Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರ್ತಾಭಾರತಿ ವಿಶೇಷ
  3. ಇಪ್ಪತ್ತರ ಹೊಸಿಲಲ್ಲಿ ‘ನಾವು-ನಮ್ಮಲ್ಲಿ’

ಇಪ್ಪತ್ತರ ಹೊಸಿಲಲ್ಲಿ ‘ನಾವು-ನಮ್ಮಲ್ಲಿ’

ನಾವು ನಮ್ಮಲ್ಲಿ

ವಾರ್ತಾಭಾರತಿವಾರ್ತಾಭಾರತಿ9 July 2023 10:12 AM IST
share
ಇಪ್ಪತ್ತರ ಹೊಸಿಲಲ್ಲಿ ‘ನಾವು-ನಮ್ಮಲ್ಲಿ’

ಡಾ.ಪಿ. ಭಾರತಿದೇವಿ

‘ನಾವು-ನಮ್ಮಲ್ಲಿ’ ಸಾಹಿತ್ಯದ ಮೂಲಕ ಸಮಾಜದೊಂದಿಗೆ ಸಂವಾದ ಮಾಡಲು ಆರಂಭಿಸಿ ಇಪ್ಪತ್ತು ವರ್ಷಗಳಾದವು. ಹೀಗೆ ಸಾಗಿಬಂದ ಹಾದಿಯೆಡೆಗೆ ಕಣ್ಣು ಹಾಯಿಸಿದಾಗ ಅದರ ಮೂಲಕ ಬೆಸೆದ ಸ್ನೇಹ, ಗಳಿಸಿದ ಅರಿವು, ಎಚ್ಚರ ಎಲ್ಲವೂ ಮನಃಪಟಲದ ಮುಂದೆ ಮೂಡುತ್ತದೆ. ಒಂದು ಸ್ನೇಹದ ತಂತುವಿನಿಂದ ಆರಂಭಗೊಂಡು ಇದು ವಿಸ್ತರಿಸಿಕೊಳ್ಳುತ್ತಾ ಸಾಗುತ್ತಿರುವ ಬಗೆಯನ್ನು ಈ ಇಪ್ಪತ್ತರ ಹೊಸಿಲಲ್ಲಿ ನೆನಪಿಸಿಕೊಳ್ಳುವುದು, ಮುಂದೆ ಸಾಗಬೇಕಾದ ಹಾದಿಯ ದಿಕ್ಕು ದೆಸೆಗಳನ್ನು ರೂಪಿಸಿಕೊಳ್ಳಲೂ ಬಹಳ ಮುಖ್ಯ.

ಬಯಲು ಸಾಹಿತ್ಯ ವೇದಿಕೆ, ಕೊಟ್ಟೂರು ಎಂಬ ಸಾಹಿತ್ಯಸಂಘಟನೆಯ ಭಾಗವಾಗಿ ‘ನಾವು-ನಮ್ಮಲ್ಲಿ’ ಎಂಬ ಹೊಸತಲೆಮಾರಿನ ಪುಟ್ಟ ಬಳಗ ಹುಟ್ಟಿಕೊಂಡು ಮೊದಲ ಕಾರ್ಯಕ್ರಮ ನಡೆದದ್ದು 2003ರಲ್ಲಿ. ವರ್ಷದ ಒಂದು ಶನಿವಾರ, ರವಿವಾರ ಸ್ನೇಹ ಬಳಗ ಸೇರಿಕೊಂಡು ತಮ್ಮ ತಮ್ಮ ಬರವಣಿಗೆ, ವಿಚಾರಗಳನ್ನು ಹಂಚಿಕೊಳ್ಳುತ್ತಾ ಮಿರ್ಚಿ ಮಂಡಕ್ಕಿಯ ಸಾಥ್ನಲ್ಲಿ ಹರಟುತ್ತಾ ಸ್ನೇಹವನ್ನು ಇನ್ನಷ್ಟು ಗಟ್ಟಿಗೊಳಿಸುವ ಬಗೆಯಲ್ಲಿ ಇದು ಕುಡಿಯೊಡೆದಿತ್ತು. ಮುಖ್ಯವಾಗಿ ಹೊಸತಲೆಮಾರಿನವರ ಬರಹಗಳನ್ನು ಹಿರಿಯರುಓದುತ್ತಿಲ್ಲ, ವಿಮರ್ಶೆಮಾಡುತ್ತಿಲ್ಲ ಎಂಬ ಯುವಬರಹಗಾರರ ಸಹಜಸಿಟ್ಟಿನ ಅಭಿವ್ಯಕ್ತಿಯಾಗಿ ಆರಂಭಕ್ಕೆ ‘ನಾವು-ನಮ್ಮಲ್ಲಿ’ ಗರಿಗಟ್ಟಿತು.

ಹೀಗೆ ಆರಂಭವಾದ ಇದು ನಿಧಾನವಾಗಿ ಸಾಹಿತ್ಯ ಚರ್ಚೆಯ ವ್ಯಾಪ್ತಿಯನ್ನು ವಿಸ್ತರಿಸಿಕೊಂಡು ಸಾಹಿತ್ಯದ ಮೂಲಕ ಸಮಾಜವನ್ನು ಅರಿಯುವ ನಿಟ್ಟಿನಲ್ಲಿ ವಿಸ್ತರಿಸಿಕೊಂಡದ್ದು ಗಮನಾರ್ಹವಾದ ಸಂಗತಿ.

2010ರಲ್ಲಿ ಮೈಸೂರಿನಲ್ಲಿ ನಡೆದ ‘ವರ್ತಮಾನ ಕರ್ನಾಟಕ’ ಈ ದಿಸೆಯಲ್ಲಿ ನಡೆಸಿದ ಮುಖ್ಯ ಪ್ರಯತ್ನವಾಗಿತ್ತು. ಸಾಹಿತ್ಯ, ಸಮಾಜ, ಆರ್ಥಿಕತೆ, ರಾಜಕೀಯ ಎಲ್ಲವನ್ನೂ ಒಳಗೊಂಡು ಕರ್ನಾಟಕದ ವರ್ತಮಾನವನ್ನು ಅರಿಯುವ ಪ್ರಯತ್ನವಾಗಿತ್ತು ಇದು. ನಂತರದಲ್ಲಿ ಚಳವಳಿ ಕರ್ನಾಟಕ, ಮಾಧ್ಯಮ ಕರ್ನಾಟಕ, ಸಂವಿಧಾನ ಭಾರತ, ಹೊಸ ತಲೆಮಾರು, ನಿರಂಕುಶಮತಿತ್ವದೆಡೆಗೆ, ಜನಕಥನಗಳು, ದೇಶಪ್ರೇಮದ ಕಥನಗಳು ಹೀಗೆ ಬೇರೆ ಬೇರೆ ನೆಲೆಗಳ ಮೂಲಕ ನಮ್ಮನ್ನು, ನಮ್ಮ ಸುತ್ತಲಿನ ಜಗತ್ತನ್ನು ಅರಿಯುವ ಪ್ರಯತ್ನವನ್ನು ಮಾಡುತ್ತಾ ಬಂದಿದೆ.

ವಿವಿಧ ಕ್ಷೇತ್ರಗಳಲ್ಲಿ ತೊಡಗಿಕೊಂಡ ಸಮಾನ ಕಾಳಜಿಯುಳ್ಳ ಸ್ನೇಹಿತರು ‘ನಾವು-ನಮ್ಮಲ್ಲಿ’ಯ ಮೂಲಕ ಬೆಸೆದುಕೊಂಡಿದ್ದಾರೆ. ಸಾಹಿತ್ಯ ಸಮಾಜವನ್ನು ಬೇರೆ ಬೇರೆ ಆಯಾಮಗಳಲ್ಲಿ ಅರ್ಥ ಮಾಡಿಕೊಳ್ಳಲು ಯತ್ನಿಸುತ್ತಾ ತಮ್ಮನ್ನು ತಾವು ಅರಿಯುವ, ಮಿತಿಗಳನ್ನು ಮೀರಿಕೊಳ್ಳುವ ಹಾದಿಯಲ್ಲಿ ಸಾಗಿಬಂದಿದ್ದಾರೆ. ಇಲ್ಲಿ ರೂಪಿಸಿರುವ ಕಾರ್ಯಕ್ರಮಗಳ್ಯಾವುವೂ ಸುತ್ತಲಿನ ಸಮಾಜದಲ್ಲಿ ಅರಿವು ಮೂಡಿಸುತ್ತೇವೆ ಎಂಬ ಧೋರಣೆಯಿಂದ ಹೊರಟಂಥವಲ್ಲ. ಬದಲಿಗೆ ಈ ಪ್ರಕ್ರಿಯೆಯಲ್ಲಿ ನಾವೇನಾದರೂ ಅರಿಯುವುದು ಸಾಧ್ಯವೇ ಎಂದು ನಡೆಸಿರುವ ಹುಡುಕಾಟ ಮತ್ತು ಪ್ರಯತ್ನ. ಈ ದಿಸೆಯಲ್ಲಿ ನಾಡಿನ ಹಿರಿಯ ವಿದ್ವಾಂಸರು, ಸಾಹಿತಿಗಳು, ಚಳವಳಿಗಳಲ್ಲಿ ತೊಡಗಿಕೊಂಡವರು, ಹೊಸ ತಲೆಮಾರಿನ ಬರಹಗಾರರು, ನಾಗರಿಕರು ಎಲ್ಲರೂ ಇದರ ಭಾಗವಾಗಿದ್ದಾರೆ. ಬಿ.ವಿ. ವೈಕುಂಠರಾಜು, ಯು.ಆರ್. ಅನಂತಮೂರ್ತಿ, ದೇವನೂರ ಮಹಾದೇವ, ಡಾ.ರಹಮತ್ ತರೀಕೆರೆ, ದಿನೇಶ್ ಅಮಿನ್ ಮಟ್ಟು, ಶಿವಸುಂದರ್, ದು.ಸರಸ್ವತಿ, ಬಂಜಗೆರೆ ಜಯಪ್ರಕಾಶ್, ನಟರಾಜ್ ಬೂದಾಳ್, ಕೋಟಿಗಾನಹಳ್ಳಿ ರಾಮಯ್ಯ, ಡಾ.ಪುರುಷೋತ್ತಮ ಬಿಳಿಮಲೆ, ನಟರಾಜ್ ಹುಳಿಯಾರ್, ರಾಜೇಂದ್ರಚೆನ್ನಿ, ಜಿ.ಎನ್.ದೇವಿ, ಕೆ.ನೀಲ, ಡಾ.ವಿನಯಾ, ಮಲ್ಲಿಗೆ ಸಿರಿಮನೆ, ಕುಂ.ವೀರಭದ್ರಪ್ಪಮುಂತಾದ ಹಿರಿಯರು ಕಾರ್ಯಕ್ರಮಗಳಲ್ಲಿ ತಮ್ಮ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ದೊಡ್ಡ ಸಮಾವೇಶ ಎನ್ನುವುದಕ್ಕಿಂತ ಹೆಚ್ಚಾಗಿ ಒಂದು ಆಪ್ತ ವಲಯದಲ್ಲಿ ಸ್ವಾವಲೋಕನದಿಂದ ಕೂಡಿದ ಸಂವಾದ ಎನ್ನಬಹುದಾದ ಬಗೆಯಲ್ಲಿ ಈ ಕಾರ್ಯಕ್ರಮಗಳಿರುತ್ತವೆ. ನಾವೆಲ್ಲರೂ ಹೆಚ್ಚು ಹೆಚ್ಚು ಸೂಕ್ಷ್ಮವಾಗುವ ನಿಟ್ಟಿನಲ್ಲಿ ಪರಸ್ಪರ ಕಲಿಕೆ ನಡೆದಿದೆ.

2003ರಲ್ಲಿ ಕೊಟ್ಟೂರಿನಲ್ಲಿ ಆರಂಭವಾದ ‘ನಾವು-ನಮ್ಮಲ್ಲಿ’ ಯ ಎರಡು ದಶಕಗಳ ಪಯಣ ಅನೇಕ ಕಾರಣಕ್ಕೆ ಮರೆಯಲಾಗದ್ದು. ಇದು ತಲುಪಿದ ವಿಭಿನ್ನ ಜನವರ್ಗ, ಚರ್ಚಿಸಿದ ವಿಷಯಗಳು, ಕರ್ನಾಟಕದ ಬೇರೆ ಬೇರೆ ಭಾಗಗಳನ್ನು ತಲುಪಲು ಮಾಡಿದ ಯತ್ನ ಹೀಗೆ ಸಾಗಿ ಬಂದ ಹೆಜ್ಜೆಗಳನ್ನು ಮೆಲುಕು ಹಾಕಬಹುದು. ಹಾಸನ, ಕುಪ್ಪಳಿ, ಶಿವಮೊಗ್ಗ, ಹಂಪಿ, ಗಂಗಾವತಿ, ಚಿತ್ರದುರ್ಗಗಳಲ್ಲಿ ಅಲ್ಲಿನ ಸ್ಥಳೀಯರನ್ನು ಒಳಗು ಮಾಡಿಕೊಂಡು ಕಾರ್ಯಕ್ರಮಗಳು ನಡೆದಿವೆ.

2010ರಿಂದ ‘ನಾವು-ನಮ್ಮಲ್ಲಿ’ ಅಹರ್ನಿಶಿ ಪ್ರಕಾಶನ ಬಳಗದ ಸಹಯೋಗದಲ್ಲಿ ಪ್ರತಿವರ್ಷ ಒಂದು ಕೃತಿಯನ್ನು ಹೊರತರುವ ಯೋಜನೆ ರೂಪಿಸಿತು. ಇದು ಮುಖ್ಯವಾಗಿ ಯುವಬರಹಗಾರರ ಕೃತಿಯನ್ನು ಪರಿಗಣಿಸುತ್ತದೆ. ಇದುವರೆಗೆ ಅರುಣ್ ಜೋಳದಕೂಡ್ಲಿಗಿ ಅವರ ‘ಅವ್ವನಅಂಗನವಾಡಿ’, ವಿಜಯಕುಮಾರ್ ಸಿಗರನಹಳ್ಳಿಯವರ ‘ಬೂದಿಯಾಗದ ಕೆಂಡ’, ಅಜಿತ್ ಪಿಳ್ಳೆಯವರ ಕೃತಿಯ ಅನುವಾದವಾದ ‘ಇದು ಯಾವ ಸೀಮೆಯ ಚರಿತ್ರೆ?’, ಟಿ.ಕೆ. ದಯಾನಂದ ಅವರ ‘ರಸ್ತೆನಕ್ಷತ್ರ’ ಹರ್ಷಮಂದರ್ ಅವರ ‘ಅಸಮಾನತೆಯ ಬಣ್ಣಗಳು’ (ಅನುವಾದ), ಚಂಸು ಪಾಟೀಲರ ‘ಬೇಸಾಯದ ಕತಿ’, ನಾಗರಾಜಕೋರಿ ಅವರ ‘ತನುಬಿಂದಿಗೆ’ ಮುಂತಾದ ಕೃತಿಗಳು ಪ್ರಕಟಗೊಂಡು ಗಮನಸೆಳೆದಿವೆ.

ಪ್ರತೀ ಕಾರ್ಯಕ್ರಮದ ಭಾಗವಾಗಿ ನಡೆಯುವ ಕವಿಗೋಷ್ಠಿಯೂ ಸ್ಥಳೀಯ ಮತ್ತು ನಾಡಿನ ಹೊಸ ತಲೆಮಾರಿನ ಕವಿಗಳನ್ನು ಆಹ್ವಾನಿಸಿ ಇನ್ನಷ್ಟು ಮನಸ್ಸುಗಳನ್ನು ಒಳಗೊಂಡು ಸಾಗುವ ಬಗೆಯಾಗಿ ಮುಂದುವರಿದಿದೆ.

ಕಳೆದ 20 ವರ್ಷಗಳಿಂದ ಹೊಸ ತಲೆಮಾರಿನ ಬರಹಗಾರರ ಕನಸು ಕಾಣ್ಕೆಗಳನ್ನು ಚರ್ಚಿಸುತ್ತಲೇ, ಆಯಾ ಕಾಲದ ಬಿಕ್ಕಟ್ಟುಗಳ ಜತೆ ವೈಚಾರಿಕ ಆಕೃತಿಗಳನ್ನು ರೂಪಿಸಿಕೊಳ್ಳಲು ಪ್ರಯತ್ನಿಸಿದೆ.

‘ನಾವು ನಮ್ಮಲ್ಲಿ’ ಎನ್ನುವುದೇ ‘ಇಲ್ಲಿ ಯಾರೂ ಮುಖ್ಯರಲ್ಲ, ಯಾರೂ ಅಮುಖ್ಯರಲ್ಲ’ ಎನ್ನುವ ತತ್ವವನ್ನು ಆಗುಮಾಡಿದೆ. ಈ ನೆಲೆಯಲ್ಲಿ ಆರೋಗ್ಯಕರ ಸಮಾಜಕ್ಕಾಗಿ ತುಡಿಯುವ ಜೀವಪರ ಮನಸ್ಸುಗಳನ್ನು ಒಂದೆಡೆ ಸೇರಿಸುವುದು, ಚರ್ಚಿಸುವುದು, ಆ ಮೂಲಕ ಪರ್ಯಾಯಗಳಿಗೆ ಬೇಕಾದ ಹೊಳಹುಗಳನ್ನು ಪಡೆದು ನಮ್ಮ ಬರಹ, ತಿಳಿವು, ಬದುಕನ್ನು ತಿದ್ದಿಕೊಳ್ಳುತ್ತಾ ಮುನ್ನಡೆಯುವುದು ನಮ್ಮ ಮುಖ್ಯ ಆಶಯವಾಗಿದೆ.

ಇದೀಗ ‘ನಾವು ನಮ್ಮಲ್ಲಿ’ ಆರಂಭವಾಗಿ 20ನೇ ವರ್ಷ. ಈ 20 ವರ್ಷಗಳಲ್ಲಿ ‘ನಾವು ನಮ್ಮಲ್ಲಿ’ ಬಳಗದ ಜತೆ ಗುರುತಿಸಿಕೊಂಡ ಮನಸ್ಸುಗಳ ಸಂಖ್ಯೆ ದೊಡ್ಡದಿದೆ. ಇದೀಗ ಕೊಟ್ಟೂರಿನಲ್ಲಿ 20ನೇ ವರ್ಷದ ‘ನಾವು ನಮ್ಮಲ್ಲಿ’ ಮಾತುಕತೆ ಜುಲೈ 8-9ರಂದು ನಡೆಯುತ್ತಿದೆ. ಈ ಬಾರಿ ಎರಡು ದಿನದ ಚರ್ಚೆಯ ಕೇಂದ್ರ ‘ಸಹಬಾಳ್ವೆಯ ಕಥನಗಳು’

‘ನಾವು-ನಮ್ಮಲ್ಲಿ’ ಕಳೆದ ಎರಡು ದಶಕಗಳಲ್ಲಿ ಸಂವೇದನೆ, ಮನಸ್ಸುಗಳನ್ನು ರೂಪಿಸುವ ಕೆಲಸ ಮಾಡುತ್ತಾ ಬಂದಿದೆ. ನಮ್ಮ ತುಡಿತಗಳನ್ನು, ಕಾಡುತ್ತಿರುವ ಸಂಗತಿಗಳನ್ನು ಹಂಚಿಕೊಳ್ಳುವ, ಚರ್ಚೆ ಮಾಡುತ್ತಾ ನಮ್ಮೊಳಗನ್ನು ಸ್ಪಷ್ಟಪಡಿಸಿಕೊಳ್ಳುವ ವೇದಿಕೆಯ ರೀತಿಯಲ್ಲಿ ಇದು ಬೆಳೆದುಬಂದಿದೆ. ನಿಡುಗಾಲ ಸ್ನೇಹದ ಎಳೆಯನ್ನು ಬಿಡದಂತೆ ಬೆಸೆಯುತ್ತಾ ಹೆಚ್ಚು ಹೆಚ್ಚು ಜನರನ್ನು ಒಳಗು ಮಾಡಿಕೊಳ್ಳುತ್ತಾ ಬಂದಿದೆ. ಇಲ್ಲಿ ಹಿರಿಯ ಬರಹಗಾರರು, ಹೋರಾಟಗಾರರ ಜೊತೆ ಕ್ರಿಯಾಶೀಲ ಹೊಸ ತಲೆಮಾರೂ ಜೊತೆಗೆ ಹೆಜ್ಜೆ ಹಾಕುತ್ತದೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X