Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
    • ಕ್ರೈಂ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಸಂಪಾದಕೀಯ
  4. ಇದೆಂತಹ ಪರಿಷ್ಕರಣೆ?

ಇದೆಂತಹ ಪರಿಷ್ಕರಣೆ?

ವಾರ್ತಾಭಾರತಿವಾರ್ತಾಭಾರತಿ31 Jan 2026 9:03 AM IST
share
ಇದೆಂತಹ ಪರಿಷ್ಕರಣೆ?

ಬಿಹಾರದಲ್ಲಿ ಆತುರಾತುರವಾಗಿ ಅನುಷ್ಠಾನಗೊಂಡ ದಿನಗಳಿಂದ ಮತದಾರರ ಪಟ್ಟಿಗಳ ತೀವ್ರ ಪರಿಷ್ಕರಣೆ(ಎಸ್‌ಐಆರ್) ಬೇರೆ ಬೇರೆ ಕಾರಣಗಳಿಗಾಗಿ ಟೀಕೆಗೊಳಗಾಗುತ್ತಿದೆ. ಎನ್‌ಆರ್‌ಸಿಯು ಹೊಸ ಮುಖವಾಡದಲ್ಲಿ ಮತ್ತೆ ಜನರ ನಡುವೆ ಬಂದಿದೆ ಎಂಬ ಗಂಭೀರ ಆರೋಪವು ಅದರ ಮೇಲಿದೆ. ಎನ್‌ಆರ್‌ಸಿಯನ್ನು ದೇಶಾದ್ಯಂತ ಜಾರಿಗೊಳಿಸಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಎಸ್‌ಐಆರ್ ಮೂಲಕ ಕೇಂದ್ರ ಸರಕಾರ ಜನರ ಪೌರತ್ವದ ತನಿಖೆಗಿಳಿದಿದೆ ಎನ್ನಲಾಗುತ್ತಿದೆ. ಮಾತ್ರವಲ್ಲ ತಳಸ್ತರದ ಕೋಟ್ಯಂತರ ಜನರನ್ನು ಮತದಾನದಿಂದ ಹೊರಗಿಡುವುದಕ್ಕಾಗಿಯೇ ಈ ಪರಿಷ್ಕರಣೆಯನ್ನು ಆರಂಭಿಸಲಾಗಿದೆ ಎಂದು ವಿರೋಧ ಪಕ್ಷಗಳು ಆರೋಪಿಸುತ್ತಿವೆ. ಅದನ್ನು ಪುಷ್ಟೀಕರಿಸುವಂತೆ ಈಗಾಗಲೇ ಈ ದೇಶದ ಕೋಟ್ಯಂತರ ಮತದಾರರು ಮತದಾರರ ಪಟ್ಟಿಯಿಂದ ಹೊರ ಬಿದ್ದಿದ್ದಾರೆ. ಹೊರ ಬಿದ್ದವರಲ್ಲಿ ದೊಡ್ಡ ಸಂಖ್ಯೆಯಲ್ಲಿರುವುದು ಬಡವರು, ಶೋಷಿತ ಸಮುದಾಯದ ಜನರು ಮತ್ತು ವಲಸೆ ಕಾರ್ಮಿಕರು. ಮತದಾರರ ಪಟ್ಟಿ ಪರಿಷ್ಕರಣೆಯ ಸಂದರ್ಭದಲ್ಲಿ ಕೆಲವು ನಿರ್ದಿಷ್ಟ ಸಮುದಾಯದ ಜನರನ್ನು ಪಟ್ಟಿಯಿಂದ ಹೊರಗಿಡುವುದಕ್ಕಾಗಿ ಬಿಜೆಪಿ ಮತ್ತು ಆರೆಸ್ಸೆಸ್ ದೊಡ್ಡ ಮಟ್ಟದ ಸಂಚು ನಡೆಸುತ್ತಿದೆ ಎನ್ನುವ ಆರೋಪಗಳೂ ಕೇಳಿ ಬರುತ್ತಿವೆ. ಹೇಗೆ ಈ ದೇಶದಲ್ಲಿ ದ್ವೇಷ ರಾಜಕಾರಣಕ್ಕಾಗಿ ಮತಾಂತರ ಕಾಯ್ದೆ ಮತ್ತು ಜಾನುವಾರು ಮಾರಾಟ ನಿಷೇಧ ಕಾಯ್ದೆಗಳು ದುರ್ಬಳಕೆಯಾಗುತ್ತಿವೆಯೋ ಅದಕ್ಕಿಂತ ಭೀಕರ ರೀತಿಯಲ್ಲಿ ಎಸ್‌ಐಆರ್‌ನ್ನು ದುರುಪಯೋಗಗೊಳಿಸಲು ರಾಜಕಾರಣಿಗಳು ಪ್ರಯತ್ನಿಸುತ್ತಿದ್ದಾರೆ. ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಇತ್ತೀಚೆಗೆ ನೀಡಿರುವ ಬಹಿರಂಗ ಹೇಳಿಕೆ ಅದನ್ನು ಪುಷ್ಟೀಕರಿಸುತ್ತದೆ. ಅಸ್ಸಾಮಿನಲ್ಲಿ ಎಸ್‌ಐಆರ್‌ನ್ನು ನಡೆಸುವುದೇ ಬಂಗಾಳಿ ಮಾತನಾಡುವ ಮುಸ್ಲಿಮರನ್ನು ಅಂದರೆ ಮಿಯಾಗಳನ್ನು ಮತದಾರರ ಪಟ್ಟಿಯಿಂದ ಹೊರಗಿಡುವುದಕ್ಕೆ ಎಂದು ಅವರು ಘೋಷಿಸಿದ್ದಾರೆ. ಮಾತ್ರವಲ್ಲ, ಎಸ್‌ಐಆರ್‌ನಲ್ಲಿರುವ ಸುಮಾರು ಐದು ಲಕ್ಷ ಮತದಾರರ ಹೆಸರುಗಳನ್ನು ಅಳಿಸಲಾಗುವುದು ಎನ್ನುವ ಬೆದರಿಕೆಯನ್ನು ಅವರು ಒಡ್ಡಿದ್ದಾರೆ.

ಎಸ್‌ಐಆರ್‌ನ ಉದ್ದೇಶ ನಕಲಿ ಮತದಾರರನ್ನು ಪಟ್ಟಿಯಿಂದ ಕಿತ್ತು ಹಾಕುವುದು ಎನ್ನುವ ಚುನಾವಣಾ ಆಯೋಗದ ಹೇಳಿಕೆಯನ್ನು ಶರ್ಮಾ ಹೇಳಿಕೆ ಸಂಪೂರ್ಣ ಅಲ್ಲಗಳೆಯುತ್ತದೆ. ಅವರ ಪ್ರಕಾರ ಎಸ್‌ಐಆರ್‌ನ್ನು ಜಾರಿಗೊಳಿಸಿರುವುದು ಒಂದು ನಿರ್ದಿಷ್ಟ ಸಮುದಾಯದ ಜನರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ಹೊರಗಿಡುವುದಕ್ಕಾಗಿ. ಈ ಮಾತುಗಳನ್ನು ಯಾವುದೋ ರಾಜಕೀಯ ಮುಖಂಡ ಆಡಿದ್ದರೆ ಅವರ ಮೇಲೆ ದ್ವೇಷ ಭಾಷಣದ ದೂರುಗಳನ್ನು ದಾಖಲಿಸಿ ಸುಮ್ಮನಿರಬಹುದು. ಆದರೆ ಒಂದು ರಾಜ್ಯದ ಮುಖ್ಯಮಂತ್ರಿಯೇ ಸಾರ್ವಜನಿಕವಾಗಿ ಈ ಹೇಳಿಕೆಯನ್ನು ನೀಡಿದ್ದಾರೆ ಮತ್ತು ಹಲವು ವೇದಿಕೆಗಳಲ್ಲಿ ಅದನ್ನು ಸಮರ್ಥಿಸಿಕೊಂಡಿದ್ದಾರೆ. ಅಂದರೆ, ಸರಿಯಾದ ದಾಖಲೆಗಳು ಇದ್ದರೂ ಒಂದು ನಿರ್ದಿಷ್ಟ ಸಮುದಾಯದ ಮತದಾರರನ್ನು ಪಟ್ಟಿಯಿಂದ ಕಿತ್ತು ಹಾಕಲಿದ್ದೇವೆ ಎನ್ನುವುದು ಇದರ ಅರ್ಥ. ಇದಕ್ಕೆ ಚುನಾವಣಾ ಆಯೋಗ ಅವಕಾಶ ಮಾಡಿಕೊಡುತ್ತದೆಯೆ? ವಿಪರ್ಯಾಸವೆಂದರೆ, ಅಸ್ಸಾಂ ಮುಖ್ಯಮಂತ್ರಿ ಇಂತಹದೊಂದು ಹೇಳಿಕೆಯನ್ನು ಎರಡೆರಡು ಬಾರಿ ನೀಡಿದಾಗಲೂ ಇದರ ವಿರುದ್ಧ ಚುನಾವಣಾ ಆಯೋಗ ತುಟಿ ಬಿಚ್ಚಿಲ್ಲ. ಅಂದರೆ ಮುಖ್ಯಮಂತ್ರಿಯ ಮಾತುಗಳನ್ನು ಚುನಾವಣಾ ಆಯೋಗ ಸಮರ್ಥಿಸುತ್ತದೆ ಎಂದಾಯಿತಲ್ಲವೆ? ಎನ್‌ಆರ್‌ಸಿ ಜಾರಿಗೊಂಡ ಏಕೈಕ ರಾಜ್ಯ ಅಸ್ಸಾಂ. ಎನ್‌ಆರ್‌ಸಿ ಹೆಸರಿನಲ್ಲಿ ಅಸ್ಸಾಮಿನಲ್ಲಿ ಏನೆಲ್ಲ ನಡೆಯಿತು ಎನ್ನುವುದನ್ನು ಇಡೀ ದೇಶ ನೋಡಿದೆ. ಸುಮಾರು 20 ಲಕ್ಷ ಮಂದಿ ಎನ್‌ಆರ್‌ಸಿ ಹೆಸರಿನಲ್ಲಿ ತಮ್ಮ ಪೌರತ್ವವನ್ನು ಕಳೆದುಕೊಂಡರು. ದೇಶಕ್ಕಾಗಿ ಹೋರಾಡಿದ ಯೋಧರು, ನಿವೃತ್ತ ಯೋಧರ ಹೆಸರುಗಳೂ ಇದರಲ್ಲಿ ಸೇರಿಕೊಂಡಿತ್ತು. ಕಾರಣ ಅವರು ಮುಸ್ಲಿಮರು ಎನ್ನುವುದಷ್ಟೇ ಆಗಿತ್ತು. ಕಾರ್ಗಿಲ್‌ನಲ್ಲಿ ಹೋರಾಡಿದ ಯೋಧನೂ ಬಂಧನಕೇಂದ್ರ ಸೇರಬೇಕಾದ ಸ್ಥಿತಿ ನಿರ್ಮಾಣವಾಯಿತು. ನೆರೆ ಮೊದಲಾದ ಪ್ರಕೃತಿ ವಿಕೋಪಗಳಿಂದ ತಮ್ಮ ದಾಖಲೆಗಳನ್ನು ಕಳೆದುಕೊಂಡ ಕುಟುಂಬಸ್ಥರು ದಿಗ್ಬಂಧನ ಕೇಂದ್ರದಲ್ಲಿ ಕಳೆದರು. ಹಲವರು ಅಲ್ಲೇ ಪ್ರಾಣವನ್ನೂ ಕಳೆದುಕೊಂಡರು. ಹಲವು ವರ್ಷ ದಿಗ್ಬಂಧನದಲ್ಲಿ ಕಳೆದ ಬಳಿಕ ಪೌರತ್ವ ಸಾಬೀತಾದವರೂ ಇದ್ದಾರೆ. ಇದೀಗ ಅಸ್ಸಾಮಿನಲ್ಲಿ ಹೊಸತೊಂದು ಎನ್‌ಆರ್‌ಸಿ ಆರಂಭವಾಗಿದೆ ಮತ್ತು ಪರಿಷ್ಕರಣೆಗೆ ಮೊದಲೇ ಯಾರು ಅರ್ಹ ಮತದಾರರು ಮತ್ತು ಅನರ್ಹ ಮತದಾರರು ಎನ್ನುವುದನ್ನು ಘೋಷಿಸಲಾಗಿದೆ. ಮುಖ್ಯಮಂತ್ರಿಯವರೇ ಯಾರು ಅರ್ಹ ಮತದಾರರು ಎನ್ನುವುದನ್ನು ಘೋಷಿಸಿದ ಮೇಲೆ, ಇನ್ನು ಅನಗತ್ಯವಾಗಿ ಎಸ್‌ಐಆರ್ ಎನ್ನುವ ಪ್ರಹಸನವನ್ನು ನಡೆಸುವ ಅಗತ್ಯವೇನಿದೆ ಎಂದು ಜನರು ಕೇಳುವಂತಾಗಿದೆ.

ಇದು ಕೇವಲ ಅಸ್ಸಾಮಿಗಷ್ಟೇ ಸೀಮಿತವಾಗಿಲ್ಲ. ಎಸ್‌ಐಆರ್ ಸಿಬ್ಬಂದಿಗೆ ನಿರ್ದಿಷ್ಟ ಸಮುದಾಯದ ಜನರ ಹೆಸರುಗಳನ್ನು ಅಳಿಸುವುದಕ್ಕಾಗಿ ಒತ್ತಡಗಳನ್ನು ಹೇರಲಾಗುತ್ತಿದೆ ಎನ್ನುವ ಆರೋಪ ವಿವಿಧ ರಾಜ್ಯಗಳಿಂದ ಕೇಳಿ ಬರುತ್ತಿದೆ. ರಾಜಸ್ಥಾನದಲ್ಲಿ ಈ ಒತ್ತಡಕ್ಕೆ ಹೆದರಿದ ಬಿಎಲ್‌ಒ ಒಬ್ಬರು ಆತ್ಮಹತ್ಯೆಗೆ ಮುಂದಾಗಿದ್ದರು. ‘ತನ್ನ ಮತಗಟ್ಟೆಯ 470 ಮತದಾರರ ಹೆಸರುಗಳನ್ನು ಅಳಿಸುವಂತೆ ಬಿಜೆಪಿ ಸಲ್ಲಿಸಿರುವ ಆಕ್ಷೇಪಣೆಗಳನ್ನು ಪರಿಶೀಲಿಸುವಂತೆ ತನಗೆ ಬೆದರಿಕೆಯೊಡ್ಡಲಾಗುತ್ತಿದೆ’ ಎಂದು ಜೈಪುರದ ಹವಾ ಮಹಲ್ ವಿಧಾನಸಭಾ ಕ್ಷೇತ್ರದ ಬಿಎಲ್‌ಒ ಕೀರ್ತಿಕುಮಾರ್ ಎಂಬವರು ಆರೋಪಿಸಿದ್ದರು ಮಾತ್ರವಲ್ಲ, ಈ ಒತ್ತಡ ತೀವ್ರವಾದರೆ ನಾನು ಜಿಲ್ಲಾಧಿಕಾರಿ ಕಚೇರಿಯ ಮುಂದೆ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ದೂರವಾಣಿಯಲ್ಲಿ ಕೂಗಾಡುವ ಅವರ ವೀಡಿಯೊ ವೈರಲ್ ಆಗಿತ್ತು. ಈ ಎಲ್ಲ ಮತದಾರರು ಮುಸ್ಲಿಮ್ ಸಮುದಾಯಕ್ಕೆ ಸೇರಿದವರಾಗಿದ್ದಾರೆ ಎನ್ನುವುದು ಗಮನಾರ್ಹವಾಗಿದೆ. ಗುಜರಾತಿನಲ್ಲಿ ಅಂತರ್‌ರಾಷ್ಟ್ರೀಯ ಖ್ಯಾತಿಯ ಡೋಲಕ್ ವಾದಕ ಮೀರ್ ಹಾಜಿ ಕಸಮ್ ಅವರನ್ನೇ ಪಟ್ಟಿಯಿಂದ ಹೊರಗಿಡುವ ಪ್ರಯತ್ನ ನಡೆಯಿತು. ಎಸ್‌ಐಆರ್ ವೇಳೆ ಮತಪಟ್ಟಿಯಲ್ಲಿ ಇವರ ಹೆಸರು ಸೇರ್ಪಡೆಗೆ ಸ್ಥಳೀಯ ಬಿಜೆಪಿ ಕಾರ್ಪೊರೇಟರ್ ಆಕ್ಷೇಪಣಾ ಅರ್ಜಿಯನ್ನು ಸಲ್ಲಿಸಿದ್ದರು. ಆದರೆ ಜನವರಿ 26ಕ್ಕೆ ಕೇಂದ್ರ ಸರಕಾರವು ಇವರ ಸಾಧನೆಯನ್ನು ಗುರುತಿಸಿ ಪದ್ಮಶ್ರೀ ಪ್ರಶಸ್ತಿಯನ್ನು ನೀಡಿದೆ. ಪದ್ಮಶ್ರೀಯಂತಹ ಉನ್ನತ ಗೌರವವನ್ನು ಪಡೆದ ಸಾಧಕರ ವಿರುದ್ಧವೇ ಬಿಜೆಪಿಯು ಇಂತಹ ಹೀನ ಕೆಲಸವನ್ನು ಮಾಡುತ್ತದೆಯಾದರೆ, ಬಿಜೆಪಿ ಆಡಳಿತದ ರಾಜ್ಯಗಳಲ್ಲಿರುವ ಸಾಮಾನ್ಯ ಮುಸ್ಲಿಮರ ಸ್ಥಿತಿಯೇನಾಗಬಹುದು?

ಅಸ್ಸಾಂ ಮುಖ್ಯಮಂತ್ರಿಯ ಮಾತನ್ನು ಮುಂದಿಟ್ಟುಕೊಂಡು ಸುಪ್ರೀಂಕೋರ್ಟ್ ಸ್ವಯಂಪ್ರೇರಿತವಾಗಿ ಚುನಾವಣಾ ಆಯೋಗವನ್ನು ಪ್ರಶ್ನಿಸಲು ಮುಂದಾಗಬೇಕಾಗಿದೆ ಅಥವಾ ಹೇಳಿಕೆಯನ್ನು ನೀಡಿರುವ ಮುಖ್ಯಮಂತ್ರಿಯ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು. ಎಸ್‌ಐಆರ್ ಯಾವ ಕಾರಣಕ್ಕೂ ಇನ್ನೊಂದು ಎನ್‌ಆರ್‌ಸಿ ಆಗಬಾರದು. ಈ ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸಿದವರು ಬಂಗಾಳಿಗಳು. ಬಂಗಾಳಿ ಭಾಷೆಯಲ್ಲೇ ಈ ದೇಶದ ರಾಷ್ಟ್ರಗೀತೆಯನ್ನು ಬರೆಯಲಾಗಿದೆ. ಈ ದೇಶವನ್ನು ಕಟ್ಟಿ ನಿಲ್ಲಿಸಿದವರು ವಲಸೆ ಕಾರ್ಮಿಕರು. ನಮ್ಮ ರಸ್ತೆಗಳು, ಸೇತುವೆಗಳು, ಬೃಹತ್ ಕಟ್ಟಡಗಳು, ಅಣೆಕಟ್ಟುಗಳು ಇವೆಲ್ಲವುಗಳಲ್ಲಿ ವಲಸೆ ಕಾರ್ಮಿಕರ ಬೆವರುಗಳಿವೆ. ಅವರ ರಕ್ತದಿಂದ ನಮ್ಮ ಅಭಿವೃದ್ಧಿ ನೆಂದಿದೆ. ಬೇಕೆಂದಾಗ ಕರೆಸಿ, ಬೇಡವೆಂದಾಗ ತಿರಸ್ಕರಿಸಲು ವಲಸೆ ಕಾರ್ಮಿಕರು ನಗರ ಹೊರ ಬಿಡುವ ತ್ಯಾಜ್ಯಗಳಲ್ಲ. ಎಸ್‌ಐಆರ್ ಹೆಸರಿನಲ್ಲಿ ಒಬ್ಬನೇ ಒಬ್ಬ ಅರ್ಹ ಮತದಾರ ಮತದಾನದಿಂದ ವಂಚಿತನಾದರೆ ಅದು, ಈ ದೇಶದ ಪ್ರಜಾಸತ್ತೆಗೆ ಮಾಡುವ ವಂಚನೆ ಎನ್ನುವುದನ್ನು ಚುನಾವಣಾ ಆಯೋಗ ನೆನಪಿನಲ್ಲಿಟ್ಟುಕೊಳ್ಳಬೇಕು. ಯಾವ ಕಾರಣಕ್ಕೂ ಚುನಾವಣಾ ಆಯೋಗವೇ ಚುನಾವಣಾ ವ್ಯವಸ್ಥೆಯನ್ನು ಗಲ್ಲಿಗೇರಿಸುವ ಕಟುಕನ ಪಾತ್ರವನ್ನು ನಿರ್ವಹಿಸಬಾರದು.

Tags

SIR
share
ವಾರ್ತಾಭಾರತಿ
ವಾರ್ತಾಭಾರತಿ
Next Story
X