MEIF ಕಾರ್ಯವ್ಯಾಪ್ತಿ ಶಿವಮೊಗ್ಗ ಜಿಲ್ಲೆಗೆ ವಿಸ್ತರಣೆ

ಶಿವಮೊಗ್ಗ: ಜಿಲ್ಲೆಯ ಒಟ್ಟು 30 ಮುಸ್ಲಿಮ್ ವಿದ್ಯಾ ಸಂಸ್ಥೆಗಳ ಆಡಳಿತ ಮಂಡಳಿಯ ಸಭೆಯು ಇಂದು ಶಿವಮೊಗ್ಗದ ಮಲ್ನಾಡ್ ಸ್ಕಿಲ್ ಸೆಂಟರ್ ನಲ್ಲಿ ಜರಗಿತು.
ಈ ಸಂದರ್ಭ MEIF ಶಿವಮೊಗ್ಗ ಘಟಕ ರಚಿಸಲಾಯಿತು. ಈ ಸಭೆಯಲ್ಲಿ MEIF ಅಧ್ಯಕ್ಷರಾದ ಮೂಸಬ್ಬ ಪಿ. ಬ್ಯಾರಿ, ಉಪಾಧ್ಯಕ್ಷರಾದ ಶಬೀ ಅಹ್ಮದ್ ಕಾಝಿ, ಕಾನ್ವಿನರ್ ಹೈದರ್ ಅನುಗ್ರಹ, ಸದಸ್ಯರುಗಳಾದ ರಝಾಕ್ ಗೋಳ್ತಮಜಲ್, ಶೈಖ್ ರಹ್ಮತುಲ್ಲಾಹ್ ಹಾಗೂ ಕೊಡಗು ಘಟಕದ ಸಲೀಂ ನಾಪೋಕ್ಲು ಭಾಗವಹಿಸಿದ್ದರು. ಒಟ್ಟು 18 ವಿದ್ಯಾ ಸಂಸ್ಥೆಗಳ ಪ್ರತಿನಿಧಿಗಳು ಈ ಸಭೆಯಲ್ಲಿ ಭಾಗವಹಿಸಿದ್ದರು.
Next Story





