ನ್ಯಾಷನಲ್ ಡಿಫೆನ್ಸ್ ಅಕಾಡಮಿ ಪರೀಕ್ಷೆ; ಭದ್ರಾವತಿಯ ಶ್ರೇಯಾ ಎನ್.ಗೌಡ ಪ್ರಥಮ

ಶಿವಮೊಗ್ಗ : ಭದ್ರಾವತಿ ತಾಲೂಕಿನ ತಿಮ್ಮಾಪುರ ಗ್ರಾಮದ ಶ್ರೇಯಾ ಎನ್.ಗೌಡ ಅವರು ಯುಪಿಎಸ್ಸಿಯ ಎನ್ಡಿಎ (ನ್ಯಾಷನಲ್ ಡಿಫೆನ್ಸ್ ಅಕಾಡಮಿ) ಪರೀಕ್ಷೆಯಲ್ಲಿ ಮಹಿಳಾ ವಿಭಾಗದಲ್ಲಿ ದೇಶಕ್ಕೆ ಮೊದಲ ರ್ಯಾಂಕ್ ಪಡೆದಿದ್ದಾರೆ.
1ರಿಂದ 10ನೇ ತರಗತಿವರೆಗೆ ಭದ್ರಾವತಿಯ ಬಿಜಿಎಸ್ ಕಾರೇಹಳ್ಳಿಯಲ್ಲಿ ವ್ಯಾಸಂಗ ಮಾಡಿದ ಅವರು, ಬೆಂಗಳೂರಿನ ರಾಜಾಜಿನಗರದ ಬೇಸ್ಪಿಯು ಕಾಲೇಜಿನಲ್ಲಿ ಪಿಯುಸಿ ಮುಗಿಸಿದ್ದಾರೆ. ಪ್ರಸಕ್ತ ಮಂಗಳೂರಿನ ಎನ್ಐಟಿಕೆ ಕಾಲೇಜಿನಲ್ಲಿ ಇಂಜಿನಿಯರಿಂಗ್ ಓದುತ್ತಿದ್ದಾರೆ.
ನ್ಯಾಷನಲ್ ಡಿಫೆನ್ಸ್ ಅಕಾಡಮಿ ಪರೀಕ್ಷೆಯ ಮೊದಲ ಅವಕಾಶದಲ್ಲೇ ದೇಶಕ್ಕೆ ಮೊದಲ ರ್ಯಾಂಕ್ ಪಡೆದಿದ್ದಾರೆ. ಶ್ರೇಯಾ ಅವರ ತಂದೆ ನಾಗೇಂದ್ರಜೆ. ವಿಐಎಸ್ಎಲ್ ಕಾರ್ಖಾನೆ ನೌಕರರಾಗಿದ್ದು, ತಾಯಿ ಡಾ.ಆಶಾ.ಬಿ.ಎಂ. ಅತಿಥಿ ಉಪನ್ಯಾಸಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
Next Story




