Shivamogga | ವಿಜಯೇಂದ್ರ ಹೇಳಿಕೆ ಖಂಡಿಸಿ ಯುವ ಕಾಂಗ್ರೆಸ್ನಿಂದ ಪೋಸ್ಟರ್ ಅಭಿಯಾನ
ಬಿಜೆಪಿ ಕಚೇರಿ, ವಿಜಯೇಂದ್ರ ನಿವಾಸದ ಗೋಡೆಗಳಿಗೆ ಪೋಸ್ಟರ್ ಅಂಟಿಸಿದ ಕಾರ್ಯಕರ್ತರು

ಶಿವಮೊಗ್ಗ: ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ನೀಡಿದ್ದ ಹೇಳಿಕೆ ಖಂಡಿಸಿ ಯುವ ಕಾಂಗ್ರೆಸ್ ಕಾರ್ಯಕರ್ತರು ಶುಕ್ರವಾರ ತಡರಾತ್ರಿ ನಗರದ ವಿವಿಧೆಡೆ ಪೋಸ್ಟರ್ಗಳನ್ನು ಅಂಟಿಸಿದ ಘಟನೆ ನಡೆದಿದೆ.
ನಗರದ ದೀನದಯಾಳ್ ರಸ್ತೆಯಲ್ಲಿರುವ ಜಿಲ್ಲಾ ಬಿಜೆಪಿ ಕಚೇರಿಯ ಗೋಡೆಗಳಿಗೆ, ಬೈಪಾಸ್ ರಸ್ತೆ ಸಮೀಪವಿರುವ ಬಿ.ವೈ. ವಿಜಯೇಂದ್ರ ಅವರ ಮೈತ್ರಾದೇವಿ ನಿವಾಸದ ಕಾಂಪೌಂಡ್ಗೂ ಪೋಸ್ಟರ್ಗಳನ್ನು ಅಂಟಿಸಲಾಗಿದೆ.
'ಕಾಂಗ್ರೆಸ್ ಮಕ್ಕಳು ಗಾಂಧೀಜಿಯ ಮಕ್ಕಳು, ಬಿಜೆಪಿ ಮಕ್ಕಳು- ಕಳ್ನನ್ ಮಕ್ಕಳು' ಎಂಬ ಬರಹಗಳಿರುವ ಪೋಸ್ಟರ್ಗಳನ್ನು ಯುವ ಕಾಂಗ್ರೆಸ್ ಕಾರ್ಯಕರ್ತರು ಅಂಟಿಸಿದ್ದಾರೆ.
ದಾವಣಗೆರೆಯಲ್ಲಿ ನಡೆದ ಸುದ್ದಿಗೋಷ್ಠಿಯೊಂದರಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಕಾಂಗ್ರೆಸ್ ನಾಯಕರ ವಿರುದ್ಧ ಏಕವಚನದಲ್ಲಿ 'ಈ ನನ್ನ ಮಕ್ಕಳು ಕಾಂಗ್ರೆಸ್ನವರು ಇದ್ದಾರಲ್ಲಾ' ಎಂದು ಮಾತನಾಡಿದ್ದರು. ಕಾಂಗ್ರೆಸ್ ಪಕ್ಷದ ಪ್ರತಿಭಟನೆಯ ಬೆನ್ನಿಗೆ ಹೇಳಿಕೆ ಹಿಂಪಡೆದಿದ್ದರು.




