿಸಿ ಮೌಲ್ಯಮಾಪನವನ್ನು ಮಾಡುತ್ತಾರೆ.

Tags

EditorialPrime Ministersnarendra modiDimagi Naxalnaraz fufa
share
ವಾರ್ತಾಭಾರತಿ
ವಾರ್ತಾಭಾರತಿ
Next Story
X