ಶಿವಮೊಗ್ಗ | ಬೈಕಿಗೆ ಗುದ್ದಿ ಒಂದು ಕಿ.ಮೀ. ದೂರ ಎಳೆದೊಯ್ದ ಕಾರು

ಶಿವಮೊಗ್ಗ : ಕುಡಿದ ಮತ್ತಿನಲ್ಲಿ ಕಾರು ಚಾಲಕ ಬೈಕಿಗೆ ಗುದ್ದಿ ಒಂದು ಕಿ.ಮೀ. ದೂರ ಬೈಕ್ ಎಳೆದೊಯ್ದ ಘಟನೆ ಶಿವಮೊಗ್ಗ ನಗರದಲ್ಲಿ ಸೋಮವಾರ ರಾತ್ರಿ ನಡೆದಿದೆ. ಶಿವಮೊಗ್ಗ ನಗರದ ಟ್ಯಾಂಕ್ ಮೊಹಲ್ಲಾದಿಂದ ಸವಳಂಗ ರಸ್ತೆವರೆಗೂ ಬೈಕ್‌ನ್ನು ಕಾರು ಎಳೆದೊಯ್ದಿದೆ.
ಕಾರು ಚಲಾಯಿಸುತ್ತಿದ್ದ ವ್ಯಕ್ತಿ ವೈದ್ಯ ಎಂದು ತಿಳಿದುಬಂದಿದೆ. ಘಟನೆಯಲ್ಲಿ ಉದ್ರೇಕಗೊಂಡ ಸಾರ್ವಜನಿಕರು ವೈದ್ಯನ ಮೇಲೆ ಹಲ್ಲೆ ನಡೆಸಿರುವ ಆರೋಪವೂ ಕೇಳಿಬಂದಿದೆ.
ಸ್ಥಳಕ್ಕೆ ಜಯನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
Next Story





