ರಾಗಿಗುಡ್ಡ | ವ್ಯಕ್ತಿಯಿಂದ ಗಣೇಶ ವಿಗ್ರಹಕ್ಕೆ ಅಗೌರವ ಆರೋಪ; ಸ್ಥಳದಲ್ಲಿ ಗೊಂದಲದ ವಾತಾವರಣ ಸೃಷ್ಟಿ

ಶಿವಮೊಗ್ಗ: ವ್ಯಕ್ತಿಯೊಬ್ಬ ಗಣೇಶ ಮೂರ್ತಿಗೆ ಅಗೌರವ ತೋರಿರುವ ಆರೋಪ ಕೇಳಿ ಬಂದಿದ್ದು, ಶಿವಮೊಗ್ಗ ಜಿಲ್ಲೆಯ ರಾಗಿಗುಡ್ಡದ ಶಾಂತಿನಗರದ ಬಂಗಾರಪ್ಪ ಬಡಾವಣೆಯಲ್ಲಿ ಶನಿವಾರ ಸಂಜೆ ಈ ಘಟನೆ ನಡೆದಿದೆ. ಘಟನೆಯಿಂದ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.
ಬಡಾವಣೆಯ ಮುಖ್ಯ ರಸ್ತೆಯಲ್ಲಿ ಇತ್ತೀಚಿಗೆ ಪ್ರತಿಷ್ಠಾಪನೆ ಮಾಡಿದ ಗಣಪತಿ ವಿಗ್ರಹ ಹಾಗೂ ನಾಗದೇವರ ವಿಗ್ರಹಕ್ಕೆ ವ್ಯಕ್ತಿಯೊಬ್ಬ ಅಗೌರವ ತೋರಿದ್ದಾನೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ವಿಚಾರ ತಿಳಿದ ಕೂಡಲೇ ಸ್ಥಳಕ್ಕೆ ಎಸ್ಪಿ ಮಿಥುನ್ ಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಈ ವೇಳೆ ಮಾತನಾಡಿದ ಎಸ್ಪಿ ಮಿಥುನ್ ಕುಮಾರ್ ಅವರು, ಹಿಂದೂ ದೇವರುಗಳಿಗೆ ಅಗೌರವ ತೋರಲಾಗಿದೆ ಎಂದು ಸ್ಥಳೀಯರು ಹೇಳುತ್ತಿದ್ದಾರೆ. ಈ ಬಗ್ಗೆ ಪರಿಶೀಲನೆ ನಡೆಸುತ್ತೇವೆ, ವಿಗ್ರಹ ಇದ್ದ ಸ್ಥಳದಲ್ಲೇ ಇದೆ. ಯಾರು ತಪ್ಪಿತಸ್ಥ ಇದ್ದಾರೆ ಅವರನ್ನು ಬಂಧಿಸುತ್ತೇವೆ. ಸ್ಥಳದಲ್ಲಿ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ, ಪರಿಸ್ಥಿತಿ ತಿಳಿಗೊಳಿಸಿದ್ದೇವೆ ಎಂದರು
Next Story