ಡಾ. ನಿತ್ಯಾನಂದ ಶೆಟ್ಟಿ, ಪ್ರೊ. ಎಚ್ ಟಿ ಪೋತೆ ಸಹಿತ ನಾಲ್ವರ ಕೃತಿಗಳಿಗೆ ಶಿವರಾಮ ಕಾರಂತ ಪುರಸ್ಕಾರ

ಮೂಡುಬಿದಿರೆ: ಶಿವರಾಮ ಕಾರಂತ ಪ್ರತಿಷ್ಠಾನ(ರಿ.) ನೀಡುವ, ಈ ಬಾರಿಯ ಶಿವರಾಮ ಕಾರಂತ ಪುರಸ್ಕಾರಕ್ಕೆ ತುಮಕೂರು ವಿಶ್ವವಿದ್ಯಾಲಯದ ಡಿ.ವಿ.ಜಿ ಕನ್ನಡ ಅಧ್ಯಯನ ಕೇಂದ್ರದ ಪ್ರಾಧ್ಯಾಪಕ ನಿತ್ಯಾನಂದ. ಬಿ ಶೆಟ್ಟಿ ಅವರ ʼಮಾರ್ಗಾನ್ವೇಷಣೆʼ ಕೃತಿ ಸಹಿತ ನಾಲ್ಕು ಕೃತಿಗಳು ಆಯ್ಕೆಯಾಗಿವೆ.
ಸಂಶೋಧನಾ ಮೀಮಾಂಸೆಗೆ ಸಂಬಂಧಿಸಿದ ಕೃತಿಯಾಗಿರುವ "ಮಾರ್ಗಾನ್ವೇಷಣೆ"- ವ್ಯಾಪಕ ಚರ್ಚೆ ಮತ್ತು ವಾಗ್ವಾದಕ್ಕೆ ಒಳಗಾದ ಕೃತಿಯಾಗಿದೆ. ಈ ಕೃತಿಯ ಜೊತೆಗೆ ಪ್ರೊ. ಎಚ್ ಟಿ ಪೋತೆಯವರ "ಅಂಬೇಡ್ಕರ್ ಮತ್ತು... " ಕೃತಿಗೆ, ಎಚ್ ಆರ್ ಲೀಲಾವತಿ ಅವರ "ಹಾಡಾಗಿ ಹರಿದಾಳೆ" ಆತ್ಮಕಥೆಗೆ, ಬಿ ಜನಾರ್ದನ ಭಟ್ ಅವರ "ವಿನೂತನ ಕಥನ ಕಾರಣ" ಎಂಬ ವಿಮರ್ಶಾ ಸಂಕಲನಕ್ಕೂ ಪ್ರಶಸ್ತಿ ಘೋಷಿಸಲಾಗಿದೆ.
ಮೇ 29 ರಂದು ಸಂಜೆ 4.00ಗಂಟೆಗೆ ಮೂಡಬಿದಿರೆಯ ಕನ್ನಡ ಭವನದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತರಾದ ಲಕ್ಷ್ಮೀಶ ತೋಳ್ಪಾಡಿ ಅವರು ಪ್ರಶಸ್ತಿ ಪ್ರದಾನ ಮಾಡಲಿರುವರು ಎಂದು ಪ್ರತಿಷ್ಠಾನದ ಪ್ರಕಟಣೆ ತಿಳಿಸಿದೆ.
Next Story





