Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಸಂಪಾದಕೀಯ
  4. ನಕ್ಸಲ್‌ವಾದದತ್ತ ಯುವಕರು: ರಾಜಕಾರಣಿಗಳ...

ನಕ್ಸಲ್‌ವಾದದತ್ತ ಯುವಕರು: ರಾಜಕಾರಣಿಗಳ ಪಾಲೆಷ್ಟು?

ವಾರ್ತಾಭಾರತಿವಾರ್ತಾಭಾರತಿ22 Nov 2024 9:05 AM IST
share
Photo of vikram gowda, CT Ravi

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

ನಕ್ಸಲ್ ನಾಯಕ ವಿಕ್ರಂ ಗೌಡ ಎನ್‌ಕೌಂಟರ್‌ನ ಬೆನ್ನಿಗೇ ಆತನ ಮೃತದೇಹದ ಸುತ್ತ ರಾಜಕೀಯ ಪಕ್ಷಗಳು ರಣಹದ್ದುಗಳಂತೆ ನೆರೆದಿವೆ. ಸಾಧಾರಣವಾಗಿ ರಾಜಕಾರಣಿಗಳಿಗೆ ಈ ಎನ್‌ಕೌಂಟರ್‌ಗಳ ಹೇಗೆ ನಡೆಯಿತು ಎನ್ನುವುದರ ಬಗ್ಗೆ ವಿಶೇಷ ಅರಿವಿರುವುದಿಲ್ಲ. ಪೊಲೀಸ್ ಅಧಿಕಾರಿಗಳು ನೀಡಿರುವ ಮಾಹಿತಿಗಳ ಆಧಾರದಲ್ಲಿ ಅವರು ಹೇಳಿಕೆಗಳನ್ನು ನೀಡುತ್ತಾರೆ. ಆದರೆ ಈ ಸಂದರ್ಭದಲ್ಲಿ ರಾಜಕಾರಣಿಗಳು ಕೇವಲ ಪೊಲೀಸ್ ಅಧಿಕಾರಿಗಳ ಹೇಳಿಕೆಗಳಿಗಷ್ಟೇ ಸೀಮಿತವಾಗದೆ, ಈ ಎನ್‌ಕೌಂಟರ್‌ಗಳ ಬಗ್ಗೆ ಜನಸಾಮಾನ್ಯರ ಅಭಿಪ್ರಾಯಗಳಿಗೂ ಕಿವಿಯಾಗಬೇಕು. ಮೊನ್ನೆ ಉಡುಪಿಯಲ್ಲಿ ಮೃತಪಟ್ಟವನು ಯಾವುದೋ ವಿದೇಶಿ ಸಂಘಟನೆಗಳಿಗೆ ಸೇರಿದ ಉಗ್ರಗಾಮಿಯಲ್ಲ. ನಮ್ಮದೇ ಊರಿನ, ಆದಿವಾಸಿ ತರುಣ. ಆತನ ಸಾವು ನಮ್ಮ ಪಾಲಿಗೆ ಹಗುರ ವಿಷಯ ಖಂಡಿತ ಆಗಬಾರದು. ವಿಪರ್ಯಾಸವೆಂದರೆ, ಇಡೀ ಘಟನೆಯನ್ನು ಬಿಜೆಪಿಯ ಕೆಲವು ನಾಯಕರು ರಾಜಕೀಯಗೊಳಿಸಲು ಪ್ರಯತ್ನಿಸುತ್ತಿದ್ದಾರೆ. ತನ್ನದೇ ಊರಿನ ಮಲೆಕುಡಿಯ ತರುಣನ ಸಾವನ್ನು ಸಂಭ್ರಮಿಸಲು ಮುಂದಾಗಿದ್ದಾರೆ. ಅದರ ಭಾಗವಾಗಿಯೇ ಬಿಜೆಪಿ ಮುಖಂಡ, ವಿಧಾನ ಪರಿಷತ್ ಸದಸ್ಯ ಸಿ. ಟಿ. ರವಿ ಅವರು, ‘‘ಬಡಮಕ್ಕಳ ಶಿಕ್ಷಣಕ್ಕೆ ಅತ್ಯಗತ್ಯವಾಗಿರುವ ಹಾಸ್ಟೆಲ್‌ಗಳಲ್ಲಿ ನಕ್ಸಲೀಯರು ತಂಗುತ್ತಾರೆ. ವಿದ್ಯಾರ್ಥಿಗಳನ್ನು ನಕ್ಸಲ್ ಚಳವಳಿಗೆ ನೇಮಿಸಿಕೊಳ್ಳುತ್ತಾರೆ. ಅವರ ವಿಚಾರಗಳನ್ನು ಹಾಸ್ಟೆಲ್ ಯುವಕರ ತಲೆಗೆ ತುಂಬುತ್ತಾರೆ’’ ಎನ್ನುವ ಬೇಜವಾಬ್ದಾರಿ ಹೇಳಿಕೆಯನ್ನು ನೀಡಿ, ವಿವಾದಕ್ಕೊಳಗಾಗಿದ್ದಾರೆ.

ವಿಕ್ರಮ್ ಗೌಡನ ಎನ್‌ಕೌಂಟರ್ ನಡೆದ ಮರುದಿನ, ಚಿಕ್ಕಮಗಳೂರು ತಾಲೂಕು ಪಂಚಾಯತ್ ಕೆಡಿಪಿ ಸಭೆಯಲ್ಲಿ ಅವರು ಈ ಹೇಳಿಕೆಯನ್ನು ನೀಡಿದ್ದು, ಹಾಸ್ಟೆಲ್‌ಗಳೇ ನಕ್ಸಲ್ ಉಗ್ರವಾದದ ಮೂಲ ತಾಣಗಳು ಎಂಬರ್ಥ ಬರುವಂತೆ ಹೇಳಿಕೆಯನ್ನು ನೀಡಿದ್ದಾರೆ. ಇವರು ನಿಜಕ್ಕೂ ವಿರೋಧಿಸುತ್ತಿರುವುದು ನಕ್ಸಲ್ ಉಗ್ರವಾದವನ್ನೋ ಅಥವಾ ಬಡವರ ಮಕ್ಕಳ ಶಿಕ್ಷಣಕ್ಕೆ ನೆರಳಾಗಿರುವ ಹಾಸ್ಟೆಲ್‌ಗಳನ್ನೋ ಎಂದು ಜನರು ಸಂಶಯಿಸುವಂತಾಗಿದೆ. ಮುಖ್ಯವಾಗಿ, ವಿಕ್ರಂ ಗೌಡ ಯಾವುದೋ ಹಾಸ್ಟೆಲ್‌ಗಳಲ್ಲಿ ತಂಗಿ ಕಲಿತ ವಿದ್ಯಾರ್ಥಿಯಲ್ಲ. ನಾಲ್ಕನೇ ತರಗತಿಯವರೆಗೆ ಕಲಿತು ಬಳಿಕ ಕೂಲಿ ಕೆಲಸ ಮಾಡುತ್ತಿದ್ದ ಯುವಕ. ಈತ ಬಾಳಿ ಬದುಕಿದ ತಾಲೂಕು, ಗ್ರಾಮಗಳನ್ನು ಅವಲೋಕಿಸಿದರೆ ಸಾಕು, ಈತನನ್ನು ಉಗ್ರಗಾಮಿಯನ್ನಾಗಿಸಿದ್ದು ಯಾರು ಎನ್ನುವುದು ಗೊತ್ತಾಗಿ ಬಿಡುತ್ತದೆ. ಮೂಲಭೂತ ಸೌಕರ್ಯಗಳಿಲ್ಲದ ಕುಗ್ರಾಮಗಳಿಂದಲೇ ಯಾಕೆ ನಕ್ಸಲ್ ಉಗ್ರವಾದಿಗಳು ಹುಟ್ಟಿ ಬರುತ್ತಾರೆ ಎನ್ನುವುದು ಅರ್ಥವಾಗುತ್ತದೆ. ಚಿಕ್ಕಮಗಳೂರು ಜಿಲ್ಲೆಯಿಂದ ನಾಲ್ಕು ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಬಿಜೆಪಿ ನಾಯಕ ಸಿ.ಟಿ. ರವಿ ಆ ಜಿಲ್ಲೆಯ ಅಭಿವೃದ್ಧಿಗೆ ನೀಡಿದ ಕೊಡುಗೆಗಳೇನು ಎನ್ನುವುದರ ವಿವರಗಳನ್ನು ಮೊದಲು ನೀಡಲಿ. ಮೊದಲ ಬಾರಿ ಶಾಸಕನಾಗಿದ್ದಾಗ ಸಿ.ಟಿ. ರವಿಯ ಸಂಪತ್ತೆಷ್ಟಿತ್ತು ಮತ್ತು ಇಂದು ಇವರ ಸಂಪತ್ತಿನ ಮೌಲ್ಯವೆಷ್ಟು ಎನ್ನುವುದನ್ನು ಲೆಕ್ಕ ಹಾಕಿದರೆ, ಚಿಕ್ಕಮಗಳೂರಿನ ಕೆಲವು ತಾಲೂಕುಗಳು ಯಾಕೆ ಇನ್ನೂ ಕತ್ತಲಲ್ಲೇ ಇವೆ ಎನ್ನುವುದು ಗೊತ್ತಾಗಿ ಬಿಡುತ್ತದೆ. ಜನಸಾಮಾನ್ಯರ ತೆರಿಗೆ ಹಣವನ್ನು ಸರಿಯಾಗಿ ಬಳಸಿ ಬಡವರ ಬದುಕನ್ನು ಹಸನುಗೊಳಿಸುವ ಹೊಣೆಗಾರಿಕೆಯನ್ನು ರಾಜಕಾರಣಿಗಳು ನಿಭಾಯಿಸಿದ್ದರೆ ಇಂದು ಚಿಕ್ಕಮಗಳೂರಿನಲ್ಲಿ ನಕ್ಸಲರು ತಲೆಯೆತ್ತುವ ಪ್ರಶ್ನೆ ಉದ್ಭವಿಸುತ್ತಿರಲಿಲ್ಲವೇನೋ. ಪ್ರತಿಬಾರಿ ನಕ್ಸಲ್ ಯುವಕರ ಹೆಣ ಬಿದ್ದಾಗಲೂ, ಆತನ ಊರಿನ ದೈನ್ಯಾವಸ್ಥೆಗಳು ಮಾಧ್ಯಮಗಳಲ್ಲಿ ವರದಿಯಾಗುತ್ತವೆ. ಈ ಭಾಗದ ಜನರ ಸಮಸ್ಯೆಗಳಿಗೆ ಸರಕಾರ ಕಿವಿಗೊಡಲು ಆರಂಭಿಸಿದ್ದೇ, ಇಲ್ಲಿ ನಕ್ಸಲೀಯರು ತಲೆಯೆತ್ತಿದ ಬಳಿಕ ಎನ್ನುವುದು ನಾವು ಒಪ್ಪಿಕೊಳ್ಳಲೇ ಬೇಕಾದ ಕಹಿ ಸತ್ಯ.

ಯಾವಾಗ ಸರಕಾರ ಕುದುರೆಮುಖ ಉದ್ಯಾನವನದ ಹೆಸರಿನಲ್ಲಿ ಚಿಕ್ಕಮಗಳೂರು ಭಾಗದ ಆದಿವಾಸಿಗಳ ಬದುಕನ್ನು ಮೂರಾಬಟ್ಟೆ ಮಾಡಲು ಮುಂದಾಯಿತೋ ಅಲ್ಲಿಂದಲೇ ರಾಜ್ಯದಲ್ಲಿ ನಕ್ಸಲ್ ಸಮಸ್ಯೆ ಉಲ್ಬಣಗೊಂಡಿತು. ಭ್ರಮನಿರಸನಗೊಂಡ ಆದಿವಾಸಿ ಸಮುದಾಯದ ಯುವಕರು ಒಬ್ಬೊಬ್ಬರಾಗಿ ಕಾಡು ಸೇರಿ ಕೋವಿ ಹಿಡಿದರು. ಪಶ್ಚಿಮಘಟ್ಟದಲ್ಲಿ ನಕ್ಸಲೀಯರ ಕೋವಿಗಳು ಸದ್ದು ಮಾಡಿದಾಕ್ಷಣ ಸರಕಾರ ಎಚ್ಚೆತ್ತುಕೊಂಡಿತು. ಅವರ ವಿರುದ್ಧ ಪೊಲೀಸ್ ಕಾರ್ಯಾಚರಣೆಯನ್ನು ಮಾಡುತ್ತಲೇ, ಈ ಭಾಗದ ಅಭಿವೃದ್ಧಿಗಾಗಿ, ಮೂಲಭೂತ ಸೌಕರ್ಯಗಳಿಗೆ ಹಣವನ್ನು ಬಿಡುಗಡೆ ಮಾಡಲು ಶುರು ಮಾಡಿತು. ಜಿಲ್ಲಾಡಳಿತದ ಉನ್ನತ ಅಧಿಕಾರಿಗಳು ನೇರವಾಗಿ ಇಲ್ಲಿನ ಆದಿವಾಸಿಗಳ ಗುಡಿಸಲುಗಳ ಬಾಗಿಲನ್ನು ತಟ್ಟಿ ಅವರ ಸಮಸ್ಯೆಗಳಿಗೆ ಕಿವಿಯಾಗತೊಡಗಿದರು. ಬಹುಶಃ ಇದು ಸ್ಥಳೀಯರಲ್ಲಿ ನಕ್ಸಲೀಯರ ಬಗ್ಗೆ ಇನ್ನಷ್ಟು ಭರವಸೆ ಮೂಡಿಸಿರಬೇಕು. ಪ್ರಜಾಸತ್ತಾತ್ಮಕವಾಗಿ ತಮ್ಮ ಗ್ರಾಮದ ಬೇಡಿಕೆಗಳನ್ನು ಮುಂದಿಟ್ಟಾಗ ಕಣ್ಣೆತ್ತಿಯೂ ನೋಡದ ಅಧಿಕಾರಿಗಳು, ನಕ್ಸಲರು ಕಾಣಿಸಿಕೊಂಡ ಬೆನ್ನಿಗೇ ತಮ್ಮ ಊರಿನ ಬಗ್ಗೆ ಪ್ರೀತಿ ತೋರಿಸುತ್ತಿರುವುದು ಅವರಿಗೆ ಸಹಜವಾಗಿಯೇ ನಕ್ಸಲ್ ಹೋರಾಟದ ಬಗ್ಗೆ ನಂಬಿಕೆಗಳನ್ನು ಹುಟ್ಟಿಸಿರಬಹುದು. ಒಕ್ಕಲೆಬ್ಬಿಸುವ ನೆಪದಲ್ಲಿ ಪೊಲೀಸರ ಕಿರುಕುಳಗಳು ಒಂದು ಹಂತಕ್ಕೆ ನಿಂತದ್ದೂ ನಕ್ಸಲೀಯರು ಕಾಣಿಸಿಕೊಂಡ ಬಳಿಕ. ಸದಾ ಅರಣ್ಯಾಧಿಕಾರಿಗಳಿಂದ ದೌರ್ಜನ್ಯಗಳನ್ನು ಎದುರಿಸುತ್ತಿದ್ದ ಸ್ಥಳೀಯರ ಅಳಲನ್ನು ಸರಕಾರ ಗಂಭೀರವಾಗಿ ಸ್ವೀಕರಿಸಿದ್ದೂ ಕುದುರೆಮುಖದಲ್ಲಿ ನಕ್ಸಲೀಯರ ಚಟುವಟಿಕೆ ಆರಂಭವಾದ ಬಳಿಕ ಎನ್ನುವುದು ಸಿ.ಟಿ. ರವಿಯವರಿಗೆ ತಿಳಿಯದ್ದೇನಲ್ಲ.

ಇದೀಗ ವಿಕ್ರಂಗೌಡ ಅವರ ಎನ್‌ಕೌಂಟರ್‌ನ ಜೊತೆ ಜೊತೆಗೇ ದಕ್ಷಿಣ ಕನ್ನಡ ಜಿಲ್ಲೆಯ ಕತ್ತಲೂರು ಎಂದೇ ಕುಖ್ಯಾತವಾಗಿರುವ ಬೆಳ್ತಂಗಡಿ ತಾಲೂಕಿನ ಕುತ್ಲೂರು ಗ್ರಾಮದ ದಯನೀಯ ಸ್ಥಿತಿ ಮಾಧ್ಯಮಗಳ ಮೂಲಕ ಬೆಳಕಿಗೆ ಬರುತ್ತಿವೆ. ಕುತ್ಲೂರು ಗ್ರಾಮದ ಅಲಂಬ, ಕೋಟ್ಯಡ್ಕ, ಪಂಜಾಲ ಪರಿಸರದಲ್ಲಿ ಕುದುರೆಮುಖ ರಾಷ್ಟ್ರೀಯ ಉದ್ಯಾನವನದಲ್ಲಿ ಎರಡು ದಶಕಗಳ ಹಿಂದೆ 50ಕ್ಕೂ ಅಧಿಕ ಕುಟುಂಬಗಳು ವಾಸಿಸುತ್ತಿದ್ದವು. ಅವರಲ್ಲಿ ಹಲವರು ಸರಕಾರದ ಪುನರ್‌ವಸತಿ ಪ್ಯಾಕೇಜ್‌ಗಳನ್ನು ನಂಬಿ, ಸಿಕ್ಕಿದ ಪರಿಹಾರವನ್ನು ಪಡೆದು ತಾವು ಬಾಳಿ ಬದುಕಿದ ಭೂಮಿ ತೊರೆದು ನಾಡಿಗೆ ಬಂದಿದ್ದಾರೆ. ಅವರಲ್ಲಿ ಕೆಲವರ ಬದುಕು ಇನ್ನೂ ಅತಂತ್ರವಾಗಿದೆ. ಈ ಭಾಗದಲ್ಲಿ ಇನ್ನೂ 34 ಆದಿವಾಸಿ ಕುಟುಂಬಗಳು ವಾಸಿಸುತ್ತಿವೆ.ಈ ಭಾಗದಲ್ಲಿ ಈ ಹಿಂದೆ ಹಲವು ಎನ್‌ಕೌಂಟರ್‌ಗಳು ನಡೆದು, ಇಲ್ಲಿನ ಮಲೆಕುಡಿಯ ಆದಿವಾಸಿ ಹುಡುಗರು ಮೃತಪಟ್ಟಿದ್ದಾರೆ. ಆಗೆಲ್ಲ ಈ ಭಾಗಕ್ಕೆ ಸರಕಾರ ಪರಿಹಾರದ ಭರವಸೆಯ ಮಳೆಯನ್ನೇ ಸುರಿಸಿದ್ದವು. ಆದರೆ ಯಾವುದೇ ಭರವಸೆಗಳು ಈಡೇರಿಲ್ಲ. ರಸ್ತೆ, ಸೇತುವೆಯಂತಹ ಮೂಲಭೂತ ಸೌಕರ್ಯಗಳ ಕೊರತೆಗಳು ಈಗಲೂ ಇಲ್ಲಿಯ ಜನರನ್ನು ಕಾಡುತ್ತಿವೆ. ಇದಕ್ಕೆ ಯಾರು ಕಾರಣ ಎನ್ನುವುದನ್ನು ಸಿ.ಟಿ. ರವಿಯಂತಹ ರಾಜಕಾರಣಿಗಳು ಆತ್ಮ ವಿಮರ್ಶೆ ಮಾಡಿಕೊಳ್ಳಬೇಕು.

ಈ ನಾಡಿನ ಹಾಸ್ಟೆಲ್‌ಗಳು ದುರ್ಬಲ ಸಮುದಾಯದ ಅಸಂಖ್ಯ ವಿದ್ಯಾರ್ಥಿಗಳಿಗೆ ಶಿಕ್ಷಣದ ಹಾಲೂಡಿವೆ. ಇಂದಿಗೂ ರಾಜ್ಯದ ಮೊರಾರ್ಜಿ ದೇಸಾಯಿ ಹಾಸ್ಟೆಲ್‌ಗಳು ಸೇರಿದಂತೆ ಹಿಂದುಳಿದವರ್ಗ, ಅಲ್ಪಸಂಖ್ಯಾತ ಮತ್ತು ದಲಿತ ವರ್ಗಗಳ ಪಾಲಿಗೆ ನೆರಳಾಗಿರುವ ಸರಕಾರಿ ಹಾಸ್ಟೆಲ್‌ಗಳು ನೂರಾರು ಬಡ ವಿದ್ಯಾರ್ಥಿಗಳ ಬದುಕನ್ನು ಬೆಳಕಾಗಿಸಿವೆ. ಅಲ್ಲಿ ಓದಿ ಬೆಳೆದ ಎಷ್ಟೋ ವಿದ್ಯಾರ್ಥಿಗಳು ಸಮಾಜದಲ್ಲಿ ಅತ್ಯುನ್ನತ ಸ್ಥಾನಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ಆತ್ಮಾಭಿಮಾನದೊಂದಿಗೆ ಎಲ್ಲರ ಜೊತೆಗೆ ಸರಿ ಸಮವಾಗಿ ಬದುಕುತ್ತಿದ್ದಾರೆ. ಒಂದು ಕಾಲದಲ್ಲಿ ಶಿಕ್ಷಣ ಸಚಿವರಾಗಿ ಕಾರ್ಯ ನಿರ್ವಹಿಸಿದ್ದ ಸಿ.ಟಿ. ರವಿಗೆ ಇದರ ಬಗ್ಗೆಅಲ್ಪವಾದರೂ ಅರಿವಿದ್ದಿದ್ದರೆ ಅವರು ನಕ್ಸಲ್ ಕಳಂಕವನ್ನು ರಾಜ್ಯದ ಹಾಸ್ಟೆಲ್‌ಗಳಿಗೆ ಕಟ್ಟುತ್ತಿರಲಿಲ್ಲ. ಮುಖ್ಯವಾಗಿ ಈ ನಾಡಿನಲ್ಲಿ ನಕ್ಸಲ್‌ವಾದ ಬೆಳೆಯಲು ಕಾರಣವೇ ರಾಜಕಾರಣಿಗಳು. ಈ ಸತ್ಯವನ್ನು ಮುಚ್ಚಿ ಹಾಕುವುದಕ್ಕಾಗಿ ರಾಜಕಾರಣಿಗಳು ಹಾಸ್ಟೆಲ್‌ಗಳು, ಸರಕಾರಿ ಶಾಲೆಗಳ ಕಡೆಗೆ ಬೆರಳು ತೋರಿಸುತ್ತಿದ್ದಾರೆ.

ಇಷ್ಟಕ್ಕೂ ಆರೆಸ್ಸೆಸ್ ಕಚೇರಿಗಳಲ್ಲಿ, ಸಂಘಪರಿವಾರದ ಸಂಸ್ಥೆಗಳಲ್ಲಿ ಹಿಂದುತ್ವದ ಅಮಲನ್ನು ವಿದ್ಯಾರ್ಥಿಗಳ ತಲೆಗೆ ತುಂಬಿ ಅವರ ಬದುಕನ್ನು ಬಲಿಕೊಡುತ್ತಿರುವ ರಾಜಕಾರಣಿಗಳ ಬಗ್ಗೆ ಮೊದಲು ಸಿ.ಟಿ. ರವಿ ತಲೆಕೆಡಿಸಿಕೊಳ್ಳಬೇಕಾಗಿದೆ. ಇಂದು ಈ ಸಂಘಪರಿವಾರ ನಾಯಕರ ತಲೆಗೆಟ್ಟ ಮಾತುಗಳಿಗೆ ತಲೆಗೊಟ್ಟು ಹಿಂದುಳಿದ ವರ್ಗದ, ದಲಿತ ಸಮುದಾಯದ ನೂರಾರು ಯುವಕರು ತಮ್ಮ ಭವಿಷ್ಯವನ್ನು ಕೆಡಿಸಿಕೊಂಡಿದ್ದಾರೆ. ಕ್ರಿಮಿನಲ್ ಕೇಸುಗಳ ಜೊತೆಗೆ ಜೈಲುಕಂಬಿ ಎಣಿಸುತ್ತಿದ್ದಾರೆ. ಬಡವರ ಮಕ್ಕಳನ್ನು ಕೋಮುಗಲಭೆಗಳಿಗೆ ಛೂಬಿಟ್ಟು ತಮ್ಮ ಮಕ್ಕಳನ್ನು ವಿದೇಶಗಳಲ್ಲಿ ಓದಿಸುತ್ತಿರುವ ರಾಜಕಾರಣಿಗಳ ಬಗ್ಗೆ ಸಿ.ಟಿ. ರವಿಯೂ ಸೇರಿದಂತೆ ಬಿಜೆಪಿ ನಾಯಕರು ಮೊದಲು ಆಕ್ರೋಶ ವ್ಯಕ್ತಪಡಿಸಬೇಕಾಗಿದೆ. ಇಂದು ಬಡವರಿಗೂ ಶಿಕ್ಷಣ ದೊರಕುವಂತೆ ಮಾಡುತ್ತಿರುವ ಹಾಸ್ಟೆಲ್‌ಗಳೇ ಈ ದೇಶದಲ್ಲಿ ಉಗ್ರವಾದ ಉಲ್ಬಣವಾಗದಂತೆ ತಡೆದಿವೆ ಎನ್ನುವುದನ್ನು ಅವರು ಅರ್ಥ ಮಾಡಿಕೊಳ್ಳಬೇಕು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X