ಶಿವಮೊಗ್ಗ | ತುಂಗಾ ನದಿ ಹಿನ್ನೀರಿನಲ್ಲಿ ಮಹಿಳೆ ಸೇರಿ ಮೂವರ ಮೃತದೇಹ ಪತ್ತೆ

ಶಿವಮೊಗ್ಗ : ತುಂಗಾ ನದಿ ಹಿನ್ನೀರಿನಲ್ಲಿ ಓರ್ವ ಮಹಿಳೆ ಸೇರಿ ಮೂವರ ಮೃತದೇಹ ಪತ್ತೆಯಾಗಿರುವ ಘಟನೆ ನಡೆದಿದೆ.
ಇಲ್ಲಿನ ಸಕ್ರೆಬೈಲು ಸಮೀಪದ 10ನೇ ಮೈಲಿಕಲ್ಲು ಬಳಿ ತುಂಗಾ ನದಿಯ ದಡದಲ್ಲಿ ಮೂವರ ಮೃತದೇಹ ಪತ್ತೆಯಾಗಿದೆ. ಮೃತದೇಹಗಳು ಕೊಳೆತ ಸ್ಥಿತಿಯಲ್ಲಿವೆ. ಇನ್ನೂ ಮೃತರ ಗುರುತು ಪತ್ತೆಯಾಗಿಲ್ಲ.
ತುಂಗಾನಗರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಮೃತದೇಹಗಳನ್ನು ಆಸ್ಪತ್ರೆಗೆ ರವಾನಿಸಿದ್ದಾರೆ ಎಂದು ತಿಳಿದು ಬಂದಿದೆ.
Next Story