Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ಶತಮಾನೋತ್ಸವದ ಸಂಭ್ರಮದಲ್ಲಿ ಕಲಬುರಗಿ ನಗರ...

ಶತಮಾನೋತ್ಸವದ ಸಂಭ್ರಮದಲ್ಲಿ ಕಲಬುರಗಿ ನಗರ ಕೇಂದ್ರ ಗ್ರಂಥಾಲಯ

ನಿಜಾಮರ ಕಾಲದಲ್ಲಿ ಸ್ಥಾಪಿತ ‘ಕುತುಬ್ ಖಾನೆ ಆಮ್’

ದಸ್ತಗೀರ ನದಾಫ್ ಯಳಸಂಗಿದಸ್ತಗೀರ ನದಾಫ್ ಯಳಸಂಗಿ16 Dec 2024 11:00 AM IST
share
ಶತಮಾನೋತ್ಸವದ ಸಂಭ್ರಮದಲ್ಲಿ ಕಲಬುರಗಿ ನಗರ ಕೇಂದ್ರ ಗ್ರಂಥಾಲಯ

ಕಲಬುರಗಿ: ಕಲ್ಯಾಣ ಕರ್ನಾಟಕ ಭಾಗದಲ್ಲಿ (ಹಿಂದಿನ ಹೈದರಾಬಾದ್ ಕರ್ನಾಟಕ) ನಿಜಾಮರ ಆಡಳಿತದ ಸಂದರ್ಭದಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿ ಮಾಡಿತ್ತು. ಆಡಳಿತ ಭಾಷೆ ಪರ್ಷಿಯನ್, ಉರ್ದು ಭಾಷೆಯಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಸಾಕಷ್ಟು ಕೊಡುಗೆ ನೀಡಿದೆ. ನಿಜಾಮರು ಹಿಂದಿನ ಗುಲ್ಬರ್ಗ ನಗರದಲ್ಲಿ ಸಾರ್ವಜನಿಕ ಗ್ರಂಥಾಲಯ ಕೂಡ ಸ್ಥಾಪಿಸಿದ್ದರು. ಅವರ ಕಾಲದಲ್ಲಿ ಸ್ಥಾಪಿಸಿದ್ದ ಸಾರ್ವಜನಿಕ ಗ್ರಂಥಾಲಯ ಇದೀಗ ಶತಮಾನೋತ್ಸವವನ್ನು ಆಚರಿಸಿಕೊಳ್ಳುತ್ತಿದೆ.

ಕಲಬುರಗಿ ನಗರ ಕೇಂದ್ರ ಗ್ರಂಥಾಲಯ ಇತಿಹಾಸ: ಸದ್ಯ ಕಲಬುರಗಿ ನಗರದ ಜಗತ್ ವೃತ್ತದ ಸಮೀಪದಲ್ಲಿರುವ ನಗರ ಕೇಂದ್ರ ಗ್ರಂಥಾಲಯವು(ಹಳೆಯ ಕಟ್ಟಡ) ನಿಜಾಮರ ಆಡಳಿತದಲ್ಲಿ ಸ್ಥಾಪಿತವಾಗಿತ್ತು. ಕ್ರೌನ್ ಪ್ರಿನ್ಸ್ ನವಾಬ್ ಮೀರ್ ಉಸ್ಮಾನ್ ಅಲಿ ಖಾನ್ ಬಹದ್ದೂರ್ ಅಫಾಸ್ ಜಾಹಿ ಗಿII ಡೆಕ್ಕನ್ ಸುಲ್ತಾನರ ರಾಜನ ಹೆಸರಿನೊಂದಿಗೆ ಇದನ್ನು ಪ್ರಾರಂಭಿಸಿದ್ದರು.

ಗುಲ್ಬರ್ಗಾದಲ್ಲಿ ಸಾರ್ವಜನಿಕ ಗ್ರಂಥಾಲಯವನ್ನು ಎರಡನೇ ಬಾರಿಗೆ ಆಗಿನ ಪ್ರಧಾನ ಮಂತ್ರಿ ಕಿಶನ್ ಪ್ರಸಾದ್ ಅವರು ಶಿಕ್ಷಣ ಅಧಿಕಾರಿ ನವಾಬ್ ಮಸೂದ್ ಜಂಗ್ ಬಹದ್ದೂರ್ ಮತ್ತು ಶಿಕ್ಷಣ ಮುಖ್ಯ ಅಧಿಕಾರಿ ಸಜ್ಜದ್ ಮಿರ್ಝಾರ ಉಪಸ್ಥಿತಿಯಲ್ಲಿ ಹಿಜರಿ ವರ್ಷ 1346 ರಜಬ್ 23ರಂದು ಉದ್ಘಾಟಿಸಿದ್ದರು. ಪ್ರಸಕ್ತ ಹಿಜರಿ ವರ್ಷ 1446 ಆಗಿರುವುದರಿಂದ ಈ ಗ್ರಂಥಾಲಯಕ್ಕೆ ಹಿಜರಿ ವರ್ಷದ ಪ್ರಕಾರ 100 ವರ್ಷಗಳಾಗುತ್ತಿದೆ.

ನಿಜಾಮರು ಸ್ಥಾಪಿಸಿದ್ದ ಹಳೆಯ ಗ್ರಂಥಾಲಯದ ಕಟ್ಟಡವು ಮೊದಲು 1905 ರಲ್ಲಿ ಕಟ್ಟಲಾಗಿತ್ತು, ಅದರ ಉದ್ಘಾಟನೆಯು ಅರಬಿಕ್ ಕ್ಯಾಲೆಂಡರ್‌ನ ರಜಬ್ 1346ರ ವಸಂತದಲ್ಲಿ ‘ಕುತುಬ್ ಖಾನೆ ಆಮ್’ (ಸಾರ್ವಜನಿಕ ಗ್ರಂಥಾಲಯ) ಎಂಬ ಹೆಸರಿನಿಂದ ಲೋಕಾರ್ಪಣೆಯಾಗಿದೆ. ಇದೇ ಕಟ್ಟಡದಲ್ಲಿ ಮುಂದುವರಿದ ಈ ಗ್ರಂಥಾಲಯವು 1981ರಲ್ಲಿ ಮುನ್ಸಿಪಲ್ ಆ್ಯಕ್ಟ್ 1965ರ ಮೂಲಕ ಮುನ್ಸಿಪಲ್‌ಗೆ ಹಸ್ತಾಂತರವಾಯಿತು. ಅಂದಿನಿಂದ ಇದು ನಗರ ಕೇಂದ್ರ ಗ್ರಂಥಾಲಯವಾಗಿ ಮಾರ್ಪಟ್ಟಿದೆ.




ಸ್ಥಾಪಿತವಾದ ಬಳಿಕ ಗ್ರಂಥಾಲಯದಲ್ಲಿ ಹೆಚ್ಚಾಗಿ ಉರ್ದು, ಮರಾಠಿ, ಕನ್ನಡ, ತೆಲುಗು, ತಮಿಳು ಭಾಷೆಯ ಪುಸ್ತಕಗಳು ಹೆಚ್ಚಿ ದ್ದವು ಎನ್ನಲಾಗಿದೆ. ಇದೀಗ ಕ್ರಮೇಣ ಉರ್ದು ಭಾಷೆಯ ಓದುಗರ ಕೊರತೆಯಿಂದ ಆ ಭಾಷೆಯ ಪುಸ್ತಕಗಳು ಕಡಿಮೆಯಾಗಿವೆ. ಸದ್ಯ ಈ ಲೈಬ್ರರಿಯಲ್ಲಿ ಕನ್ನಡ ಪುಸ್ತಕಗಳೇ ಹೆಚ್ಚಿವೆ.

1981ರಲ್ಲಿ ನವೀಕರಣವಾದ ಈ ಗ್ರಂಥಾಲಯದಲ್ಲಿ ಒಟ್ಟಾರೆ 6,46,535 ಪುಸ್ತಕಗಳಿವೆ. ಅದರಲ್ಲಿ ಕನ್ನಡ -5,97,828, ಇಂಗ್ಲಿಷ್ - 28,952, ಹಿಂದಿ-90,011 ಸೇರಿದಂತೆ ಉಳಿದ ಉರ್ದು, ಮರಾಠಿ ಮತ್ತಿತರ ಭಾಷೆಯ 10,744 ಪುಸ್ತಕಗಳು ಇವೆ. 1981ರಿಂದ ಇಲ್ಲಿಯವರೆಗೆ 17,660 ಸದಸ್ಯರ ಸಂಖ್ಯೆ ಹೊಂದಿದ್ದು, ದಿನಾಲೂ 600ಕ್ಕೂ ಹೆಚ್ಚು ಓದುಗರು ಬರುತ್ತಾರೆ’ ಎಂದು ಇಲ್ಲಿನ ಸಹಾಯಕ ಗ್ರಂಥಪಾಲಕ ದೀಪಕ್ ಕಮ್ತಾರ್ ಹೇಳುತ್ತಾರೆ.

ನಗರದ ಹೃದಯ ಭಾಗದಲ್ಲಿರುವ ಈ ಗ್ರಂಥಾಲಯವು ಓದುಗರಿಗೆ, ವಿದ್ಯಾರ್ಥಿಗಳಿಗೆ ಮತ್ತು ಸ್ಪರ್ಧಾರ್ಥಿಗಳಿಗೆ ಪುಸ್ತಕಗಳನ್ನು ಪಡೆಯಲು ಮತ್ತು ಓದಲು ಸಹಾಯಕವಾಗಿದೆ. ಇದರ ಸುತ್ತಮುತ್ತಲು ಬಸ್, ಮಾರುಕಟ್ಟೆ ಮತ್ತಿತರ ಸೌಲಭ್ಯಗಳು ಇರುವುದರಿಂದ ಗ್ರಾಮೀಣ ಭಾಗದ ಓದುಗರಿಗೆ ತುಂಬಾ ಉಪಯುಕ್ತವಾಗಿದೆ. ಹೆಚ್ಚಿನ ಓದುಗರು ಬರುತ್ತಿರುವುದರಿಂದ ಈ ಕಟ್ಟಡವನ್ನು ವಿಸ್ತರಿಸಬೇಕೆಂದು ಓದುಗರೊಬ್ಬರು ಒತ್ತಾಯಿಸಿದ್ದಾರೆ.

ನಮ್ಮ ಗ್ರಂಥಾಲಯಕ್ಕೆ ನೂರು ವರ್ಷ ತುಂಬಿರುವುದು ತುಂಬಾ ಸಂತೋಷ ತಂದಿದೆ. ಇದು ನಗರವಷ್ಟೇ ಅಲ್ಲದೆ ಗ್ರಾಮೀಣ ಭಾಗದ ಜನರಿಗೂ ಬಹಳಷ್ಟು ಉಪಯೋಗವಾಗುತ್ತಿದೆ. ಈ ಗ್ರಂಥಾಲಯದಲ್ಲಿ ಓದಿದ ಹಲವು ಸ್ಪರ್ಧಾಕಾಂಕ್ಷಿಗಳು ಐಎಎಸ್, ಕೆಎಎಸ್ ಅಧಿಕಾರಿಗಳಾಗಿ ಹೊರಹೊಮ್ಮಿದ್ದಲ್ಲದೆ, ಪೊಲೀಸ್ ಇಲಾಖೆಗಳಲ್ಲಿ ವಿವಿಧ ಹುದ್ದೆಗಳನ್ನು ಗಿಟ್ಟಿಸಿಕೊಂಡಿದ್ದಾರೆ.

ಅಜಯ್ ಕುಮಾರ್, ಉಪ ನಿರ್ದೇಶಕರು-ನಗರ ಕೇಂದ್ರ ಗ್ರಂಥಾಲಯ, ಕಲಬುರಗಿ

ಹೈದರಾಬಾದ್ ಕರ್ನಾಟಕ ಭಾಗಕ್ಕೆ ಶಿಕ್ಷಣ ವಲಯದಲ್ಲಿ ನಿಜಾಮರು ಬಹಳಷ್ಟು ಕೊಡುಗೆ ಕೊಟ್ಟಿದ್ದಾರೆ. ಅವರು ಕಟ್ಟಿಸಿದ ಗ್ರಂಥಾಲಯ ಈಗ ಶತಮಾನೋತ್ಸವ ಆಚರಿಸುತ್ತಿದೆ. ಇದರ ಕೊಡುಗೆಯ ನೆನಪಿಗಾಗಿ ರಾಜ್ಯ ಸರಕಾರ ಈ ಗ್ರಂಥಾಲಯದ ಶತಮಾನೋತ್ಸವವನ್ನು ಆಚರಿಸಬೇಕು.

ರಹ್ಮಾನ್ ಪಟೇಲ್, ಸಂಶೋಧಕ

ಇದು ಈ ಭಾಗದ ಅತೀ ದೊಡ್ಡ ಲೈಬ್ರರಿಯಾಗಿದೆ. ಇದು ಸ್ಥಾಪನೆಗೊಂಡು 100 ವರ್ಷಗಳು ಕಳೆದಿವೆ. ಗ್ರಂಥಾಲಯದ ಆವರಣದಲ್ಲಿ ಉದ್ಘಾಟನಾ ಕಲ್ಲು ಈಗಲೂ ಇದೆ. ಅದರ ಮೇಲೆ ಉರ್ದು, ಪರ್ಷಿಯನ್ ಭಾಷೆಯಲ್ಲಿ ಬರೆದಿರುವುದನ್ನು ಕನ್ನಡ ಮತ್ತು ಇಂಗ್ಲಿಷ್‌ಗೆ ಭಾಷಾಂತರಿಸಬೇಕಿದೆ.

- ಮುಹಮ್ಮದ್ ಅಯಾಝುದ್ದೀನ್ ಪಟೇಲ್, ಕಲಾವಿದ

share
ದಸ್ತಗೀರ ನದಾಫ್ ಯಳಸಂಗಿ
ದಸ್ತಗೀರ ನದಾಫ್ ಯಳಸಂಗಿ
Next Story
X