Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಸಂಪಾದಕೀಯ
  4. ಬೀದಿನಾಯಿಗಳ ಮೇಲಿರುವ ದಯೆ, ಮನುಷ್ಯರ...

ಬೀದಿನಾಯಿಗಳ ಮೇಲಿರುವ ದಯೆ, ಮನುಷ್ಯರ ಮೇಲೆ ಯಾಕಿಲ್ಲ?

ವಾರ್ತಾಭಾರತಿವಾರ್ತಾಭಾರತಿ15 Aug 2025 7:29 AM IST
share
ಬೀದಿನಾಯಿಗಳ ಮೇಲಿರುವ ದಯೆ, ಮನುಷ್ಯರ ಮೇಲೆ ಯಾಕಿಲ್ಲ?

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

ರಾಷ್ಟ್ರ ರಾಜಧಾನಿಯಲ್ಲಿ ನಾಯಿ ಕಡಿತ ಮತ್ತು ರೇಬಿಸ್ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ವಸತಿ ಪ್ರದೇಶಗಳಲ್ಲಿರುವ ಎಲ್ಲಾ ಬೀದಿ ನಾಯಿಗಳನ್ನು ಆಶ್ರಯ ತಾಣಗಳಿಗೆ ಸ್ಥಳಾಂತರಿಸುವಂತೆ ಸುಪ್ರೀಂಕೋರ್ಟ್ ಸೋಮವಾರ ಆದೇಶ ನೀಡಿದ್ದು ತೀವ್ರ ಪರ ವಿರೋಧ ಚರ್ಚೆಗಳಿಗೆ ಕಾರಣವಾಗಿದೆ. ಬೀದಿ ನಾಯಿಯಿಂದ ಸಂತ್ರಸ್ತರಾಗಿರುವ ಕುಟುಂಬಗಳು ಇದನ್ನು ಮುಕ್ತ ಮನಸ್ಸಿನಿಂದ ಸ್ವಾಗತಿಸಿದರೆ, ಪ್ರಾಣಿ ಪ್ರಿಯ ಸಂಘಟನೆಗಳು ಇದೊಂದು ದೂರದೃಷ್ಟಿಯಿಲ್ಲದ, ಅಪ್ರಾಯೋಗಿಕ ಕ್ರಮ ಎಂದು

ಟೀಕಿಸಿವೆ. ಬೀದಿನಾಯಿಗಳ ಬದುಕುವ ಹಕ್ಕಿನ ಪರವಾಗಿ ರಾಹುಲ್ ಗಾಂಧಿಯವರೂ ಧ್ವನಿಯೆತ್ತಿದ್ದಾರೆ. ಮೂಕ ಪ್ರಾಣಿಗಳಿಗೂ ನಮ್ಮ ನಡುವೆ ಬದುಕುವ ಹಕ್ಕುಗಳಿವೆ ಎನ್ನುವ ವಾದವನ್ನು ಹಲವರು ಮಂಡಿಸಿದ್ದಾರೆ. ಆದರೆ ಹೆಚ್ಚುತ್ತಿರುವ ರೇಬಿಸ್ ಸಾವುಗಳು ಮತ್ತು ಬೀದಿ ನಾಯಿಗಳಿಂದ ಮಕ್ಕಳ ಮೇಲೆ ನಡೆಯುತ್ತಿರುವ ದಾಳಿಗಳನ್ನು ಗಮನಿಸಿದಾಗ, ಸುಪ್ರೀಂಕೋರ್ಟ್‌ನತೀರ್ಪನ್ನು ಸಾರಾ ಸಗಟಾಗಿ ತಿರಸ್ಕರಿಸಲಾಗುವುದಿಲ್ಲ. ಈ ಪರಿಸರದ ಸಮತೋಲನದಲ್ಲಿ ಬೀದಿ ನಾಯಿಗಳೂ ತನ್ನ ಪಾತ್ರವನ್ನು ತಲೆತಲಾಂತರಗಳಿಂದ ನಿರ್ವಹಿಸುತ್ತಾ ಬಂದಿವೆ. ಇಷ್ಟಾದರೂ, ಬೀದಿ ನಾಯಿಗಳ ಮೇಲೆ ತೋರಿಸುವ ಅನುಕಂಪ ಮನುಷ್ಯ ಘನತೆಗೆ ಪೂರಕವಾಗಿರಬೇಕು. ಅದು ನಾಗರಿಕ ಸಮಾಜದ ಆಷಾಢಭೂತಿತನದ ಭಾಗವಾಗಿರಬಾರದು.

ದಿಲ್ಲಿಯು ಪ್ರತಿ ವರ್ಷ 30,000 ನಾಯಿ ಕಡಿತ ಪ್ರಕರಣಗಳನ್ನು ದಾಖಲಿಸುತ್ತಿದೆ. ರೇಬಿಸ್ ಪ್ರಕರಣಗಳು ಭಾರತದಲ್ಲಿ ಎಷ್ಟು ಗಂಭೀರವಾಗಿದೆ ಎಂದರೆ, ಪ್ರತಿ ವರ್ಷ 18,000- 20,000ದವರೆಗೆ ರೇಬಿಸ್‌ನಿಂದ ಭಾರತದಲ್ಲಿ ಸಾವುಗಳು ಸಂಭವಿಸುತ್ತವೆ ಎಂದು ವಿಶ್ವಸಂಸ್ಥೆ ವರದಿ ತಿಳಿಸುತ್ತದೆ. ಜಗತ್ತಿನಲ್ಲಿ ರೇಬಿಸ್‌ನಿಂದ ಸಂಭವಿಸುವ ಸಾವುನೋವುಗಳಲ್ಲಿ ಶೇ. 35ರಷ್ಟು ಭಾರತದಲ್ಲೇ ಸಂಭವಿಸುತ್ತವೆ ಎನ್ನುವುದನ್ನು ಅಂಕಿಅಂಶಗಳು ಹೇಳುತ್ತವೆ. ಈ ರೇಬಿಸ್‌ಗಳಿಗೆ ಬಲಿಯಾಗುವ ಮಕ್ಕಳಲ್ಲಿ 15 ವರ್ಷಗಳ ಒಳಗಿನ ಮಕ್ಕಳೇ ಅಧಿಕ ಎನ್ನುವುದು ಕೂಡ ಆತಂಕದ ವಿಷಯವಾಗಿದೆ. ಭಾರತದಲ್ಲಿ ಪ್ರತಿ ದಿನ 10,000ಕ್ಕೂ ಅಧಿಕ ನಾಯಿಕಡಿತ ಪ್ರಕರಣಗಳು ಸಂಭವಿಸುತ್ತವೆ. ಉತ್ತರ ಪ್ರದೇಶವು ಭಾರತದಲ್ಲಿ ಅತಿ ಹೆಚ್ಚು ಬೀದಿ ನಾಯಿಗಳನ್ನು ಹೊಂದಿರುವ ರಾಜ್ಯವಾದರೆ, ಒಡಿಶಾ ಎರಡನೇ ಸ್ಥಾನವನ್ನು ಪಡೆದಿದೆ. ಉತ್ತರ ಪ್ರದೇಶದಲ್ಲಿ 20.6 ಲಕ್ಷ ಬೀದಿನಾಯಿಗಳಿವೆ ಎಂದು ಅಂದಾಜು ಮಾಡಲಾಗಿದೆ. ಒಡಿಶಾದಲ್ಲಿ 17.3 ಲಕ್ಷ ಬೀದಿನಾಯಿಗಳಿವೆ ಎಂದು ಗುರುತಿಸಲಾಗಿದೆ. ದಿಲ್ಲಿ, ಬೆಂಗಳೂರಿನಂತಹ ನಗರ ಪ್ರದೇಶಗಳಲ್ಲಿ ಬೀದಿ ನಾಯಿಗಳ ದಾಳಿ ಬೇಗ ಸುದ್ದಿಯಾಗುತ್ತವೆ. ಅದು ಚರ್ಚೆಯ ವಿಷಯವೂ ಆಗುತ್ತದೆ. ಕೆಲವು ದಿನಗಳ ಹಿಂದೆ ಈ ಬೀದಿ ನಾಯಿಗಳ ಸಮಸ್ಯೆಯು ನಮ್ಮದೇ ವಿಧಾನ ಪರಿಷತ್‌ನಲ್ಲಿ ಗಂಭೀರ ಚರ್ಚೆಗೆ ಒಳಗಾಯಿತು. ನಗರಗಳಲ್ಲಿರುವ ಹೋಟೆಲುಗಳು, ರಸ್ತೆ ಬದಿಯ ತಳ್ಳು ಗಾಡಿಗಳು ಚೆಲ್ಲಿದ ಆಹಾರಗಳನ್ನು ತಿನ್ನುತ್ತಾ ನಗರ ಪ್ರದೇಶದ ಬೀದಿ ನಾಯಿಗಳು ದಷ್ಟ ಪುಷ್ಟವಾಗಿ ಬೆಳೆದಿರುತ್ತವೆ. ಮಕ್ಕಳು ಮಾತ್ರವಲ್ಲ, ಕೆಲವೊಮ್ಮೆ ಒಂಟಿಯಾಗಿ ಯುವಕರು ಸಿಕ್ಕಿದರೂ ಅವರ ಮೇಲೆ ಈ ನಾಯಿಗಳು ಹುಲಿಯಂತೆ ಎರಗುತ್ತವೆ. ಬೆಂಗಳೂರು, ದಿಲ್ಲಿಯಂತಹ ನಗರಗಳಲ್ಲಿ ರಾತ್ರಿ 9 ಗಂಟೆಯ ಆನಂತರ ಕ್ರಿಮಿನಲ್‌ಗಳ ಕಾಟ ಎಷ್ಟಿದೆಯೋ, ಅದಕ್ಕಿಂತಲೂ ಭೀಕರವಾಗಿವೆ ಬೀದಿ ನಾಯಿಗಳ ಆಕ್ರಮಣ. ಬೀದಿ ನಾಯಿಗಳು ರಾತ್ರಿ ಒಂಟಿಯಾಗಿ ನಗರದ ಬೀದಿಯಲ್ಲಿ ಸಂಚರಿಸುವುದನ್ನು ಅಪಾಯಕಾರಿಯಾಗಿಸಿದೆ.

ಭಾರತದಲ್ಲಿ ಅತಿ ಹೆಚ್ಚು ರೇಬಿಸ್ ಕಾಯಿಲೆಗಳು ಹರಡುವುದಕ್ಕೆ ಮುಖ್ಯ ಕಾರಣ, ಇಲ್ಲಿ ರೇಬಿಸ್‌ಗೆ ಸಂಬಂಧಿಸಿದ ಔಷಧಿಗಳ ಭಾರೀ ಕೊರತೆ. ತಕ್ಷಣಕ್ಕೆ ಔಷಧಿಗಳು ಸಿಗುವುದು ಕಷ್ಟ ಎನ್ನುವಂತಹ ಸ್ಥಿತಿಯಲ್ಲಿ ಗಾಯಗಳನ್ನು ನಿರ್ಲಕ್ಷಿಸುವವರೇ ಹೆಚ್ಚು. ಅನೇಕ ಸಂದರ್ಭಗಳಲ್ಲಿ ಸಣ್ಣ ಪುಟ್ಟ ಉಗುರು ಗಾಯಗಳನ್ನು ಗಂಭೀರವಾಗಿ ತೆಗೆದುಕೊಳ್ಳದೇ ಇರುವುದು ಅನಾಹುತಕ್ಕೆ ಕಾರಣವಾಗಿ ಬಿಡುತ್ತದೆ. ಕಳೆದ ಜುಲೈನಲ್ಲಿ ಅಂತರ್‌ರಾಜ್ಯ ಕಬಡ್ಡಿ ಕ್ರೀಡಾ ಪಟುವೊಬ್ಬರು ರೇಬಿಸ್‌ಗೆ ಬಲಿಯಾದರು. ಉತ್ತರ ಪ್ರದೇಶದ ಬುಲಂದ್ ಶಹರ್‌ಗೆ ಸೇರಿದ ಬ್ರಿಜೇಶ್ ಸೋಲಂಕಿ ಎಂಬವರು ಚರಂಡಿಯಲ್ಲಿ ಬಿದ್ದಿದ್ದ ನಾಯಿ ಮರಿಯೊಂದನ್ನು ರಕ್ಷಿಸುವ ಸಂದರ್ಭದಲ್ಲಿ ಅದು ಅವರನ್ನು ಸಣ್ಣದಾಗಿ ಕಚ್ಚಿತ್ತು. ಆದರೆ ಕ್ರೀಡಾ ಪಟು ಮುಂಜಾಗ್ರತೆಯಾಗಿ ರೇಬಿಸ್ ಔಷಧಿ ಪಡೆಯದೇ ಅದನ್ನು ನಿರ್ಲಕ್ಷಿಸಿದ್ದರು. ನಾಯಿ ಕಚ್ಚಿದ್ದು ಮಾರ್ಚ್ ತಿಂಗಳಲ್ಲಾದರೆ ಜೂನ್ ತಿಂಗಳಲ್ಲಿ ಸಣ್ಣದಾಗಿ ರೋಗ ಲಕ್ಷಣಗಳು ಕಾಣ ತೊಡಗಿದವು. ಜೂನ್ 27ಕ್ಕೆ ರೋಗ ಉಲ್ಬಣಿಸಿ ಅವರು ಮೃತಪಟ್ಟರು. ಕಳೆದ ಜುಲೈ 23ರಲ್ಲಿ ಒಡಿಶಾದಲ್ಲಿ ಪ್ಯಾರಾ ಒಲಿಂಪಿಕ್ ಕ್ರೀಡಾ ಪಟುವೊಬ್ಬರು ನಾಯಿ ಕಡಿತಕ್ಕೆ ಬಲಿಯಾದರು. 33 ವರ್ಷದ ಪ್ಯಾರಾ ಅತ್ಲೀಟ್ ಜೋಗೇಂದ್ರ ಚಾಟ್ರಿಯಾ ಸೇರಿದಂತೆ ಆರು ಜನರಿಗೆ ಬೀದಿ ನಾಯಿ ಕಚ್ಚಿತ್ತು. ಇವರಲ್ಲಿ ಚಾಟ್ರಿಯಾ ಸಹಿತ ಇಬ್ಬರು ಮೃತಪಟ್ಟಿದ್ದಾರೆ. ಗ್ರಾಮೀಣ ಪ್ರದೇಶದಲ್ಲಿ ನಾಯಿ ಕಡಿತವನ್ನು ನಿರ್ಲಕ್ಷಿಸುವವರೇ ಹೆಚ್ಚು. ಇದೇ ಸಂದರ್ಭದಲ್ಲಿ ಗಂಭೀರವಾಗಿ ತೆಗೆದುಕೊಂಡರೂ ಸೂಕ್ತವಾದ ಔಷಧ ವ್ಯವಸ್ಥೆಯಿಲ್ಲದೆ ರೇಬಿಸ್‌ಗೆ ಬಲಿಯಾಗುವವರೂ ಇದ್ದಾರೆ. ಮೇಲಿನೆಲ್ಲದರ ಅರ್ಥ, ನಮ್ಮ ನಡುವೆ ಬೀದಿ ನಾಯಿಗಳು ಇರಲೇ ಬಾರದು ಎಂದಲ್ಲ. ಅದನ್ನು ನಿರ್ವಹಿಸುವುದಕ್ಕೆ ಬೇಕಾದ ಮೂಲಭೂತ ಸೌಲಭ್ಯಗಳ ಕೊರತೆಯಿಂದಾಗಿ ಬೀದಿ ನಾಯಿಗಳನ್ನು ನಾವಾಗಿಯೇ ಒಂದು ಗಂಭೀರ ಸಮಸ್ಯೆಯಾಗಿ ಪರಿವರ್ತಿಸಿದ್ದೇವೆ. ಭಾರತದ ಸಾರ್ವಜನಿಕ ಆರೋಗ್ಯ ವ್ಯವಸ್ಥೆ ಎಷ್ಟು ಕಳಪೆಯಿದೆ ಎನ್ನುವುದರ ಅರಿವಿದ್ದೂ ಭಾರೀ ಸಂಖ್ಯೆ ಬೀದಿ ನಾಯಿಗಳನ್ನು ಸ್ವಚ್ಛಂದವಾಗಿ ಓಡಾಡಲು ಬಿಡುವುದು ಮಾರಣಾಂತಿಕ ರೋಗಗಳನ್ನು ಆಹ್ವಾನಿಸಿಕೊಂಡಂತೆ.

ಬೀದಿ ನಾಯಿಗಳ ಪರವಾಗಿ ಕಣ್ಣೀರು ಸುರಿಸುವ ಜನರು ರಸ್ತೆಗಳಲ್ಲಿ, ರೈಲು ನಿಲ್ದಾಣಗಳಲ್ಲಿ ಬದುಕು ಸವೆಸುವ ಬೀದಿ ಮಕ್ಕಳ ಬಗ್ಗೆ ಮಾತನಾಡುವುದು ಅಪರೂಪ. ನಾಯಿಗಳಲ್ಲಿ ದೇವರನ್ನು ಗುರುತಿಸುವ ನಮ್ಮ ಜನರು, ರಸ್ತೆ ಬದಿಯಲ್ಲಿ ಮಲಗುವ ಮಕ್ಕಳ ಕಣ್ಣಲ್ಲಿ ದೇವರನ್ನು ಗುರುತಿಸಲು ಯಾಕೆ ವಿಫಲರಾಗುತ್ತಾರೆ ಎನ್ನುವುದು ಕೂಡ ಆತ್ಮವಿಮರ್ಶೆಗೆ ಒಳಗಾಗಬೇಕು. ಭಾರತದ ಬೀದಿಗಳಲ್ಲಿ ಒಂದೂವರೆ ಕೋಟಿಗೂ ಅಧಿಕ ಮಕ್ಕಳು ನಿರಾಶ್ರಿತರಾಗಿದ್ದಾರೆ. ಪ್ರತಿ ನಿತ್ಯ ಅವರು ಬೇರೆ ಬೇರೆ ರೀತಿಯ ದೌರ್ಜನ್ಯಗಳನ್ನು ಎದುರಿಸುತ್ತಿದ್ದಾರೆ. ಹಾಗೆಯೇ ದೇಶಾದ್ಯಂತ ಯಾವುದೇ ಬೀದಿ ನಾಯಿಗಳನ್ನು ಕೊಲ್ಲುವುದಕ್ಕಿಂತಲೂ ಭೀಕರವಾಗಿ ದನದ ಹೆಸರಿನಲ್ಲಿ, ಧರ್ಮದ ಹೆಸರಿನಲ್ಲಿ ಅಮಾಯಕರನ್ನು ಗುಂಪುಗಳು ನಡು ಬೀದಿಯಲ್ಲಿ ಥಳಿಸಿ ಕೊಂದು ಹಾಕುತ್ತವೆ. ಎಲ್ಲಿ ಮನುಷ್ಯರ ಬದುಕು ಬೀದಿ ನಾಯಿಗಳಿಗಿಂತಲೂ ನಿಕೃಷ್ಟವಾಗಿದೆಯೋ ಅಲ್ಲಿ, ಬೀದಿ ನಾಯಿಗಳ ಬಗ್ಗೆ ತೋರಿಸುವ ಅನುಕಂಪಕ್ಕೆ ಅರ್ಥವೇನಿದೆ? ಎಲ್ಲಿಯವರೆಗೆ ಬೀದಿ ನಾಯಿಗಳ ದಾಳಿಗಳಿಂದ ಮಕ್ಕಳನ್ನು, ಸಾಮಾನ್ಯ ಜನರನ್ನು ರಕ್ಷಿಸಲು ಸಾಧ್ಯವಿಲ್ಲವೋ, ರೇಬಿಸ್‌ಗಳಿಗೆ ತಕ್ಷಣ ಅತ್ಯಗತ್ಯ ಔಷಧಿಗಳು ಔಷಧಾಲಯಗಳಲ್ಲಿ, ಸರಕಾರಿ ಆಸ್ಪತ್ರೆಗಳಲ್ಲಿ ಸಿಗುವುದಿಲ್ಲವೋ ಅಲ್ಲಿಯವರೆಗೆ ಬೀದಿ ನಾಯಿಗಳನ್ನು ರಸ್ತೆಗಳಲ್ಲಿ ಮುಕ್ತವಾಗಿ ಓಡಾಡಲು ಬಿಡುವುದು ಉಚಿತವಲ್ಲ. ಈ ನಿಟ್ಟಿನಲ್ಲಿ ಸುಪ್ರೀಂಕೋರ್ಟ್ ಆತಂಕ, ಕಳವಳ ಸಮರ್ಥನೀಯವಾಗಿದೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X