Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರ್ತಾಭಾರತಿ ವಿಶೇಷ
  3. ಲೋಕಸಭಾ ಚುನಾವಣೆಗೆ ಮೈತ್ರಿ ಮಾಡಿಕೊಳ್ಳಲು...

ಲೋಕಸಭಾ ಚುನಾವಣೆಗೆ ಮೈತ್ರಿ ಮಾಡಿಕೊಳ್ಳಲು ಬಿಜೆಪಿ ಜೆಡಿಎಸ್ ಸಜ್ಜು

► ವಿಲೀನಗೊಳಿಸಿ ಮುಗಿಸಿಬಿಡಲು ಕಾಯುತ್ತಿರುವ ಬಿಜೆಪಿ

ವಾರ್ತಾಭಾರತಿವಾರ್ತಾಭಾರತಿ13 Sept 2023 10:51 PM IST
share
ಲೋಕಸಭಾ ಚುನಾವಣೆಗೆ ಮೈತ್ರಿ ಮಾಡಿಕೊಳ್ಳಲು ಬಿಜೆಪಿ ಜೆಡಿಎಸ್ ಸಜ್ಜು

ನೂರಾ ಒಂದನೇ ಬಾರಿ ಬಿಜೆಪಿ ಜೆಡಿಎಸ್ ಮೈತ್ರಿಯ ಮಾತು ಮುನ್ನೆಲೆಗೆ ಬಂದಿದೆ. ಈ ಎರಡು ಪಕ್ಷಗಳ ನಡುವೆ ಹೊಂದಾಣಿಕೆ ಆಗುವ ಬಗ್ಗೆ ಅದೆಷ್ಟು ಬಾರಿ ಇದೇ ರೀತಿಯ ಸುದ್ದಿಗಳು, ವದಂತಿಗಳು, ಊಹಾಪೋಹಗಳು, ಚರ್ಚೆಗಳು ನಡೆದಿವೆ ಎಂದು ಲೆಕ್ಕ ಇಡೋದೇ ಕಷ್ಟ. ಅದೀಗ ಯಾವ ಹಂತಕ್ಕೆ ಹೋಗಿದೆ ಅಂದ್ರೆ ಜೆಡಿಎಸ್ ಮತ್ತು ಬಿಜೆಪಿ ಆಗಾಗ ಜಗಳಾಡಿಕೊಂಡು ಬೇರೆಯಾಗುವ ಮತ್ತೆ ಒಂದಾಗುವ ಒಂದೇ ಕುಟುಂಬದ ಸದಸ್ಯರು ಎಂದು ಜನರು ತಮಾಷೆ ಮಾಡುವ ಹಾಗಾಗಿದೆ.

ಈಗ ಹೊಸ ವಿಷಯ ಏನೆಂದರೆ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಲೋಕಸಭೆ ಚುನಾವಣೆಗೆ ಬಿಜೆಪಿ ಜೆಡಿಎಸ್ ಮೈತ್ರಿಯಾಗಲಿದೆ ಅಂತ ಹೇಳಿರುವುದು ಶುಕ್ರವಾರ ವರದಿಯಾಗಿದೆ . ನಾಲ್ಕು ಸ್ಥಾನಗಳಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿಯಾಗಲಿದೆ ಅಂತ ಬಿಎಸ್ವೈ ಹೇಳಿದ್ದಾರೆ. ದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರನ್ನ ದೇವೇಗೌಡರು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ ಅಂತ ಬಿಎಸ್ವೈ ಹೇಳಿದ್ದಾರೆ. ಅವರ ಮಾತುಕತೆಯನ್ನ ಸ್ವಾಗತ ಮಾಡುತ್ತೇನೆ. ಮೈತ್ರಿಯಿಂದ ಬಿಜೆಪಿ ಹಾಗೂ ಜೆಡಿಎಸ್ ಎರಡಕ್ಕೂ ಅನುಕೂಲ ಆಗುತ್ತೆ. ಈ ಬಾರಿ ಲೋಕಸಭೆಯಲ್ಲಿ 25 ಸ್ಥಾನ ಗೆಲ್ಲಲಿದ್ದೇವೆ ಅಂತ ವಿಶ್ವಾಸದ ಮಾತನ್ನಾಡಿದ್ದಾರೆ ಬಿ ಎಸ್ ವೈ. ಈಗಾಗಲೇ ಈ ಮೈತ್ರಿ ಆದರೆ ಎಲ್ಲೆಲ್ಲಿ ಯಾರ್ಯಾರು ಸ್ಪರ್ಧಿಸಬಹುದು ? ಯಾವ ಹಾಲಿ ಸಂಸದರಿಗೆ ಟಿಕೆಟ್ ತಪ್ಪಬಹುದು ? ಅಭ್ಯರ್ಥಿಯಾಗಬಹುದು ? ಇತ್ಯಾದಿ ಚರ್ಚೆಗಳೂ ಶುರುವಾಗಿವೆ.

ಎಲ್ಲಾ ಅಂದುಕೊಂಡಂತೆ ನಡೆದರೆ ಎಚ್ಡಿ ಕುಮಾರಸ್ವಾಮಿ ಅವರು ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಮೈತ್ರಿ ಅಭ್ಯರ್ಥಿಯಾಗಲಿದ್ದಾರೆ ಎನ್ನಲಾಗಿದೆ. ಮಂಡ್ಯ ಲೋಕಸಭಾ ಕ್ಷೇತ್ರ ಸುಮಲತಾಗೆ ಕೈ ತಪ್ಪೋ ಸಾಧ್ಯತೆ ಇದೆ. ಹಾಗಾದರೆ ಬೆಂಗಳೂರು ಉತ್ತರ ಕ್ಷೇತ್ರದಿಂದ ಸುಮಲತಾ ಸ್ಪರ್ಧೆ ಮಾಡುವ ಸಾಧ್ಯತೆ ಇದೆ ಎಂದು ಕೆಲವು ವರದಿಗಳು ಹೇಳುತ್ತಿವೆ.

ಆದರೆ ಮೈತ್ರಿ ವಿಚಾರದ ಬಗ್ಗೆ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯೆ ನೀಡಿ " ಜೆಡಿಎಸ್ ಜೊತೆ ಮೈತ್ರಿ ವಿಚಾರ ಮಾತುಕತೆ ಹಂತದಲ್ಲಿದೆ. ಮೈತ್ರಿ ಮಾತುಕತೆ ನಡೆದಿರುವುದು ಸ್ವಾಗತಾರ್ಹ ಎಂದಿದ್ದಾರೆ. ಆದರೆ ಸೀಟು ಹಂಚಿಕೆ ಬಗ್ಗೆ ಯಾವುದೇ ತೀರ್ಮಾನ ಆಗಿಲ್ಲ ಅಂತ ಹೇಳಿದ್ದಾರೆ.

ರಾಮನಗರದಲ್ಲಿ ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ನ್ಯೂಸ್ 18 ಜೊತೆ ಮಾತನಾಡಿ, ನಾವು ಕಾಂಗ್ರೆಸ್ ವಿರುದ್ಧ ಹೋರಾಟ ಮಾಡಲು ಒಂದಾಗುತ್ತೇವೆ ಎಂದಿದ್ದಾರೆ. ಮುಂದಿನ ಬಾರಿ ಬೆಂಗಳೂರು ಗ್ರಾಮಾಂತರದಲ್ಲಿ ನಾವು ಗೆಲ್ತೇವೆ, ನಮ್ಮ ಪಕ್ಷಕ್ಕಾಗಿ ಕುಮಾರಸ್ವಾಮಿ - ನಾವು ಹೋರಾಡಿದ್ದೆವು. ಆದರೆ ಇದರಿಂದಾಗಿ ಕಾಂಗ್ರೆಸ್ ಗೆ ಅನುಕೂಲ ಆಯ್ತು. ಈಗ ಮೋದಿಯವರನ್ನ ಮತ್ತೆ ಪ್ರಧಾನಿ ಮಾಡಲು ನಾವು ಒಂದಾಗುತ್ತೇವೆ ಎಂದಿದ್ದಾರೆ.

ಜೆಡಿಎಸ್-ಬಿಜೆಪಿ ಮೈತ್ರಿ ಮಾತುಕತೆ ಯಶಸ್ವಿಯಾಗಿದ್ದು ಇದೇ ಸೆ. 11ರ ಬಳಿಕ ಬಳಿಕ ದೆಹಲಿಯಲ್ಲಿ ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ. ನಡ್ಡಾ ಹಾಗೂ ಮಾಜಿ ಪ್ರಧಾನಿ ಎಚ್ಡಿ ದೇವೇಗೌಡ ಜಂಟಿ ಸುದ್ದಿಗೋಷ್ಠಿ ನಡೆಸಲಿದ್ದಾರೆ. ಈ ವೇಳೆ ಮೈತ್ರಿ ಆಗಿರೋ ಬಗ್ಗೆ ಅಧಿಕೃತ ಘೋಷಣೆಗೆ ಆಗಲಿದೆ . ಸೀಟು ಹಂಚಿಕೆ ಹಾಗೂ ಕಾಂಗ್ರೆಸ್ ಸರ್ಕಾರದ ವಿರುದ್ಧ ರಾಜ್ಯದಲ್ಲಿ ಜಂಟಿ ಹೋರಾಟದ ಬಗ್ಗೆ ಮಾಹಿತಿ ನೀಡಲಾಗುತ್ತದೆ ಎಂದು ವರದಿಯಾಗಿದೆ.

ಆದರೆ ಮಾಜಿ ಸಚಿವ ಆರ್ ಅಶೋಕ್ ಮಾತಾಡಿ ಜೆಡಿಎಸ್ ಜೊತೆ ಯಾವುದೇ ಮೈತ್ರಿ ಇಲ್ಲ. ಹಾಗಂತ ದಿಲ್ಲಿಯಿಂದ ವರಿಷ್ಠರು ಫೋನ್ ಮಾಡಿ ತಿಳಿಸಿದ್ದಾರೆ ಎಂದು ಹೇಳಿದ್ದಾರೆ.

ಇತ್ತೀಚೆಗೆ ಪ್ರಜ್ವಲ್ ರೇವಣ್ಣ ಅವರ ಕೋರ್ಟ್ ಕೇಸ್ ಗೆ ಸಂಬಂಧಿಸಿದಂತೆ ವಕೀಲರ ಭೇಟಿಗೆ ದೆಹಲಿಗೆ ತೆರಳಿದ್ದ ದೇವೇಗೌಡರು ಇದೇ ವೇಳೆ ರಹಸ್ಯವಾಗಿ ಅಮಿತ್ ಶಾ ಜೊತೆ ಚರ್ಚೆ ನಡೆಸಿದ್ದಾರೆ. ಉಭಯ ನಾಯಕರ ನಡುವೆ ಮೈತ್ರಿ ಬಗ್ಗೆ ಅನೌಪಚಾರಿಕವಾಗಿ ಚರ್ಚೆ ನಡೆದಿದೆ ಎಂದು ವರದಿಯಾಗಿದೆ.

ಇವಿಷ್ಟು ಹಳೆ ದೋಸ್ತಿಗಳ ಹೊಸ ಮೈತ್ರಿ ಕುರಿತ ನಿನ್ನೆಯ ಹೊಸ ಅಪ್ಡೇಟ್. ಈಗ ವಿಷ್ಯಕ್ಕೆ ಬರೋಣ. ಮೈತ್ರಿಯಿಲ್ಲದೆ ಜೆಡಿಎಸ್ ಪಕ್ಷಕ್ಕೆ​ ರಾಜ್ಯದಲ್ಲಿ ಅಸ್ತಿತ್ವವೇ ಇಲ್ಲ. ಒಂದೋ ನೇರ ಮೈತ್ರಿ, ಇಲ್ಲವೇ ಒಳ ಮೈತ್ರಿಯ ಮೂಲಕ ಎಲ್ಲ ಚುನಾವಣೆಗಳಲ್ಲೂ ಅದು ಜೀವ ಉಳಿಸಿಕೊಂಡಿದೆ. ಅನೇಕ ಸಂದರ್ಭಗಳಲ್ಲಿ ಅದು ಇನ್ನೊಂದು ಪಕ್ಷದ ಸೋಲಿನಲ್ಲೇ ತನ್ನ ಗೆಲುವನ್ನು ಕಾಣುತ್ತಾ ಬಂದಿದೆ. ಚುನಾವಣೆಗಳಲ್ಲಿ ಅತಂತ್ರ ಫಲಿತಾಂಶಗಳನ್ನು ಸಾಧಿಸುವುದರಲ್ಲಿ ಯಶಸ್ವಿಯಾದಾಗ ಮಾತ್ರ ತನಗೆ ಅಧಿಕಾರವೆನ್ನುವುದನ್ನು ಕಂಡುಕೊಂಡಿರುವ ಜೆಡಿಎಸ್ ಪಾಲಿಗೆ ಮೈತ್ರಿ ಮತ್ತು ಸಮಯಸಾಧಕತನದ ನಡುವಿನ ಅಂತರ ತುಂಬಾ ತೆಳುವಾಗಿದೆ.

ಕಳೆದ ವಿಧಾನಸಭಾ ಚುನಾವಣೆಯಲ್ಲಾದ ತೀವ್ರ ಮುಖಭಂಗದಿಂದ ಚಡಪಡಿಸುತ್ತಿರುವ ಜೆಡಿಎಸ್, ತನ್ನನ್ನು ಸೋಲಿಸಿದ ನಾಡಿನ ವಿರುದ್ಧ ಯಾವ ರೀತಿಯಲ್ಲಿ ಸೇಡು ತೀರಿಸಿಕೊಳ್ಳಬಹುದು ಎನ್ನುವ ಜಿದ್ದಿಗೆ ಬಿದ್ದಂತಿದೆ. ಚುನಾವಣಾ ಫಲಿತಾಂಶ ಹೊರ ಬಿದ್ದ ದಿನದಿಂದ ಹಲವು ಗೊಂದಲಕಾರಿ ಹೇಳಿಕೆಗಳನ್ನು ನೀಡುತ್ತಾ ಕಾಲ ಕಳೆಯುತ್ತಿರುವ ಜೆಡಿಎಸ್ ಮುಖಂಡ ಕುಮಾರಸ್ವಾಮಿಯವರು ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯ ಜೊತೆಗೆ ಮೈತ್ರಿ ಸೂಚನೆಯನ್ನು ಈ ಹಿಂದೆಯೇ ನೀಡಿದ್ದರು.

ಆದರೆ ಕೆಲವೇ ದಿನಗಳಲ್ಲಿ ‘‘ಬಿಜೆಪಿಯೊಂದಿಗೆ ಮೈತ್ರಿ ಮಾಡುವ ದಾರಿದ್ರ್ಯ ನಮಗೆ ಬಂದಿಲ್ಲ’’ ಎಂದು ಸ್ಪಷ್ಟೀಕರಣವನ್ನೂ ನೀಡಿದ್ದರು. ಆದರೆ ಇದೀಗ ಲೋಕಸಭಾ ಚುನಾವಣೆಯಲ್ಲಿ ಮತ್ತೆ ಜೆಡಿಎಸ್-ಬಿಜೆಪಿ ಮೈತ್ರಿ ಸುದ್ದಿಯಲ್ಲಿದೆ. ಉಭಯ ಪಕ್ಷಗಳ ವರಿಷ್ಠರಾಗಿರುವ ಅಮಿತ್ ಶಾ ಮತ್ತು ದೇವೇಗೌಡರು ಮೈತ್ರಿಗೆ ಒಪ್ಪಿಕೊಂಡಿದ್ದಾರೆ ಎನ್ನುವುದನ್ನು ಯಡಿಯೂರಪ್ಪ ಅಧಿಕೃತವಾಗಿ ಮಾಧ್ಯಮಗಳ ಮುಂದೆ ಸ್ಪಷ್ಟಪಡಿಸಿದ್ದಾರೆ. ಮುಂದಿನ ಲೋಕಸಭಾ ಚುನಾವಣೆಯಲ್ಲಿ ನಾಲ್ಕು ಕ್ಷೇತ್ರಗಳನ್ನು ಜೆಡಿಎಸ್ಗೆ ಬಿಟ್ಟು ಕೊಡುವ ಬಗ್ಗೆಯೂ ಮಾತುಕತೆಯಲ್ಲಿ ನಿರ್ಧಾರವಾಗಿದೆಯಂತೆ.

ಮುಂದಿನ ಲೋಕಸಭಾ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಜೆಡಿಎಸ್ನೊಂದಿಗೆ ಮೈತ್ರಿ ಮಾತುಕತೆ ನಡೆಸಲು ಬಿಜೆಪಿ ವರಿಷ್ಠರು ​ತೋರಿಸಿದಷ್ಟು​ ಆಸಕ್ತಿ​ಯನ್ನು , ತನ್ನದೇ ಪಕ್ಷದ​ ರಾಜ್ಯ ಘಟಕದಲ್ಲಿ ಮೈತ್ರಿಯನ್ನು ಮೂಡಿಸಿ ಅವರನ್ನು ಒಟ್ಟಾಗಿಸಲು ​ ತೋರಿಸದೇ ಇರುವುದು ವಿಪರ್ಯಾಸವಾಗಿದೆ. ರಾಜ್ಯ ಬಿಜೆಪಿಯು ಇನ್ನೂ ​ತನ್ನ ವಿರೋಧ ಪಕ್ಷದ ನಾಯಕನನ್ನು ಆರಿಸಿಕೊಳ್ಳುವಲ್ಲಿ ವಿಫಲವಾಗಿದೆ. ಈ ಕಾರಣಕ್ಕಾಗಿ​ ರಾಜ್ಯ, ರಾಷ್ಟ್ರ ಮಟ್ಟದಲ್ಲಿ ರಾಜ್ಯ ಬಿಜೆಪಿ ತೀವ್ರ ಟೀಕೆಗಳನ್ನು ಎದುರಿಸುತ್ತಿದೆ. ರಾಜ್ಯಾಧ್ಯಕ್ಷರ ಅವಧಿ ಮುಕ್ತಾಯಗೊಂಡಿದೆಯಾದರೂ, ಇನ್ನೂ ನೂತನ ರಾಜ್ಯಾಧ್ಯಕ್ಷರನ್ನು ಆಯ್ಕೆ ಮಾಡಲು ಬಿಜೆಪಿ ವರಿಷ್ಠರಿಗೆ ಸಾಧ್ಯವಾಗಿಲ್ಲ.

ಕಳೆದ ವಿಧಾನಸಭಾ ಚುನಾವಣಾ ಫಲಿತಾಂಶದ ಬಳಿಕ ರಾಜ್ಯ ಬಿಜೆಪಿ ಸಂಪೂರ್ಣ ಚದುರಿ ಬಿದ್ದಿದೆ. ಅವುಗಳನ್ನು ಮರು ಸಂಘಟಿಸುವ ಯಾವ ಪ್ರಯತ್ನವೂ ನಡೆದಿಲ್ಲ. ವಿರೋಧ ಪಕ್ಷ ನಾಯಕ ಮತ್ತು ರಾಜ್ಯಾಧ್ಯಕ್ಷನ ಆಯ್ಕೆ ಪ್ರಕ್ರಿಯೆಗೆ ವರಿಷ್ಠರು ಆಸಕ್ತಿಯನ್ನು ತೋರಿಸಿದ್ದೇ ಆದಲ್ಲಿ ಬಿಜೆಪಿಯೊಳಗೆ ಭಿನ್ನಮತ ಮತ್ತೆ ಭುಗಿಲೇಳಬಹುದು ಎನ್ನುವ ಭಯ ಅವರಿಗಿದೆ.

ಕಳೆದ ಚುನಾವಣೆಯಲ್ಲಿ ಆರೆಸ್ಸೆಸ್ನ ಹಸ್ತಕ್ಷೇಪದಿಂದ ಆಗಿರುವ ಅನಾಹುತಗಳು ಇನ್ನಷ್ಟು ಬಿಗಡಾಯಿಸುವ ಸಾಧ್ಯತೆಗಳಿವೆ ಎನ್ನುವ ಆತಂಕದಿಂದ ವಿರೋಧ ಪಕ್ಷ ನಾಯಕ ಮತ್ತು ರಾಜ್ಯಾಧ್ಯಕ್ಷನ ಆಯ್ಕೆಯನ್ನು ಮುಂದೆ ಹಾಕುತ್ತಾ ಬರುತ್ತಿದ್ದಾರೆ.​ ವಿಧಾನ ಮಂಡಲದ ಅಧಿವೇಶನವೇ ವಿಪಕ್ಷ ನಾಯಕನಿಲ್ಲದೆ ನಡೆಯುವಂತಹ ವಿಚಿತ್ರ ಸನ್ನಿವೇಶಕ್ಕೂ ರಾಜ್ಯ ಸಾಕ್ಷಿಯಾಯಿತು.

ಇವುಗಳ ನಡುವೆ ಬಿ. ಎಲ್. ಸಂತೋಷ್ ನೇತೃತ್ವದಲ್ಲಿ ಒಂದು ಸಭೆಯನ್ನು ನಡೆಸುವ ಪ್ರಯತ್ನವಾಯಿತಾದರೂ, ಬಿಜೆಪಿಯ ಹಲವು ಮುಖಂಡರು ಆ ಸಭೆಗೆ ಗೈರು ಹಾಜರಾಗುವ ಮೂಲಕ, ಸಂತೋಷ್ ನೇತೃತ್ವಕ್ಕೆ ತಮ್ಮ ಅಸಮ್ಮತಿಯನ್ನು ಪ್ರದರ್ಶಿಸಿದರು. ಕೇಂದ್ರ ವರಿಷ್ಠರು ತುರ್ತಾಗಿ​ ರಾಜ್ಯ ಬಿಜೆಪಿಯೊಳಗೆ ಮೈತ್ರಿಯನ್ನು ಸಾಧಿಸಲು ಮಾತುಕತೆ ನಡೆಸಬೇಕಾಗಿದೆ. ದುರದೃಷ್ಟ ವಶಾತ್ ಅವರು, ಜೆಡಿಎಸ್ ಜೊತೆಗೆ ಮೈತ್ರಿ ಮಾತುಕತೆ ನಡೆಸಿದ್ದೇವೆ ಎಂದು ಹೇಳಿಕೆಯನ್ನು ನೀಡುತ್ತಿದ್ದಾರೆ.

ಸದ್ಯಕ್ಕೆ ಬಿಜೆಪಿಯ ರಾಜ್ಯಾಧ್ಯಕ್ಷರಾಗಿ ನಮ್ಮ ಮುಂದೆ ಕಾಣಿಸಿಕೊಳ್ಳುತ್ತಿರುವುದು ​ನಳಿನ್ ಕುಮಾರ್ ಕಟೀಲು. ಕಳೆದ ಚುನಾವಣೆಯ ಸೋಲಿನ ಹೊಣೆ ಹೊತ್ತು ​ರಾಜೀನಾಮೆಯನ್ನು ನೀಡಿದ್ದರೂ, ಹೊಸ ರಾಜ್ಯಾಧ್ಯಕ್ಷರನ್ನು ಆಯ್ಕೆ ಮಾಡುವ ವಾತಾವರಣ ಬಿಜೆಪಿಯಲ್ಲಿ ಇಲ್ಲದ ಕಾರಣ, ತಮ್ಮ ರಾಜೀನಾಮೆಯನ್ನು ಹಿಂದೆಗೆದುಕೊಂಡಿದ್ದರು.

ಆದರೆ ರಾಜ್ಯಾಧ್ಯಕ್ಷ ಸ್ಥಾನದಿಂದ ಅಧಿಕೃತ ಹೇಳಿಕೆ ನೀಡುವುದನ್ನು ಅವರು ನಿಲ್ಲಿಸಿದ್ದಾರೆ. ‘​ಚುನಾವಣಾ ರಾಜಕೀಯದಿಂದ ನಿವೃತ್ತನಾಗಿದ್ದೇನೆ’ ಎಂದು ಅಧಿಕೃತವಾಗಿ ಈಗಾಗಲೇ ಘೋಷಿಸಿಕೊಂಡಿರುವ ಯಡಿಯೂರಪ್ಪ ಅವರು ಅಗತ್ಯಬಿದ್ದಾಗ ರಾಜ್ಯಾಧ್ಯಕ್ಷನ ಸ್ಥಾನವನ್ನು ನಿರ್ವಹಿಸುತ್ತಿದ್ದಾರೆ. ಜೆಡಿಎಸ್ನೊಂದಿಗೆ ಮಾಡಿಕೊಂಡ ಮೈತ್ರಿಯ ಬಗ್ಗೆ ಸುದ್ದಿಗಾರರಿಗೆ ತಿಳಿಸಿರುವುದೂ ಯಡಿಯೂರಪ್ಪ ಅವರೇ.

ಹಾಗಾದರೆ, ಯಡಿಯೂರಪ್ಪ ಅವರನ್ನು ವರಿಷ್ಠರು ಮತ್ತೆ ರಾಜ್ಯ ರಾಜಕೀಯದಲ್ಲಿ ಸಕ್ರಿಯಗೊಳಿಸಲಿದ್ದಾರೆಯೆ? ಎನ್ನುವ ಪ್ರಶ್ನೆಯೂ ತಲೆಯೆತ್ತುತ್ತದೆ. ಬಿಜೆಪಿಯೊಳಗೆ ಬ್ರಾಹ್ಮಣ್ಯ-ಲಿಂಗಾಯತ, ಹಿರಿಯರು-ಯುವಕರು, ಆರೆಸ್ಸೆಸ್-ಆರೆಸ್ಸೆಸೇತರರು, ಹೊರಗಿನವರು-ಒಳಗಿನವರು ಎನ್ನುವ ಬಿರುಕು ಎಷ್ಟರಮಟ್ಟಿಗೆ ಇದೆ ಎಂದರೆ ವರಿಷ್ಠರು ತೆಗೆದುಕೊಳ್ಳುವ ಸಣ್ಣ ನಿರ್ಧಾರವೂ ಬಿಜೆಪಿಯನ್ನು ಹಲವು ಚೂರಾಗಿಸಬಹುದು.

ಆದುದರಿಂದ, ಲೋಕಸಭೆಯಲ್ಲಿ ಬಿಜೆಪಿ ಯಾವ ಪಕ್ಷದೊಂದಿಗೆ ಮೈತ್ರಿಯನ್ನು ಮಾಡಿಕೊಳ್ಳುತ್ತದೆ ಎನ್ನುವುದಕ್ಕಿಂತ ಮುಂಚೆ, ​ರಾಜ್ಯ ಬಿಜೆಪಿಯೊಳಗೇ ಮೈತ್ರಿಯನ್ನು ಮೂಡಿಸುವ ಕೆಲಸವಾಗಬೇಕಾಗಿದೆ.

ಅಥವಾ ಮುಂದಿನ ಲೋಕಸಭೆಯಲ್ಲಿ ಬಿಜೆಪಿಯು ಜೆಡಿಎಸ್ ಮುಖಂಡ ಕುಮಾರಸ್ವಾಮಿಯವರ ನೇತೃತ್ವದಲ್ಲಿ ಚುನಾವಣೆಯನ್ನು ಎದುರಿಸುತ್ತದೆ ಎಂದು ಜನರು ಭಾವಿಸಬೇಕಾಗು​ತ್ತದೆ.

ಯಾಕೆಂದರೆ ರಾಜ್ಯದಲ್ಲಿ ಬಿಜೆಪಿಯು ನಿರ್ವಹಿಸಬೇಕಾದ ಪಾತ್ರವನ್ನು ಕುಮಾರಸ್ವಾಮಿಯವರು ನಿರ್ವಹಿಸುತ್ತಾ ಬರುತ್ತಿದ್ದಾರೆ. ಸಿದ್ದರಾಮಯ್ಯ ನೇತೃತ್ವದ ಸರಕಾರದ ವಿರುದ್ಧ ಟೀಕೆಗಳನ್ನು ಮಾಡಲು ಬಿಜೆಪಿಯ ರಾಜ್ಯ ನಾಯಕರು ಹಿಂಜರಿಯುತ್ತಿದ್ದರೆ, ಕುಮಾರಸ್ವಾಮಿಯವರು ಪದೇ ಪದೇ ಪತ್ರಿಕಾಗೋಷ್ಠಿಗಳನ್ನು ಮಾಡುತ್ತಾ ​ಹೋರಾಡುತ್ತಿದ್ದಾರೆ.

ಬಹುಶಃ ಈ ಕಾರಣಕ್ಕಾಗಿಯೇ ಬಿಜೆಪಿಯ ದಿಲ್ಲಿ ವರಿಷ್ಠರು ತಮ್ಮ ಪಕ್ಷದೊಳಗಿರುವ ನಾಯಕರನ್ನು ಕೈ ಬಿಟ್ಟು ಜೆಡಿಎಸ್ ಕಡೆಗೆ ಆಶಾಭಾವನೆಯಿಂದ ನೋಡುತ್ತಿದ್ದಾರೆ. ಜೆಡಿಎಸ್ ರಾಜ್ಯದಲ್ಲಿ ತನ್ನ ಜಾತ್ಯತೀತ ಮತದಾರರನ್ನು ಕಳೆದುಕೊಳ್ಳುತ್ತಿರುವುದರಿಂದ, ಅದೀಗ ರಾಜ್ಯದ ಒಕ್ಕಲಿಗ ಮತಗಳನ್ನು ಸಂಘಟಿಸಿ ಬಿಜೆಪಿಗೆ ವರ್ಗಾಯಿಸುವ ಭರವಸೆಯನ್ನು ಅಮಿತ್ ಶಾ ಅವರಿಗೆ ನೀಡಿ ನಾಲ್ಕು ಲೋಕಸಭಾ ಸ್ಥಾನಗಳನ್ನು ಜೇಬಿಗಿಳಿಸಲು ಮುಂದಾಗಿದೆ.

ಆ ನಾಲ್ಕು ಲೋಕಸಭಾ ಸ್ಥಾನಗಳಲ್ಲಿ ಸ್ಪರ್ಧಿಸಲು ಅವರದೇ ಕುಟುಂಬದ ಮಕ್ಕಳು, ಮೊಮ್ಮಕ್ಕಳು ಸಿದ್ಧರಾಗಿ ನಿಂತಿದ್ದಾರೆ. ಜಾತ್ಯತೀತ ಮತಗಳ ಬಗ್ಗೆ ಸಂಪೂರ್ಣ ನಂಬಿಕೆ ಕಳೆದುಕೊಂಡಿರುವ ಕುಮಾರಸ್ವಾಮಿ ಅವರು ರಾಜಕೀಯ ಅಸ್ತಿತ್ವವನ್ನು ಉಳಿಸಿಕೊಳ್ಳಲು ಬಿಜೆಪಿ ಸಿದ್ಧಾಂತದ ಜೊತೆಗೆ ಕೈ ಮೀಲಾಯಿಸುವುದೊಂದೇ ದಾರಿ ಎಂದು ನಂಬಿದಂತಿದೆ.

ಒಕ್ಕಲಿಗರ ಮತಗಳನ್ನು ಬಿಜೆಪಿ ಕಡೆಗೆ ಹರಿದು ಹೋಗುವಂತೆ ಮಾಡಿ, ಆ ಮೂಲಕ ತನ್ನ ಕುಟುಂಬದ ಹಿತಾಸಕ್ತಿಯನ್ನು ಕಾಯ್ದುಕೊಳ್ಳುವ ಏಕೈಕ ಉದ್ದೇಶದಿಂದ ಅವರು ಬಿಜೆಪಿಯೊಂದಿಗೆ ಮೈತ್ರಿಗೆ ಮುಂದಾಗಿದ್ದಾರೆ. ಭವಿಷ್ಯದಲ್ಲಿ ಜೆಡಿಎಸ್ ಬಿಜೆಪಿಯೊಂದಿಗೆ ಸಂಪೂರ್ಣ ವಿಲೀನವಾಗುವ ಸಾಧ್ಯತೆಗಳನ್ನು ಇದು ಹೇಳುತ್ತಿದೆ.​ ಕ್ರಮೇಣ ಜೆಡಿಎಸ್​ ಅನ್ನು ನುಂಗಿ ನೀರು ಕುಡಿಯುವುದರ ಜೊತೆಗೆ, ಜೆಡಿಎಸ್ನ ಸಾಂಪ್ರದಾಯಿಕ ಒಕ್ಕಲಿಗ ಮತಗಳನ್ನು ತನ್ನದಾಗಿಸಿಕೊಳ್ಳುವುದು ಬಿಜೆಪಿಯ ಗುರಿಯಾಗಿದೆ.

​ಮೈತ್ರಿ ಮಾಡಿ ತನ್ನನ್ನು ಅಧಿಕಾರಕ್ಕೆ ಏರಿಸುವ ಪ್ರಾದೇಶಿಕ ಪಕ್ಷವನ್ನು ಬಿಜೆಪಿ ಹೇಗೆ ಕ್ರಮೇಣ ಆಪೋಶನ ತೆಗೆದುಕೊಂಡು ಬಿಡುತ್ತದೆ ಎಂಬುದಕ್ಕೆ ಮಹಾರಾಷ್ಟ್ರ ರಾಜಕಾರಣದಲ್ಲಿ ತಾಜಾ ಉದಾಹರಣೆಯಿದೆ. ಆದರೆ ಕುಮಾರಸ್ವಾಮಿಯವರಿಗೆ ಈಗ ಅದನ್ನೆಲ್ಲ ನೋಡುವ ತಾಳ್ಮೆ ಇದೆಯೇ ?

ಅದು ಮುಖ್ಯ ಪ್ರಶ್ನೆ

share
ವಾರ್ತಾಭಾರತಿ
ವಾರ್ತಾಭಾರತಿ
Next Story
X