Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರ್ತಾಭಾರತಿ ವಿಶೇಷ
  3. ಬಾಬಾಸಾಹೇಬರ ಅವಿಶ್ರಾಂತ ದಿನಚರಿ

ಬಾಬಾಸಾಹೇಬರ ಅವಿಶ್ರಾಂತ ದಿನಚರಿ

ಸನತ್ ಕುಮಾರ ಬೆಳಗಲಿಸನತ್ ಕುಮಾರ ಬೆಳಗಲಿ13 May 2024 10:12 AM IST
share
ಬಾಬಾಸಾಹೇಬರ ಅವಿಶ್ರಾಂತ ದಿನಚರಿ

ಬಾಬಾಸಾಹೇಬರು ಏಕಾಂತವನ್ನು ಬಹಳ ಇಷ್ಟಪಡುತ್ತಿದ್ದರು.ಈ ಬಗ್ಗೆ ಅವರನ್ನು ಪ್ರಶ್ನಿಸಿದಾಗ, ‘ಪುಸ್ತಕ ನನ್ನ ಕೈಯಲ್ಲಿದ್ದಾಗ ಅದನ್ನು ಓದುವುದರಿಂದ ತುಂಬಾ ಸಂತಸವಾಗುತ್ತದೆ’ ಎಂದಿದ್ದರು. ಅವರ ಪ್ರಕಾರ, ಜ್ಞಾನ ಸಂಪಾದನೆಯ ಸುಖ ಪ್ರಪಂಚದ ಬೇರಾವುದೇ ಸುಖಕ್ಕಿಂತ ಮಿಗಿಲಾದದ್ದು. ದಿನದ 18 ತಾಸು ಕಾಲ ಅವರು ಅಧ್ಯಯನ ಮಾಡುತ್ತಿದ್ದರು. ಮಧ್ಯಾಹ್ನ ಊಟವಾದ ನಂತರ ಒಂದಿಷ್ಟು ವಿಶ್ರಾಂತಿ ಪಡೆಯಬೇಕೆಂದು ಆರಾಮ ಕುರ್ಚಿಯಲ್ಲಿ ಕುಳಿತು ವಿರಮಿಸಿದರೂ ಆಗಲೂ ಅವರು ಯಾವುದೋ ಒಂದು ಪುಸ್ತಕವನ್ನು ಓದುತ್ತಲೇ ಇರುತ್ತಿದ್ದರು. ಒಮ್ಮೊಮ್ಮೆ ಯಾವುದಾದರೂ ಒಂದು ಪುಸ್ತಕ ರಚನೆಯಲ್ಲಿ ತೊಡಗಿದರೆ ದಿನದ 24 ತಾಸು ಅದರಲ್ಲೇ ಮುಳುಗಿರುತ್ತಿದ್ದರು ಎಂದು ದೇವಿದಯಾಳ ಬರೆಯುತ್ತಾರೆ.

ಬಾಬಾಸಾಹೇಬ ಅಂಬೇಡ್ಕರ್ ಈ ಹೆಸರನ್ನು ನಾನು ಚಿಕ್ಕ ವಯಸ್ಸಿನಲ್ಲೇ ಕೇಳಿದ್ದೆ. ಆಗಲೇ ಓದುವ ಅಭಿರುಚಿ ಬೆಳೆಸಿಕೊಂಡಿದ್ದ ನಮ್ಮ ತಲೆಮಾರಿನ ಕೆಲ ಗೆಳೆಯರಿಗೆ ಈ ಭಾರತದ ಭಾಗ್ಯವಿದಾತನ ಹೆಸರು ಗೊತ್ತಿದ್ದರೂ ಅವರ ಸಾಹಿತ್ಯ ಓದಲು ಸಿಕ್ಕಿರಲಿಲ್ಲ. ಎಪ್ಪತ್ತರ ದಶಕದ ಆ ದಿನಗಳಲ್ಲಿ ನಮ್ಮ ಬಿಜಾಪುರ ಜಿಲ್ಲೆಯಲ್ಲಿ ನಮಗೆ ಮೊದಲು ಕೈಗೆ ಸಿಕ್ಕಿದ್ದು ಕಾರ್ಲ್ ಮಾರ್ಕ್ಸ್, ಲೆನಿನ್ ಪುಸ್ತಕಗಳು.ಅವು ಕೂಡ ಅತ್ಯಂತ ಕಡಿಮೆ ಸಂಖ್ಯೆಯಲ್ಲಿ ಇದ್ದವು. ಅಂಬೇಡ್ಕರ್ ಕುರಿತು ನಮ್ಮ ಜಿಲ್ಲೆಯ ರಿಪಬ್ಲಿಕನ್ ಪಾರ್ಟಿಯ, ನಾಯಕರು ಹಾಗೂ ಶಾಸಕರಾಗಿದ್ದ ಸಿದ್ಧಾರ್ಥ ಅವರ ಕೇರಿ ಹಾಗೂ ಮೂಕಿಹಾಳ, ಚಂದ್ರಶೇಖರ ಹೊಸಮನಿ ಹಾಗೂ ಚಂಚಲಕರ ಅವರಿಂದ ಒಂದಿಷ್ಟು ತಿಳಿದಿತ್ತು. ಅಂಬೇಡ್ಕರ್ ಸಾಹಿತ್ಯ ಕನ್ನಡದಲ್ಲಿ ನಮಗೆ ಎಂಬತ್ತರ ದಶಕದ ಕೊನೆ ಮತ್ತು ತೊಂಭತ್ತರ ದಶಕದ ನಂತರ ಸಿಕ್ಕಿತು. ಮಂಗಳೂರು ವಿಜಯ ಅವರು ಅನುವಾದಿಸಿದ ಧನಂಜಯ ಕೀರ್ ಅವರ ಪುಸ್ತಕದಿಂದ ಸಾಕಷ್ಟು ವಿವರಗಳು ಲಭಿಸಿದವು.

ಮುಂದೆ ಕರ್ನಾಟಕ ಸರಕಾರ ಅಂಬೇಡ್ಕರ್ ಅವರ ಸಮಗ್ರ ಸಾಹಿತ್ಯವನ್ನು ಕನ್ನಡಕ್ಕೆ ಅನುವಾದ ಮಾಡಿಸಿ ಪ್ರಕಟಿಸಿತು.ಈಗಂತೂ ಕನ್ನಡದಲ್ಲಿ ಸಾಕಷ್ಟು ಸಾಹಿತ್ಯ ಬಂದಿದೆ. ಮ.ನ.ಜವರಯ್ಯನವರಿಂದ ಹಿಡಿದು ಲಡಾಯಿ ಪ್ರಕಾಶನದ ಬಸವರಾಜ ಸೂಳೀಬಾವಿ ಅವರು ಬಾಬಾಸಾಹೇಬರ ಸಾಕಷ್ಟು ಪುಸ್ತಕ ಹೊರಗೆ ತಂದಿದ್ದಾರೆ. ಈ ಎಲ್ಲ ಪುಸ್ತಕಗಳು ಅಂಬೇಡ್ಕರ್ ಬದುಕು, ಬರಹ, ಹೋರಾಟಗಳ ಕುರಿತು ಸಾಕಷ್ಟು ಬೆಳಕು ಚೆಲ್ಲುತ್ತವೆ. ದಲಿತ ಸಂಘರ್ಷ ಸಮಿತಿಗಳು ಕೆಲ ಚಿಕ್ಕಪುಟ್ಟ ಪುಸ್ತಕಗಳನ್ನು ಹೊರತಂದಿವೆ. ಆದರೆ, ಅಂಬೇಡ್ಕರ್ ಅವರಂಥ ಆಕಾಶದೆತ್ತರಕ್ಕೆ ಬೆಳೆದು ನಿಂತ ವ್ಯಕ್ತಿತ್ವವನ್ನು ಎಷ್ಟು ಬರೆದರೂ ಸಂಪೂರ್ಣ ಅನ್ನಿಸುವುದಿಲ್ಲ. ತನ್ನ ಕೇವಲ ಆರು ದಶಕಗಳ ಜೀವಮಾನದಲ್ಲಿ ಆ ಮಹಾನಾಯಕ ಬರೆದದ್ದು, ಓದಿದ್ದು, ಮಾತಾಡಿದ್ದು, ಹೋರಾಡಿದ್ದು ಇವಾವುದನ್ನು ಊಹೆ ಮಾಡಲು ಆಗುವುದಿಲ್ಲ.ಇದು ಹೇಗೆ ಸಾಧ್ಯವಾಯಿತು ಎಂಬ ಪ್ರಶ್ನೆ ಕೊನೆಗೆ ಉಳಿದೇ ಉಳಿಯುತ್ತದೆ. ಈ ಕೊರತೆ ನೀಗಿಸುವ ಇನ್ನೊಂದು ಪ್ರಯತ್ನವನ್ನು ಶಿವಮೊಗ್ಗದ ಮಿತ್ರ ಆರಡಿ ಮಲ್ಲಯ್ಯ ಕಟ್ಟೇರ್ ಅವರು ಮಾಡಿದ್ದಾರೆ. ಬಾಬಾಸಾಹೇಬರ ಜೊತೆಗೆ ವರ್ಷಗಳ ಕಾಲ ಒಡನಾಡಿದ ದೇವಿ ದಯಾಳ ಅವರ ಪುಸ್ತಕವನ್ನು ಕನ್ನಡಕ್ಕೆ ತಂದಿದ್ದಾರೆ. ಅಹರ್ನಿಶಿ ಪ್ರಕಾಶನದ ಅಕ್ಷತಾ ಹುಂಚದಕಟ್ಟೆ ಅವರು ಇದನ್ನು ಬೆಳಕಿಗೆ ತಂದಿದ್ದಾರೆ.

ಬಾಬಾಸಾಹೇಬರ ದೈನಂದಿನ ಬದುಕು ಹೇಗಿತ್ತು? ಅವರ ಆರೋಗ್ಯ ಸಮಸ್ಯೆಗಳನ್ನು ಕುರಿತು ಡಾ. ಸವಿತಾ ಅಂಬೇಡ್ಕರ್ ತಮ್ಮ ಆತ್ಮಕಥೆ ‘ಅಂಬೇಡ್ಕರ್ ಸಹವಾಸದಲ್ಲಿ’ ಸಾಕಷ್ಟು ಬರೆದಿದ್ದಾರೆ .

ಇದನ್ನು ಬಿಜಾಪುರದ ಅನಿಲ ಹೊಸಮನಿ ಅವರು ಕನ್ನಡಕ್ಕೆ ತಂದಿದ್ದಾರೆ. ಈಗ ಆರಡಿ ಮಲ್ಲಯ್ಯನವರು ಅನುವಾದಿಸಿದ್ದು ‘ಅಂಬೇಡ್ಕರ್ ದಿನಚರಿ’ ಯನ್ನು. ಅಂಬೇಡ್ಕರ್ ಜಗತ್ತಿನ ಅಸಾಮಾನ್ಯ ಓದುಗ. ಅವರ ಮನೆಯಲ್ಲಿನ ಗ್ರಂಥಾಲಯದಲ್ಲಿ 50 ಸಾವಿರ ಪುಸ್ತಕಗಳಿದ್ದವು. ದೇವಿ ದಯಾಳ ಗ್ರಂಥಪಾಲಕರಾಗಿದ್ದರು. ನಿತ್ಯ ಬಾಬಾಸಾಹೇಬರ ಜೊತೆಗಿರುತ್ತಿದ್ದ ದೇವಿ ದಯಾಳ, ಬಾಬಾಸಾಹೇಬರು ಎಷ್ಟು ಹೊತ್ತಿಗೆ ಏಳುತ್ತಿದ್ದರು,ಅವರ ಬೆಳಗಿನ ತಿಂಡಿ ಏನು? ಎಷ್ಟು ಹೊತ್ತಿಗೆ ತಿಂಡಿ ತಿನ್ನುತ್ತಿದ್ದರು. ಮಧ್ಯಾಹ್ನದ ಊಟ, ಅತಿಥಿಗಳಿಗೆ ತಾವೇ ಅಡುಗೆ ಮಾಡಿ ಬಡಿಸುತ್ತಿದ್ದ ಅವರ ಕ್ರಿಯಾಶೀಲತೆ ಹೀಗೆ ಅತಿ ಸಣ್ಣಪುಟ್ಟ ವಿವರಗಳು ಈ ಪುಸ್ತಕದಲ್ಲಿ ದಾಖಲಾಗಿವೆ.

ಮಡದಿ ರಮಾಬಾಯಿಯವರು ಕೊನೆಯುಸಿರೆಳೆದ ನಂತರ 13 ವರ್ಷ ಒಂಟಿಯಾಗಿ ಬದುಕಿದ್ದ ಬಾಬಾಸಾಹೇಬರಿಗೆ ಪುಸ್ತಕಗಳೇ ನಿತ್ಯದ ಸಂಗಾತಿಗಳು.ಅವರ ಜ್ಞಾನದ ಹಸಿವು ಎಷ್ಟಿತ್ತೆಂದರೆ ಅವರ ಬಳಿ 100 ರೂ. ಇದ್ದರೆ 50 ತೆತ್ತು ಪುಸ್ತಕಗಳನ್ನು ಕೊಳ್ಳುತ್ತಿದ್ದರು. ಇಂಗ್ಲೆಂಡಿನಿಂದ ವಾಪಸು ಬರುವಾಗ ಮುಂಬಯಿ ತಲುಪುವ ವರೆಗೆ (ಹಡಗಿನಲ್ಲಿ) ಎಂಟು ಸಾವಿರ ಪುಟಗಳ ಸಾಹಿತ್ಯ ಓದಿ ಮುಗಿಸಿದ್ದರು. ರೈಲು, ಬಸ್ಸು ಗಳಲ್ಲಿ ಪ್ರಯಾಣಿಸುವಾಗಲೂ ಅವರು ಒಂದು ನಿಮಿಷವೂ ವ್ಯರ್ಥ ಮಾಡದೇ ಓದುತ್ತಲೇ ಇರುತ್ತಿದ್ದರು.

ಬಾಬಾಸಾಹೇಬರ ಜೊತೆಗೆ 8 ವರ್ಷ ಸುದೀರ್ಘ ಕಾಲವಿದ್ದ ದೇವಿ ದಯಾಳ ಅವರ ದೈನಂದಿನ ಬದುಕಿನ ಮೇಲೆ ಬೆಳಕು ಚೆಲ್ಲಿದ್ದಾರೆ. ಅವರ ಅಧ್ಯಯನ ಶೀಲತೆ, ಭಾವೋದ್ವೇಗ, ಕಣ್ಣೀರು ಹಾಕುವುದು, ಮನೆಗೆ ಬಂದವರ ಜೊತೆ ಚರ್ಚಿಸುವುದು, ಉಪನ್ಯಾಸ ನೀಡುವುದು, ಬೀದಿಯಲ್ಲಿ ಪ್ರತಿಭಟನೆಯ ನೇತೃತ್ವ ವಹಿಸುವುದು, ವೈಚಾರಿಕ ವಿರೋಧಿಗಳ ಎದುರು ಸಿಂಹದಂತೆ ಗರ್ಜಿಸುವುದು, ಅನ್ಯಾಯ ಕಂಡರೆ ಸಿಡಿದೇಳುವುದು, ಸಂವಿಧಾನ ರಚನಾ ಸಭೆಯ ಆ ಒತ್ತಡದ ದಿನಗಳು ಹೀಗೇ ಎಲ್ಲವನ್ನೂ ದೇವಿದಯಾಳ ದಾಖಲಿಸಿದ್ದಾರೆ.

ಬಾಬಾಸಾಹೇಬರು ಏಕಾಂತವನ್ನು ಬಹಳ ಇಷ್ಟಪಡುತ್ತಿದ್ದರು.ಈ ಬಗ್ಗೆ ಅವರನ್ನು ಪ್ರಶ್ನಿಸಿದಾಗ, ‘ಪುಸ್ತಕ ನನ್ನ ಕೈಯಲ್ಲಿದ್ದಾಗ ಅದನ್ನು ಓದುವುದರಿಂದ ತುಂಬಾ ಸಂತಸವಾಗುತ್ತದೆ’ ಎಂದಿದ್ದರು. ಅವರ ಪ್ರಕಾರ, ಜ್ಞಾನ ಸಂಪಾದನೆಯ ಸುಖ ಪ್ರಪಂಚದ ಬೇರಾವುದೇ ಸುಖಕ್ಕಿಂತ ಮಿಗಿಲಾದದ್ದು. ದಿನದ 18 ತಾಸು ಕಾಲ ಅವರು ಅಧ್ಯಯನ ಮಾಡುತ್ತಿದ್ದರು. ಮಧ್ಯಾಹ್ನ ಊಟವಾದ ನಂತರ ಒಂದಿಷ್ಟು ವಿಶ್ರಾಂತಿ ಪಡೆಯಬೇಕೆಂದು ಆರಾಮ ಕುರ್ಚಿಯಲ್ಲಿ ಕುಳಿತು ವಿರಮಿಸಿದರೂ ಆಗಲೂ ಅವರು ಯಾವುದೋ ಒಂದು ಪುಸ್ತಕವನ್ನು ಓದುತ್ತಲೇ ಇರುತ್ತಿದ್ದರು. ಒಮ್ಮೊಮ್ಮೆ ಯಾವುದಾದರೂ ಒಂದು ಪುಸ್ತಕ ರಚನೆಯಲ್ಲಿ ತೊಡಗಿದರೆ ದಿನದ 24 ತಾಸು ಅದರಲ್ಲೇ ಮುಳುಗಿರುತ್ತಿದ್ದರು ಎಂದು ದೇವಿದಯಾಳ ಬರೆಯುತ್ತಾರೆ.

ಬಾಬಾಸಾಹೇಬರಿಗೆ ಅಲೌಕಿಕ ಶಕ್ತಿಗಳ ಮೇಲೆ ನಂಬಿಕೆ ಇರಲಿಲ್ಲ. ನಿಜವಾದ ಅಂಬೇಡ್ಕರ್ರನ್ನು ಮುಗಿಸಲು ಫ್ಯಾಶಿಸ್ಟ್ ಮನುವಾದಿಗಳು ಮಾತ್ರವಲ್ಲ ಮುಗ್ಧ ಅಭಿಮಾನಿಗಳು ಅವರನ್ನು ದೈವತ್ವಕ್ಕೆ ಏರಿಸುವ ಪ್ರಕ್ರಿಯೆಯಲ್ಲಿ ತೊಡಗಿದಾಗ ನಾವು ಅಸಲಿ ಅಂಬೇಡ್ಕರ್ ಅವರನ್ನು ಜಗತ್ತಿನ ಮುಂದೆ ತರಬೇಕಾಗಿದೆ.ಆ ಕೆಲಸವನ್ನು ಈ ಪುಸ್ತಕದ ಅನುವಾದ ಮಾಡುವ ಮೂಲಕ ಆರಡಿ ಮಲ್ಲಯ್ಯನವರು ಮಾಡಿದ್ದಾರೆ.

ಒಮ್ಮೆ ಅತಿಥಿಗಳ ಜೊತೆಗೆ ಮಾತಾಡುವಾಗ, ‘ಬಾಬಾಸಾಹೇಬರೆ ನೀವು ಏನೇನು ಮಾಡ್ತಿದಿರೋ ಅವು ಮಾನವ ಶಕ್ತಿಯನ್ನು ಮೀರಿದವು, ದೇವತೆಗಳು ಮಾತ್ರ ಮಾಡುವ ಕೆಲಸ’ ಎಂದು ಒಬ್ಬರು ಹೇಳಿದರು.

ಅದನ್ನು ನಿರಾಕರಿಸಿದ ಬಾಬಾಸಾಹೇಬರು, ‘ನನಗೆ ಅಲೌಕಿಕ ಶಕ್ತಿಗಳ ಮೇಲೆ ನಂಬಿಕೆಯಿಲ್ಲ,ಯಾರು ಬದುಕಿನಲ್ಲಿ ಕಷ್ಟ ಪಡುತ್ತಾರೋ ಅವರು ಉಳಿದ ಸಾಮಾನ್ಯ ಮನುಷ್ಯರಿಗಿಂತ ಒಂದು ಹೆಜ್ಜೆ ಮುಂದಿರುತ್ತಾರೆ’ ಎಂದು ನುಡಿಯುತ್ತಾರೆ.

ಬಾಬಾಸಾಹೇಬರಿಗೆ ಅಧ್ಯಯನ ಶೀಲತೆ ಎಂಬುದು ಸ್ವಂತದ ಖುಷಿಗಾಗಿ ಅಲ್ಲ. ಓದಿನಿಂದ ಪಡೆದ

ಜ್ಞಾನವನ್ನು ಸಮಾಜದ ವಂಚಿತ ವರ್ಗಗಳ ಏಳಿಗೆಗಾಗಿ ಬಳಸುವುದು ಅವರ ಉದ್ದೇಶವಾಗಿತ್ತು. ಹೀಗಾಗಿ ಅವರು ಸಾವಿರಾರು ಪುಸ್ತಕಗಳನ್ನು ಖರೀದಿಸಿ ಓದಿದರು. ಅನೇಕ ಪುಸ್ತಕಗಳನ್ನು ಬರೆದರು. ಆದರೆ, ಬರೆದುದಕ್ಕೆ ಸಂಭಾವನೆಯನ್ನು ಹಣದ ರೂಪದಲ್ಲಿ ಪಡೆಯದೇ ಪುಸ್ತಕಗಳ ರೂಪದಲ್ಲಿ ಪಡೆಯುತ್ತಿದ್ದರು. ಬಾಬಾಸಾಹೇಬರ ನಾಲ್ಕೂ ಜನ ಮಕ್ಕಳು ನ್ಯುಮೋನಿಯಾದಿಂದ ಸರಿಯಾದ ಪೌಷ್ಟಿಕ ಆಹಾರ ಸಿಗದೇ ಕೊನೆಯುಸಿರೆಳೆದರು.ಪತ್ನಿ ರಮಾಬಾಯಿಯವರೂ ಬಡತನದಲ್ಲೇ ಸಾವಿಗೀಡಾದರು.ಈ ನೋವು ಸಂಕಟಗಳನ್ನು ನುಂಗಿಕೊಂಡು ಬಾಬಾಸಾಹೇಬರು ಅತ್ಯಂತ ಹೀನಾಯವಾಗಿ ಬದುಕುತ್ತಿದ್ದ ಕೋಟಿ, ಕೋಟಿ ಜನರಿಗೆ ತಮ್ಮನ್ನು ಸಮರ್ಪಿಸಿಕೊಂಡರು.

ಬಾಬಾಸಾಹೇಬರು ಸೈದ್ಧಾಂತಿಕ ಭಿನ್ನಾಭಿಪ್ರಾಯ ಹೊಂದಿದವರೊಂದಿಗೂ ಸ್ನೇಹ ಸಂಬಂಧವನ್ನು ಹೊಂದಿದ್ದರು. ಜಾತಿ ವ್ಯವಸ್ಥೆಯ ಸಮರ್ಥಕರಾಗಿದ್ದ ಮದನ ಮೋಹನ್ಮಾಳವೀಯ ಅವರು ಬಾಬಾಸಾಹೇಬರ ಬಗ್ಗೆ ಅಪಾರ ಗೌರವಾದರಗಳನ್ನು ಹೊಂದಿದ್ದರು. ಮಹಾತ್ಮಾ ಗಾಂಧೀಜಿ ಜೊತೆ ಸಾಕಷ್ಟು ಭಿನ್ನಾಭಿಪ್ರಾಯ ಹೊಂದಿದ್ದರೂ ಪರಸ್ಪರ ಗೌರವವನ್ನು ಇಟ್ಟುಕೊಂಡಿದ್ಧರು. ಆದರೆ, ಹೇಳಬೇಕಾದುದನ್ನು ಮುಖ, ಮೂತಿ ನೋಡದೇ ಹೇಳಿಬಿಡುತ್ತಿದ್ದರು.ಈ ಪುಸ್ತಕದಲ್ಲಿ ಇಂಥ ಅನೇಕ ವಿವರಗಳಿವೆ.

ಡಾ.ಅಂಬೇಡ್ಕರ್ ಅವರ ದೈನಂದಿನ ಬದುಕಿನ ಬಗ್ಗೆ ವಿವರವಾದ ಪುಸ್ತಕ ಅಗತ್ಯವಿತ್ತು. ದೇವಿ ದಯಾಳರ ಈ ಪುಸ್ತಕ ಆ ಕೊರತೆಯನ್ನು ನೀಗಿಸಿದೆ. ಆರಡಿ ಮಲ್ಲಯ್ಯನವರ ಅನುವಾದ ಓದಿಸಿಕೊಂಡು ಹೋಗುತ್ತದೆ. ಅಲ್ಲಲ್ಲಿ ಸಣ್ಣಪುಟ್ಟ ಅಕ್ಷರ ದೋಷಗಳಿವೆ. ಅವುಗಳನ್ನು ಮುಂದಿನ ಮುದ್ರಣದಲ್ಲಿ ಸರಿಪಡಿಸಬಹುದು. ಇಂಥ ಪುಸ್ತಕಗಳನ್ನೇ ಹುಡುಕಿ ಬೆಳಕಿಗೆ ತರುವ ಶಿವಮೊಗ್ಗದ ಅಕ್ಷತಾ ಹುಂಚದಕಟ್ಟೆ ಅವರ ಅಹರ್ನಿಶಿ ಪ್ರಕಾಶನದಲ್ಲಿ ಪುಸ್ತಕ ಸಿಗುತ್ತದೆ, ವಿಚಾರಿಸಬಹುದು.(94491 74662)

share
ಸನತ್ ಕುಮಾರ ಬೆಳಗಲಿ
ಸನತ್ ಕುಮಾರ ಬೆಳಗಲಿ
Next Story
X