Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರ್ತಾಭಾರತಿ ವಿಶೇಷ
  3. ಮೋಸದ ಗೆಲುವಿನ ಬಿಜೆಪಿ ಪ್ರಯತ್ನಕ್ಕೆ...

ಮೋಸದ ಗೆಲುವಿನ ಬಿಜೆಪಿ ಪ್ರಯತ್ನಕ್ಕೆ ಭಾರೀ ಮುಖಭಂಗ; ಅನ್ಯಾಯದ ನಡೆಯ ವಿರುದ್ಧ ಸುಪ್ರೀಂ ಕೋರ್ಟಿನ ಐತಿಹಾಸಿಕ ತೀರ್ಪು

ಆರ್. ಕುಮಾರ್ಆರ್. ಕುಮಾರ್22 Feb 2024 10:32 AM IST
share
ಮೋಸದ ಗೆಲುವಿನ ಬಿಜೆಪಿ ಪ್ರಯತ್ನಕ್ಕೆ ಭಾರೀ ಮುಖಭಂಗ; ಅನ್ಯಾಯದ ನಡೆಯ ವಿರುದ್ಧ ಸುಪ್ರೀಂ ಕೋರ್ಟಿನ ಐತಿಹಾಸಿಕ ತೀರ್ಪು

ಚಂಡೀಗಡ ಮೇಯರ್ ಚುನಾವಣೆಯಲ್ಲಿ ನ್ಯಾಯವಾಗಿ ಗೆಲ್ಲಲೇಬೇಕಿದ್ದ ಅಭ್ಯರ್ಥಿಯೇ ಈಗ ಮೇಯರ್ ಆಗಿ ಘೋಷಣೆಯಾಗಿರುವುದು ಪ್ರಜಾತಂತ್ರದ ದೊಡ್ಡ ಗೆಲುವು.

ಮತ್ತದು, ಪ್ರಜಾಸತ್ತೆಯ ಉಳಿವಿಗಾಗಿ ಸುಪ್ರೀಂ ಕೋರ್ಟ್ ವಿಳಂಬಕ್ಕೆ ಎಡೆಯಿಲ್ಲದಂತೆ ಕಾರ್ಯಪ್ರವೃತ್ತವಾದ ಅತಿ ಮುಖ್ಯ ವಿದ್ಯಮಾನದ ಫಲ.

ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್ ಶಾ ಅವರು ಸುಪ್ರೀಂ ಕೋರ್ಟ್ ತೀರ್ಪಿನ ಬಗ್ಗೆ ಪ್ರತಿಕ್ರಿಯೆ ಕೊಡಬೇಕಿತ್ತು. ಸುಪ್ರೀಂ ಕೋರ್ಟಿನ ಈ ಐತಿಹಾಸಿಕ ತೀರ್ಪು ‘ಮದರ್ ಆಫ್ ಡೆಮಾಕ್ರಸಿ’ಯ ಮಾನ ಉಳಿಸಿದೆ ಎಂದು ಅವರು ಪ್ರತಿಕ್ರಿಯೆ ಕೊಡಬೇಕಿತ್ತು. ಆದರೆ ಅವರಿಂದ ಯಾವುದೇ ಪ್ರತಿಕ್ರಿಯೆ ಬರುತ್ತಿಲ್ಲ. ಯಾಕೆ ?

ಮತ್ತೊಮ್ಮೆ ಬಿಜೆಪಿಗೆ, ಮತ್ತದರ ನಾಯಕ ಮೋದಿಗೆ ಭಾರೀ ಮುಖಭಂಗವಾಗಿದೆ. ಅಕ್ರಮ ನಡೆದಿದ್ದ, ಅಸಾಂವಿಧಾನಿಕ ರೀತಿಯಲ್ಲಿದ್ದ ಚಂಡೀಗಡ ಮೇಯರ್ ಚುನಾವಣೆಯ ಫಲಿತಾಂಶವನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿದೆ.

ಬಲವಂತದ ಸೋಲಿಗೆ ತುತ್ತಾಗಿದ್ದ ಆಮ್ ಆದ್ಮಿ ಪಕ್ಷದ ಕುಲದೀಪ್ ಕುಮಾರ್ ಅವರನ್ನು ಹೊಸ ಮೇಯರ್ ಎಂದು ಸುಪ್ರಿಂ ಕೋರ್ಟ್ ಘೋಷಿಸಿದೆ. ನಿಜವಾಗಿ ಯಾರು ಮೇಯರ್ ಆಗಿ ಅವತ್ತು ಗೆಲುವು ಸಾಧಿಸಬೇಕಿತ್ತೊ ಅವರೇ ಈಗ ಚಂಡೀಗಡ ಮೇಯರ್ ಆಗಿದ್ಧಾರೆ.

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಬಿಜೆಪಿಗೆ 400 ಸೀಟುಗಳು ಬರುತ್ತವೆ ಎಂದು ಕೊಚ್ಚಿಕೊಳ್ಳಲಾಗುತ್ತಿರುವ ಹೊತ್ತಿನಲ್ಲಿ, ಅದೇ ಬಿಜೆಪಿ ವಿಪಕ್ಷಗಳ ವಿರುದ್ಧ ಮಾಡಬಾರದ ತಂತ್ರಗಳನ್ನೆಲ್ಲ ಮಾಡುತ್ತ ಗೆಲ್ಲಲು ನೋಡುತ್ತಿರುವುದು ವಿಪರ್ಯಾಸವಾಗಿದೆ. ಒಂದು ನಗರದ ಮೇಯರ್ ಚುನಾವಣೆಯನ್ನು ಗೆಲ್ಲುವುದಕ್ಕೆ ಕೂಡ ಬಿಜೆಪಿ ಅಕ್ರಮ ಎಸಗುತ್ತಿದೆ. ಮತ್ತದನ್ನು ನ್ಯಾಯಾಲಯ ಕಟು ಶಬ್ದಗಳಲ್ಲಿ ಖಂಡಿಸಿ, ತಿರಸ್ಕರಿಸಿದೆ. ‘ಮದರ್ ಆಫ್ ಡೆಮಾಕ್ರಸಿ’ ಎಂದು ದೇಶವನ್ನು ವರ್ಣಿಸುವ ಫಾದರ್ ಆಫ್ ಪವರ್ ಪಾಲಿಗೆ ಇದಕ್ಕಿಂತ ನಾಚಿಕೆಗೇಡಿನ ದಿನ ಇನ್ನೊಂದಿರಲಾರದು.


ಮೊನ್ನೆ ಚುನಾವಣಾ ಬಾಂಡ್ ಅಸಾಂವಿಧಾನಿಕ ಎಂದು ಸುಪ್ರೀಂ ಕೋರ್ಟ್ ತೀರ್ಪು ಕೊಟ್ಟಿತು. ಈಗ ಚಂಡೀಗಡ ಮೇಯರ್ ಚುನಾವಣೆ ಅಸಾಂವಿಧಾನಿಕವಾಗಿ ನಡೆದಿದೆ ಎಂದು ಹೇಳಿದೆ. ಆದರೆ ಸರಕಾರದ ಕಡೆಯಿಂದ, ಬಿಜೆಪಿ ಕಡೆಯಿಂದ ಈ ಯಾವ ವಿಚಾರಕ್ಕೂ ನೈತಿಕ ಹೊಣೆ ಹೊರಲು ಯಾರೂ ಮುಂದೆ ಬಂದಿಲ್ಲ.

ಇನ್ನೊಂದೆಡೆ, ಈ ಯಾವ ವಿಚಾರಗಳೂ ಮಡಿಲ ಮೀಡಿಯಾಗಳನ್ನು ಕಾಡಿಯೇ ಇಲ್ಲ.

ಬಿಜೆಪಿ ಕಡೆಯ ವ್ಯಕ್ತಿಯೇ ಆಗಿರುವ ಅನಿಲ್ ಮಸಿಹ್ ಚುನಾವಣಾಧಿಕಾರಿಯಾಗುವುದು, ಅಕ್ರಮವೆಸಗುವುದು, ಬಿಜೆಪಿ ಗೆಲುವಿಗೆ ನೆರವಾಗುವುದು ಯಾವುದೇ ಅಡೆತಡೆ ಇಲ್ಲದೆ ನಡೆದುಹೋಗುತ್ತದೆ. ಈಗ ಆತ ಎಸಗಿದ ಅಕ್ರಮವನ್ನು ಸುಪ್ರೀಂ ಕೋರ್ಟ್ ಹಿಡಿದು ಹಾಕಿದೆ. ಆತ ಮಾಡಿದ್ದು ಜನತಂತ್ರ ವ್ಯವಸ್ಥೆಯ ಇತಿಹಾಸದಲ್ಲಿಯೇ ಘೋರ ಎನ್ನಿಸುವಂಥದ್ದು. ಅದನ್ನು ಜನತಂತ್ರದ ಕಗ್ಗೊಲೆ ಎಂದೇ ಸುಪ್ರೀಂ ಕೋರ್ಟ್ ಹೇಳಿತು. ಜನತಂತ್ರದ ಹತ್ಯೆಯಾಗಲು ಅವಕಾಶ ಕೊಡುವುದಿಲ್ಲ ಎಂದು ಹೇಳಿತು.

ಇಲ್ಲಿ ಬಯಲಾಗಿರುವುದು ಅನಿಲ್ ಮಸಿಹ್ ಎಸಗಿದ ಅಕ್ರಮ ಮಾತ್ರವಲ್ಲ. ಅಕ್ರಮವೇ ನಡೆದಿಲ್ಲ ಎಂದು ಸಮರ್ಥಿಸಲು ಯತ್ನಿಸಿದ, ಲೋಕತಂತ್ರದ ಕಗ್ಗೊಲೆಯಂಥ ನಡೆಯನ್ನೂ ಅಂಥ ಅಕ್ರಮವನ್ನೂ ಸರಿ ಎಂದು ಹೇಳಿದ ಮಡಿಲ ಮಿಡಿಯಾಗಳ ಬಣ್ಣವೂ ಬಯಲಾಗಿದೆ.

ಕ್ಯಾಮರಾದಲ್ಲಿ ಎಲ್ಲವೂ ಸ್ಪಷವಾಗಿತ್ತು, ಎಲ್ಲರೂ ನೋಡಿದ್ದರು. ಅನಿಲ್ ಮಸಿಹ್ ಮತಪತ್ರಗಳ ಮೇಲೆ ಗುರುತು ಹಾಕುವುದು ಎಲ್ಲರ ಕಣ್ಣಿಗೂ ಕಂಡಿತ್ತು. ಆದರೆ ಅದೇಕೆ ಇವೆಲ್ಲ ಮಡಿಲ ಮೀಡಿಯಾಗಳ ಕಣ್ಣಿಗೆ ಕಾಣುವುದಿಲ್ಲ?

ಇಂಥದ್ದನ್ನೆಲ್ಲ ಮಾಡಬಾರದು ಎಂದಾಗಲಿ, ಯಾಕೆ ಮಾಡಲಾಯಿತು ಎಂದಾಗಲಿ ಅವು ಹೇಳುವುದಕ್ಕೆ ಹೋಗುವುದಿಲ್ಲ. ಕೇಳುವುದೇ ಇಲ್ಲ. ಆ ಬಗ್ಗೆ ಸ್ಪೆಷಲ್ ಸ್ಟೋರಿ, ಡಿಬೇಟ್, ಬೊಬ್ಬೆ, ಆರ್ಭಟ ಯಾವುದೂ ಇಲ್ಲ. ಎಲ್ಲ ಭಟ್ಟಂಗಿ ಆ್ಯಂಕರ್‌ಗಳ ಬಾಯಿಗೂ ಬೀಗ ಬಿದ್ದಿದೆ.

ವಿಪಕ್ಷಗಳಿಗೆ ಪ್ರಶ್ನೆ ಕೇಳುವುದಕ್ಕೆ ಭಾರೀ ಆತುರ ತೋರಿಸುವ ಮಡಿಲ ಮೀಡಿಯಾ ಪತ್ರಕರ್ತರಿಗೆ ಈಗ ಸರಕಾರವನ್ನು ಪ್ರಶ್ನಿಸಲು ಏಕೆ ಆಗುವುದಿಲ್ಲ?

ಬಿಜೆಪಿ ಕಡೆಯವನಾಗಿದ್ದ ಚುನಾವಣಾಧಿಕಾರಿ ಅನಿಲ್ ಮಸಿಹ್ ಅಸಿಂಧು ಎಂದು ಹೇಳಿದ್ದ ವಿಪಕ್ಷಗಳ 8 ಮತಪತ್ರಗಳನ್ನು ಸುಪ್ರೀಂ ಕೋರ್ಟ್ ಸಿಂಧು ಎಂದು ಹೇಳಿದೆ.

ವೀಡಿಯೊದಲ್ಲಿ ಅನಿಲ್ ಮಸಿಹ್ ಮಾಡುತ್ತಿರುವುದೇನು ಎನ್ನುವುದು ಸ್ಪಷ್ಟವಾಗಿತ್ತು. ಆದರೆ ಮಡಿಲ ಮೀಡಿಯಾಗಳು ಮಾತ್ರ ಅಕ್ರಮವೆಸಗಿದವನ ರಕ್ಷಣೆಗೆ ನಿಂತಿದ್ದವು. ಪತ್ರಕರ್ತರಿಂದ ತಪ್ಪುಗಳಾಗುವುದಿಲ್ಲ ಎಂದಲ್ಲ, ಆಗುತ್ತವೆ. ಆದರೆ ಅನಿಲ್ ಮಸಿಹ್ ವಿಚಾರದಲ್ಲಿ ಮಡಿಲ ಮೀಡಿಯಾಗಳು ಎಸಗಿರುವ ಪ್ರಮಾದಕ್ಕೆ ಸಮರ್ಥನೆಯಿಲ್ಲ.

ಚುನಾವಣಾ ಅಕ್ರಮವನ್ನು ಮರೆಮಾಚುವ ಕಸರತ್ತು, ತಪ್ಪಲ್ಲವೆಂದು ಪ್ರತಿಪಾದಿಸುವ ಕಸರತ್ತಿನಲ್ಲಿ ಮಡಿಲ ಮೀಡಿಯಾ ಪತ್ರಕರ್ತರು ಬಿದ್ದಿದ್ದರು. ವಿರೂಪಗೊಳಿಸಿಲ್ಲ ಎಂದು ವಾದಿಸಿದ್ದರು.

ಪತ್ರಕರ್ತರಾಗುವುದು ಪ್ರಧಾನಿ ಜೊತೆ ಫೋಟೊ ತೆಗೆಸಿಕೊಳ್ಳುವುದಕ್ಕಲ್ಲ. ಬದಲಾಗಿ ಪ್ರಧಾನಿಗೆ ಮುಖಾಮುಖಿಯಾಗಿ ಅವರನ್ನು ಪ್ರಶ್ನಿಸುವುದಕ್ಕೆ. ಆದರೆ ಬಹಳಷ್ಟು ಪತ್ರಕರ್ತರು ಪತ್ರಿಕಾ ಧರ್ಮ ಬಿಟ್ಟು ಯಾವತ್ತೋ ದಲ್ಲಾಳಿಗಳಾಗಿಬಿಟ್ಟಿದ್ದಾರೆ. ಹಾಗಿದ್ದೂ, ತಾವು ಪತ್ರಿಕೋದ್ಯಮವನ್ನೇ ಮಾಡುತ್ತಿರುವ ಭ್ರಮೆಯಲ್ಲಿರುತ್ತಾರೆ.

2014ರ ನಂತರ ದೇಶದಲ್ಲಿ ಪತ್ರಿಕಾ ವೃತ್ತಿ ಎಲ್ಲಿಗೆ ಬಂದಿದೆ ಎಂಬುದನ್ನು ನೋಡುತ್ತಿದ್ದೇವೆ.

ದಲ್ಲಾಳಿಗಳಂಥ ಪತ್ರಕರ್ತರು, ರಾಮಮಂದಿರವನ್ನು ಸಾವಿರ ವರ್ಷ ಬಾಳಿಕೆ ಬರುವಂತೆ ಕಟ್ಟಲಾಗಿದೆ ಎಂದು ಮಾತ್ರ ಬರೆದುಕೊಂಡು ಕೂತಿರುತ್ತಾರೆ. ಅಂಥವರು ಪತ್ರಿಕಾ ಧರ್ಮವನ್ನು ಎಂದೋ ಮುಗಿಸಿಹಾಕಿದ್ದಾರೆ. ಮಡಿಲ ಮೀಡಿಯಾದಲ್ಲಿ ಪತ್ರಕರ್ತರು ರೂಪುಗೊಳ್ಳಲು ಸಾಧ್ಯವಿಲ್ಲ ಅಥವಾ ನಿಜವಾದ ಪತ್ರಕರ್ತರಾಗಿರುವವರು ಅಲ್ಲಿ ಬಾಳಲಾರರು.

ಅನಿಲ್ ಮಸಿಹ್ ರಕ್ಷಣೆಗಾಗಿ ಯಾವ್ಯಾವ ಪತ್ರಕರ್ತರು ಒದ್ದಾಡಿದ್ದರೋ ಅಂಥವರು ಸರಕಾರದ ವಿರುದ್ಧ ಪ್ರಶ್ನೆ ಎತ್ತಲಾರರು. ಸತ್ಯವನ್ನು ಹೊರಗೆ ತರಲಾರರು.

ಮೇಯರ್ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಆಮ್ ಆದ್ಮಿ ಪಾರ್ಟಿ 20 ಮತಗಳೊಂದಿಗೆ ಬಹುಮತ ಹೊಂದಿದ್ದವು. ಆದರೆ ವಿಪಕ್ಷಗಳ 8 ಮತಪತ್ರಗಳನ್ನು ಅಸಿಂಧುಗೊಳಿಸಿ, 16 ಮತಗಳಿದ್ದ ಬಿಜೆಪಿ ಅಭ್ಯರ್ಥಿ ಗೆದ್ದಿರುವುದಾಗಿ ಘೋಷಿಸಲಾಗಿತ್ತು. ತಮಾಷೆಯೆಂದರೆ, ಅಸಿಂಧುವಾದ ಮತಪತ್ರಗಳು ವಿಪಕ್ಷಗಳದ್ದು ಮಾತ್ರವಾಗಿದ್ದವೇ ಹೊರತು ಬಿಜೆಪಿಯ ಯಾವ ಮತಪತ್ರವೂ ಅನರ್ಹಗೊಂಡಿರಲಿಲ್ಲ.

ಇಲ್ಲಿ ಬಿಜೆಪಿಗಾಗಿ ಅಕ್ರಮವೆಸಗಿದ್ದ ಅನಿಲ್ ಮಸಿಹ್ ಒಬ್ಬಂಟಿಯಾಗಿರಲಿಲ್ಲ.

ಆಮ್ ಆದ್ಮಿ ಪಕ್ಷ ಹೇಳಿರುವಂತೆ, ಅನಿಲ್ ಮಸಿಹ್ ಕಡೆಗೆ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಇದ್ದರು. ದೇಶದ ಅತಿ ದೊಡ್ಡ ವಕೀಲ, ಮೋದಿ ಸರಕಾರದ ಈ ಮುಂಚಿನ ಅವಧಿಯಲ್ಲಿ ಅಟಾರ್ನಿ ಜನರಲ್ ಆಗಿದ್ದ ಮುಕುಲ್ ರೋಹ್ಟಗಿ ಇದ್ದರು. ಅಂದರೆ ಪೂರ್ತಿ ಸರಕಾರವೇ ಮಸಿಹ್ ಕಡೆ ನಿಂತಿತ್ತು.

ಮೇಯರ್ ಚುನಾವಣೆಯಲ್ಲಿ ಅಕ್ರಮ ನಡೆದಿದ್ದರ ವಿಚಾರಣೆ ವೇಳೆಯಲ್ಲಿ ಐತಿಹಾಸಿಕ ವಿದ್ಯಮಾನಕ್ಕೆ ಸುಪ್ರೀಂ ಕೋರ್ಟ್ ಸಾಕ್ಷಿಯಾಯಿತು.

ವಿಚಾರಣೆಯ ವೇಳೆಯೇ ಮತಪತ್ರಗಳ ಮರು ಎಣಿಕೆ ನಡೆಯಿತು. ನ್ಯಾಯಾಧೀಶರೇ ಫಲಿತಾಂಶವನ್ನು ಘೋಷಿಸಿದರು. ಕುಲದೀಪ್ ಕುಮಾರ್ ಅವರನ್ನು ಮೇಯರ್ ಎಂದು ಘೋಷಿಸಲಾಯಿತು.

ತೀರ್ಪಿಗೆ ಮುನ್ನವೇ ಸೋಮವಾರವೇ ಬಿಜೆಪಿಯ ಮನೋಜ್ ಸೋಂಕರ್ ಮೇಯರ್ ಹುದ್ದೆಗೆ ರಾಜೀನಾಮೆ ನೀಡಿದ್ದರು.

ಆ ನಡುವೆಯೇ ಆಮ್ ಆದ್ಮಿ ಪಾರ್ಟಿಯ ಮೂವರು ಬಿಜೆಪಿಗೆ ವಲಸೆ ಹೋಗಿದ್ದರು. ಕುದುರೆ ವ್ಯಾಪಾರ ನಡೆದಿರುವುದು ಸ್ಪಷ್ಟವಾಗಿತ್ತು. ಮರು ಚುನಾವಣೆ ನಡೆದರೆ ತಾನೇ ಗೆಲ್ಲಲು ಬಿಜೆಪಿ ಎಲ್ಲ ವ್ಯವಸ್ಥೆಯನ್ನೂ ಮಾಡಿಕೊಂಡಿತ್ತು.

ಆದರೆ ಅಂಥ ಸಂದರ್ಭವೇ ಬರಲಿಲ್ಲ. ಹೊಸದಾಗಿ ಚುನಾವಣೆ ನಡೆಸಬೇಕೆಂಬ ಬಿಜೆಪಿ ಮನವಿಯನ್ನು ತಿರಸ್ಕರಿಸಿದ ಕೋರ್ಟ್, ಅನರ್ಹಗೊಳಿಸಲಾಗಿದ್ದ 8 ಮತಗಳನ್ನೂ ಸೇರಿಸಿ ಮತ ಎಣಿಕೆಗೆ ಸೂಚಿಸಿತು. ಅಸಿಂಧು ಎನ್ನಲಾಗಿದ್ದ ಮತಗಳ ಎಣಿಕೆ ಮಾಡುವುದರೊಂದಿಗೆ ಮೇಯರ್ ಘೋಷಣೆ ಆಯಿತು.

ಮೇಯರ್ ಚುನಾವಣೆಯಲ್ಲಿಯೇ ಬಿಜೆಪಿ ಈ ಮಟ್ಟಿಗೆ ಅಕ್ರಮ ಎಸಗಬಲ್ಲುದಾದರೆ, ಬಾಕಿ ಚುನಾವಣೆಯಲ್ಲಿ ಏನಾದೀತು ಎಂಬುದು ನಿಜಕ್ಕೂ ಆತಂಕಕಾರಿಯಾಗಿದೆ. 36 ಮತಗಳ ಚುನಾವಣೆಯಲ್ಲೇ ಹೀಗಾದರೆ ಇನ್ನು ಇತರ ಚುನಾವಣೆಗಳಲ್ಲಿ ಏನೇನಾಗಬಹುದು?

ಅವತ್ತು ಮೇಯರ್ ಆಗಿ ಬಿಜೆಪಿ ಅಭ್ಯರ್ಥಿ ಘೋಷಣೆಯಾದಾಗ ಬಿಜೆಪಿ ಸಂಭ್ರಮಿಸಿತ್ತು. ಜೆ.ಪಿ. ನಡ್ಡಾ ವಿಪಕ್ಷ ಮೈತ್ರಿಕೂಟವನ್ನು ಗೇಲಿ ಮಾಡಿದ್ದರು. ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದಲ್ಲಿನ ಬಿಜೆಪಿಯ ಯಶಸ್ಸಿನ ಬಗ್ಗೆ ನಡ್ಡಾ ಮತ್ತೊಮ್ಮೆ ಮಾತನಾಡಿದ್ದರು. ಬಿಜೆಪಿ ಎದುರು ವಿಪಕ್ಷಗಳಿಗೆ ಸೋಲಾಗಿರುವುದನ್ನು ಭಾರೀ ಹೆಮ್ಮೆಯಿಂದ ಹೇಳಿಕೊಂಡಿದ್ದರು. ತಾವು ಮೇಯರ್ ಚುನಾವಣೆಯನ್ನು ಗೆದ್ದಿರುವುದು ಹೇಗೆ ಎಂಬ ವಿಚಾರ ಇವರೆಲ್ಲರಿಗೂ ಗೊತ್ತೇ ಇತ್ತಲ್ಲವೆ?

ಕಡೆಗೂ, ಪ್ರಜಾಪ್ರಭುತ್ವದ ಹತ್ಯೆಯಾಗುವುದನ್ನು ಸುಪ್ರೀಂ ಕೋರ್ಟ್ ತಡೆದಿದೆ. ಸ್ವಾಯತ್ತ ಸಂಸ್ಥೆಗಳೆಲ್ಲವೂ ಒಟ್ಟಾಗಿ, ಪ್ರಜಾತಂತ್ರಕ್ಕೆ ಮಾರಕವಾಗಿರುವ ಸಂದರ್ಭಗಳನ್ನು ಇದೇ ರೀತಿಯಲ್ಲಿ ಎದುರಿಸಿ, ಪ್ರಜಾಸತ್ತೆಯನ್ನು ಉಳಿಸಬೇಕಿದೆ.

ಚಂಡೀಗಡ ಮೇಯರ್ ಚುನಾವಣೆಯಲ್ಲಿ ನ್ಯಾಯವಾಗಿ ಗೆಲ್ಲಲೇಬೇಕಿದ್ದ ಅಭ್ಯರ್ಥಿಯೇ ಈಗ ಮೇಯರ್ ಆಗಿ ಘೋಷಣೆಯಾಗಿರುವುದು ಪ್ರಜಾತಂತ್ರದ ದೊಡ್ಡ ಗೆಲುವು.

ಮತ್ತದು, ಪ್ರಜಾಸತ್ತೆಯ ಉಳಿವಿಗಾಗಿ ಸುಪ್ರೀಂ ಕೋರ್ಟ್ ವಿಳಂಬಕ್ಕೆ ಎಡೆಯಿಲ್ಲದಂತೆ ಕಾರ್ಯಪ್ರವೃತ್ತವಾದ ಅತಿ ಮುಖ್ಯ ವಿದ್ಯಮಾನದ ಫಲ.

ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್ ಶಾ ಅವರು ಸುಪ್ರೀಂ ಕೋರ್ಟ್ ತೀರ್ಪಿನ ಬಗ್ಗೆ ಪ್ರತಿಕ್ರಿಯೆ ಕೊಡಬೇಕಿತ್ತು. ಸುಪ್ರೀಂ ಕೋರ್ಟಿನ ಈ ಐತಿಹಾಸಿಕ ತೀರ್ಪು ‘ಮದರ್ ಆಫ್ ಡೆಮಾಕ್ರಸಿ’ಯ ಮಾನ ಉಳಿಸಿದೆ ಎಂದು ಅವರು ಪ್ರತಿಕ್ರಿಯೆ ಕೊಡಬೇಕಿತ್ತು. ಆದರೆ ಅವರಿಂದ ಯಾವುದೇ ಪ್ರತಿಕ್ರಿಯೆ ಬರುತ್ತಿಲ್ಲ. ಯಾಕೆ ?

ದೇಶದ ಯಾವ್ಯಾವುದೋ ವಿಷಯಗಳ ಬಗ್ಗೆ ಕೂಡಲೇ ಪ್ರತಿಕ್ರಿಯೆ ನೀಡುವ ಪ್ರಧಾನಿ ಹಾಗೂ ಅಮಿತ್ ಶಾ ಈ ಬಗ್ಗೆ ಯಾಕೆ ಯಾವುದೇ ಪ್ರತಿಕ್ರಿಯೆ ಕೊಟ್ಟಿಲ್ಲ?

share
ಆರ್. ಕುಮಾರ್
ಆರ್. ಕುಮಾರ್
Next Story
X