ಶಿವಮೊಗ್ಗ: ಚಾಲಕನ ನಿಯಂತ್ರಣ ತಪ್ಪಿ ಜೀಪ್ ಪಲ್ಟಿ; 8 ಮಂದಿಗೆ ಗಾಯ

ಶಿವಮೊಗ್ಗ: ಕೊಲ್ಲೂರಿನಿಂದ ಕೊಡಚಾದ್ರಿಗೆ ಹೋಗುತ್ತಿದ್ದ ಜೀಪ್, ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಘಟನೆ ರವಿವಾರ ನಿಟ್ಟೂರು – ಕಟ್ಟಿನಹೊಳೆ ಮಾರ್ಗದ ಕುಂಬಳೆ ಗ್ರಾಮದ ಬಳಿ ನಡೆದಿದೆ.
ಜೀಪ್ ನಲ್ಲಿ ಕೇರಳ ಮೂಲದ 8 ಜನ ಭಕ್ತರಿದ್ದು, ಅವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಹೊಸನಗರ ತಾಲೂಕಿನ ಕೊಡಚಾದ್ರಿ ಬೆಟ್ಟಕ್ಕೆ ಭಕ್ತರು ಕೊಲ್ಲೂರಿನಿಂದ ಜೀಪ್ ನಲ್ಲಿ ಹೊರಟಿದ್ದರು. ಚಾಲಕನ ಅತಿ ವೇಗದ ಹಿನ್ನೆಲೆಯಲ್ಲಿ ನಿಯಂತ್ರಣ ತಪ್ಪಿದ ಜೀಪ್ ಪಲ್ಟಿಯಾಗಿದೆ ಎನ್ನಲಾಗಿದೆ.
ಪಲ್ಟಿಯಾದ ಜೀಪ್ ಭಾಗಶಃ ಜಖಂ ಆಗಿದೆ.
Next Story





