ಶಿವಮೊಗ್ಗ | ವ್ಯಕ್ತಿಯ ಮೇಲೆ ಮಾರಣಾಂತಿಕ ಹಲ್ಲೆ; ಆಸ್ಪತ್ರೆಗೆ ದಾಖಲು

ಶಿವಮೊಗ್ಗ : ವ್ಯಕ್ತಿಯೊಬ್ಬನ ಮೇಲೆ ಮಾರಣಾಂತಿಕ ಹಲ್ಲೆ ಮಾಡಿರುವ ಘಟನೆ ನಗರದ ಹೊರವಲಯದ ಸೂಳೆಬೈಲು ವೃತ್ತದಲ್ಲಿ ರವಿವಾರ ನಡೆದಿದೆ.
ಶಬ್ಬೀರ್ (32) ಹಲ್ಲೆಗೊಳಗಾದ ವ್ಯಕ್ತಿ ಎಂದು ಗುರುತಿಸಲಾಗಿದೆ. ಜಗಳ ಬಿಡಿಸಲು ಬಂದ ಮತ್ತೊಬ್ಬನ ಮೇಲೂ ಹಲ್ಲೆ ಮಾಡಲಾಗಿದೆ.
ವೈಯಕ್ತಿಕ ಜಗಳದ ಕಾರಣಕ್ಕೆ ತಂಗಿಯ ಗಂಡ ಫರ್ದೀನ್ ಎಂಬಾತನೇ ಹಲ್ಲೆ ಮಾಡಿರುವುದಾಗಿ ತಿಳಿದು ಬಂದಿದ್ದು, ತುಂಗಾನಗರ ಠಾಣೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಸಾಲ್ಮೀಯ ಎಂಬ ಯುವತಿಯನ್ನು ಫರ್ದೀನ್ (25) ಪ್ರೀತಿಸಿ ಮದುವೆಯಾಗಿದ್ದ. ಮದುವೆ ಬಗ್ಗೆ ಹುಡುಗಿ ಮನೆಯವರಿಗೆ ಇಷ್ಟವಿರಲಿಲ್ಲ. ಈ ಸಂಬಂಧ ಕುಟುಂಬದಲ್ಲಿ ಜಗಳವಾಗುತಿತ್ತು. ರವಿವಾರ (ಆ.5) ಸಂಜೆ ತಂಗಿಯ ಗಂಡನೇ ಮಾರಕಾಸ್ತ್ರದಿಂದ ಭೀಕರವಾಗಿ ಹಲ್ಲೆ ಮಾಡಿದ್ದಾನೆ.
ಸದ್ಯ ಗಾಯಗೊಂಡ ಶಬ್ಬೀರ್‌ಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಗಲಾಟೆ ಬಿಡಿಸಲು ಬಂದ ಶಹಬಾಜ್ ಎಂಬಾತನ ಮೇಲೆ ಹಲ್ಲೆ ಮಾಡಿದ್ದು, ಆತನಿಗೂ ಚಿಕಿತ್ಸೆ ನೀಡಲಾಗುತ್ತಿದೆ.
Next Story





