ʻಕಾಂತಾರ ಚಾಪ್ಟರ್-1ʼ ಶೂಟಿಂಗ್ ವೇಳೆ ಜಲಾಶಯದಲ್ಲಿ ಮಗುಚಿದ ದೋಣಿ; ಅಪಾಯದಿಂದ ಪಾರಾದ ಚಿತ್ರ ತಂಡ

PC: x.com/htshowbiz
ಶಿವಮೊಗ್ಗ:ರಿಷಬ್ ಶೆಟ್ಟಿ ನಟನೆ ಮತ್ತು ನಿರ್ದೇಶನ ಮಾಡುತ್ತಿರುವ ಕಾಂತಾರ-1 ಚಿತ್ರದ ಶೂಟಿಂಗ್ ವೇಳೆ ಜಲಾಶಯದಲ್ಲಿ ದೋಣಿ ಮಗುಚಿದ ಘಟನೆ ಶನಿವಾರ(ಜೂ14) ನಡೆದಿರುವ ಬಗ್ಗೆ ವರದಿಯಾಗಿದೆ. ಅದೃಷ್ಟವಶಾತ್ ಚಿತ್ರ ತಂಡದ ಎಲ್ಲರೂ ಸುರಕ್ಷಿತವಾಗಿ ದಡ ಸೇರಿದ್ದಾರೆ ಎಂದು ತಿಳಿದು ಬಂದಿದೆ.
ಚಿತ್ರದ ಕೊನೆಯ ಹಂತದ ಶೂಟಿಂಗ್ ಗಾಗಿ ತೀರ್ಥಹಳ್ಳಿಯ ಮಾಣಿ ಜಲಾಶಯದ ಬಳಿ 15 ದಿನಗಳ ಕಾಲ ಶೂಟಿಂಗ್ ನಡೆಸಲಾಗುತ್ತಿತ್ತು. ಶೂಟಿಂಗ್ ನಡೆಸುತ್ತಿದ್ದ ವೇಳೆ ದೋಣಿ ಮಗುಚಿದೆ ಎಂದು ಹೇಳಲಾಗಿದ್ದು, ನಟ ರಿಷಬ್ ಶೆಟ್ಟಿ ಸೇರಿದಂತೆ 30 ಮಂದಿ ಸ್ಥಳದಲ್ಲಿದ್ದರು ಎನ್ನುವ ಮಾಹಿತಿ ಲಭಿಸಿದೆ. ಕೆಮರಾ ಮತ್ತು ಇತರ ಸಾಮಗ್ರಿಗಳು ನೀರು ಪಾಲಾಗಿವೆ ಎಂದು ಹೇಳಲಾಗಿದೆ.
ಈಗಾಗಲೇ ಚಿತ್ರದಲ್ಲಿ ಅಭಿನಯಿಸುತ್ತಿದ್ದ ಮೂವರು ಕಲಾವಿದರ ನಿಧನ ಚಿತ್ರ ತಂಡಕ್ಕೆ ಶಾಕ್ ಆಗಿ ಪರಿಣಮಿಸಿತ್ತು.
Next Story





