Shivamogga | ಸಂಸದ ರಾಘವೇಂದ್ರ-ಕಾಂಗ್ರೆಸ್ ಮುಖಂಡನ ಮಧ್ಯೆ ಮಾತಿನ ಚಕಮಕಿ: ವಿಡಿಯೋ ವೈರಲ್

ಶಿವಮೊಗ್ಗ: ಸಂಸದ ಬಿ.ವೈ.ರಾಘವೇಂದ್ರ ಹಾಗೂ ತಾಲೂಕು ಗ್ಯಾರಂಟಿ ಯೋಜನೆಯ ಅಧ್ಯಕ್ಷ ಎಸ್.ಪಿ.ನಾಗರಾಜ ಗೌಡ ಮಧ್ಯೆ ಮಾತಿನ ಚಕಮಕಿ ನಡೆದಿದ್ದು, ಇದರ ವಿಡಿಯೋ ಇದೀಗ ವೈರಲ್ ಆಗಿದೆ.
ವಾರದ ಹಿಂದೆ ಶಿಕಾರಿಪುರ ಪಟ್ಟಣದಲ್ಲಿ ನಡೆದ ವಿದ್ಯಾರ್ಥಿ ನಿಲಯ ಉದ್ಘಾಟನೆ ಕಾರ್ಯಕ್ರಮದ ಸಮಾರೋಪದ ಸಂದರ್ಭ ವಂದನೆ ಸಲ್ಲಿಸುವ ವೇಳೆ ವೇದಿಕೆ ಮೇಲಿರುವ ನಮ್ಮ ಹೆಸರನ್ನು ಯಾಕೆ ಹೇಳಲಿಲ್ಲ. ಸಂಸದರು ವೇದಿಕೆ ಮೇಲೆ ಹೇಳಿದಂತೆ ಕೇಳುವುದಾದರೆ ಅವರ ಮನೆಗೆ ಹೋಗಿ ಅವರು ಹೇಳಿದಂತೆ ಕೇಳಿ ಎಂದು ನಿರೂಪಣೆ ಮಾಡುತ್ತಿದ್ದ ವಿದ್ಯಾರ್ಥಿ ನಿಲಯ ಮೇಲ್ವಿಚಾರಕ ರಾಮಪ್ಪ ವಿರುದ್ಧ ನಾಗರಾಜ ಗೌಡ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ವೇಳೆ ಸಂಸದ ರಾಘವೇಂದ್ರ ನಮ್ಮ ಮನೆಗೆ ಹೋಗಿ ಎಂದು ಅಧಿಕಾರಿಗಳಿಗೆ ನೀವು ಹೇಳುತ್ತಿರುವುದು ಸರಿಯಲ್ಲ ಎಂದು ಆಕ್ಷೇಪಿಸಿದರು.
ಈ ವಿಚಾರವಾಗಿ ಸಂಸದ ರಾಘವೇಂದ್ರ ಹಾಗೂ ಎಸ್.ಪಿ. ನಾಗರಾಜ ಗೌಡ ಮಧ್ಯೆ ಮಾತಿನ ಚಕಮಕಿ ನಡೆಯಿತು. ಇದು ತಾರಕಕ್ಕೇರಿ ಇಬ್ಬರ ಮಧ್ಯೆ ಏಕವಚನದಲ್ಲಿ ವಾಗ್ವಾದ ನಡೆಯಿತು. ಕೆಲ ಕಾಲಕಾಲ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು. ಇಬ್ಬರು ಪರಸ್ಪರ ಬೈದಾಡಿಕೊಂಡಿದ್ದಾರೆ. ನಂತರ ಸ್ಥಳದಲ್ಲಿದ್ದ ರಾಜಕಾರಣಿಗಳು ಇಬ್ಬರನ್ನು ಸಮಾಧಾನ ಪಡಿಸಿದ್ದಾರೆ.
ಈ ಮಾತಿನ ಚಕಮಕ, ವಾಗ್ವಾದದ ವೀಡಿಯೊ ಇದೀಗ ವೈರಲ್ ಆಗಿದೆ.





