Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರ್ತಾಭಾರತಿ ವಿಶೇಷ
  3. ‘ಸೆಕ್ಯುಲರ್-ಸೋಶಿಯಲಿಸ್ಟ್’ ಕೇವಲ ಪದಗಳೋ...

‘ಸೆಕ್ಯುಲರ್-ಸೋಶಿಯಲಿಸ್ಟ್’ ಕೇವಲ ಪದಗಳೋ ಅಥವಾ ಈಡೇರದ ಸಂವಿಧಾನದೊಳಗಿನ ಅಂತರ್ಧಾರೆಯೋ?

ಭಾಗ -02

ಶಿವಸುಂದರ್ಶಿವಸುಂದರ್28 Sept 2023 7:41 AM IST
share
‘ಸೆಕ್ಯುಲರ್-ಸೋಶಿಯಲಿಸ್ಟ್’ ಕೇವಲ ಪದಗಳೋ ಅಥವಾ ಈಡೇರದ ಸಂವಿಧಾನದೊಳಗಿನ ಅಂತರ್ಧಾರೆಯೋ?

ಮೋದಿ ಸರಕಾರ ಅಧಿಕಾರಕ್ಕೆ ಬಂದ ಮೇಲೆ ಬಹಿರಂಗವಾಗಿ ಮತ್ತು ಅಧಿಕಾರಯುತವಾಗಿಯೇ ಮೂಲ ಸಂವಿಧಾನವನ್ನು ಅಮಾನ್ಯಗೊಳಿಸುವ ಯೋಜನೆಯನ್ನು ಜಾರಿ ಮಾಡುತ್ತಿದೆ. ‘ಒಂದು ದೇಶ- ಒಂದು ಚುನಾವಣೆ’, ‘ಭಾರತೀಕರಣ’ದ ಹೆಸರಲ್ಲಿ ಬ್ರಾಹ್ಮಣೀಕರಣ, ಅನೌಪಚಾರಿಕವಾಗಿ ಹಾಗೂ ಅಸಾಂವಿಧಾನಿಕವಾಗಿ ‘ಸೆಕ್ಯುಲರಿಸಂ ಮತ್ತು ಸೋಷಿಯಲಿಸಂ’ ಪದಗಳನ್ನು ತೆಗೆದುಹಾಕುವುದು, ಇವೆಲ್ಲವೂ ಸಂವಿಧಾನವನ್ನು ಬದಲಾಯಿಸುತ್ತೇವೆ ಎಂದು ಘೋಷಿಸದೆಯೇ ಬದಲಾವಣೆ ಮಾಡುವ ಯೋಜನೆಗಳಾಗಿವೆ.

ಸೆಕ್ಯುಲರಿಸಂ- ಸಂವಿಧಾನದ

(Basic Structure)

ಅಷ್ಟು ಮಾತ್ರವಲ್ಲ. ಸಂವಿಧಾನದ ಮುನ್ನುಡಿಯು ಸಂವಿಧಾನದ ಮೂಲ ರಚನೆಯಿದ್ದಂತೆ ಮತ್ತದನ್ನು ಬದಲಾಯಿಸುವ ಅಧಿಕಾರ ಸಂಸತ್ತಿಗಿಲ್ಲ ಎಂದು ಸ್ಪಷ್ಟಪಡಿಸಿದ ಸುಪ್ರೀಂಕೋರ್ಟಿನ 13 ಜನರ ನ್ಯಾಯಪೀಠವು ಕೇಶವಾನಂದ ಭಾರತಿ ಪ್ರಕರಣದಲ್ಲಿ ಸೆಕ್ಯುಲರಿಸಂ ಅನ್ನು ಭಾರತದ ಸಂವಿಧಾನದ ಮೂಲ ರಚನೆ ಎಂದು ಘೋಷಿಸಿತ್ತು. ಇದಾದ ಎರಡು ವರ್ಷಗಳ ನಂತರವೇ ಸೆಕ್ಯುಲರಿಸಂ ಅನ್ನು ಇಂದಿರಾ ಸರಕಾರ ಮುನ್ನುಡಿಗೆ ಸೇರಿಸಿತು. ಹೀಗಾಗಿ ಸೆಕ್ಯುಲರಿಸಂ ಸಂವಿಧಾನದ ಮೂಲ ರಚನೆಯ ಭಾಗ ಎಂದು ಹೇಳಿದ ಭಾರತದ ಸುಪ್ರೀಂಕೋರ್ಟೇ 42ನೇ ತಿದ್ದುಪಡಿಗಿಂತ ಮುಂಚಿತವೇ ಮುನ್ನುಡಿಯ ಸ್ಥಾನಮಾನ ನೀಡಿತು ಎಂದು ಹೇಳಬಹುದು. ಅದೇ ರೀತಿ ಎಸ್.ಆರ್. ಬೊಮ್ಮಾಯಿ ಪ್ರಕರಣದಲ್ಲಿ ಸುಪ್ರೀಂಕೋರ್ಟ್ನ ಒಂಭತ್ತು ಜನರ ಪೀಠ 1994ರಲ್ಲಿ ಅತ್ಯಂತ ಸ್ಪಷ್ಟವಾಗಿ ಹೀಗೆ ಹೇಳಿದೆ:

‘‘42ನೇ ತಿದ್ದುಪಡಿಯ ಮೂಲಕ ಮುನ್ನುಡಿಗೆ ಸೇರಿಸಲ್ಪಟ್ಟಿರುವ ಸೆಕ್ಯುಲರಿಸಂ ಭಾರತದ ಸಂವಿಧಾನದ ಮೂಲ ರಚನೆಯಾಗಿದೆ’’

ಹೀಗೆ ಭಾರತದ ಮೂಲ ಸಂವಿಧಾನ ಹಾಗೂ ಅದನ್ನು ವ್ಯಾಖ್ಯಾನ ಮಾಡುವ ಸುಪ್ರೀಂ ಕೋರ್ಟಿನ ಪೀಠಗಳು ನಿರಂತರವಾಗಿ ಸೆಕ್ಯುಲರಿಸಂ ಎಂಬುದು ಭಾರತದ ಸಂವಿಧಾನದ ಮೂಲ ರಚನೆಯ ಭಾಗ ಎಂದು ಸ್ಪಷ್ಟಪಡಿಸಿದ್ದರೂ ಮೋದಿ ಸರಕಾರ ಅದನ್ನು ಮುನ್ನುಡಿಯಿಂದ ಕಿತ್ತುಹಾಕಲು ಹೊರಟಿರುವುದೇಕೆ?

‘ಮೂಲ ಸಂವಿಧಾನ’ ಮತ್ತು ಸೋಷಿಯಲಿಸಂ

ಮೂಲ ಸಂವಿಧಾನದ ಮುನ್ನುಡಿಯಲ್ಲಿ ಸೋಷಿಯಲಿಸಂ ಎನ್ನುವ ಪದವಿರಲಿಲ್ಲ ಎನ್ನುವುದು ಮತ್ತು ಅದನ್ನು ಮುನ್ನುಡಿಯಲ್ಲಿ 42ನೇ ತಿದ್ದುಪಡಿಯ ಮೂಲಕ ಸೇರಿಸಲಾಯಿತು ಎನ್ನುವುದೂ ಕೂಡ ಅರ್ಧ ಸತ್ಯವೇ. ಅಸಲು ಸಮಾಜವಾದ ಎಂದರೇನು? ಜಗತ್ತಿನಲ್ಲಿ ಸಮಾಜವಾದದ ಬಗ್ಗೆ ಹಲವು ಬಗೆಯ ವ್ಯಾಖ್ಯಾನಗಳು ಇವೆ. ಅವುಗಳೆಲ್ಲದರ ಸಾರ ‘ಸರ್ವರಿಗೂ ಸಮ ಪಾಲು- ಸಮಬಾಳು’ ಎಂಬುದಷ್ಟೇ ಆಗಿದೆ. -ಸಮಾಜದ ಆರ್ಥಿಕ ಸಂಪನ್ಮೂಲಗಳ ವಿತರಣೆಯನ್ನು ಸರ್ವಜನರ ಒಳಿತಿಗೆ ಆಯೋಜಿಸುವುದು. -ಸಂಪತ್ತು ಒಂದು ಕಡೆ ಕೇಂದ್ರೀಕರಣವಾಗದಂತೆ ನೋಡಿಕೊಳ್ಳುವುದು, ಅದರ ಮೇಲೆ ಸರ್ವಜನರ ಒಡೆತನವನ್ನು ಸಾಧಿಸುವುದು.

- ಬಡವ- ಶ್ರೀಮಂತರ ನಡುವಿನ ಅಂತರವನ್ನು ಕಡಿಮೆ ಮಾಡುತ್ತಾ ಆರ್ಥಿಕ ನ್ಯಾಯವನ್ನು ಖಾತರಿಗೊಳಿಸುವುದು.

- ಎಲ್ಲರಿಗೂ ಘನತೆಯಿಂದ ಬದುಕುವಷ್ಟು ಅವಕಾಶಗಳನ್ನು ಕಲ್ಪಿಸಿಕೊಡುವುದು.. ಮೇಲಿನ ಎಲ್ಲಾ ಆಶಯಗಳನ್ನು ಸಾರದಲ್ಲಿ ಒಂದೇ ಪದದಲ್ಲಿ ‘ಸಮಾಜವಾದ’ ಎಂದು ಕರೆಯುತ್ತಾರೆ. ಈಗ ಈ ಆಶಯಗಳು ನಮ್ಮ ಸಂವಿಧಾನದಲ್ಲಿ ಇರಲಿಲ್ಲವೇ?

ಸಂವಿಧಾನದ ಮುನ್ನುಡಿಯನ್ನು ನೋಡೋಣ. ಅದು ಹೀಗೆ ಹೇಳುತ್ತದೆ:

‘‘ಭಾರತದ ಎಲ್ಲಾ ಪ್ರಜೆಗಳಿಗೆ ಸಾಮಾಜಿಕ, ರಾಜಕೀಯ ಮತ್ತು ಆರ್ಥಿಕ ನ್ಯಾಯವನ್ನು ಒದಗಿಸಲು...ಸ್ಥಾನಮಾನ ಮತ್ತು ಅವಕಾಶಗಳ ಸಮಾನತೆಯನ್ನು ದೊರಕಿಸಲು...’’ ಈ ಸಂವಿಧಾನವನ್ನು ರೂಪಿಸಿರುವುದಾಗಿ ಮುನ್ನುಡಿ ಹೇಳುತ್ತದೆ. ಹಾಗೆಯೇ ನಮ್ಮ ಸಂವಿಧಾನದ 4ನೇ ಪರಿಚ್ಛೇದದ ‘ಪ್ರಭುತ್ವ ನಿರ್ದೇಶನಾ ತತ್ವ’ಗಳಲ್ಲಿ:

ಆರ್ಟಿಕಲ್ 38 (1) -ಭಾರತದ ಎಲ್ಲಾ ಸಾಂವಿಧಾನಿಕ ಸಂಸ್ಥೆಗಳು ಈ ದೇಶದ ಎಲ್ಲಾ ಜನರಿಗೆ ಆರ್ಥಿಕ ನ್ಯಾಯವನ್ನು ಒದಗಿಸುವಂತೆ ಅದೇಶಿಸಲಾಗುವುದು. 38(2)- ಪ್ರಭುತ್ವವು ಆದಾಯಗಳಲ್ಲಿನ ಅಸಮಾನತೆಯನ್ನು ಮತ್ತು ಸ್ಥಾನಮಾನ, ಸೌಲಭ್ಯ ಮತ್ತು ಅವಕಾಶಗಳಲ್ಲಿನ ಅಸಮಾನತೆಯನ್ನು ನಿವಾರಿಸಲು ಶ್ರಮಿಸುವುದು. ಆರ್ಟಿಕಲ್ 39 (ಎ) -ದೇಶದ ಎಲ್ಲಾ ವ್ಯಕ್ತಿಗಳಿಗೂ ಅತ್ಯಗತ್ಯ ಜೀವನೋಪಾಯಗಳನ್ನು ಸಮಾನವಾಗಿ ಪಡೆದುಕೊಳ್ಳುವ ಹಕ್ಕನ್ನು ಖಾತರಿ ಪಡಿಸಲಾಗುವುದು.

39(ಬಿ) -ಸಮುದಾಯದ ಸಂಪತ್ತಿನ ಮೇಲೆ ಒಡೆತನವನ್ನು ಸಮುದಾಯವಾದ ಸಾರ್ವತ್ರಿಕ ಒಳಿತಿಗಾಗಿ ಬಳಸುವಂತೆ ನಿಯೋಜಿಸಲಾಗುವುದು.

39(ಸಿ) -ಆರ್ಥಿಕ ನೀತಿಗಳು ಸಂಪತ್ತು ಒಂದು ಕಡೆ ಕೇಂದ್ರೀಕರಣವಾಗದಂತೆ ರೂಪಿಸಲಾಗುವುದು. 39(ಡಿ) -ಗಂಡು ಮತ್ತು ಹೆಣ್ಣು ಮಕ್ಕಳ ನಡುವೆ ಸಮಾನ ಕೆಲಸಕ್ಕೆ ಸಮಾನ ವೇತನ. ಆರ್ಟಿಕಲ್ 41 ಎಲ್ಲರಿಗೂ ಉದ್ಯೋಗ ಮತ್ತು ಶಿಕ್ಷಣದ ಹಕ್ಕನ್ನು ಒದಗಿಸುತ್ತದೆ. ಇವೆಲ್ಲವೂ ನಮ್ಮ ಮೂಲ ಸಂವಿಧಾನದಲ್ಲೇ ಇದೆ. ಈ ಎಲ್ಲಾ ನೀತಿಗಳನ್ನೇ ಒಂದೇ ಪದದಲ್ಲಿ ಸಮಾಜವಾದ ಎಂದು ಕರೆಯುತ್ತಾರೆ. ಅದನ್ನೇ ಒಂದು ಪದವಾಗಿ ಮುನ್ನುಡಿಯಲ್ಲಿ ಸೇರಿಸಲಾಗಿದೆ. ಹಾಗಿದ್ದಲ್ಲಿ ಮೋದಿ ಸರಕಾರ ಸಮಾಜವಾದದ ಪದದ ಜೊತೆಗೆ ಮೇಲಿನ ಎಲ್ಲಾ ಕಲಮುಗಳನ್ನು ರದ್ದು ಮಾಡುವುದೇ? ಹಾಗೆ ನೋಡಿದರೆ 1977ರಲ್ಲಿ ಇಂದಿರಾಗಾಂಧಿಯವರ ಸರ್ವಾಧಿಕಾರವನ್ನು ಮಣಿಸಿ ಇವತ್ತಿನ ಬಿಜೆಪಿಯ ಅಂದಿನ ಅವತಾರವಾಗಿದ್ದ ಭಾರತೀಯ ಜನ ಸಂಘ ಹಾಗೂ ಇನ್ನಿತರ ಪಕ್ಷಗಳು ಒಟ್ಟುಗೂಡಿ ರಚಿಸಿಕೊಂಡ ಜನತಾ ಪಕ್ಷ ಅಧಿಕಾರಕ್ಕೆ ಬಂತು. ಆ ಸರಕಾರ ಸಂವಿಧಾನಕ್ಕೆ 44ನೇ ತಿದ್ದುಪಡಿಯನ್ನು ತಂದು ಇಂದಿರಾ ಗಾಂಧಿ 42ನೇ ತಿದ್ದುಪಡಿಯ ಮೂಲಕ ಜಾರಿ ಮಾಡಿದ್ದ ಇತರ ತಿದ್ದುಪಡಿಗಳನ್ನು ರದ್ದುಗೊಳಿಸಿತೇ ವಿನಾ ಅದೇ 42ನೇ ತಿದ್ದುಪಡಿಯ ಪ್ರಮುಖ ಅಂಶವಾದ ‘ಸೆಕ್ಯುಲರಿಸಂ ಮತ್ತು ಸೋಷಿಯಲಿಸಂ’ ಸೇರ್ಪಡೆಗಳನ್ನಲ್ಲ!

ಆನಂತರ ಈವರೆಗೆ ಸಂವಿಧಾನಕ್ಕೆ 80ಕ್ಕೂ ಹೆಚ್ಚು ತಿದ್ದುಪಡಿಗಳಾಗಿದ್ದರೂ ಬಿಜೆಪಿಯನ್ನು ಒಳಗೊಂಡಂತೆ ಹಲವು ಪಕ್ಷಗಳ ಸರಕಾರಗಳು ಅಧಿಕಾರಕ್ಕೆ ಬಂದಿದ್ದರೂ ‘ಸೆಕ್ಯುಲರಿಸಂ ಮತ್ತು ಸೋಷಿಯಲಿಸಂ’ಗೆ ತಿದ್ದುಪಡಿ ಮಾಡಿರಲಿಲ್ಲ. ದುರಂತವೆಂದರೆ ಸೊಷಿಯಲಿಸಂ ಆಶಯಗಳು ನಿರ್ದೇಶನಾ ತತ್ವಗಳಲ್ಲಿ ಇದ್ದರೂ ಅದು ಮೂಲಭೂತ ಹಕ್ಕುಗಳಲ್ಲ. ಅದನ್ನು ಸರಕಾರ ಜಾರಿ ಮಾಡದಿದ್ದರೂ ನ್ಯಾಯಾಲಯದಲ್ಲಿ ಪ್ರಶ್ನಿಸಲಾಗುವುದಿಲ್ಲ.

ಹೀಗಾಗಿಯೇ ಕಾಂಗ್ರೆಸನ್ನೂ ಒಳಗೊಂಡಂತೆ ಅಧಿಕಾರಕ್ಕೆ ಬಂದ ಎಲ್ಲಾ ಪಕ್ಷಗಳು ಸಂವಿಧಾನಕ್ಕೆ ತಿದ್ದುಪಡಿಯನ್ನು ಮಾಡದೆಯೇ ಸೆಕ್ಯುಲರಿಸಂ ವಿರೋಧಿ, ಸೋಷಿಯಲಿಸಂ ವಿರೋಧಿ ನೀತಿಗಳನ್ನೇ ಅನುಸರಿಸುತ್ತಾ ಬಂದಿದ್ದವು. 1991ರ ನಂತರ ಈ ಅನಧಿಕೃತ ಸಂವಿಧಾನ ಉಲ್ಲಂಘನೆ ಇನ್ನೂ ವೇಗ ಪಡೆಯಿತು. ಅದರಿಂದ ಪುಷ್ಟಿ ಪಡೆದುಕೊಂಡ ಸಂಘಪರಿವಾರದ ಹಿಂದುತ್ವವಾದಿಗಳು ಮೋದಿ ನೇತೃತ್ವದಲ್ಲಿ ಅಧಿಕಾರಕ್ಕೆ ಬಂದಮೇಲೆ ಈಗ ಬಹಿರಂಗವಾಗಿ ಹಾಗೂ ಅಧಿಕೃತವಾಗಿಯೇ ‘ಸೆಕ್ಯುಲರಿಸಂ ಮತ್ತು ಸೋಷಿಯಲಿಸಂ’ ಮೇಲೆ ಸಮರ ಸಾರಿವೆ.

ಹೀಗಾಗಿ ಇದು ‘ಸೆಕ್ಯುಲರಿಸಂ ಮತ್ತು ಸೋಷಿಯಲಿಸಂ’ ಎಂಬ ಎರಡು ಪದಗಳ ಮೇಲಿನ ದಾಳಿಯೂ ಅಲ್ಲ. ಸಾಂವಿಧಾನಿಕ ತಾಂತ್ರಿಕತೆಯ ವಿಷಯಗಳೂ ಅಲ್ಲ. ಮೋದಿ ಸರಕಾರ ಅಧಿಕಾರಕ್ಕೆ ಬಂದ ಮೇಲೆ ಬಹಿರಂಗವಾಗಿ ಮತ್ತು ಅಧಿಕಾರಯುತವಾಗಿಯೇ ಮೂಲ ಸಂವಿಧಾನವನ್ನು ಅಮಾನ್ಯಗೊಳಿಸುವ ಯೋಜನೆಯನ್ನು ಜಾರಿ ಮಾಡುತ್ತಿದೆ.

‘ಒಂದು ದೇಶ- ಒಂದು ಚುನಾವಣೆ’, ‘ಭಾರತೀಕರಣ’ದ ಹೆಸರಲ್ಲಿ ಬ್ರಾಹ್ಮಣೀಕರಣ, ಅನೌಪಚಾರಿಕವಾಗಿ ಹಾಗೂ ಅಸಾಂವಿಧಾನಿಕವಾಗಿ ‘ಸೆಕ್ಯುಲರಿಸಂ ಮತ್ತು ಸೋಷಿಯಲಿಸಂ’ ಪದಗಳನ್ನು ತೆಗೆದುಹಾಕುವುದು, ಇವೆಲ್ಲವೂ ಸಂವಿಧಾನವನ್ನು ಬದಲಾಯಿಸುತ್ತೇವೆ ಎಂದು ಘೋಷಿಸದೆಯೇ ಬದಲಾವಣೆ ಮಾಡುವ ಯೋಜನೆಗಳಾಗಿವೆ.

ಹಾಲಿ ಸಂವಿಧಾನವನ್ನು ಅಮಾನ್ಯಗೊಳಿಸಿ ತಮ್ಮ ಹಿಂದುತ್ವವಾದಿ- ಕಾರ್ಪೊರೇಟ್ ಬಂಡವಾಳಶಾಹಿ- ಬ್ರಾಹ್ಮಣಶಾಹಿ ಸಂವಿಧಾನಕ್ಕೆ ಮಾನ್ಯತೆಗಳಿಸಿಕೊಳ್ಳುವ ಯೋಜನೆಯಾಗಿದೆ.

ನಿಜವಾದ ದೇಶಭಕ್ತರು ಈ ಹುನ್ನಾರವನ್ನು ಸೋಲಿಸಲೇ ಬೇಕು.

share
ಶಿವಸುಂದರ್
ಶಿವಸುಂದರ್
Next Story
X