ಶಿವಮೊಗ್ಗ | ಮಧುಬಂಗಾರಪ್ಪ ಅವರ ಪಿಎ ಎಂದು ಹೇಳಿಕೊಂಡು ವಂಚನೆ : ಆರೋಪಿ ಬಂಧನ

ಶಿವಮೊಗ್ಗ: ಸಚಿವ ಮಧು ಬಂಗಾರಪ್ಪ ಅವರ ಪಿಎ ಎಂದು ಹೇಳಿಕೊಂಡು ವಂಚನೆ ಮಾಡುತ್ತಿದ್ದ ಆರೋಪಿಯೊಬ್ಬನನ್ನು ಜಯನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ರಘುನಾಥ ಬಂಧಿತ ಆರೋಪಿ ಎಂದು ತಿಳಿದು ಬಂದಿದೆ. ಸಚಿವರ ಸೊರಬ ಕಚೇರಿಯ ಪಿಎ ಎಂದು ಹೇಳಿಕೊಂಡಿದ್ದ ಆರೋಪಿಯು, ಶಿಕ್ಷಣ ಇಲಾಖೆ ಜಂಟಿ ನಿರ್ದೇಶಕರೊಬ್ಬರಿಗೆ ಕರೆ ಮಾಡಿ ನಿಮಗೆ ವರ್ಗಾವಣೆ ಆಗಿದೆ. ನಿಮಗೆ ಸ್ಥಳ ತೋರಿಸಿಲ್ಲ, ನಾನು ಸಚಿವರಿಗೆ ಹೇಳಿ ಅದನ್ನು ರದ್ದುಪಡಿಸುವುದಾಗಿ ಹೇಳಿದ್ದನು. ಈ ರೀತಿಯ ದೂರುಗಳು ಬಂದ ಹಿನ್ನೆಯಲ್ಲಿ ಸಚಿವರ ಸೂಚನೆ ಮೇರೆಗೆ ಗಿರೀಶ್ ಎಂಬುವವರು ಜಯನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ತನಿಖೆ ಆರಂಭಿಸಿದ್ದ ಪೊಲೀಸರು ಆರೋಪಿ ರಘುನಾಥನನ್ನು ಬೆಂಗಳೂರಲ್ಲಿ ಬಂಧಿಸಿದ್ದಾರೆ.
Next Story





