ಜಾಗತಿಕವಾಗಿ Meta ಸೇವೆಗಳಲ್ಲಿ ವ್ಯತ್ಯಯ; ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ವಾಟ್ಸ್ಆ್ಯಪ್ ಡೌನ್

ಹೊಸದಿಲ್ಲಿ: ಮೆಟಾ ಮಾಲಕತ್ವದ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಹಾಗೂ ವಾಟ್ಸ್ಆ್ಯಪ್ ಸೇವೆಗಳಲ್ಲಿ ಶುಕ್ರವಾರ ಜಾಗತಿಕ ಮಟ್ಟದಲ್ಲಿ ತಾಂತ್ರಿಕ ವ್ಯತ್ಯಯ ಉಂಟಾಗಿ ಲಕ್ಷಾಂತರ ಬಳಕೆದಾರರು ತೊಂದರೆ ಅನುಭವಿಸಿದರು.
ಅನೇಕ ಬಳಕೆದಾರರು Meta ಸೇವೆಗಳನ್ನು ಬಳಸಲು ಸಾಧ್ಯವಾಗುತ್ತಿಲ್ಲ ಎಂದು ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ.
ಫೇಸ್ ಬುಕ್ ಮತ್ತು ಮೆಸೆಂಜರ್ ನಲ್ಲಿ ಹಠಾತ್ತನೆ ಲಾಗ್ ಔಟ್ ಆಗಿದ್ದು, ಮರು ಲಾಗಿನ್ ಮಾಡಲು ಯತ್ನಿಸಿದಾಗ ‘ಅನಿರೀಕ್ಷಿತ ದೋಷ ಸಂಭವಿಸಿದೆ’ ಎಂಬ ಸಂದೇಶ ಕಾಣಿಸಿಕೊಂಡಿದ್ದು, ಕೆಲವರಿಗೆ ಖಾಲಿ ಬಿಳಿ ಪರದೆ ಪ್ರದರ್ಶವಾಗಿದೆ ಎಂದು ವರದಿಯಾಗಿದೆ.
ಇನ್‌ಸ್ಟಾಗ್ರಾಮ್‌ನಲ್ಲಿ ಫೀಡ್ ಗಳು ಲೋಡ್ ಆಗದೆ ಉಳಿದಿವೆ. ಮೊಬೈಲ್ ಅಪ್ಲಿಕೇಷನ್ ಹಾಗೂ ವೆಬ್‌ಸೈಟ್‌ನಲ್ಲಿ ಫೀಡ್ ಗಳನ್ನು ರಿಫ್ರೆಶ್ ಮಾಡಲು ಸಾಧ್ಯವಾಗಿಲ್ಲ.
ವಾಟ್ಸಾಪ್‌ನಲ್ಲಿಯೂ ಸಂಪರ್ಕ ಸಮಸ್ಯೆ ಉಂಟಾಗಿದ್ದು, ಕೆಲ ಬಳಕೆದಾರರಿಗೆ ಸಂದೇಶಗಳನ್ನು ಕಳುಹಿಸಲು ಮತ್ತು ಸ್ವೀಕರಿಸಲು ಸಾಧ್ಯವಾಗಿಲ್ಲ ಎಂದು ದೂರಿದ್ದಾರೆ.
ಮೆಟಾ ಸಂಸ್ಥೆಯಿಂದ ತಕ್ಷಣ ಯಾವುದೇ ಮಾಹಿತಿ ಲಭ್ಯವಾಗಿಲ್ಲ.




