ಶಿವಮೊಗ್ಗ | ಹಸುವಿಗೆ ಢಿಕ್ಕಿಯಾಗುವುದನ್ನು ತಪ್ಪಿಸಲು ಹೋಗಿ ಮಿನಿ ಬಸ್ ಪಲ್ಟಿ; ಪ್ರವಾಸಿಗರು ಅಪಾಯದಿಂದ ಪಾರು

ಶಿವಮೊಗ್ಗ : ರಸ್ತೆಗೆ ಅಡ್ಡ ಬಂದ ಹಸುವಿಗೆ ಢಿಕ್ಕಿಯಾಗುವುದನ್ನು ತಪ್ಪಿಸಲು ಹೋಗಿ ಮಿನಿ ಬಸ್ ಪಲ್ಟಿಯಾದ ಘಟನೆ ಶಿವಮೊಗ್ಗ ತಾಲೂಕು ಕೆಳಕಿನ ಕುಂಚೇನಹಳ್ಳಿಯಲ್ಲಿ ನಡೆದಿದೆ.
ಮಿನಿ ಬಸ್ಸಿನಲ್ಲಿ ತರೀಕೆರೆ ಮೂಲದ ಸುಮಾರು 25 ಪ್ರವಾಸಿಗರು ಇದ್ದರು ಎಂದು ತಿಳಿದು ಬಂದಿದೆ.
ಮೈಲಾರಲಿಂಗೇಶ್ವರ ದೇವಸ್ಥಾನಕ್ಕೆ ತೆರಳಿದ್ದ ಪ್ರವಾಸಿಗರು ತರೀಕೆರೆ ಮರಳುತ್ತಿದ್ದರು. ಕೆಳಕಿನ ಕುಂಚೇನಹಳ್ಳಿ ಬಳಿ ರಸ್ತೆಗೆ ಅಡ್ಡ ಬಂದ ಹಸುವಿಗೆ ಢಿಕ್ಕಿಯಾಗುವುದನ್ನು ತಪ್ಪಿಸಲು ಹೋಗಿ ಚಾಲಕನ ನಿಯಂತ್ರಣ ತಪ್ಪಿದ ಬಸ್ ಪಲ್ಟಿಯಾಗಿದೆ.
ಇನ್ನು, ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಕೆಳಗಿನ ಕುಂಚೇನಹಳ್ಳಿ ಮತ್ತು ಮೇಲಿನ ಕುಂಚೇನಹಳ್ಳಿಯ ಗ್ರಾಮಸ್ಥರು ಸ್ಥಳಕ್ಕೆ ದೌಡಾಯಿಸಿದ್ದಾರೆ.
ಪಲ್ಟಿಯಾಗಿದ್ದ ಬಸ್ಸಿನಲ್ಲಿದ್ದ ಜನರನ್ನು ಹೊರಗೆ ಎಳೆದಿದ್ದಾರೆ. ಐದಾರು ಪುಟ್ಟ ಮಕ್ಕಳು, ಮಹಿಳೆಯರು ಸಹಿತ ಸುಮಾರು 25 ಪ್ರವಾಸಿಗರನ್ನು ರಕ್ಷಿಸಿದ್ದಾರೆ. ಕೆಲವರಿಗೆ ಗಂಭೀರ ಗಾಯವಾಗಿದ್ದು, ಎಲ್ಲರನ್ನು ಆಸ್ಪತ್ರೆಗೆ ರವಾನಿಸಿದ್ದಾರೆ.
Next Story





