ಸಾಗರ: ಹೊಳೆಯಲ್ಲಿ ಕೆಟ್ಟು ನಿಂತ ಲಾಂಚ್; ಆತಂಕಕ್ಕೊಳಗಾದ ಪ್ರಯಾಣಿಕರು

ಸಾಗರ : ತಾಲೂಕಿನ ಶರಾವತಿ ಹಿನ್ನೀರು ಪ್ರದೇಶದ ಹೊಳೆಬಾಗಿಲು ಹೊಳೆಯಲ್ಲಿ ಪ್ರಯಾಣಿಕರನ್ನು ಕರೆದುಕೊಂಡು ಹೋಗುತ್ತಿದ್ದ ಲಾಂಚ್ ನೀರಿನ ಮಧ್ಯದಲ್ಲಿ ತಾಂತ್ರಿಕ ಸಮಸ್ಯೆ ಉಂಟಾಗಿ ನಿಂತ ಘಟನೆ ಗುರುವಾರ ಸಂಜೆ ನಡೆದಿದೆ.
ಲಾಂಚ್ ನಲ್ಲಿ ಸರಿಸುಮಾರು ನೂರಕ್ಕೂ ಹೆಚ್ಚು ಪ್ರಯಾಣಿಕರು ಹಾಗೂ ವಾಹನಗಳನ್ನು ತೆಗೆದುಕೊಂಡು ಹೋಗುವ ಸಂದರ್ಭದಲ್ಲಿ ಈ ಘಟನೆ ನಡೆದಿದ್ದು ಪ್ರಯಾಣಿಕರು ಕೆಲ ಕಾಲ ಆತಂಕಕ್ಕೆ ಒಳಗಾಗಿರುವ ಸನ್ನಿವೇಶ ನಡೆಯಿತು.
ತಕ್ಷಣ ಸೇತುವೆ ಕಾಮಗಾರಿಯ ಡಿಬಿ ಲಾಂಚ್ ಮೂಲಕ ಹಗ್ಗ ಕಟ್ಟಿಕೊಂಡು ಕೆಟ್ಟು ನಿಂತಿದ್ದ ಲಾಂಚ್ ದಡಕ್ಕೆ ತರುವಲ್ಲಿ ಯಶಸ್ವಿಯಾಗಿದ್ದಾರೆ. ಡಿಬಿ ಲಾಂಚ್ ಹೋಗಲು ಸ್ವಲ್ಪ ತಡವಾಗುತ್ತಿದ್ದರು ಸಹ ಕೆಟ್ಟು ನಿಂತಿದ್ದ ಲಾಂಚ್ ಪಕ್ಕದಲ್ಲೇ ನಿರ್ಮಾಣಗೊಳ್ಳುತ್ತಿರುವ ಸಿಗಂದೂರು ಬ್ರಿಜ್ ಕಂಬಕ್ಕೆ ಢಿಕ್ಕಿ ಹೊಡೆಯುವ ಸಾಧ್ಯತೆ ಇತ್ತು ಎಂದು ತಿಳಿದು ಬಂದಿದೆ.
ಒಟ್ಟಾರೆ ಡಿಬಿ ಲಾಂಚ್ ಸಿಬ್ಬಂದಿಗಳ ಸಮಯ ಪ್ರಜ್ಞೆಯಿಂದ ದೊಡ್ಡ ಅನಾಹುತ ಒಂದು ತಪ್ಪಿದ್ದಂತಾಗಿದೆ.
Next Story