Shivamogga | ಜಿಂಕೆ ಮಾಂಸ ಮಾರಾಟ; ಮೂವರು ಆರೋಪಿಗಳ ಬಂಧನ

ಶಿವಮೊಗ್ಗ : ಜಿಂಕೆ ಮಾಂಸ ತಂದು ಮಾರಾಟ ಮಾಡುತ್ತಿದ್ದ ಮೂವರು ಆರೋಪಿ ಹಾಗೂ 20 ಕೆ.ಜಿ ಜಂಕೆ ಮಾಂಸವನ್ನು ಭದ್ರಾವತಿ ವಿಭಾಗದ ಅರಣ್ಯ ಇಲಾಖೆ ಸಿಬ್ಬಂದಿ ವಶಕ್ಕೆ ಪಡೆದಿದ್ದಾರೆ.
ಕಾಚಗೊಂಡನಹಳ್ಳಿಯ ಅರುಮುಗ ಪ್ರಮುಖ ಆರೋಪಿಯಾಗಿದ್ದು ನಾಪತ್ತೆಯಾಗಿದ್ದಾನೆ. ಸೀಗೆಬಾಗಿಯ ಮುನ್ನ, ಸುರಗಿತೋಪಿನ ಚಂದ್ರಶೇಖರ್, ಹೊಸಸಿದ್ದಾಪುರ ಮೂರ್ತಿ ಬಂಧಿತರು. ಜಿಂಕೆ ಬೇಟೆಯಾಡಿ ಮಾಂಸ ತಂದು ಮಾರುತ್ತಿದ್ದ ಖಚಿತ ಮಾಹಿತಿ ಮೇರೆಗೆ ಅರಣ್ಯ ಇಲಾಖೆ ಸಿಬ್ಬಂದಿ ದಾಳಿ ನಡೆಸಿ ಮಿಲಿಟರಿ ಕ್ಯಾಂಪ್, ಬಸ್ ನಿಲ್ದಾಣ, ಸಂತೆ ಮೈದಾನದ ಬಳಿ ಮಾಂಸದ ಜತೆಗೆ ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರಿಂದ ಅಂದಾಜು 20 ಕೆ.ಜಿ ಮಾಂಸ ವಶಕ್ಕೆ ಪಡೆಯಲಾಗಿದೆ. ಪ್ರಮುಖ ಆರೋಪಿ ಅರುಮುಗ ಸಿಕ್ಕರೆ ಬೇಟೆಯಾಡಿದ ಪ್ರದೇಶ, ಇತರೆ ವಿಚಾರಗಳು ತಿಳಿಯಲಿವೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
Next Story




