ಸಾಗರ | ಕೆಎಸ್ಸಾರ್ಟಿಸಿ ಬಸ್ -ಶಾಲಾ ವಾಹನ ಮುಖಾಮುಖಿ ಢಿಕ್ಕಿ: ಹಲವರಿಗೆ ಗಾಯ

ಸಾಗರ: ಕೆಎಸ್ಸಾರ್ಟಿಸಿ ಬಸ್ ಮತ್ತು ಶಾಲಾ ಬಸ್ ಮುಖಾಮುಖ ಢಿಕ್ಕಿಯಾಗಿ ಹಲವು ಮಂದಿ ಗಾಯಗೊಂಡ ಘಟನೆ ತಾಲೂಕಿನ ಇಡುವಾಣಿ ಬಳಿ ಗುರುವಾರ ಬೆಳಗ್ಗೆ ಸಂಭವಿಸಿದೆ.
ಓರ್ವ ವಿದ್ಯಾರ್ಥಿ, ಎರಡು ವಾಹನಗಳ ಚಾಲಕ ಸಹಿತ ಹಲವು ಪ್ರಯಾಣಿಕರು ಗಾಯಗೊಂಡಿದ್ದಾರೆ.
ಸಾಗರದಿಂದ ಕಾರ್ಗಲ್ ಮಾರ್ಗವಾಗಿ ಸಿಗಂದೂರಿಗೆ ತೆರಳುತ್ತಿದ್ದ ಕೆಎಸ್ಸಾರ್ಟಿಸಿ ಬಸ್ ಮತ್ತು ಖಾಸಗಿ ಶಾಲೆ ಬಸ್ ಮಧ್ಯೆ ಸಂಭವಿಸಿದೆ.
ಗಾಯಾಳುಗಳನ್ನು ಸಾಗರದ ಉಪವಿಭಾಗೀಯ ಆಸ್ಪತ್ರೆಗೆ ದಾಖಲು ಮಾಡಿ ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗಕ್ಕೆ ರವಾನಿಸಲಾಗಿದೆ.
ಘಟನೆಯಲ್ಲಿ ಎರಡು ಬಸ್ ಗಳ ಮುಂಭಾಗ ಜಖಂಗೊಂಡಿದ್ದು, ಗಾಜುಗಳು ಒಡೆದಿವೆ.
Next Story







