ಸೊರಬ | ದೇವಾಲಯದ ಆವರಣದಲ್ಲಿದ್ದ ದೇವರ ಮೂರ್ತಿ ವಿರೂಪ: ಆರೋಪಿ ಕೋಟೇಶ್ವರನ ಬಂಧನ

ಶಿವಮೊಗ್ಗ, ಜು.25: ದೇವಾಲಯದ ಆವರಣದಲ್ಲಿದ್ದ ಪುರಾತನ ಕಾಲದ ದೇವರ ಮೂರ್ತಿ ವಿರೂಪಗೊಳಿಸಿದ ಆರೋಪಿಯನ್ನು ಸೊರಬ ತಾಲೂಕು ಆನವಟ್ಟಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಹಾವೇರಿ ಜಿಲ್ಲೆ ಹಾನಗಲ್ ತಾಲೂಕಿನ ಗೋಂದಿ ಗ್ರಾಮದ ನಿವಾಸಿ ಕೋಟೇಶ್ವರ (32) ಬಂಧಿತ ಆರೋಪಿ.
ಜು.21ರ ಮಧ್ಯಾಹ್ನ ಸೊರಬ ತಾಲೂಕಿನ ಕುಬಟೂರು ಗ್ರಾಮದಲ್ಲಿರುವ ನರಸಿಂಹ ದೇವಾಲಯ ಆವರಣದಲ್ಲಿದ್ದ ನರಸಿಂಹ ಸ್ವಾಮಿ ದೇವರ ಮೂರ್ತಿಯನ್ನು ವಿರೂಪಗೊಳಿಸಲಾಗಿತ್ತು. ಈ ಕುರಿತಂತೆ ಜು.22ರ ಬೆಳಗ್ಗೆ 10 ಗಂಟೆ ವೇಳೆಗೆ ಆನವಟ್ಟಿ ಪೊಲೀಸರಿಗೆ ಮಾಹಿತಿ ಲಭಿಸಿತ್ತು.
ವಿಷಯ ತಿಳಿಯುತ್ತಿದ್ದಂತೆ ಶಿಕಾರಿಪುರ ಡಿವೈಎಸ್ಪಿ, ಆನವಟ್ಟಿ ಠಾಣೆ ಪಿಎಸ್ಸೈ ಚಂದನ್ ಸ್ಥಳಕ್ಕೆ ಭೇಟಿ ನೀಡಿದ್ದರು.
ಕ್ಷಿಪ್ರ ಕಾರ್ಯಾಚರಣೆ ನಡೆಸಿ ಕೃತ್ಯ 4 ಗಂಟೆಗಳಲ್ಲೇ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
Next Story





