ಹುಲಿಕಲ್ ಘಾಟ್‌ನಲ್ಲಿ ಕೆಟ್ಟು ನಿಂತ ಲಾರಿ; ಕಿ.ಮೀ ಗಟ್ಟಲೆ ಟ್ರಾಫಿಕ್ ಜಾಮ್

ಶಿವಮೊಗ್ಗ : ಹೊಸನಗರ ತಾಲೂಕಿನ ಹುಲಿಕಲ್ ಘಾಟ್‌ನ ಹೇರ್ ಪಿನ್ ತಿರುವಿನಲ್ಲಿ ಲಾರಿ ಕೆಟ್ಟು ನಿಂತಿರುವುದರಿಂದ ಮಧ್ಯರಾತ್ರಿಯಿಂದ ವಾಹನ ಸಂಚಾರ ಸ್ಥಗಿತಗೊಂಡಿದೆ.
ಭೂ ಕುಸಿತ ಉಂಟಾಗಿದ್ದ ಜಾಗದಲ್ಲಿರುವ ಹೇರ್ ಪಿನ್ ತಿರುವಿನಲ್ಲೇ ಲಾರಿ ಕೆಟ್ಟು ನಿಂತಿದೆ. ಇತರ ವಾಹನಗಳು ತಿರುವಿನಲ್ಲಿ ಸಾಗಲು ಸಾಧ್ಯವಾಗದೆ ರಸ್ತೆ ಬದಿಯಲ್ಲಿ ನಿಲ್ಲಿಸಲಾಗಿದೆ.
ಕಿಲೋ ಮೀಟರ್‌ಗಟ್ಟಲೆ ದೂರದವರೆಗೂ ವಾಹನಗಳು ಸರತಿ ಸಾಲಿನಲ್ಲಿ ನಿಂತಿವೆ, ಸ್ಥಳಕ್ಕೆ ಪೊಲೀಸರು ಹಾಗೂ ಅಧಿಕಾರಿಗಳು ಭೇಟಿ ನೀಡಿ ಟ್ರಾಫಿಕ್ ಜಾಮ್ ನಿಯಂತ್ರಿಸುತ್ತಿದ್ದಾರೆ.
Next Story





