Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಸಂಪಾದಕೀಯ
  4. ಚಾಮುಂಡೇಶ್ವರಿಗೆ ದಲಿತ ಮಹಿಳೆ ಯಾಕೆ...

ಚಾಮುಂಡೇಶ್ವರಿಗೆ ದಲಿತ ಮಹಿಳೆ ಯಾಕೆ ಪುಷ್ಪಾರ್ಚನೆ ಮಾಡಬಾರದು?

ವಾರ್ತಾಭಾರತಿವಾರ್ತಾಭಾರತಿ18 Sept 2025 7:25 AM IST
share
ಚಾಮುಂಡೇಶ್ವರಿಗೆ ದಲಿತ ಮಹಿಳೆ ಯಾಕೆ ಪುಷ್ಪಾರ್ಚನೆ ಮಾಡಬಾರದು?

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

ಮೈಸೂರು ದಸರಾ ಉದ್ಘಾಟನೆಯ ದಿನ ಹತ್ತಿರವಾಗುತ್ತಿದ್ದಂತೆಯೇ ಆಧುನಿಕ ಕಾಲದ ಜಾತೀಯ ಅಸುರರ ಬೇರೆ ಬೇರೆ ಮುಖಗಳು, ಮುಖವಾಡಗಳು ಒಂದೊಂದಾಗಿ ಕಳಚುತ್ತಿವೆ. ಆರಂಭದಲ್ಲಿ ‘ಬಾನು ಮುಷ್ತಾಕ್’ ಅವರು ಸಮಾರಂಭವನ್ನು ಉದ್ಘಾಟಿಸುವುದಕ್ಕೆ ಆಕ್ಷೇಪಿಸಿದ್ದ ಬಿಜೆಪಿ ನಾಯಕರು, ಇದೀಗ ದಲಿತ ಮಹಿಳೆಯರೂ ಚಾಮುಂಡೇಶ್ವರಿಗೆ ಪುಷ್ಪಾರ್ಚನೆ ಮಾಡಲು ಅನರ್ಹರು ಎಂಬ ಆದೇಶವನ್ನು ಹೊರಡಿಸಿದ್ದಾರೆ. ಬಿಜೆಪಿಯ ಹಿರಿಯ ನಾಯಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಬಾನುಮುಷ್ತಾಕ್ ಅವರು ಮೈಸೂರು ದಸರಾ ಉದ್ಘಾಟನೆ ಮಾಡಲಿರುವುದನ್ನು ವಿರೋಧಿಸುತ್ತಾ ‘‘ಚಾಮುಂಡಿ ದೇವಿಗೆ ಹೂ ಹಾಕುವವರು ಸನಾತನ ಧರ್ಮೀಯರೇ ಆಗಿರಬೇಕು. ಸಾಮಾನ್ಯ ದಲಿತ ಮಹಿಳೆಗೂ ಆ ಅಧಿಕಾರವಿಲ್ಲ’’ ಎಂದು ಹೇಳುವ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಇದರ ವಿರುದ್ಧ ದಲಿತ ಸಂಘಟನೆಗಳು ಆಕ್ರೋಶಗಳನ್ನು ವ್ಯಕ್ತಪಡಿಸಿವೆ ಮಾತ್ರವಲ್ಲ, ಎಸ್‌ಸಿ, ಎಸ್‌ಟಿ ದೌರ್ಜನ್ಯ ತಡೆ ಕಾಯ್ದೆ ಅಡಿ ಯತ್ನಾಳ್ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಯತ್ನಾಳ್ ಅವರು ಆಡಿರುವ ಮಾತುಗಳು ಈ ದೇಶದ ದಲಿತ ಸಮುದಾಯದಿಂದ ಬಂದಿರುವ ರಾಷ್ಟ್ರಪತಿಯನ್ನೇ ಅವಮಾನಿಸುವಂತಹದ್ದಾಗಿದೆ. ತನ್ನ ಜಾತಿಯ ಕಾರಣಕ್ಕಾಗಿ ಈ ದೇಶದ ರಾಷ್ಟ್ರಪತಿಗೂ ಜಾಮುಂಡೇಶ್ವರಿಗೆ ಪುಷ್ಪಾರ್ಚನೆ ಮಾಡುವ ಅವಕಾಶ ಇಲ್ಲ ಎನ್ನುವುದನ್ನು ಅವರು ಘೋಷಿಸಿದಂತಾಗಿದೆ. ಈ ಹಿಂದೆ ನೂತನ ಸಂಸತ್‌ಭವನಕ್ಕೆ ಮತ್ತು ರಾಮಮಂದಿರಕ್ಕೆ ರಾಷ್ಟ್ರಪತಿಗೆ ಯಾಕೆ ಆಹ್ವಾನ ನೀಡಿರಲಿಲ್ಲ ಎನ್ನುವ ಪ್ರಶ್ನೆಗೂ ಈ ಬಿಜೆಪಿ ನಾಯಕ ಪರೋಕ್ಷವಾಗಿ ಉತ್ತರಿಸಿದಂತಾಗಿದೆ.

ಯತ್ನಾಳ್ ಅವರ ಮಾತಿನಂತೆ ‘ದಲಿತರು ಸನಾತನಿಗಳು ಅಥವಾ ಹಿಂದೂಗಳು ಅಲ್ಲ’ ಎನ್ನುವುದಾದರೆ ಅವರು ಯಾವ ಸಮುದಾಯಕ್ಕೆ ಸೇರಿದವರು? ಎನ್ನುವ ಪ್ರಶ್ನೆ ಉತ್ತರವಿಲ್ಲದೆ ಉಳಿದು ಬಿಡುತ್ತದೆ. ದಲಿತರು ಹಿಂದೂಗಳಲ್ಲ ಎಂದಾದರೆ, ದಲಿತರು ಸಾಮೂಹಿಕವಾಗಿ ಮತಾಂತರವಾದಾಗ ‘ಹಿಂದೂ ಧರ್ಮಕ್ಕೆ ಅಪಾಯ’ವೆಂದು ಗದ್ದಲ ಎಬ್ಬಿಸುವುದಾದರೂ ಯಾಕೆ? ಹಿಂದೂ ಧರ್ಮದ ಅಸ್ಪಶ್ಯತೆ, ಜಾತೀಯತೆಯನ್ನು ವಿರೋಧಿಸಿ ದಲಿತರು ಮತಾಂತರವಾದಾಗ ಅದಕ್ಕೆ ಆಕ್ಷೇಪ ವ್ಯಕ್ತಪಡಿಸುವ ಯತ್ನಾಳ್‌ನಂತಹ ಹಿಂದುತ್ವವಾದಿಗಳು, ಅದೇ ದಲಿತರು ಚಾಮುಂಡಿ ದೇವಿಗೆ ಪುಷ್ಪಾರ್ಚನೆ ಮಾಡುವ ಸಂದರ್ಭದಲ್ಲಿ ಮಾತ್ರ ‘ಅವರು ಸನಾತನಿಗಳಲ್ಲವಾದುದರಿಂದ ಅರ್ಹತೆಯಿಲ್ಲ’ ಎಂದು ಹೊರಗೆ ನಿಲ್ಲಿಸುವುದು ಎಷ್ಟು ಸರಿ? ಅವರ ಪ್ರಕಾರ ಈ ದೇಶದ ರಾಷ್ಟ್ರಪತಿಯೂ ಸನಾತನಿಯಲ್ಲವಾಗಿರುವುದರಿಂದ ಪುಷ್ಪಾರ್ಚನೆ ಮಾಡುವಂತಿಲ್ಲ. ಇದು ನೇರವಾಗಿ ಜಾತಿ ನಿಂದನೆ ಮತ್ತು ಅಸ್ಪಶ್ಯತೆಯ ಪೋಷಣೆಯಾಗಿದೆ. ಯತ್ನಾಳ್ ಇಂತಹದೊಂದು ಹೇಳಿಕೆಯನ್ನು ನೀಡಿದ ಬಳಿಕವೂ ಅದರ ವಿರುದ್ಧ ಯಾವೊಬ್ಬ ಬಿಜೆಪಿ ನಾಯಕನಾಗಲಿ, ಹಿಂದೂ ಧಾರ್ಮಿಕ ಮುಖಂಡರಾಗಲಿ, ಆರೆಸ್ಸೆಸ್‌ನ ಹಿರಿಯರಾಗಲಿ ಆಕ್ಷೇಪ ವ್ಯಕ್ತಪಡಿಸಿಲ್ಲ. ಅಂದರೆ ಅವರೆಲ್ಲರ ಮೌನವೂ ಯತ್ನಾಳ್ ಮಾತಿಗೆ ನೀಡಿರುವ ಪರೋಕ್ಷ ಸಮ್ಮತಿಯಾಗಿದೆ. ‘ಲಿಂಗಾಯತರು ಹಿಂದೂ ಧರ್ಮದ ಭಾಗ’ ಎಂದು ಪದೇ ಪದೇ ಘೋಷಣೆ ಮಾಡುವ ಹಿಂದುತ್ವ ಮುಖಂಡರು ದಲಿತರ ವಿಷಯದಲ್ಲಿ ಯಾಕೆ ಸಾರ್ವಜನಿಕವಾಗಿ ಹೇಳಿಕೆಕೊಡುತ್ತಿಲ್ಲ? ದಲಿತರ ಬಡತನ, ಅಸ್ಪಶ್ಯತೆ ಮೊದಲಾದ ಸಾಮಾಜಿಕ ಸಮಸ್ಯೆಗಳಿಗೆ ಈವರೆಗೆ ಯಾವ ರೀತಿಯಲ್ಲೂ ಸ್ಪಂದಿಸದ ಆರೆಸ್ಸೆಸ್ ನಾಯಕರು, ಸ್ವಾಮೀಜಿಗಳು ಇದೀಗ ದಲಿತರನ್ನು ಹಿಂದೂಗಳೇ ಅಲ್ಲ ಎಂದು ಹೇಳಿದಾಗಲೂ ಮೌನವಾಗಿರುವುದು ದಲಿತರು ತಮ್ಮ ನಿಜವಾದ ಅಸ್ಮಿತೆಯನ್ನು ಕಂಡುಕೊಳ್ಳುವ ಅನಿವಾರ್ಯವೊಂದನ್ನು ಸೃಷ್ಟಿಸಿದೆ.

‘ಮೈಸೂರು ದಸರಾ’ವನ್ನು ಬಾನು ಮುಷ್ತಾಕ್ ಯಾಕೆ ಉದ್ಘಾಟಿಸಬಾರದು ಎನ್ನುವ ಚರ್ಚೆ ಇದೀಗ ಅಂತಿಮವಾಗಿ ದಲಿತರು ಯಾರು? ಅವರು ಪುಷ್ಪಾರ್ಚನೆ ಮಾಡಬಹುದೇ, ಬಾರದೆ ಎನ್ನುವವರೆಗೆ ತಲುಪಿರುವುದು ನಿಜಕ್ಕೂ ವಿಷಾದನೀಯವಾಗಿದೆ. ನಾಡ ಹಬ್ಬ ಈ ನಾಡಿನ ಎಲ್ಲ ಜಾತಿ, ಧರ್ಮದ ಜನರನ್ನು ಒಂದು ಬಂಧದಲ್ಲಿ ಸೇರಿಸುವ ಮಹತ್ತರ ಉದ್ದೇಶವನ್ನು ಹೊಂದಿದೆ. ಅಂತಹ ಉದ್ದೇಶ ಹೊಂದಿರುವ ಕಾರಣಕ್ಕೇ ಅದನ್ನು ನಾವು ‘ನಾಡಹಬ್ಬ’ ಎಂದು ಕರೆಯುತ್ತೇವೆ. ಯಾವ ಹಬ್ಬ ಕೇವಲ ವೈದಿಕರಿಗೆ ಅಥವಾ ಸನಾತನಿಗಳಿಗೆ ಅಥವಾ ಯಾವುದೊ ಒಂದು ನಿರ್ದಿಷ್ಟ ಸಮುದಾಯ, ಜಾತಿಯ ಜನರಿಗೆ ಸೀಮಿತವಾಗಿರುತ್ತದೆಯೋ ಅದು ನಾಡಹಬ್ಬವಾಗುವ ಅರ್ಹತೆಯನ್ನು ಪಡೆಯುವುದಿಲ್ಲ. ಅಂತಹ ಹಬ್ಬಗಳು ಆಯಾ ಸಮುದಾಯವನ್ನು ಒಂದು ವೇದಿಕೆಯಡಿ ಸೇರಿಸಬಹುದೇ ಹೊರತು ವೈವಿಧ್ಯ ಸಂಸ್ಕೃತಿಯನ್ನು ಹೊಂದಿರುವ ಇಡೀ ನಾಡನ್ನಲ್ಲ. ಬಿಜೆಪಿ ನಾಯಕರ ಆಕ್ಷೇಪಗಳಿಂದಾಗಿ ದಸರಾವನ್ನು ‘ನಾಡ ಹಬ್ಬ’ವಾಗಿ ಘೋಷಿಸಿದ ಔಚಿತ್ಯವೇ ಪ್ರಶ್ನೆಗೊಳಗಾಗಿದೆ. ಮೈಸೂರು ದಸರಾದಲ್ಲಿ ಇತರ ಧರ್ಮೀಯರು ಭಾಗವಹಿಸುವುದು ಕೆಲವರಿಗೆ ಆಕ್ಷೇಪಾರ್ಹ ಎಂದಾದರೆ ದಸರಾ ಹಬ್ಬವನ್ನು ಸರಕಾರದ ನೇತೃತ್ವದಲ್ಲಿ ಆಚರಿಸುವುದನ್ನೇ ಕೈ ಬಿಟ್ಟು ಅದರ ಉಸ್ತುವಾರಿಯನ್ನು ಮೈಸೂರು ಒಡೆಯರ ಕುಟುಂಬವೇ ಹೊತ್ತುಕೊಳ್ಳುವುದು ಮತ್ತು ಅದನ್ನು ಒಂದು ಧಾರ್ಮಿಕ ಹಬ್ಬದ ರೂಪದಲ್ಲಿ ಆಚರಿಸುವುದು ಅರ್ಥಪೂರ್ಣ. ಆಗ ತಮಗೆ ಬೇಕಾದ ಜನರಿಂದ ಪುಷ್ಪಾರ್ಚನೆ ಮಾಡುವ ಅವಕಾಶವನ್ನು ಸಂಬಂಧಪಟ್ಟವರು ಪಡೆದುಕೊಳ್ಳುತ್ತಾರೆ. ಅಕ್ಟೋಬರ್ ತಿಂಗಳಲ್ಲಿ ರಾಜ್ಯದ ವಿವಿಧೆಡೆ ವಿವಿಧ ದೇವಸ್ಥಾನಗಳ ನೇತೃತ್ವದಲ್ಲಿ ದಸರಾ ಹಬ್ಬ ಆಚರಣೆ ನಡೆಯುತ್ತವೆ. ಅಲ್ಲೆಲ್ಲ ಆ ಕ್ಷೇತ್ರದ ಮುಖ್ಯಸ್ಥರೇ ತಮಗೆ ಬೇಕಾದವರಿಂದ ದಸರಾಕ್ಕೆ ಚಾಲನೆ ಕೊಡಿಸುತ್ತಾರೆ. ಮೈಸೂರು ದಸರಾ ವ್ಯಾಪ್ತಿ ತುಸು ಹಿರಿದಾದುದು. ಕರ್ನಾಟಕವು ಮೈಸೂರು ಹೆಸರಿನಲ್ಲಿ ಗುರುತಿಸುತ್ತಿರುವ ಸಂದರ್ಭದಲ್ಲಿ ಹೈದರಲಿ, ಟಿಪ್ಪುಸುಲ್ತಾನ್ ಕಾಲದಲ್ಲೂ ದಸರಾ ಸಂಭ್ರಮದ ಆಚರಣೆಯಾಗಿತ್ತು. ಟಿಪ್ಪು ಸುಲ್ತಾನ್ ಧಾರ್ಮಿಕ ನೆಪವೊಡ್ಡಿ ದಸರಾವನ್ನು ಸ್ಥಗಿತಗೊಳಿಸಿರಲಿಲ್ಲ. ಬದಲಿಗೆ ಟಿಪ್ಪುವಿನ ನೇತೃತ್ವದಲ್ಲಿ ಅದ್ದೂರಿ ದಸರಾ ನಡೆದಿತ್ತು. ಹಾಗೆಯೇ ದಿವಾನ್ ಮಿರ್ಝಾ ಇಸ್ಮಾಯೀಲ್ ನೇತೃತ್ವದಲ್ಲೂ ಅದ್ದೂರಿಯ ದಸರಾ ನಡೆದಿತ್ತು ಮಾತ್ರವಲ್ಲ, ಪಲ್ಲಕ್ಕಿಯಲ್ಲಿ ದಿವಾನರನ್ನೂ ಕುಳ್ಳಿರಿಸಿ ಮೆರವಣಿಗೆ ಮಾಡಿದ ಉದಾಹರಣೆಯಿದೆ. ವೈದಿಕ ಮೌಲ್ಯಗಳಾಚೆಗೆ ಕರ್ನಾಟಕದ ಇತಿಹಾಸ, ಸಂಸ್ಕೃತಿಯನ್ನು ಸ್ಮರಿಸುವ ಅಂಗವಾಗಿ ಮೈಸೂರು ದಸರಾ ಆಚರಣೆಯನ್ನು ಕರ್ನಾಟಕ ಸರಕಾರ ಮುಂದುವರಿಸಿಕೊಂಡು ಬಂದಿದೆ. ಈ ನಾಡಿನ ಎಲ್ಲ ಜಾತಿ, ಧರ್ಮದ ಜನರು ಒಳಗೊಂಡಾಗ ಮಾತ್ರ ಮೈಸೂರಿನ ದಸರಾ ನಾಡಹಬ್ಬವಾಗಿ ಅರ್ಥಪೂರ್ಣವಾಗುತ್ತದೆ. ಈ ಹಿನ್ನೆಲೆಯಲ್ಲಿ ತನ್ನ ಬರಹಗಳ ಮೂಲಕ ಕನ್ನಡ ನಾಡು, ನುಡಿಗೆ ಕೀರ್ತಿ ತಂದ ಮಹಿಳಾ ಸಾಧಕಿ ಬಾನುಮುಷ್ತಾಕ್ ಅಪ್ಪಟ ಕನ್ನಡತಿಯಾಗಿ ದಸರಾವನ್ನು ಉದ್ಘಾಟಿಸುವುದು ಎಲ್ಲ ಕನ್ನಡಿಗರ ಪಾಲಿನ ಹೆಮ್ಮೆಯಾಗಿದೆ. ಕನ್ನಡ ದ್ರೋಹಿಗಳಷ್ಟೇ ಇದರಲ್ಲಿ ಹುಳುಕುಗಳನ್ನು ಹುಡುಕಲು ಸಾಧ್ಯ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X