Shivamogga: ಅಜ್ಜಿಯನ್ನು ಭೀಕರವಾಗಿ ಹತ್ಯೆಗೈದ ಮೊಮ್ಮಗ

ಶಿವಮೊಗ್ಗ : ನಡು ರಸ್ತೆಯಲ್ಲಿಯೇ ಮೊಮ್ಮಗನೋರ್ವ ಸ್ವಂತ ಅಜ್ಜಿಯ ತಲೆ ಮೇಲೆ ಸೈಜ್ ಕಲ್ಲು ಎತ್ತಿ ಹಾಕಿ ಭೀಕರವಾಗಿ ಕೊಲೆ ಮಾಡಿರುವ ಘಟನೆ, ಶಿವಮೊಗ್ಗ ನಗರದ ಮಿಳಘಟ್ಟ ಸಮೀಪದ ಆನಂದರಾವ್ ಬಡಾವಣೆಯಲ್ಲಿ ನಡೆದಿರುವುದಾಗಿ ವರದಿಯಾಗಿದೆ.
ಸುಶೀಲಮ್ಮ (65) ಕೊಲೆಗೀಡಾದವರು, ಕಿಶೋರ (28) ಕೊಲೆಗೈದ ಆರೋಪಿ ಎಂದು ತಿಳಿದು ಬಂದಿದೆ.
ಆರೋಪಿ ಮೊಮ್ಮಗ ಗಾಂಜಾ ವ್ಯಸನಿಯಾಗಿದ್ದ. ಈ ಬಗ್ಗೆ ಅಜ್ಜಿ ಪೊಲೀಸರಿಗೆ ದೂರು ನೀಡಲು ತೆರಳುತ್ತಿದ್ದರು. ಇದರಿಂದ ಆಕ್ರೋಶಗೊಂಡ ಮೊಮ್ಮಗ ಕಿಶೋರ ರಸ್ತೆಯಲ್ಲಿಯೇ ಅಜ್ಜಿಯ ತಲೆ ಮೇಲೆ ಸೈಜ್ ಕಲ್ಲನ್ನು ಎತ್ತಿ ಹಾಕಿದ್ದ. ತೀವ್ರ ರಕ್ತಸ್ರಾವದಿಂದ ಸುಶೀಲಮ್ಮ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಘಟನಾ ಸ್ಥಳಕ್ಕೆ ಎಸ್ಪಿ ನಿಖಿಲ್ ಬಿ. ಸೇರಿದಂತೆ ದೊಡ್ಡಪೇಟೆ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
Next Story




