ಸಾಗರ : ಆಕ್ಸೆಲ್ ಬ್ಲೇಡ್ ಕಟ್ ಆಗಿ KSRTC ಬಸ್ ಪಲ್ಟಿ

ಸಾಗರ : ಚಲಿಸುತ್ತಿದ್ದ ಕೆಎಸ್ಸಾರ್ಟಿಸಿ ಬಸ್ಸಿನ ಆಕ್ಸೆಲ್ ಬ್ಲೇಡ್ ಕಟ್ ಆಗಿ ಬಸ್ ಅಪಘಾಕ್ಕೀಡಾಗಿರುವ ಘಟನೆ ರಾಷ್ಟ್ರೀಯ ಹೆದ್ದಾರಿ 69ರ ಬಾಪಟ್ ಕಲ್ಯಾಣ ಮಂದಿರದ ಬಳಿ ರವಿವಾರ ಬೆಳಗಿನ ಜಾವ ನಡೆದಿದೆ.
ಬೆಂಗಳೂರಿನಿಂದ ಸಾಗರಕ್ಕೆ ಬರುತ್ತಿದ್ದ ವೇಳೆ ಕೆಎಸ್ಸಾರ್ಟಿಸಿ ಬಸ್ನ ಆಕ್ಸೆಲ್ ಬ್ಲೇಡ್ ಕಟ್ ಆಗಿ ಟೈರ್ ಕಳಚಿದೆ.ಈ ವೇಳೆ ಬಸ್ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿ ಹೊಡೆದಿದೆ.
ಇದರಿಂದ ಬಸ್ನ ಕೆಲಭಾಗ ಜಖಂಗೊಂಡಿದ್ದು ಚಾಲಕ, ನಿರ್ವಾಹಕ ಹಾಗೂ ಆರು ಪ್ರಯಾಣಿಕರು ಗಾಯಗೊಂಡಿದ್ದಾರೆ. ಗಾಯಾಳುಗಳಿಗೆ ಸಾಗರದ ಉಪ ವಿಭಾಗೀಯ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಸ್ಥಳಕ್ಕೆ ಪೇಟೆ ಠಾಣೆ ಪೋಲೀಸರು ಭೇಟಿ ನೀಡಿದ್ದಾರೆ.
Next Story




