Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರ್ತಾಭಾರತಿ ವಿಶೇಷ
  3. ಕೆನಡಾ ಬಳಿಕ ಅಮೆರಿಕದಿಂದ ಸ್ಪೋಟಕ ಆರೋಪ

ಕೆನಡಾ ಬಳಿಕ ಅಮೆರಿಕದಿಂದ ಸ್ಪೋಟಕ ಆರೋಪ

ಜಾಗತಿಕವಾಗಿ ಭಾರತಕ್ಕೆ ಭಾರೀ ಮುಖಭಂಗ ► ಕೆನಡಾ ಆರೋಪ ನಿರಾಕರಿಸಿದ್ದ ಭಾರತ ಈಗ ಹೇಳೋದೇನು ?

ವಾರ್ತಾಭಾರತಿವಾರ್ತಾಭಾರತಿ2 Dec 2023 6:36 PM IST
share
ಕೆನಡಾ ಬಳಿಕ ಅಮೆರಿಕದಿಂದ ಸ್ಪೋಟಕ ಆರೋಪ

ಸಿಖ್ ಪ್ರತ್ಯೇಕತಾವಾದಿ ನಾಯಕ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯಲ್ಲಿ ಭಾರತದ ಕೈವಾಡವಿದೆ ಎಂದು ಆರೋಪಿಸಿದ್ದ ಕೆನಡಾ ವಿರುದ್ಧ ಗರಂ ಆಗಿದ್ದ ಭಾರತಕ್ಕೆ ಈಗ ಅಮೇರಿಕ ತೀವ್ರ ಮುಜುಗರ ತಂದಿಟ್ಟಿದೆ. ತನ್ನ ನೆಲದಲ್ಲಿ ಸಿಖ್ ಪ್ರತ್ಯೇಕತಾವಾದಿ ನಾಯಕನೊಬ್ಬನ ಹತ್ಯೆ ಯತ್ನವನ್ನು ಅಧಿಕಾರಿಗಳು ವಿಫಲಗೊಳಿಸಿರುವುದಾಗಿ ಆಮೆರಿಕ ಮೊನ್ನೆ ಹೇಳಿತ್ತು. ಇದರಲ್ಲಿ ಭಾರತದ ಕೈವಾಡವಿದೆ ಎಂದು ಕಳವಳ ವ್ಯಕ್ತಪಡಿಸಿರುವ ಅಮೆರಿಕ, ಭಾರತಕ್ಕೆ ಎಚ್ಚರಿಕೆಯನ್ನೂ ನೀಡಿದೆ ಎಂದು ವರದಿಯಾಗಿತ್ತು.

ಆದರೆ ಈಗ ಭಾರತದ ಹಿರಿಯ ಬೇಹು ಅಧಿಕಾರಿಯೊಬ್ಬರೇ ಆ ಹತ್ಯೆ ಯತ್ನದ ಸೂತ್ರಧಾರಿ ಎಂದು ಅಮೇರಿಕಾದ ನ್ಯಾಯ ಇಲಾಖೆ ನೇರವಾಗಿಯೇ ಆರೋಪಿಸಿದೆ. ಭಾರತದ ವಿರುದ್ಧದ ಅಮೇರಿಕ ಸರಕಾರದ ಈ ಸ್ಪೋಟಕ ಆರೋಪ ಬುಧವಾರ ಬಹಿರಂಗವಾಗಿದೆ.

ಅದರ ಪ್ರಕಾರ ಸಿಸಿ 1 ಎಂದು ಗುರುತಿಸಲ್ಪಡುವ ಈ ಹಿರಿಯ ಬೇಹು ಅಧಿಕಾರಿ ನಿಖಿಲ್ ಗುಪ್ತಾ ಎಂಬಾತನ ಮೂಲಕ ಒಬ್ಬ ಸುಪಾರಿ ಹಂತಕನಿಗೆ ಮುಂಗಡ ಹಣ ನೀಡಿ ಖಾಲಿಸ್ತಾನಿ ಗುರ್ಪತ್ವಂತ್ ಸಿಂಗ್ ಪನ್ನುನ್ ಹತ್ಯೆಗೆ ನಿಯೋಜಿಸಿದ್ದರು. ನಿಖಿಲ್ ಗುಪ್ತಾ ಹಂತಕನಿಗೆ ಹದಿನೈದು ಸಾವಿರ ಡಾಲರ್ ಹಣವನ್ನೂ ಪಾವತಿಸಿದ್ದಾನೆ. ಈ ಕೊಲೆ ಮಾಡಿಸಲು ಅನುಕೂಲವಾಗುವಂತೆ ನಿಖಿಲ್ ಗುಪ್ತಾ ವಿರುದ್ಧ ಇದ್ದ ಕ್ರಿಮಿನಲ್ ಕೇಸನ್ನು ಬೇಹು ಅಧಿಕಾರಿಯ ಸೂಚನೆ ಮೇರೆಗೆ ಗುಜರಾತ್ ಪೊಲೀಸರು ಕೈಬಿಟ್ಟಿದ್ದರು ಎಂದೂ ಅಮೇರಿಕ ಹೇಳಿದೆ.

ಅಷ್ಟೇ ಅಲ್ಲ. ಎರಡು ತಿಂಗಳ ಹಿಂದೆ ಕೆನಡಾದಲ್ಲಿ ನಡೆದ ಸಿಖ್ ಪ್ರತ್ಯೇಕತಾವಾದಿ ನಾಯಕ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಗೂ ಈಗ ಅಮೇರಿಕಾದಲ್ಲಿ ನಡೆದಿರುವ ಪನ್ನುನ್ ಹತ್ಯಾ ಯತ್ನಕ್ಕೂ ನಂಟಿದೆ ಎಂದೂ ಅಮೇರಿಕ ಹೇಳಿದೆ. ನಿಜ್ಜರ್ ಹತ್ಯೆಯಲ್ಲಿ ಭಾರತದ ಕೈವಾಡವಿದೆ ಎಂದು ಈಗಾಗಲೇ ಕೆನಡಾ ಸ್ಪಷ್ಟವಾಗಿ ಹೇಳಿದೆ. ಆದರೆ ಅದನ್ನು ಮೊದಲು ಭಾರತ ಖಡಾಖಂಡಿತವಾಗಿ ನಿರಾಕರಿಸಿತ್ತು. ಈಗ ಅಮೇರಿಕ ಕೂಡ ಕೆನಡಾ ಮಾಡಿರುವ ಆರೋಪವನ್ನೇ ಸಾಕ್ಷ್ಯಗಳ ಸಮೇತ ಮುಂದಿಟ್ಟಿದೆ.

ಈ ಬಗ್ಗೆ ಬುಧವಾರ ವರದಿ ಮಾಡಿರುವ ವಾಷಿಂಗ್ಟನ್ ಪೋಸ್ಟ್ ಈ ಆರೋಪಗಳ ಬಗ್ಗೆ ಅಮೇರಿಕಾದಲ್ಲಿ ಅತ್ಯುನ್ನತ ಮಟ್ಟದಲ್ಲೇ ಅಂದರೆ ಅಮೇರಿಕ ಅಧ್ಯಕ್ಷರು, ವಿದೇಶಾಂಗ ಕಾರ್ಯದರ್ಶಿ, ರಾಷ್ಟ್ರೀಯ ಭದ್ರತಾ ಸಲಹೆಗಾರ ಹಾಗು ಸಿ ಐ ಎ ಮುಖ್ಯಸ್ಥರ ಮಟ್ಟದಲ್ಲೇ ಜೂನ್ ಹಾಗು ಅಕ್ಟೋಬರ್ ನಡುವೆ ಚರ್ಚೆಯಾಗಿದೆ ಎಂದು ಹೇಳಿದೆ.

ನ್ಯೂ ಯಾರ್ಕ್ ನ ದಕ್ಷಿಣ ಜಿಲ್ಲೆಯ ಅಟಾರ್ನಿ ಅವರು ಸಲ್ಲಿಸಿರುವ ಈ ದೋಷಾರೋಪಣೆಯಲ್ಲಿ " ಪನ್ನುನ್ ಹತ್ಯಾ ಸಂಚಿನ ಸೂತ್ರಧಾರ ಭಾರತೀಯ ಅಧಿಕಾರಿ ಸೀನಿಯರ್ ಫೀಲ್ಡ್ ಆಫೀಸರ್ ಆಗಿದ್ದು ಸೆಕ್ಯೂರಿಟಿ ಮ್ಯಾನೇಜ್ ಮೆಂಟ್ ಹಾಗು ಇಂಟೆಲಿಜೆನ್ಸ್ ಸಂಬಂಧಿತ ಜವಾಬ್ದಾರಿ ನಿರ್ವಹಿಸುತ್ತಿದ್ದರು . ಆತ ಪನ್ನುನ್ ಹತ್ಯೆಗೆ ಸಹಕರಿಸುವಂತೆ ಗುಪ್ತಾ ಜೊತೆ ಮೇ 2023 ರಿಂದ ಸಂಪರ್ಕದಲ್ಲಿದ್ದರು " ಎಂದು ಹೇಳಲಾಗಿದೆ.

ಸಿಸಿ ೧ ಎಂದೇ ಗುರುತಿಸಲ್ಪಡುವ ಈ ಹಿರಿಯ ಬೇಹು ಅಧಿಕಾರಿ ಭಾರತೀಯ ಸರಕಾರಕ್ಕಾಗಿ ಕೆಲಸ ಮಾಡುತ್ತಿದ್ದ. ಭಾರತದಲ್ಲೇ ಇದ್ದ. ಅಲ್ಲಿಂದಲೇ ಈ ಹತ್ಯೆಗೆ ನಿರ್ದೇಶನ ನೀಡುತ್ತಿದ್ದ ಎಂದು ದೋಷಾರೋಪಣೆ ಹೇಳಿದೆ. ಈ ಸಿಸಿ ೧ ಹಾಗು ಗುಪ್ತಾ ನಡುವೆ ಸುಪಾರಿ ಹಂತಕನನ್ನು ನೇಮಿಸುವ, ಆತನಿಗೆ ಹದಿನೈದು ಸಾವಿರ ಹಣ ಪಾವತಿಸುವ ಹಾಗು ಪನ್ನುನ್ ಎಲ್ಲಿ ಸಿಗುತ್ತಾನೆ ಎಂಬ ಬಗ್ಗೆ ಮಾಹಿತಿ ನೀಡಿರುವ ಫೋನ್ ಸಂಭಾಷಣೆಗಳ ದಾಖಲೆಯೂ ಇದೆ . ಈ ಮೊದಲು ಆದಷ್ಟು ಬೇಗ ಹತ್ಯೆ ನಡೆಯಬೇಕು ಎಂದು ಗುಪ್ತಾನಿಗೆ ಹೇಳಲಾಗಿತ್ತು ಆದರೆ ಜೂನ್ ನಲ್ಲಿ ಪ್ರಧಾನಿ ಮೋದಿ ಅಮೆರಿಕಕ್ಕೆ ಭೇಟಿ ನೀಡುವ ಸಂದರ್ಭ ಹತ್ತು ದಿನಗಳ ಕಾಲ ಎಲ್ಲ ಚಟುವಟಿಕೆ ತಣ್ಣಗಾಗಿಸುವಂತೆ ಸೂಚನೆ ನೀಡಲಾಗಿತ್ತು ಎಂದಿದ್ದಾರೆ ಅಮೇರಿಕ ಅಧಿಕಾರಿಗಳು.

ಇದೇ ಭಾರತೀಯ ಅಧಿಕಾರಿಗೆ ಕೆನಡಾದಲ್ಲಿ ನಡೆದ ನಿಜ್ಜರ್ ಕೊಲೆಯಲ್ಲೂ ನಂಟಿದೆ ಎಂದು ಹೇಳಿರುವ ಅಮೇರಿಕ ನಿಜ್ಜರ್ ಕೊಲೆಯ ವಿಡಿಯೋ ವನ್ನು ಈ ಅಧಿಕಾರಿ ನಿಖಿಲ್ ಗುಪ್ತಾಗೆ ಕಳಿಸಿ ನಿಜ್ಜರ್ ಭಾರತದ ಕಾರ್ಯಾಚರಣೆಯ ಟಾರ್ಗೆಟ್ ನಲ್ಲಿ ಒಬ್ಬನಾಗಿದ್ದ ಎಂದೂ ಹೇಳಿರುವ ದಾಖಲೆಯಿದೆ ಎಂದಿದೆ .

ಭಾರತ ಮೂಲದ ಈಗ ಅಮೇರಿಕ ಪ್ರಜೆಯಾಗಿರುವ, ಸಿಖ್ಖರಿಗೆ ಪ್ರತ್ಯೇಕ ದೇಶ ಆಗಬೇಕು ಎಂದು ಪ್ರತಿಪಾದಿಸುವ ವ್ಯಕ್ತಿಯನ್ನು ನ್ಯೂಯಾರ್ಕ್ ನಲ್ಲಿ ಹತ್ಯೆ ಮಾಡಲು ನಿಖಿಲ್ ಗುಪ್ತಾ ಭಾರತದಲ್ಲೇ ಇದ್ದು ಸಂಚು ರೂಪಿಸಿದ್ದ ಎಂದು ಅಮೇರಿಕಾದ ಅಟಾರ್ನಿ ಡೇಮಿಯನ್ ವಿಲಿಯಮ್ಸ್ ಪತ್ರಿಕಾ ಪ್ರಕಟಣೆಯಲ್ಲಿ ಹೇಳಿದ್ದಾರೆ.

ಇಂತಹ ಯಾವುದೇ ಸಂಚನ್ನು ನಾವು ಸಹಿಸುವುದಿಲ್ಲ. ಅಮೇರಿಕಾದ ಮಣ್ಣಿನಲ್ಲಿ ಅಮೇರಿಕಾದ ಪ್ರಜೆಯನ್ನು ಕೊಲ್ಲುವ ಯಾವುದೇ ಯತ್ನದಲ್ಲಿ ಭಾಗಿಯಾದವರ ಸಂಚನ್ನು ನಾವು ವಿಫಲಗೊಳಿಸುತ್ತೇವೆ, ಅವರ ವಿರುದ್ಧ ತನಿಖೆ ನಡೆಸುತ್ತೇವೆ ಎಂದು ಡೇಮಿಯನ್ ಹೇಳಿದ್ದಾರೆ.

ನಿಖಿಲ್ ಗುಪ್ತನನ್ನ ಜೂನ್ ೩೦ ರಂದು ಜೆಕ್ ರಿಪಬ್ಲಿಕ್ ನಲ್ಲಿ ಬಂಧಿಸಲಾಗಿದ್ದು ಅಮೆರಿಕಕ್ಕೆ ಆತನ ಗಡಿಪಾರು ಮಾಡಲು ಪ್ರಕ್ರಿಯೆ ನಡೆಯುತ್ತಿದೆ ಎಂದೂ ಡೇಮಿಯನ್ ಅವರ ಪ್ರಕಟಣೆ ತಿಳಿಸಿದೆ.

ಈ ಅತ್ಯಂತ ಗಂಭೀರ ಆರೋಪದ ಬೆನ್ನಿಗೇ ಭಾರತ ಈ ಬಗ್ಗೆ ವಿಚಾರಣೆ ನಡೆಸಲು ಉನ್ನತ ಮಟ್ಟದ ಸಮಿತಿ ರಚಿಸಿದೆ ಎಂದು ವಿದೇಶಾಂಗ ಇಲಾಖೆ ತಿಳಿಸಿದೆ. ಈ ಸಮಿತಿ ಕ್ರಿಮಿನಲ್ ಗಳು, ಭಯೋತ್ಪಾದಕರು ಹಾಗು ಇತರ ಇಂತಹ ಆರೋಪ ಹೊತ್ತವರ ನಡುವೆ ಇರಬಹುದಾದ ನಂಟುಗಳ ಬಗ್ಗೆ ತನಿಖೆ ನಡೆಸಲಿದೆ ಎಂದೂ ಪ್ರಕಟಣೆ ಹೇಳಿದೆ. ನವೆಂಬರ್ 18 ರಂದು ಈ ಸಮಿತಿ ರಚನೆಯಾಗಿದೆ ಎಂದು ವಿದೇಶಾಂಗ ಇಲಾಖೆ ಹೇಳಿದೆ. ಆದರೆ ಈ ಉನ್ನತ ಮಟ್ಟದ ಸಮಿತಿಯನ್ನು ಯಾವ ಇಲಾಖೆಯವರು ಮುನ್ನಡೆಸಲಿದ್ದಾರೆ ಎಂದು ಅದು ಹೇಳಿಲ್ಲ.

ಆದರೆ ಭಾರತದ ಬೇಹು ಇಲಾಖೆ ಅಧಿಕಾರಿ ಈ ಹತ್ಯೆಯ ಸೂತ್ರಧಾರಿ ಎಂದು ಅಮೇರಿಕ ಮಾಡಿರುವ ಆರೋಪದ ಬಗ್ಗೆ ವಿದೇಶಾಂಗ ಇಲಾಖೆ ಯಾವುದೇ ಹೇಳಿಕೆ ನೀಡಿದ ವರದಿ ಬಂದಿಲ್ಲ. ಈ ಬಗ್ಗೆ ಕೇಳಿದ ಪ್ರಶ್ನೆಗೂ ವಿದೇಶಾಂಗ ಇಲಾಖೆ ಉತ್ತರಿಸಿಲ್ಲ ಎಂದು ದಿ ಹಿಂದೂ ವರದಿ ಹೇಳಿದೆ. "ಇದು ನಮ್ಮ ರಾಷ್ಟ್ರೀಯ ಭದ್ರತೆಗೂ ಸಮಸ್ಯೆ ತಂದೊಡ್ಡಲಿರುವುದರಿಂದ ಇಂತಹ ಮಾಹಿತಿಗಳನ್ನು ಭಾರತ ಸರಕಾರ ಗಂಭೀರವಾಗಿ ತೆಗೆದುಕೊಳ್ಳುತ್ತದೆ" ಎಂದು ವಿದೇಶಾಂಗ ಇಲಾಖೆ ವಕ್ತಾರ ಅರಿಂದಮ್ ಬಾಗ್ಚಿ ಹೇಳಿದ್ದಾರೆ.

ಕೆನಡಾದಲ್ಲಿನ ಸಿಖ್ಸ್ ಫಾರ್ ಜಸ್ಟೀಸ್ ಸಂಘಟನೆಯ ಗುರ್ಪತ್ವಂತ್ ಪನ್ನುನ್ ನ ಅಮೃತಸರದಲ್ಲಿನ ಆಸ್ತಿಯನ್ನು ಎನ್ಐಎ ಕಳೆದ ತಿಂಗಳು ಮುಟ್ಟುಗೋಲು ಹಾಕಿಕೊಂಡಿರುವುದು ವರದಿಯಾಗಿತ್ತು. ಯುಎಪಿಎ ಅಡಿಯಲ್ಲಿ ಪ್ರಕರಣವನ್ನೂ ದಾಖಲಿಸಿತ್ತು. ಪನ್ನುನ್ ಇದೇ ನವೆಂಬರ್ 19ರಂದು ಏರ್ ಇಂಡಿಯಾ ವಿಮಾನದ ಮೇಲೆ ದಾಳಿ ಸಾಧ್ಯತೆಯಿದೆ. ಅಂದು ಸಿಖ್ ಸಮುದಾಯದವರು ಏರ್ ಇಂಡಿಯಾದಲ್ಲಿ ಪ್ರಯಾಣಿಸಬೇಡಿ ಎಂದು ಎಚ್ಚರಿಕೆ ನೀಡಿದ್ದ ವೀಡಿಯೊವೊಂದು ಸಾಮಾಜಿಕ ಜಾಲತಾಣದಲ್ಲಿ ಈ ತಿಂಗಳ ಮೊದಲ ವಾರ ಕಾಣಿಸಿಕೊಂಡಿತ್ತು. ಹಿಂದೆಯೂ ಆತ ಇಂಥದೇ ಬೆದರಿಕೆಗಳನ್ನು ಹಾಕಿದ್ದಿತ್ತು.

ಖಾಲಿಸ್ತಾನಿ ಪ್ರತ್ಯೇಕ ದೇಶದ ಪರವಾಗಿ ಜಾಗತಿಕ ಜನಾಭಿಪ್ರಾಯ ಸಂಗ್ರಹ ಮಾಡಿದ್ದಕ್ಕಾಗಿ ನನ್ನನ್ನು ಕೊಲ್ಲಲು ಭಾರತ ಸರಕಾರ ಹಾಗು ಮೋದಿ ಆಡಳಿತ ಬಯಸುತ್ತಿದೆ ಎಂದೂ ಈ ಪನ್ನುನ್ ಹೇಳಿದ್ದ.

ಎರಡು ತಿಂಗಳ ಹಿಂದೆ ನಿಜ್ಜರ್ ಕೊಲೆಯಲ್ಲಿ ಭಾರತದ ಕೈವಾಡವಿದೆ ಎಂದು ಕೆನಡಾ ಹೇಳಿದ್ದಾಗ ಭಾರತ ಅದನ್ನು ಸ್ಪಷ್ಟವಾಗಿ ನಿರಾಕರಿಸಿದ್ದು ಮಾತ್ರವಲ್ಲದೆ ಕೆನಡಾ ವಿರುದ್ಧ ಆಕ್ರೋಶ ವ್ಯಕ್ತಪಡಿಸಿತ್ತು. ಭಾರತದ ಕೆನಡಾ ಹೈ ಕಮಿಷನ್ ನ ಮೂರನೇ ಎರಡರಷ್ಟು ರಾಜತಾಂತ್ರಿಕರನ್ನೂ ದೇಶ ಬಿಟ್ಟು ಹೋಗುವಂತೆ ಹೇಳಿತ್ತು.

ಆದರೆ ಈಗ ಅಮೇರಿಕ ಸರಕಾರದಿಂದ ಗಂಭೀರ ಆರೋಪ ಬಂದಿರುವಾಗ ಭಾರತದ ಪ್ರತಿಕ್ರಿಯೆ ಸಂಪೂರ್ಣ ಭಿನ್ನವಾಗಿದೆ. ಅದು ಆರೋಪದ ತನಿಖೆಗೆ ಉನ್ನತ ಮಟ್ಟದ ಸಮಿತಿಯನ್ನೂ ರಚಿಸಿದೆ. ಕೆನಡಾ ಆರೋಪ ಮಾಡಿದ್ದ ವಿಧಾನಕ್ಕೂ ಅಮೇರಿಕ ಆರೋಪವನ್ನು ತಿಳಿಸಿರುವ ವಿಧಾನಕ್ಕೂ ಇರುವ ವ್ಯತ್ಯಾವೇ ಇದಕ್ಕೆ ಕಾರಣ ಎಂದು ಕೆನಡಾದಲ್ಲಿ ಭಾರತದ ಹೈ ಕಮಿಷನರ್ ಇದಕ್ಕೆ ಕಾರಣ ಕೊಟ್ಟಿದ್ದಾರೆ.

ಕೆನಡಾದ ಬೆನ್ನಿಗೇ ಈಗ ಅಮೆರಿಕ ಕೂಡ ಹತ್ಯೆ ಸಂಚಿನ ಆರೋಪವನ್ನು ಹೊರಿಸಿರುವುದು, ನೇರವಾಗಿ ಭಾರತದ ಹಿರಿಯ ಬೇಹು ಅಧಿಕಾರಿಯೇ ಅದರ ಸೂತ್ರಧಾರ ಎಂದು ಹೇಳಿರುವುದು ನಿಜವಾಗಿಯೂ ಗಂಭೀರವಾಗಿ ಪರಿಗಣಿಸಬೇಕಾದ ವಿಚಾರವಾಗಿದೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X