Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರ್ತಾಭಾರತಿ ವಿಶೇಷ
  3. ಪೀಡಕರೇ ಗೆದ್ದು ಬೀಗುವ, ಸಂತ್ರಸ್ತರು...

ಪೀಡಕರೇ ಗೆದ್ದು ಬೀಗುವ, ಸಂತ್ರಸ್ತರು ಸೋತು ಸುಣ್ಣವಾಗುವ ಇದು ಯಾರಿಗೆ ಅಮೃತ ಕಾಲ ?

ಪ್ರಧಾನಿ, ಬಿಜೆಪಿಗೆ ಆ ಹೆಣ್ಣು ಮಕ್ಕಳಿಗಿಂತ ಆರೋಪಿ ಸಂಸದ ಮುಖ್ಯವಾಗಿದ್ದು ಏಕೆ ?

ಆರ್. ಜೀವಿಆರ್. ಜೀವಿ22 Dec 2023 10:08 PM IST
share
ಪೀಡಕರೇ ಗೆದ್ದು ಬೀಗುವ, ಸಂತ್ರಸ್ತರು ಸೋತು ಸುಣ್ಣವಾಗುವ ಇದು ಯಾರಿಗೆ ಅಮೃತ ಕಾಲ ?

ಜಾಗತಿಕ ಕ್ರೀಡಾ ಕೂಟದಲ್ಲಿ ಇಡೀ ಜಗತ್ತನ್ನು ಮಣಿಸಿ ಪದಕ ಗೆದ್ದ ಕ್ರೀಡಾಪಟು ಒಬ್ಬಳು ತನ್ನ ದೇಶದೆದುರು ಸೋತು ಸುಣ್ಣವಾಗಿ ಶರಣಾಗಿದ್ದಾಳೆ.

ಎಂತೆಂಥ ಜಟ್ಟಿಗಳನ್ನು ಕುಸ್ತಿಕಣದಲ್ಲಿ ಮಣ್ಣು ಮುಕ್ಕಿಸಿದ ಆಕೆ ನಿನ್ನೆ ಸ್ವತಃ ತನ್ನವರಿಂದಲೆ ಹೀನಾಯವಾಗಿ ಸೋತಿದ್ದಾಳೆ.

ಆಕೆಯ ಸೋಲು, ಆಕೆಯ ಹತಾಶೆ ಅದೆಷ್ಟು ಘೋರವಾಗಿದೆ ಅಂದ್ರೆ ಆಕೆ ಇನ್ನೂ ಈ ಕ್ರೀಡೆಯೇ ನನಗೆ ಬೇಡ ಎಂದು ಜರ್ಜರಿತಳಾಗಿದ್ದಾಳೆ.

ಹಾಗೆ ಸೋಲೊಪ್ಪಿಕೊಂಡು ಶರಣಾದ ಕ್ರೀಡಾಪಟು ತನ್ನ ಶೂ ತೆಗೆದು ಚಾನಲ್ ಗಳ ಮೈಕ್ ಮೇಲೆಯೇ ಇಟ್ಟಿದ್ದು ಆಕಸ್ಮಿಕವೋ ಅಥವಾ ಆ ಚಾನಲ್ ಗಳ ಕಿಮ್ಮತ್ತು ಅಷ್ಟೇ ಇರೋದು ಎಂದು ಆಕೆ ಆ ಮೂಲಕ ಹೇಳಿದ್ದಾ ಎಂಬ ಚರ್ಚೆಯಿದೆ.

ನಿಮಗೆ ನೆನಪಿರಬಹುದು. ಹೊಸ ಸಂಸತ್ ಭವನದಲ್ಲಿ ನಡೆದ ಕಲಾಪದ ಮೊದಲ ದಿನ ಮಹಿಳಾ ಮೀಸಲಾತಿ ಮಸೂದೆ ಮಂಡಿಸಲಾಯಿತು.

ನಾರಿಶಕ್ತಿ ವಂದನ್ ಅಧಿನಿಯಮ್ ಎಂದು ಅದನ್ನು ಹೆಸರಿಸಲಾಗಿತ್ತು. ಮಹಿಳಾ ಮೀಸಲಾತಿ ಮಸೂದೆ ತರುವುದಕ್ಕಾಗಿಯೇ ದೇವರು ತನ್ನನ್ನು ಆಯ್ಕೆ ಮಾಡಿದ್ದಾನೆ ಎಂದು ದೇಶದ ಪ್ರಧಾನಿ ಮೋದಿ ಹೇಳಿಕೊಂಡರು.

ದೇಶದ ಅಭಿವೃದ್ಧಿ ಪ್ರಕ್ರಿಯೆಯಲ್ಲಿ ಹೆಚ್ಚು ಹೆಚ್ಚು ಮಹಿಳೆಯರು ಸೇರಬೇಕೆಂದು ಬಯಸುವುದಾಗಿ ಹೇಳಿದರು. ಕ್ರೀಡೆಯಿಂದ ಸ್ಟಾರ್ಟ್‌ಅಪ್‌ಗಳವರೆಗೆ ಜೀವನದ ವಿವಿಧ ಆಯಾಮಗಳಲ್ಲಿ ಭಾರತೀಯ ಮಹಿಳೆಯರ ಕೊಡುಗೆಗಳಿವೆ ಎಂದೂ ಹೇಳಿದರು. ಹೀಗೆಲ್ಲ ಮಾತುಗಳ ಮಹಲು ಕಟ್ಟುವ ಮೋದಿ ದರ್ಬಾರಿನಲ್ಲಿ ಈ ದೇಶಕ್ಕೆ ಪ್ರಶಸ್ತಿ ತಂದ ಹೆಮ್ಮೆಯ ಮಹಿಳಾ ಕ್ರೀಡಾಪಟುಗಳು ಬೀದಿಗೆ ಬಂದು ತಮಗಾದ ಘೋರ ಅನ್ಯಾಯ ಹೇಳಿಕೊಂಡು ಕಣ್ಣೀರು ಹಾಕಿದ್ದರು ಎಂಬುದೂ ನಿಮಗೆ ಗೊತ್ತಿದೆ.

ಆ ಹೆಣ್ಣುಮಕ್ಕಳ ಮೇಲೆ ನಡೆಯಿತೆನ್ನಲಾದ ಲೈಂಗಿಕ ದೌರ್ಜನ್ಯ ಪ್ರಕರಣದ ಆರೋಪಿ ಕೂಡ ಮೋದಿ ಪಕ್ಷದ್ದೇ ಸಂಸದ. ಆತನ ವಿರುದ್ಧ ಚಾರ್ಜ್ ಶೀಟ್ ಆಗಿದ್ದರೂ ಆತನನ್ನು ಈವರೆಗೂ ಬಂಧಿಸಲಾಗಿಲ್ಲ. ಈಗ, ಅದೇ ಲೈಂಗಿಕ ಕಿರುಕುಳ ಆರೋಪಿ ಬಿಜೆಪಿ ಸಂಸದನ ಆಪ್ತನೇ ಕುಸ್ತಿ ಫೆಡರೇಷನ್ ಅಧ್ಯಕ್ಷ ಹುದ್ದೆಗೆ ಆಯ್ಕೆಯಾಗಿರುವುದನ್ನು ಈ ದೇಶ ನೋಡುತ್ತಿದೆ.

ಅದನ್ನು ಆ ಆರೋಪಿ ಸಂಸದ ತನ್ನ ದೊಡ್ಡ ಗೆಲುವು ಎಂದು ಹೇಳಿಕೊಂಡು ಸಂಭ್ರಮಿಸುವುದನ್ನೂ ಈ ದೇಶ ನೋಡುತ್ತಿದೆ. ನೊಂದ ಒಲಂಪಿಕ್ಸ್ ಪದಕ ವಿಜೇತ ಮಹಿಳಾ ಕುಸ್ತಿಪಟು ಕಣ್ಣೀರಿಡುತ್ತಲೇ ತನ್ನ ನೆಚ್ಚಿನ ಕ್ರೀಡಾ ಬದುಕಿಗೇ ವಿದಾಯ ಹೇಳಿದ್ದನ್ನೂ ಈ ದೇಶ ನೋಡುತ್ತಿದೆ. ಹಾಗಾದರೆ, ಏನು ನಡೆಯುತ್ತಿದೆ ಈ ದೇಶದಲ್ಲಿ? ಇದೆಂಥ ಬಗೆಯ ನಾರಿಶಕ್ತಿ ವಂದನ್?.

ಲೈoಗಿಕ ಕಿರುಕುಳ ನೀಡಿದ ಆರೋಪಿ ತಾನು ಗೆದ್ದೆ ಎಂದು ಬೀಗುವ, ದೇಶದ ಹೆಮ್ಮೆಯ ಹೆಣ್ಣು ಮಕ್ಕಳು, ಕುಸ್ತಿ ಪಟುಗಳು ಇನ್ನು ತಮ್ಮಿಂದ ಆಗದು ಎಂದು ಕೈಚೆಲ್ಲಿ ಕ್ರೀಡೆಯನ್ನೇ ಬಿಡುವ ನಯಾ ಭಾರತ್ ಪ್ರಧಾನಿ ಮೋದಿ ಆಡಳಿತದಲ್ಲಿ ಈ ದೇಶದಲ್ಲಿ ನಿರ್ಮಾಣವಾಗಿದೆ.

ಹಾಗಾದರೆ, ಇದೆಂತಹ ಬೇಟಿ ಬಚಾವೋ?. ಇದು ಯಾರಿಗೆ ಅಮೃತ್ ಕಾಲ?.

ಭಾರತೀಯ ಕುಸ್ತಿ ಫೆಡರೇಷನ್ ಗೆ (ಡಬ್ಲ್ಯುಎಫ್ಐ) ಹೊಸ ಅಧ್ಯಕ್ಷನಾಗಿ ತನ್ನ ಆಪ್ತನೇ ಆಯ್ಕೆಯಾಗಿರುವುದನ್ನು ಲೈಂಗಿಕ ದೌರ್ಜನ್ಯ ಪ್ರಕರಣದ ಆರೋಪಿ ಬಿಜೆಪಿ ಸಂಸದ ಬ್ರಿಜ್ ಭೂಷಣ್ ಶರಣ್ ಸಿಂಗ್ ಒಂದೆಡೆ ಸಂಭ್ರಮಿಸುತ್ತಿರುವಾಗಲೇ, ದೇಶಕ್ಕೆ ಒಲಂಪಿಕ್ಸ್ ನಲ್ಲಿ ಪದಕ ತಂದಿದ್ದ ಹೆಮ್ಮೆಯ ಕ್ರೀಡಾಪಟು ಸಾಕ್ಷಿ ಮಲಿಕ್ ಅಳುತ್ತಳುತ್ತಲೇ ಕುಸ್ತಿಗೆ ವಿದಾಯ ಹೇಳಿದ್ಧಾರೆ.

ಕುಸ್ತಿ ಫೆಡರೇಷನ್ಗೆ ಮಹಿಳಾ ಅಧ್ಯಕ್ಷರು ಬರಬೇಕೆಂಬುದು ಫೆಡರೇಶನ್ ಅಧ್ಯಕ್ಷನ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪ ಮಾಡಿ ಪ್ರತಿಭಟನೆ ನಡೆಸಿದ್ದ ಹೆಣ್ಣುಮಕ್ಕಳ ಬೇಡಿಕೆಯಾಗಿತ್ತು. ಆದರೆ, ಸ್ಪರ್ಧೆಯಲ್ಲಿದ್ದ ಅನಿತಾ ಶೆರಾಣ್ ಅವರು ಚುನಾವಣೆಯಲ್ಲಿ ಸೋಲುವುದರೊಂದಿಗೆ, ಆ ನೊಂದ ಮಹಿಳಾ ಕುಸ್ತಿಪಟುಗಳ ಕನಸು ಭಗ್ನವಾಗಿ ಹೋಯಿತು.

ಮತ್ತು ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡಿರುವ ಆರೋಪ ಹೊತ್ತ ಕಳಂಕಿತ ಬಿಜೆಪಿ ಸಂಸದ ತಾನು ಗೆದ್ದೆ ಎಂದೂ ತಾನು ಗೆಲ್ಲುತ್ತಲೇ ಇರುತ್ತೇನೆ ಎಂದೂ ಕೊಚ್ಚಿಕೊಳ್ಳುವುದು, ಈ ದೇಶದಲ್ಲಿ ಆತನ ಪಕ್ಷ, ಈ ದೇಶವನ್ನು ಆಳುತ್ತಿರುವ ಪಕ್ಷ ಹೆಣ್ಣುಮಕ್ಕಳ ಬಗ್ಗೆ ಏನು ಭಾವನೆ ಹೊಂದಿದೆ ಎಂಬುದಕ್ಕೆ ಸಾಕ್ಷಿಯಂತಿದೆ.

ತಿಂಗಳುಗಟ್ಟಲೆ ಆ ಹೆಣ್ಣುಮಕ್ಕಳು ತಮಗೆ ಅನ್ಯಾಯವಾಗಿದೆ ಎಂದು ಪ್ರತಿಭಟಿಸಿದರು. ಆದರೆ ನಡುಬೀದಿಯಲ್ಲೇ ಅವರ ಮೇಲೆ ಪೊಲೀಸರು ತಮ್ಮ ತಾಕತ್ತಿನ ಪ್ರದರ್ಶನ ಮಾಡಿದ್ದನ್ನೂ ಈ ದೇಶ ನೋಡಬೇಕಾಯಿತು. ಆ ಹೆಣ್ಣುಮಕ್ಕಳು ಕಣ್ಣೀರು ಹಾಕುತ್ತ, ಗೆದ್ದ ಪದಕಗಳನ್ನು ನದಿಗೆ ಚೆಲ್ಲಲು ಹೊರಟಿದ್ದ ಸನ್ನಿವೇಶವನ್ನೂ ಈ ದೇಶ ನೋಡಿತು. ಅದೇ ದೇಶದಲ್ಲಿ ಈಗ ಕಳಂಕಿತನ ಆಪ್ತನೇ ಎಲ್ಲಿ ಮಹಿಳಾ ಕ್ರೀಡಾಪಟುಗಳಿಗೆ ಅನ್ಯಾಯವಾಗಿತ್ತೊ ಅಲ್ಲಿಗೆ ಮುಖ್ಯಸ್ಥನಾಗಿ ಬಂದು ಕೂರುವಂತಾಗಿದೆ.

ಅದರರ್ಥ, ಸ್ವತಃ ಕಳಂಕಿತ ಸಂಸದನೇ ಬಂದು ಕೂತಂತಾಗಿದೆ. ಮತ್ತು ಹಾಗಾಗುವುದಕ್ಕೆ ಈ ವ್ಯವಸ್ಥೆ, ಆತನ ಪಕ್ಷವೇ ಎಲ್ಲ ದಾರಿಯನ್ನೂ ನಿರ್ಮಿಸಿ ಕೊಟ್ಟಿದೆ ಎಂಬುದನ್ನು ಪ್ರತ್ಯೇಕವಾಗಿ ಹೇಳಬೇಕಿಲ್ಲ. ಬ್ರಿಜ್ ಭೂಷಣ್ ಆಪ್ತ ಸಂಜಯ್ ಸಿಂಗ್ ಸ್ಪರ್ಧೆಗೆ ಮಹಿಳಾ ಕುಸ್ತಿಪಟುಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದರು.

ಅವರು ಸ್ಪರ್ಧಿಸದಂತೆ ನೋಡಿಕೊಳ್ಳಬೇಕೆಂದು ಒಲಿಂಪಿಕ್ಸ್ ಪದಕ ವಿಜೇತ ಕುಸ್ತಿಪಟುಗಳು ಕ್ರೀಡಾ ಸಚಿವ ಅನುರಾಗ್ ಠಾಕೂರ್ ಬಳಿ ಮನವಿ ಮಾಡಿಕೊಂಡಿದ್ದರು. ವಿಪರ್ಯಾಸವೆಂದರೆ, ಕಳಂಕಿತನ ಆಪ್ತ ಮಾತ್ರವಲ್ಲ, ಫೆಡರೇಷನ್ನ 15 ವಿವಿಧ ಸ್ಥಾನಗಳಲ್ಲಿ 13 ಸ್ಥಾನಗಳಿಗೆ ಆತನ ಕಡೆಯವರೇ ಆಯ್ಕೆಯಾಗಿದ್ದಾರೆ.

ಬ್ರಿಜ್ ಭೂಷಣ್ ಬೆಂಬಲಿಗರು ಸ್ಪರ್ಧಿಸುವುದಿಲ್ಲ ಎಂದಿದ್ದ ಸರ್ಕಾರ ತನ್ನ ಮಾತಿನಂತೆ ನಡೆದುಕೊಳ್ಳದಿರುವುದು ದುರದೃಷ್ಟಕರ ಎಂದು ಕುಸ್ತಿಪಟುಗಳು ನೋವಿನಿಂದ ಹೇಳಿದ್ದಾರೆ.

ಮಹಿಳಾ ಕುಸ್ತಿಪಟುಗಳಿಗೆ ನ್ಯಾಯ ಸಿಗುತ್ತದೆ ಎಂಬ ನಂಬಿಕೆಯಿಲ್ಲ ಎಂಬ ಆತಂಕವನ್ನು ಅವರೆಲ್ಲ ವ್ಯಕ್ತಪಡಿಸಿದ್ದಾರೆ. ಮಹಿಳಾ ಕುಸ್ತಿಪಟುಗಳು ಮುಂದೆಯೂ ಶೋಷಣೆ ಅನುಭವಿಸಬೇಕಾಗಬಹುದು ಎಂದು ಕುಸ್ತಿಪಟು ವಿನೇಶ್ ಪೋಗಟ್ ಚಿಂತೆಯಿಂದ ಹೇಳಿದ್ದಾರೆ. ಅತ್ಯಂತ ನೋವಿನ ಸಂಗತಿಯೆಂದರೆ, ಇಂಥದೊಂದು ರಾಜಕಾರಣದ ನಡುವೆ, ತೀರಾ ನೊಂದಿರುವುದು ದೇಶಕ್ಕೆ ಜಾಗತಿಕ ಕ್ರೀಡಾ ಕೂಟದಲ್ಲಿ ಕೀರ್ತಿ ತಂದ ಒಬ್ಬ ಕ್ರೀಡಾಪಟು.

ಕುಸ್ತಿಗೇ ಸಾಕ್ಷಿ ಮಲಿಕ್ ವಿದಾಯ ಹೇಳಿದ್ದಾರೆ. ಅವರ ನೋವು, ಹತಾಶೆ ಎಂಥದು ಎಂಬುದನ್ನು ಅವರ ಈ ನೋವು ತುಂಬಿದ ನಿರ್ಧಾರದಿಂದ ಅರ್ಥ ಮಾಡಿಕೊಳ್ಳಬಹುದು. ಆಕೆ ಒಲಿಂಪಿಕ್ನಲ್ಲಿ ಪದಕ ಗೆದ್ದ ಭಾರತದ ಮೊದಲ ಮಹಿಳಾ ಕುಸ್ತಿಪಟು ಎಂಬ ಹೆಗ್ಗಳಿಕೆ ಹೊಂದಿದ್ದರು.

ನಾನು ಕುಸ್ತಿ ತೊರೆಯುತ್ತಿದ್ದೇನೆ. ಇನ್ನು ಮುಂದೆ ನನ್ನನ್ನು ಕುಸ್ತಿ ಮ್ಯಾಟ್ ಮೇಲೆ ನೋಡಲಾರಿರಿ ಎಂದು ಸಾಕ್ಷಿ ಕಣ್ಣೀರು ಹಾಕಿದ್ದಾರೆ. ಇಂಥ ಸನ್ನಿವೇಶದಲ್ಲಿ "ತಾನು ಗೆದ್ದಿದ್ದೇನೆ" ಎಂದು ಕಳಂಕಿತ ಬಿಜೆಪಿ ಸಂಸದ ಹೇಳಿಕೊಂಡು ಸಂಭ್ರಮ ಪಡುತ್ತಿರುವುದರ ಬಗ್ಗೆ

ಈ ದೇಶ ನಾಚಿ ತಲೆತಗ್ಗಿಸುವಂತಾಗಿದೆ.

ಇದು ಯಾವ ಥರದ ಗೆಲುವು ಎಂಬುದನ್ನು ಆ ಕಳಂಕಿತ ಸಂಸದನ ಬೆನ್ನಿಗೆ ನಿಂತಿರುವ ಬಿಜೆಪಿ ಹೇಳಬೇಕು. ಆತನನ್ನು ಇನ್ನೂ ಬಂಧಿಸದ ಗೃಹ ಸಚಿವ ಅಮಿತ್ ಶಾ ಹೇಳಬೇಕು. ತನ್ನ ಪಕ್ಷದಲ್ಲಿ ಹಾಗೂ ಸಂಸತ್ನಲ್ಲಿ ಇನ್ನೂ ಅಂತಹ ಸಂಸದರನ್ನು ಉಳಿಸಿಕೊಂಡಿರುವ ಪ್ರಧಾನಿ ಮೋದಿ ಹೇಳಬೇಕು. ಮಹಿಳಾ ಮೀಸಲಾತಿ ಮಸೂದೆ ತರಲೆಂದೇ ದೇವರು ತನ್ನನ್ನು ಆಯ್ಕೆ ಮಾಡಿರುವುದು ಎಂದು ಹೇಳಿಕೊಳ್ಳುವ ಮೋದಿಯವರ ದರ್ಬಾರಿನಲ್ಲಿ ಇಂಥ ಒಂದು ಗೆಲುವೂ ಇದೆಯೆ?

ಅನ್ಯಾಯವಾಗಿದೆ ಎಂಬ ಹೆಣ್ಣುಮಕ್ಕಳ ನೋವಿಗೆ ಕಿವಿಗೊಡದವರು, ಬದುಕಿನಲ್ಲಿ ತಪಸ್ಸಿನಂತೆ ಸಾಧಿಸಿಕೊಂಡು ಬಂದಿದ್ದ ಕುಸ್ತಿಗೇ ವಿದಾಯ ಹೇಳುವ ಹತಾಶ ಸ್ಥಿತಿಗೆ ಒಬ್ಬ ಅದ್ಭುತ ಮಹಿಳಾ ಕ್ರೀಡಾಪಟುವನ್ನು ತಳ್ಳಿದವರು ಆ ನೋವನ್ನು, ಆ ಕಣ್ಣೀರನ್ನು ತಮ್ಮ ಗೆಲುವೆಂದು ಅಟ್ಟಹಾಸ ಗೈಯುತ್ತಿದ್ಧಾರೆ.

ಇದಕ್ಕಿಂತ ಹೀನವಾದದ್ದು ಮತ್ತೇನಿರಲು ಸಾಧ್ಯ?. ಯಾಕೆಂದರೆ, ಹೆಣ್ಣುಮಕ್ಕಳ ರಕ್ಷಣೆ, ಹೆಣ್ಣಮಕ್ಕಳಿಗೆ ಗೌರವ ಎಂಬುದೆಲ್ಲ ಬಿಜೆಪಿಯವರಿಗೆ, ಮೋದಿಯವರಿಗೆ ರಾಜಕಾರಣದ ಭಾಗ ಮಾತ್ರ.

ಉಪರಾಷ್ಟ್ರಪತಿ ಜಗದೀಪ್ ಧನ್ಕರ್, ಸಂಸದ ಕಲ್ಯಾಣ್ ಬ್ಯಾನರ್ಜಿ ತನ್ನ ಮಿಮಿಕ್ರಿಯನ್ನು ಮಾಡಿದ್ದರಿಂದ ಜಾಟ್ ಸಮಾಜಕ್ಕೆ ಅವಮಾನ ಆಯಿತು ಎಂದರು. ಹಾಗಾದರೆ, ಜಾಟ್ ಸಮುದಾಯಕ್ಕೇ ಸೇರಿದ ಕ್ರೀಡಾಪಟುವಿನ ಈ ಅಪಾರ ದುಃಖಕ್ಕೆ, ಆಕೆಯ ಕಣ್ಣೀರಿಗೆ, ಆಕೆಯಿಂದು ಕುಸ್ತಿಗೇ ವಿದಾಯ ಹೇಳುವಂತಾಗಿರುವುದಕ್ಕೆ ಕಾರಣರಾದವರು ಜಾಟ್ ಸಮಾಜಕ್ಕೆ ಅವಮಾನ ಮಾಡಿದಂತಾಗಲಿಲ್ಲವೆ?

ತನಗೆಷ್ಟು ನೋವಾಗಿರಬಹುದು ಎಂದೆಲ್ಲ ಹೇಳುವ ಅವರಿಗೆ, ಸಾಕ್ಷಿ ಮಲಿಕ್ ರ ಸಂಕಟ ಯಾಕೆ ಅರ್ಥವಾಗುವುದಿಲ್ಲ. ಅವಮಾನವಾಗಿದೆ ಎಂದು ರಾಜಕಾರಣ ಮಾಡುವವರಿಗೆ, ದೇಶಕ್ಕೆ ಕೀರ್ತಿ ತಂದ ಸಾಕ್ಷಿ ಮಲಿಕ್ ಗೆ ಆದ ಘೋರ ಅವಮಾನ ಕಾಣಿಸುವುದಿಲ್ಲವೆ?

ಯಾರಿಗೆ ಆಗಿರುವ ಅವಮಾನ ಹೆಚ್ಚು ಎಂಬುದು ಇವರ ರಾಜಕೀಯದ ದೃಷ್ಟಿಗೆ ತೋಚುವುದಿಲ್ಲವೆ?. ಮೋದಿ ದರ್ಬಾರಿನಲ್ಲಿ ಉಪರಾಷ್ಟ್ರಪತಿ ಕೂಡ ಚುನಾವಣೆ ಪ್ರಚಾರದ ಭಾಗವಾಗಿಬಿಡುವುದು ನಡೆಯುತ್ತದೆ. ಇಂಥ ಸರ್ಕಾರ ಸಾಕ್ಷಿ ಮಲಿಕ್ ಅಂಥ ಹೆಣ್ಣುಮಗಳ ಕಣ್ಣೀರಿಗೆ ಪ್ರತಿಸ್ಪಂದಿಸುವುದು ಹೇಗೆ ಸಾಧ್ಯ?. ಪ್ರಶ್ನೆ ತುಂಬಾ ಕೇಳ್ತಾರೆ ಎಂದು ಸಂಸದರನ್ನು ಅಮಾನತು ಮಾಡೋದು ಈ ವಿಶ್ವಗುರುವಿನ ಮಾದರಿಯಾಗಿರುವಾಗ ಇಲ್ಲಿ ಪ್ರಜಾಸತ್ತಾತ್ಮಕವಾಗಿ ಏನನ್ನಾದರೂ ನಿರೀಕ್ಷಿಸಲು ಸಾಧ್ಯವೆ?

share
ಆರ್. ಜೀವಿ
ಆರ್. ಜೀವಿ
Next Story
X