Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಜಿಲ್ಲೆಗಳು
  3. ಶಿವಮೊಗ್ಗ
  4. ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ: ಮತ್ತೆ...

ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ: ಮತ್ತೆ ಸಂತ್ರಸ್ತರಾಗುವ ಭೀತಿಯಲ್ಲಿ ತಲಕಳಲೆ ನಿವಾಸಿಗಳು

ಶರತ್ ಪುರದಾಳ್ಶರತ್ ಪುರದಾಳ್17 July 2025 10:54 AM IST
share
ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ: ಮತ್ತೆ ಸಂತ್ರಸ್ತರಾಗುವ ಭೀತಿಯಲ್ಲಿ ತಲಕಳಲೆ ನಿವಾಸಿಗಳು

ಶಿವಮೊಗ್ಗ, ಜು.16: ತಲಕಳಲೆ ಮೂಲ ನಿವಾಸಿಗಳು ಒಂದಲ್ಲ ಎರಡು ಸಲ ನಿರಾಶ್ರಿತರಾಗುವ ಭೀತಿ ಎದುರಾಗಿದೆ. ಇವರ ಪೂರ್ವಜರು ತಲಕಳಲೆ ಅಣೆಕಟ್ಟೆಯಿಂದ ನೆಲೆ ಕಳೆದುಕೊಂಡಿದ್ದರೆ, ಇವರು ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಯಿಂದ ಭೂಮಿ,ಮನೆ-ಮಠ ಕಳೆದುಕೊಂಡು ಸಂತ್ರಸ್ತರಾಗುವ ಪರಿಸ್ಥಿತಿ ನಿರ್ಮಾಣವಾಗಿದೆ.

ಹೌದು, ರಾಜ್ಯ ಸರಕಾರ ಶರಾವತಿ ಕಣಿವೆಯ ಸಿಂಹ ಬಾಲದ ಸಿಂಗಳಿಕ ಅಭಯಾರಣ್ಯದಲ್ಲಿ 8,644 ಕೋಟಿ ರೂ. ಹೂಡಿಕೆ ಮಾಡಿ ಸುಮಾರು 2,000 ಮೆಗಾ ವ್ಯಾಟ್ ವಿದ್ಯುತ್ ಉತ್ಪಾದನೆ ಗುರಿ ಹೊಂದಿರುವ ಪಂಪ್ಡ್ ಸ್ಟೋರೇಜ್ ಇಲ್ಲಿನ ಜನರಿಗೆ ಪೆಡಂಭೂತದಂತೆ ಕಾಡುತ್ತಿದೆ. ತಳಕಳಲೆ ಮತ್ತು ಗೇರುಸೊಪ್ಪ ಜಲಾಶಯಗಳ ನೀರನ್ನು ಮರುಬಳಕೆ ಮಾಡಿಕೊಂಡು ವಿದ್ಯುತ್ ಉತ್ಪಾದನೆ ಮಾಡಲುದ್ದೇಶಿಸಿರುವ ಈ ಯೋಜನೆ ದೇಶದ ಅತಿದೊಡ್ಡ ಪಂಪ್ಡ್ ಸ್ಟೋರೇಜ್ ಜಲಸ್ಥಾವರ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ. ಈ ದೊಡ್ಡ ಯೋಜನೆಯಿಂದ ಶರಾವತಿ ಕಣಿವೆಯ ಸಿಂಹ ಬಾಲದ ಸಿಂಗಳಿಕ ಅಭಯಾರಣ್ಯದ ಪರಿಮಿತಿಯಲ್ಲಿರುವ ಹೆನ್ನಿ, ಮರಾಠಿ ಕ್ಯಾಂಪ್, ಗುಂಡಿಬೈಲು ಮತ್ತು ಜಡಗಲ್ಲು ನಿವಾಸಿಗಳು ಮತ್ತೊಮ್ಮೆ ಸ್ಥಳಾಂತರಗೊಳ್ಳುವ ಭೀತಿ ಎದುರಾಗಿದೆ.

50 ವರ್ಷಗಳ ಹಿಂದೆ ತಳಕಳಲೆ ಅಣೆಕಟ್ಟೆಯಿಂದ ನೆಲೆ ಕಳೆದುಕೊಂಡ ಹಲವು ಕುಟುಂಬಗಳು, ಶರಾವತಿ ಕಣಿವೆಯ ಸಿಂಹ ಬಾಲದ ಸಿಂಗಳಿಕ ಅಭಯಾರಣ್ಯದ ಪರಿಮಿತಿಯಲ್ಲಿನ ಹೆನ್ನಿ, ಮರಾಠಿ ಕ್ಯಾಂಪ್, ಗುಂಡಿಬೈಲು ಮತ್ತು ಜಡಗಲ್ಲು ಪ್ರದೇಶದಲ್ಲಿ ನೆಲೆಕಂಡುಕೊಂಡಿದ್ದರು. ಇದೀಗ ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಯಿಂದ ನಿರಾಶ್ರಿತರಾಗುವ ಆತಂಕ ಶುರುವಾಗಿದೆ. ಶಿವಮೊಗ್ಗ ಜಿಲ್ಲಾ ಕೇಂದ್ರದಿಂದ 155 ಕಿ.ಮೀ. ದೂರದಲ್ಲಿರುವ ಸಾಗರ ತಾಲೂಕಿನ ತಲಕಳಲೆ ಅಣೆಕಟ್ಟು ಬಳಿಯ ಗುಂಡಿಬೈಲು-ಮರಾಠಿ ಶಿಬಿರದ ನಿವಾಸಿಗಳಿಗೆ ನೋಟಿಸ್ ಬಂದಿದೆ.

ಈಗಾಗಲೇ ಸಾಗರ ಉಪವಿಭಾಗಾಧಿಕಾರಿ ನೇತೃತ್ವದಲ್ಲಿ ಅಧಿಕಾರಿಗಳ ತಂಡ ಗುಂಡಿಬೈಲು-ಮರಾಠಿ ಶಿಬಿರದ ಸುಮಾರು 12 ಮನೆಗಳು ಮತ್ತು ಸಂಬಂಧಿತ ಆಸ್ತಿಗಳನ್ನು ಸ್ವಾಧೀನಪಡಿಸಿಕೊಳ್ಳಲು ಯೋಜಿಸಿದೆ. ಶರಾವತಿ ಕಣಿವೆಯ ಸಿಂಹದ ಬಾಲದ ಸಿಂಗಳಿಕ ಅಭಯಾರಣ್ಯದಲ್ಲಿ ಅನುಷ್ಠಾನಗೊಳ್ಳಲಿರುವ ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಗೆ ಕೆಲ ಷರತ್ತುಗಳನ್ನು ಪಾಲಿಸಿ ಯೋಜನೆ ಅನುಷ್ಠಾನಗೊಳಿಸುವಂತೆ ರಾಷ್ಟ್ರೀಯ ವನ್ಯಜೀವಿ ಮಂಡಳಿ ತಾತ್ವಿಕ ಅನುಮೋದನೆ ನೀಡಿದೆ. ಕೇಂದ್ರ ಅರಣ್ಯ ಸಚಿವ ಭೂಪೆಂದರ್ ಯಾದವ್ ಅಧ್ಯಕ್ಷತೆಯಲ್ಲಿ ಹೊಸದಿಲ್ಲಿಯಲ್ಲಿ ನಡೆದ ವನ್ಯಜೀವಿ ಮಂಡಳಿಯ ಸ್ಥಾಯಿ ಸಮಿತಿಯ 84ನೇ ಸಭೆಯಲ್ಲಿ ತಾತ್ವಿಕ ಅನುಮೋದನೆ ನೀಡಿದೆ. ಹೀಗಾಗಿ ಅರಣ್ಯ ಇಲಾಖೆಯು ಸ್ಥಳೀಯ ನಿವಾಸಗಳ ಬಳಿಯ ಮರಗಳನ್ನು ಗುರುತಿಸಿದೆ. ಅಲ್ಲದೆ ಪರಿಹಾರ ಇತ್ಯರ್ಥಕ್ಕೆ ಸಂಬಂಧಿಸಿದಂತೆ ಸಾಗರ ತಾಲೂಕು ಆಡಳಿತವು ಇಲ್ಲಿನ ನಿವಾಸಿಗಳಿಗೆ ಮೂರು ನೋಟಿಸ್ಗಳನ್ನು ನೀಡಿದೆ. ಸಾಗರ ಶಾಸಕ ಗೋಪಾಲಕೃಷ್ಣ ಬೇಳೂರು ನೇತೃತ್ವದಲ್ಲಿ ಶರಾವತಿ ಪಂಪ್ಡ್ ಸ್ಟೋರೇಜ್ಗೆ ಭೂಮಿ ನೀಡುವ ಸಂತ್ರಸ್ತರ ಸಭೆ ನಡೆಸಿ ಅವರ ಬೇಡಿಕೆಗಳನ್ನು ಈಡೇರಿಸುವ ಜತೆಗೆ ಕೆಪಿಸಿಯಲ್ಲಿ ಅವರಿಗೆ ಉದ್ಯೋಗ ನೀಡುವ ಅಶ್ವಾಸನೆಯನ್ನು ನೀಡಲಾಗಿದೆ.

ರೈತರ ವಿರೋಧ: ಶಾಸಕ ಗೋಪಾಲಕೃಷ್ಣ ಬೇಳೂರು ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಪರಿಹಾರ ನಿಗದಿ ನ್ಯಾಯಯುತವಾಗಿಲ್ಲ ಎಂದು ಶರಾವತಿ ಪಂಪ್ಡ್ ಸ್ಟೋರೇಜ್ಗೆ ಭೂಮಿ ನೀಡುವ ಸಂತ್ರಸ್ತರು ವಿರೋಧ ವ್ಯಕ್ತಪಡಿಸಿದ್ದಾರೆ.

ಗುಂಡಿಬೈಲು ಮರಾಠಿ ಕ್ಯಾಂಪ್ ನಿವಾಸಿ, ಸಂತ್ರಸ್ತ ರೈತ ಸಂತೋಷ್ ಮಾತನಾಡಿ, ಪರಿಹಾರ ನಿಗಧಿ ವೈಜ್ಞಾನಿಕವಾಗಿಲ್ಲ. ನನ್ನದು 500 ಅಡಿಕೆ ಮರವಿದೆ. ಫಸಲಿನ ಮೇಲೆ ಪರಿಹಾರ ನಿಗದಿ ಮಾಡಲಿ. ಫಸಲಿನ ಮೇಲೆ ಪರಿಹಾರ ನಿಗದಿ ಮಾಡಿದರೆ ಹೆಚ್ಚು ಕಡಿಮೆ 2 ಕೋಟಿ ರೂ. ಪರಿಹಾರ ನೀಡಬೇಕಾಗುತ್ತದೆ. ಇಷ್ಟೆಲ್ಲಾ ಕೊಡುವುದಕ್ಕೆ ಆಗುವುದಿಲ್ಲ. ಇದು ಅರಣ್ಯ ಇಲಾಖೆ ಜಾಗ ಅಂತ ಅಧಿಕಾರಿಗಳು ಹೇಳುತ್ತಾರೆ. ಸಾವಿರಾರು ಕೋಟಿ ರೂ. ವೆಚ್ಚದ ಈ ಯೋಜನೆಯಲ್ಲಿ ಕೇವಲ 11 ಕುಟುಂಬಗಳಿಗೆ ಉದ್ಯೋಗ, ಜಾಗ ನೀಡಲು ಸಾಧ್ಯವಿಲ್ಲ ಎಂದಾದರೆ ನಮ್ಮ ಪರಿಸ್ಥಿತಿ ಏನಾಗಬೇಕು.ಇದೇ ಜಮೀನು ನೆಚ್ಚಿಕೊಂಡು ಜೀವನ ನಡೆಸುತ್ತಿದ್ದೇವೆ ಎಂದು ಅವಲತ್ತುಕೊಂಡರು.

ನಮಗೆ ವಸತಿ, ಮಕ್ಕಳಿಗೆ ಉದ್ಯೋಗ, ಬೆಳೆಗೆ ಹಾಗೂ ಕಟ್ಟಿಕೊಂಡಿರುವ ಮನೆ-ಕೊಟ್ಟಿಗೆಗೆ ವೈಜ್ಞಾನಿಕ ಪರಿಹಾರ ನೀಡದರೆ ಮಾತ್ರ ಜಾಗ ಬಿಟ್ಟುಕೊಡುತ್ತೇವೆ. ಇಲ್ಲ ಎಂದಾದರೆ ಕಾನೂನು ಹೋರಾಟ ನಡೆಸುತ್ತೇವೆ ಎಂದು ಎಚ್ಚರಿಸಿದರು.

ಇನ್ನೋರ್ವ ನಿವಾಸಿ ಮಂಜುನಾಥ ಮರಾಠಿ ಮಾತನಾಡಿ, ನಮ್ಮ ಬದುಕು ನೋಡಿದರೆ ಕಣ್ಣೀರು ಬರುತ್ತದೆ. ನಮ್ಮ ಹಿಂದಿನ ತಲೆಮಾರು ತಳಕಳಲೆ ಅಣೆಕಟ್ಟು ನಿಂತ ಮುಳುಗಡೆಯಾಗಿತ್ತು. ಈಗ ಶರಾವತಿ ಪಂಪ್ಡ್ ಯೋಜನೆಯಿಂದ ನಿರಾಶ್ರಿತರಾಗುತ್ತಿದ್ದೇವೆ. ಈ ಯೋಜನೆಯಿಂದ ಗುಂಡಿಬೈಲು ಮರಾಠಿ ಕ್ಯಾಂಪಿನ 8 ಮನೆಗಳು ಕಳೆದುಕೊಳ್ಳಲಿದ್ದೇವೆ.ಸಭೆಯಲ್ಲಿ ಅಧಿಕಾರಿಗಳು ಸರಿಯಾದ ಮಾಹಿತಿ ನೀಡುತ್ತಿಲ್ಲ. ಮನೆಗೆ ಹಕ್ಕು ಪತ್ರವಿದೆ. ಕಂದಾಯ ಕಟ್ಟುತ್ತಿದ್ದೇವೆ. ಈಗಾಗಲೇ 11 ಮನೆಗಳಿಗೆ ನೋಟಿಸ್ ಕೊಟ್ಟಿದ್ದಾರೆ ಎಂದು ಹೇಳಿದರು.

ನನಗೆ ಮೂರು ಜನ ಮಕ್ಕಳು. ಇರುವ 1.5 ಎಕರೆ ಜಮೀನಿನಲ್ಲಿ ಅಡಿಕೆ, ಕಾಳು ಮೆಣಸು, ಏಲಕ್ಕಿ, ಗೇರು ಬೆಳೆದಿದ್ದೇನೆ. ಬಗರ್ ಹುಕುಂ ಸಾಗುವಳಿ ಮಾಡುತ್ತಿದ್ದೇವೆ. ಇದಕ್ಕೆ ಪರಿಹಾರ ಕೊಡಲ್ಲ ಅಂತಿದ್ದಾರೆ. ನಮ್ಮ ಮಕ್ಕಳಿಗೆ ಉದ್ಯೋಗ, ವಾಸಕ್ಕೆ ಮನೆ ಕಟ್ಟಿಕೊಡಬೇಕು. ನಾವು ಕೇಳಿದಷ್ಟು ಪರಿಹಾರ ಕೊಡಬೇಕು. ಇಲ್ಲದಿದ್ದರೆ ಕಾನೂನು ಹೋರಾಟ ನಡೆಸುತ್ತೇವೆ ಎಂದರು.

ಸರಕಾರ ಏನು ಮಾಡುತ್ತೆ ಅಂತ ಗೊತ್ತಾಗುತ್ತಿಲ್ಲ. ಜಾಗ ಬಿಟ್ಟು ಎಲ್ಲಿ ಹೋಗುವುದು. ಅಜ್ಜಂದಿರು ಮಾಡಿಟ್ಟಿರುವ ಆಸ್ತಿ, ಅದನ್ನು ಬಿಟ್ಟು ನಾವು ಹೋಗಲು ಆಗಲ್ಲ. ಸರಕಾರ ಪರಿಹಾರ ಕೊಡುತ್ತದೆ ಎಂದು ಹೇಳುತ್ತದೆ. ಅಂತ,ನಾವು ಎಲ್ಲಿಗೆ ಹೋಗುವುದು ಎಂದು ಮರಾಠಿ ಕ್ಯಾಂಪ್ನ ನಿವಾಸಿ ರಾಮ ಪ್ರಶ್ನಿಸಿದರು.

ಕೆಪಿಸಿ ಪ್ರೌಢಶಾಲೆಯಲ್ಲಿ ಎಸೆಸೆಲ್ಸಿ ಪೂರೈಸಿದ್ದು, ಆರ್ಥಿಕ ತೊಂದರೆಗಳಿಂದಾಗಿ ಶಿಕ್ಷಣವನ್ನು ಸ್ಥಗಿತಗೊಳಿಸಿದ್ದೇನೆ. ಇಲ್ಲಿನ ಮಕ್ಕಳು ಎಸೆಸೆಲ್ಸಿಗೆ ಶಿಕ್ಷಣವನ್ನು ಮೊಟಕುಗೊಳಿಸತ್ತಾರೆ. ಅಜ್ಜ, ತಾತ ಮಾಡಿದ ಆಸ್ತಿಯನ್ನು ಕಳೆದುಕೊಳ್ಳುವ ಆತಂಕವಿದೆ. ಅಧಿಕಾರಿಗಳು ಬಂದು ಮರಗಳಿಗೆ ನಂಬರ್ ಹಾಕಿದ್ದಾರೆ. ರಾತ್ರಿ ಮಲಗಿದರೆ ನಿದ್ದೆ ಬರುವುದಿಲ್ಲ.

-ಶಿವಾನಂದ, ಸಂತೋಷ್ ಪುತ್ರ

ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಗೆ ಸ್ಥಳೀಯ ಜನರ ಸುಮಾರು 8 ಎಕರೆ ಜಾಗವನ್ನು ಬಳಸಿಕೊಳ್ಳಲಾಗುವುದು. ರೈತರ ಭೂಮಿಗೆ ಹೆಚ್ಚಿನ ಹಾನಿಯಾಗುವುದಿಲ್ಲ. ಯೋಜನೆಗೆ ಭೂಮಿ ನೀಡುವ ರೈತರಿಗೆ ಸರಕಾರದಿಂದ ಉದ್ಯೋಗ ನೀಡಲಾಗುವುದು.

-ಗೋಪಾಲಕೃಷ್ಣ ಬೇಳೂರು, ಸಾಗರ ಶಾಸಕ

ಪರಿಸರಾಸಕ್ತರ ವಿರೋಧ

ಪರಿಸರ ವಿರೋಧಿ ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಗೆ ಪರಿಸರಾಸಕ್ತರು ಸೇರಿದಂತೆ ಮಲೆನಾಡಿನಲ್ಲಿ ತೀವ್ರ ವಿರೋಧ ವ್ಯಕ್ತವಾಗಿದೆ. ಈ ಅಭಯಾರಣ್ಯದಲ್ಲಿ 700ಕ್ಕೂ ಹೆಚ್ಚು ಸಿಂಹದ ಬಾಲದ ಸಿಂಗಳಿಕಗಳಿವೆ. ಇಷ್ಟೊಂದು ಸಿಂಗಳಿಕಗಳು ಬೇರೆ ಯಾವುದೇ ಸಂರಕ್ಷಿತ ಪ್ರದೇಶದಲ್ಲಿ ಇಲ್ಲ. ಈ ಯೋಜನೆಗೆ 352.77 ಎಕರೆ ಜಮೀನು ಅಗತ್ಯವಿದೆ. ಅದರಲ್ಲಿ 133.81 ಎಕರೆ ಅರಣ್ಯ ಭೂಮಿಯಾಗಿದೆ. ಹೀಗಾಗಿ ಪರಿಸರವಾದಿಗಳು ತೀವ್ರ ವಿರೋಧ ವ್ಯಕ್ತಪಡಿಸುತ್ತಿದ್ದಾರೆ.

share
ಶರತ್ ಪುರದಾಳ್
ಶರತ್ ಪುರದಾಳ್
Next Story
X