ಶಿವಮೊಗ್ಗ | ಹೊಸನಗರದಲ್ಲಿ 10 ಮಂದಿಗೆ ಮಂಗನ ಕಾಯಿಲೆ ಪಾಸಿಟಿವ್

ಸಾಂದರ್ಭಿಕ ಚಿತ್ರ
ಶಿವಮೊಗ್ಗ: ಹೊಸನಗರ ತಾಲ್ಲೂಕಿನಲ್ಲಿ ಕೆಎಫ್ಡಿ ವೈರಸ್ ವೇಗವಾಗಿ ಹರಡುತ್ತಿದ್ದು, ಈವರೆಗೆ ಒಟ್ಟು 10 ಮಂದಿ ಪಾಸಿಟಿವ್ ಗೆ ಒಳಗಾಗಿದ್ದಾರೆ.
ಸೊನಲೆ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯಲ್ಲಿ ಮೊದಲು ಪ್ರಕರಣ ದಾಖಲಾಗಿತ್ತು. ಇದಕ್ಕೆ ಮತ್ತೆರಡು ಪ್ರಕರಣ ಸೇರ್ಪಡೆಯಾಗಿದೆ. ಬಿಳ್ಳೊಡಿ ಸಮೀಪದ ಅರಳಸುರಳಿಯಲ್ಲಿ 2 ಪ್ರಕರಣ ಪತ್ತೆಯಾಗಿದೆ. ಒಟ್ಟು 10 ಪ್ರಕರಣಗಳು ವರದಿಯಾಗಿದ್ದು, ಎಲ್ಲರೂ 50ರಿಂದ 60 ವರ್ಷ ವಯೋಮಾನದವರಾಗಿದ್ದಾರೆ.
Next Story





