ಶಿವಮೊಗ್ಗ: ಮಗುವಿಗೆ ಜನ್ಮ ನೀಡಿದ 9ನೇ ತರಗತಿಯ ವಿದ್ಯಾರ್ಥಿನಿ

ಶಿವಮೊಗ್ಗ: 15 ವರ್ಷದ ಬಾಲಕಿಯೊಬ್ಬಳು ಗರ್ಭಿಣಿಯಾಗಿ ಮಗುವಿಗೆ ಜನ್ಮ ಕೊಟ್ಟಿರುವ ಘಟನೆ ಶಿವಮೊಗ್ಗ ಜಿಲ್ಲೆಯಲ್ಲಿ ನಡೆದಿದೆ.
9ನೇ ತರಗತಿ ಓದುತ್ತಿರುವ ಬಾಲಕಿ ಹೊಟ್ಟೆ ನೋವೆಂದು ಶಾಲೆಗೆ ರಜೆ ಹಾಕಿದ್ದಳು. ಎರಡು ದಿನದ ಬಳಿಕ ಬಾಲಕಿ ಮನೆಯಲ್ಲೇ ಮಗುವಿಗೆ ಜನ್ಮ ನೀಡಿದ್ದಾಳೆ. ತಕ್ಷಣ ಕುಟುಂಬಸ್ಥರು ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಿದ್ದು ಮಗುವನ್ನು ರಕ್ಷಿಸಿ ಚಿಕಿತ್ಸೆ ನೀಡಿದ್ದಾರೆ. ವೈದ್ಯರ ಪ್ರಕಾರ 7 ತಿಂಗಳಿಗೆ ಜನ್ಮ ನೀಡಿದ್ದು ಮಗು 1.8 ಕೆಜಿ ಇದ್ದು ಯಾವುದೇ ಆರೋಗ್ಯ ಸಮಸ್ಯೆ ಕಂಡು ಬಂದಿಲ್ಲ.
ಬಾಲಕಿ ಮಗುವಿಗೆ ಜನ್ಮ ನೀಡುತ್ತಲೇ ತಂದೆ, ತಾಯಿ ದಿಗ್ಭ್ರಾಂತರಾಗಿದ್ದಾರೆ.ಘಟನೆ ಬೆಳಕಿಗೆ ಬಂದ ಬೆನ್ನಲ್ಲೇ, ಮಕ್ಕಳ ರಕ್ಷಣಾ ಘಟಕ, ಮಕ್ಕಳ ಕಲ್ಯಾಣ ಸಮಿತಿ ಹಾಗೂ ಪೊಲೀಸರು ಅಲರ್ಟ್ ಆಗಿದ್ದು,ಘಟನೆ ಸಂಬಂಧ ಬಾಲಕಿಯನ್ನು ವಿಚಾರಣೆ ನಡೆಸಿ ಮಾಹಿತಿ ಕಲೆ ಹಾಕುತ್ತಿದ್ದಾರೆ. ಪೊಲೀಸರ ಮುಂದೆ ಗೊಂದಲದ ಹೇಳಿಕೆಯನ್ನು ಬಾಲಕಿ ನೀಡುತ್ತಿದ್ದಾಳೆ ಎನ್ನಲಾಗಿದೆ
ಮಕ್ಕಳ ಕಲ್ಯಾಣ ಸಮಿತಿ ಬಾಲಕಿಯನ್ನು ಇಂದು ಕೌನ್ಸೆಲಿಂಗ್ ನಡೆಸಲಿದ್ದಾರೆಂದು ತಿಳಿದುಬಂದಿದೆ. ಮಕ್ಕಳ ಕಲ್ಯಾಣ ಸಮಿತಿಯು ಬಾಲಕಿ ಹಾಗೂ ಮಗುವಿನ ಮೇಲೆ ತೀವ್ರ ನಿಗಾ ಇಟ್ಟಿದೆ.







