Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಸಂಪಾದಕೀಯ
  4. ಆರೆಸ್ಸೆಸ್‌ನ್ನು ಬೆಳೆಸಿದವರಾರು?

ಆರೆಸ್ಸೆಸ್‌ನ್ನು ಬೆಳೆಸಿದವರಾರು?

ವಾರ್ತಾಭಾರತಿವಾರ್ತಾಭಾರತಿ15 Oct 2025 6:53 AM IST
share
ಆರೆಸ್ಸೆಸ್‌ನ್ನು ಬೆಳೆಸಿದವರಾರು?

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

ಬೆಂಗಳೂರಿನಲ್ಲಿ ಧರಣಿ ಸತ್ಯಾಗ್ರಹ, ಪ್ರತಿಭಟನೆ, ರ‍್ಯಾಲಿಗಳನ್ನು ಫ್ರೀಡಂ ಪಾರ್ಕ್ ನಲ್ಲಿ ಮಾತ್ರ ನಡೆಸಬೇಕು ಎಂದು ಪೊಲೀಸ್ ಇಲಾಖೆ ಕಟ್ಟು ನಿಟ್ಟಿನ ಕ್ರಮ ತೆಗೆದುಕೊಳ್ಳುತ್ತಿರುವ ಹೊತ್ತಿನಲ್ಲೇ ಅದೇ ಪೊಲೀಸ್ ಇಲಾಖೆಯ ಮೂಗಿನ ಅಡಿಯಲ್ಲೇ ಆರೆಸ್ಸೆಸ್ ಸಂಘಟನೆಯು ನಗರದ ಬೀದಿಗಳಲ್ಲಿ ಲಾಠಿಯ ಜೊತೆಗೆ ನಡೆಸಿದ ಪಥಸಂಚಲನ ತೀವ್ರ ವಿವಾದಕ್ಕೆ ಕಾರಣವಾಗಿದೆ. ಈ ನಾಡಿನ ರೈತ, ಕಾರ್ಮಿಕ ಸಂಘಟನೆಗಳಿಗಿಲ್ಲದ ಅವಕಾಶ ಆರೆಸ್ಸೆಸ್ ಎನ್ನುವ ರಾಜಕೀಯ ಸಂಸ್ಥೆಗೆ ಯಾಕೆ ಸಿಕ್ಕಿದೆ ಎನ್ನುವ ಪ್ರಶ್ನೆಯನ್ನು ನಾಡಿನ ಜನತೆ ಕೇಳುತ್ತಿದ್ದಾರೆ. ಜನಸಾಮಾನ್ಯರು ತಮ್ಮ ಮೂಲಭೂತ ಸಮಸ್ಯೆಗಳನ್ನು, ಬೇಡಿಕೆಗಳನ್ನು ಮುಂದಿಟ್ಟು ನಡೆಸುವ ನಿರಶನಗಳಿಗೆ, ರ್ಯಾಲಿಗಳಿಗೆ ನಗರಗಳ ಬೀದಿಗಳಲ್ಲಿ ನಿಷೇಧ ಹೇರಲಾಗುತ್ತಿರುವಾಗ, ಆರೆಸ್ಸೆಸ್‌ಗೆ ಮಾತ್ರ ಸರಕಾರ ಯಾವ ಘನ ಉದ್ದೇಶಕ್ಕಾಗಿ ಅವಕಾಶ ಮಾಡಿಕೊಟ್ಟಿತು? ಇಷ್ಟಕ್ಕೂ ಆರೆಸ್ಸೆಸ್ ಎನ್ನುವ ಸಂಘಟನೆಯ ಕಾರ್ಯಚಟುವಟಿಕೆಗಳ ಉದ್ದೇಶದ ಬಗ್ಗೆಯೇ ಸಾಕಷ್ಟು ಅನುಮಾನಗಳಿವೆ. ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸದ, ಬ್ರಿಟಿಷರೊಂದಿಗೆ ಕೈಜೋಡಿಸಿದ ಹಿನ್ನೆಲೆಯಿರುವ, ಗಾಂಧೀಜಿಯನ್ನು ಒಪ್ಪದ, ಅಂಬೇಡ್ಕರ್ ಬಗ್ಗೆ ಅಸಮಾಧಾನವಿರುವ, ಸಂವಿಧಾನದ ಜೊತೆಗೆ ಭಿನ್ನಾಭಿಪ್ರಾಯವಿರುವ, ಹಲವು ಗಲಭೆಗಳಲ್ಲಿ ಶಾಮೀಲಾಗಿರುವ ಆರೋಪವನ್ನು ಹೊಂದಿರುವ ರಾಜಕೀಯ ಸಂಘಟನೆಯೊಂದು ಹಾಡಹಗಲೇ ದೊಣ್ಣೆ ಹಿಡಿದು ಪಥಸಂಚಲನ ಮಾಡುವ ಮೂಲಕ ಕಾನೂನು ವ್ಯವಸ್ಥೆಗೆ ಸವಾಲು ಹಾಕುತ್ತಿರುವಾಗ ಸರಕಾರ ಯಾಕೆ ಅದನ್ನು ಮೌನವಾಗಿ ಸಮ್ಮತಿಸಿತು ಎಂದು ಸಾರ್ವಜನಿಕರು ಕೇಳುತ್ತಿದ್ದಾರೆ.

ಇದರ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗುತ್ತಿರುವ ಹೊತ್ತಿಗೇ ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಅವರು, ಆರೆಸ್ಸೆಸ್ ಸರಕಾರಿ ಸ್ಥಳಗಳಲ್ಲಿ, ಶಾಲೆಗಳ ಆವರಣಗಳಲ್ಲಿ ಚಟುವಟಿಕೆಗಳನ್ನು ನಡೆಸುತ್ತಿರುವುದರ ವಿರುದ್ಧ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರವನ್ನು ಬರೆದಿದ್ದಾರೆ. ಪತ್ರಕ್ಕೆ ಸ್ಪಂದಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಈ ಬಗ್ಗೆ ಪರಿಶೀಲಿಸಿ ಕ್ರಮ ತೆಗೆದುಕೊಳ್ಳುತ್ತೇನೆ ಎಂದಿದ್ದಾರೆ. ಆರೆಸ್ಸೆಸ್ ಎರಡೆರಡು ಬಾರಿ ನಿಷೇಧಕ್ಕೊಳಗಾಗಿರುವ ರಾಜಕೀಯ ಸಂಘಟನೆ. ಜಾತಿ ವ್ಯವಸ್ಥೆ, ಬ್ರಾಹ್ಮಣ್ಯ ಸಿದ್ಧಾಂತಗಳನ್ನು ದೇಶದಲ್ಲಿ ಮರು ಜಾರಿಗೊಳಿಸುವ ಉದ್ದೇಶವನ್ನು ಹೊಂದಿರುವ ಈ ಸಂಸ್ಥೆ ಸರಕಾರಿ ಸ್ಥಳಗಳಲ್ಲಿ ಯಾವುದೇ ಕಾರ್ಯಕ್ರಮಗಳನ್ನು ಹಮ್ಮಿಕೊಂಡರೆ ಅದಕ್ಕಾಗಿ ಸಂಘಟಕರ ವಿರುದ್ಧ ಕ್ರಮ ತೆಗೆದುಕೊಳ್ಳುವ ಅಧಿಕಾರ ಈಗಲೂ ಇದೆ. ಆದರೆ ಅದು ಪಾಲನೆಯಾಗುತ್ತಿಲ್ಲ. ಭಾರತದಲ್ಲಿ ಆರೆಸ್ಸೆಸ್ ತನ್ನ ಸಾಮ್ರಾಜ್ಯವನ್ನು ವಿಸ್ತರಿಸಿದ್ದೇ ಕೇಂದ್ರದಲ್ಲಿ ಸುಮಾರು 70 ವರ್ಷ ಕಾಂಗ್ರೆಸ್ ಸರಕಾರ ಅಸ್ತಿತ್ವದಲ್ಲಿದ್ದಾಗ ಎನ್ನುವುದು ಇನ್ನೊಂದು ಕಹಿ ಸತ್ಯವಾಗಿದೆ. ಆರೆಸ್ಸೆಸ್‌ನ ಮೇಲೆ ಕ್ರಮ ತೆಗೆದುಕೊಳ್ಳಲು ಸಾಕಷ್ಟು ಅವಕಾಶಗಳಿದ್ದಾಗಲೂ ಕಾಂಗ್ರೆಸ್ ಅದನ್ನು ಕೈ ಚೆಲ್ಲಿತ್ತು. ಆರೆಸ್ಸೆಸ್ ಸಂಘಟನೆಯು ಕಾಂಗ್ರೆಸ್ ಸರಕಾರವನ್ನು, ಅದರೊಳಗಿರುವ ಗಣ್ಯರನ್ನು ಬಳಸಿಕೊಂಡೇ ತನ್ನ ಸಂಸ್ಥೆಯ ಬೇರನ್ನು ದೇಶದ ಉದ್ದಗಲಕ್ಕೆ ವಿಸ್ತರಿಸುತ್ತಾ ಬಂತು. ಕಾಂಗ್ರೆಸ್‌ನ ನೆರಳಲ್ಲೇ ಬೆಳೆದು ಕಾಂಗ್ರೆಸ್‌ನ ಜಾತ್ಯತೀತ ಸಿದ್ಧಾಂತಗಳ ವಿರುದ್ಧ ಕಾರ್ಯಾಚರಣೆ ನಡೆಸುತ್ತಾ ಬಂತು. ಇಂದು ಆರೆಸ್ಸೆಸ್‌ನ ವಿರುದ್ಧ ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಹೊರತು ಪಡಿಸಿದಂತೆ, ದೊಡ್ಡ ಧ್ವನಿಯಲ್ಲಿ ಮಾತನಾಡುವ ಶಕ್ತಿ ಕಾಂಗ್ರೆಸ್‌ನ ಇತರ ನಾಯಕರಿಗಿಲ್ಲ. ಕಾಂಗ್ರೆಸ್‌ನೊಳಗಿರುವ ಹಲವು ನಾಯಕರೇ ಆರೆಸ್ಸೆಸ್ ಕುರಿತಂತೆ ಮೃದು ನಿಲುವನ್ನು ತಳೆದಿರುವ ಕಾರಣದಿಂದ ಆರೆಸ್ಸೆಸ್ ಎನ್ನುವ ಸಂವಿಧಾನ ವಿರೋಧಿ ಸಿದ್ಧಾಂತ ಸರಕಾರಕ್ಕೆ ಸವಾಲಾಗಿ ನಿಂತಿದೆ.

ಕಳೆದ ಹತ್ತು ವರ್ಷಗಳಲ್ಲಿ ವಿದೇಶಿ ಕೊಡುಗೆ ನಿಯಂತ್ರಣ ಕಾಯ್ದೆಗಳನ್ನು ಬಳಸಿಕೊಂಡು 20,000ಕ್ಕೂ ಅಧಿಕ ಸರಕಾರೇತರ ಸಂಸ್ಥೆಗಳ ಪರವಾನಿಗೆಗಳನ್ನು ಮೋದಿ ನೇತೃತ್ವದ ಸರಕಾರ ರದ್ದುಗೊಳಿಸಿದೆ. ಈ ದೇಶದ ಪರಿಸರ, ಮಾನವ ಹಕ್ಕುಗಳು, ಸಾಮಾಜಿಕ ಸೇವೆ, ಪ್ರಜಾಸತ್ತೆ ರಕ್ಷಣೆ ಮೊದಲಾದ ಉದ್ದೇಶಗಳನ್ನು ಇಟ್ಟುಕೊಂಡು ದುಡಿಯುತ್ತಿದ್ದ ಸಂಸ್ಥೆಗಳಿವು. ಹಲವು ಜನಪರ ಸಂಘಟನೆಗಳ ವಿರುದ್ದ ಸರಕಾರ ಈ.ಡಿ. ದಾಳಿಗಳನ್ನು ನಡೆಸಿ, ಅವುಗಳ ಕೈ ಕಾಲುಗಳನ್ನು ಕಟ್ಟಿ ಹಾಕಿದೆ. ಬರೇ ಹತ್ತು ವರ್ಷಗಳಲ್ಲಿ ಮೋದಿ ನೇತೃತ್ವದ ಸರಕಾರ ತನ್ನ ಆರ್ಥಿಕ, ರಾಜಕೀಯ ಹಿತಾಸಕ್ತಿಗಳಿಗೆ ಮಾರಕ ಎಂದು ಕಂಡು ಬಂದ ಎಲ್ಲ ಸರಕಾರೇತರ ಸಂಘಟನೆಗಳನ್ನು ಬಾಯಿ ಮುಚ್ಚಿಸಿತು. ಆರೆಸ್ಸೆಸ್ ಮೇಲಿರುವ ಅತಿ ದೊಡ್ಡ ಆರೋಪವೆಂದರೆ, ಅದೊಂದು ನೋಂದಣಿಯಾಗದ ಸಂಘಟನೆ. ಇದೇ ಸಂದರ್ಭದಲ್ಲಿ ಜಗತ್ತಿನಿಂದ ಬೇರೆ ಬೇರೆ ರೂಪಗಳಲ್ಲಿ ಅತಿ ಹೆಚ್ಚು ವಿದೇಶಿ ಕೊಡುಗೆಗಳನ್ನು ಪಡೆಯುತ್ತಾ ಬರುತ್ತಿರುವ ಶ್ರೀಮಂತ ಎನ್‌ಜಿಓ ಎಂದೂ ಆರೆಸ್ಸೆಸ್ ಗುರುತಿಸಲ್ಪಟ್ಟಿದೆ. ಆರೆಸ್ಸೆಸ್ ಬೆಂಬಲಿತ ಸಂಸ್ಥೆಗಳು ಉಗ್ರವಾದಿ ಚಟುವಟಿಕೆಗಳಿಗೆ ನೆರವಾಗುತ್ತಿರುವುದನ್ನು ಅಮೆರಿಕವೂ ಸೇರಿದಂತೆ ಹಲವು ದೇಶಗಳು ತಮ್ಮ ವರದಿಗಳಲ್ಲಿ ಉಲ್ಲೇಖಿಸಿವೆ. ಕಾಂಗ್ರೆಸ್ ಸರಕಾರ ತನ್ನ 70 ವರ್ಷಗಳ ಆಡಳಿತದಲ್ಲಿ ಆರೆಸ್ಸೆಸ್‌ನ ಹಣಕಾಸು ವ್ಯವಹಾರಗಳನ್ನು ತನಿಖೆಗೊಳಪಡಿಸಿದ್ದರೂ, ಅದರ ಬಣ್ಣ ಬಯಲಾಗುತ್ತಿತ್ತು. ಇಂದು ಆರೆಸ್ಸೆಸ್ ಈ ದೇಶಕ್ಕೆ ಇಷ್ಟೊಂದು ದೊಡ್ಡ ಸಮಸ್ಯೆಯಾಗಿ ಬೆಳೆಯುತ್ತಿರಲಿಲ್ಲ. ಆರೆಸ್ಸೆಸ್ ತನ್ನ ತತ್ವ ಸಿದ್ಧಾಂತಗಳ ವಿರುದ್ಧ ಸಂಘಟಿತವಾಗಿರುವ ರಾಜಕೀಯ ಸಂಸ್ಥೆ ಎನ್ನುವುದು ಸ್ಪಷ್ಟವಿದ್ದರೂ, ಅದರ ಕುರಿತಂತೆ ತಳೆದುಕೊಂಡು ಬಂದ ಮೃದು ನಿಲುವೇ ಇಂದು ಕಾಂಗ್ರೆಸ್‌ಗೆ ಮುಳುವಾಗಿದೆ. ಇದರ ವಿಷದ ಫಲವನ್ನು ಈ ದೇಶದ ಜನತೆಯೂ ಉಣ್ಣುವಂತಾಗಿದೆ.

ಆರೆಸ್ಸೆಸ್‌ನ ಮುಖಂಡರ ಹೆಸರುಗಳು ಹಲವು ಕೋಮುಗಲಭೆಗಳಲ್ಲಿ ಕೇಳಿ ಬಂದಿವೆ. ಅಷ್ಟೇ ಅಲ್ಲ, ದೇಶದಲ್ಲಿ ಸಂಭವಿಸಿದ ಸ್ಫೋಟ ಪ್ರಕರಣಗಳಿಗೆ ಸಂಬಂಧಿಸಿಯೂ ಆರೆಸ್ಸೆಸ್ ನಾಯಕರೊಬ್ಬರ ಹೆಸರು ಪ್ರಸ್ತಾಪವಾಗಿತ್ತು. ಸ್ವಾತಂತ್ರ್ಯ ಹೋರಾಟಗಳಲ್ಲಿ ಭಾಗವಹಿಸಿದ ಇತಿಹಾಸ ಆರೆಸ್ಸೆಸ್‌ಗೆ ಇರಲಿಲ್ಲ ಮಾತ್ರವಲ್ಲ, ಬ್ರಿಟಿಷರೊಂದಿಗೆ ಪರೋಕ್ಷವಾಗಿ ಕೈಜೋಡಿಸಿದ ಹೆಗ್ಗಳಿಕೆಯೂ ಆ ಸಂಘಟನೆಗಿದೆ. ಆರೆಸ್ಸೆಸ್ ಗೌರವಿಸುವ ಓರ್ವ ಹಿರಿಯರು ಬ್ರಿಟಿಷರ ಮಾಸಾಶನದೊಂದಿಗೆ ಬದುಕಿದವರು. ಗೋಳ್ವಾಲ್ಕರ್ ಅವರು ಜಾತಿ ವ್ಯವಸ್ಥೆಯ ಬಗ್ಗೆ ಹೊಂದಿರುವ ನಂಬಿಕೆ, ಸಂವಿಧಾನದ ಬಗ್ಗೆ ಅವರು ನೀಡಿರುವ ಹೇಳಿಕೆಗಳೇ ಸಾಕು, ಆರೆಸ್ಸೆಸ್ ಯಾಕೆ ಅಸ್ತಿತ್ವದಲ್ಲಿ ಇರಬಾರದು ಎನ್ನುವುದಕ್ಕೆ. ಆರೆಸ್ಸೆಸ್ ಹಿಂದೂಧರ್ಮ, ಸಂಸ್ಕೃತಿ, ಸ್ವದೇಶ ಎಂಬಿತ್ಯಾದಿ ಮುಖವಾಡದಲ್ಲಿ ಬದುಕುತ್ತಾ ಬಂದಿರುವ ಪರೋಪ ಜೀವಿ. ಆದರೆ ಹಿಂದೂಧರ್ಮ ಪ್ರತಿಪಾದಿಸುವ ಬಹುಸಂಸ್ಕೃತಿಗೆ ಅದು ಒಳಗಿಂದೊಳಗೆ ದ್ರೋಹ ಬಗೆಯುತ್ತಲೇ ಬಂದಿದೆ.

ಆರೆಸ್ಸೆಸ್ ಬೇರೆ ಬೇರೆ ಹೆಸರಿನಲ್ಲಿ ಇಂದು ಸರಕಾರಿ ಶಾಲೆ, ಕಾಲೇಜುಗಳನ್ನು ಆಕ್ರಮಿಸಿದೆ. ಬೇರೆ ಬೇರೆ ಸರಕಾರೇತರ ಸಂಸ್ಥೆಗಳ ಹೆಸರುಗಳಲ್ಲಿ ಸರಕಾರದಿಂದ ಜಮೀನು ಸೇರಿದಂತೆ ಹಲವು ಕೊಡುಗೆಗಳನ್ನು ಪಡೆದುಕೊಳ್ಳುತ್ತಿದೆ. ವಿದ್ಯಾರ್ಥಿಗಳ ನಡುವೆ ದ್ವೇಷವನ್ನು, ಜಾತೀಯತೆಯನ್ನು ಬಿತ್ತುವಲ್ಲಿ ಭಾಗಶಃ ಯಶಸ್ವಿಯಾಗಿದೆ.ಇಂದು ರಾಜ್ಯ ಸರಕಾರ ಕನಿಷ್ಠ ಸರಕಾರಿ ಸ್ಥಳಗಳಲ್ಲಿ, ಶಾಲೆಗಳಲ್ಲಿ ಹರಡಿರುವ ಆರೆಸ್ಸೆಸ್‌ನ ವಿಷದ ಬಳ್ಳಿಗಳನ್ನು ಬೇರು ಸಮೇತ ಕಿತ್ತು ಹಾಕಲು ಮುಂದಾಗಬೇಕಾಗಿದೆ. ಅದಕ್ಕೂ ಮೊದಲು ಕಾಂಗ್ರೆಸ್ ಪಕ್ಷವು ಆರೆಸ್ಸೆಸ್‌ಯಾಕೆ ಅಪಾಯಕಾರಿ ಎನ್ನುವುದನ್ನು ತನ್ನದೇ ನಾಯಕರಿಗೆ, ಕಾರ್ಯಕರ್ತರಿಗೆ ಮನವರಿಕೆ ಮಾಡಿಸಬೇಕು. ಯಾಕೆಂದರೆ ಆರೆಸ್ಸೆಸ್ ಹರಡಿದ ಸುಳ್ಳುಗಳಿಗೆ ಬಲಿಯಾಗಿ ‘ಅದೊಂದು ದೇಶ ಭಕ್ತ ಸಂಘಟನೆ’ ಎಂದು ಮುಗ್ಧವಾಗಿ ನಂಬಿದ ಅಪ್ಪಟ ಕಾಂಗ್ರೆಸಿಗರೇ ದೊಡ್ಡ ಸಂಖ್ಯೆಯಲ್ಲಿದ್ದಾರೆ. ಇದರ ಜೊತೆ ಜೊತೆಗೇ ಸರಕಾರಿ ಕಚೇರಿಗಳಲ್ಲಿ, ಸ್ಥಳಗಳಲ್ಲಿ ಆರೆಸ್ಸೆಸ್ ಸೇರಿದಂತೆ ಯಾವುದೇ ರಾಜಕೀಯ, ಧಾರ್ಮಿಕ ಸಂಘಟನೆಗಳ ಚಟುವಟಿಕೆಗಳಿಗೆ ನಿಷೇಧ ಹೇರಬೇಕು. ಹಾಗೆಯೇ ಸರಕಾರಿ ಸಿಬ್ಬಂದಿ ಆರೆಸ್ಸೆಸ್‌ನಂತಹ ರಾಜಕೀಯ ಸಂಘಟನೆಗಳಲ್ಲಿ ಗುರುತಿಸಿಕೊಂಡರೆ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಆದೇಶವನ್ನು ನೀಡಬೇಕು. ಇದಕ್ಕಾಗಿ ಬಿಜೆಪಿ ನಾಯಕರ ಅಪ್ಪಣೆಯನ್ನು ರಾಜ್ಯ ಸರಕಾರ ಕಾಯಬೇಕಾಗಿಲ್ಲ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X