Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರ್ತಾಭಾರತಿ ವಿಶೇಷ
  3. ಜನವರಿ 14ಕ್ಕೇ ಸಜ್ಜಾಗಲಿದೆ ಲೋಕಸಭಾ...

ಜನವರಿ 14ಕ್ಕೇ ಸಜ್ಜಾಗಲಿದೆ ಲೋಕಸಭಾ ಚುನಾವಣಾ ಸಮರದ ಅಖಾಡ

► ಈವರೆಗಿನ ಅತಿದೊಡ್ಡ ರಾಜಕೀಯ ರಿಸ್ಕ್ ತೆಗೆದುಕೊಂಡ ರಾಹುಲ್ ಗಾಂಧಿ ► ಬಿಜೆಪಿಯನ್ನು ಸೋಲಿಸ್ತಾರ ಅಥವಾ ತಾವೇ ಸೋತು ಸುಣ್ಣವಾಗ್ತಾರಾ ?

ಆರ್. ಜೀವಿಆರ್. ಜೀವಿ9 Jan 2024 12:24 PM IST
share
ಜನವರಿ 14ಕ್ಕೇ ಸಜ್ಜಾಗಲಿದೆ ಲೋಕಸಭಾ ಚುನಾವಣಾ ಸಮರದ ಅಖಾಡ

ಕೊನೆಗೂ ರಾಹುಲ್ ಗಾಂಧಿ ಆ ದೊಡ್ಡ ಹೆಜ್ಜೆಯನ್ನು ಇಟ್ಟೇ ಬಿಟ್ಟಿದ್ದಾರೆ. ಇದು ಅಂತಿಂತಹ ಹೆಜ್ಜೆ ಅಲ್ಲ. ಅವರು ತಮ್ಮ ಎರಡು ದಶಕಗಳ ರಾಜಕೀಯ ಜೀವನದಲ್ಲಿ ಎದುರಿಸಿರುವ ಸವಾಲುಗಳು, ಅಪಾಯಗಳು - ಯಾವುದೂ - ಈಗ ಅವರಿಟ್ಟಿರುವ ಹೆಜ್ಜೆಯಲ್ಲಿರುವ ಸವಾಲುಗಳ ಎದುರು ಏನೂ ಅಲ್ಲ. ಎಲ್ಲಿವರೆಗೆಂದರೆ ಪಂಚ ರಾಜ್ಯ ಚುನಾವಣೆಗಳ ಮೊದಲು ರಾಹುಲ್ ಗಾಂಧಿ ಭಾರತ್ ಜೋಡೋ ಯಾತ್ರೆಯ ಎರಡನೇ ಆವೃತ್ತಿಯನ್ನು ಬೇಗ ಶುರು ಮಾಡಲಿದ್ದಾರೆ ಎಂದು ಹೇಳಿ ಬೀಗುತ್ತಿದ್ದ ಕಾಂಗ್ರೆಸ್ ಹಾಗು ಅದರ ಘಟಾನುಘಟಿ ಮುಖಂಡರು ಚುನಾವಣಾ ಫಲಿತಾಂಶ ಬಂದ ಮೇಲೆ ಗಪ್ ಚುಪ್ ಆಗಿ ಬಿಟ್ಟರು.

ಮೂರು ಪ್ರಮುಖ ಹಿಂದಿ ರಾಜ್ಯಗಳಲ್ಲಿ ಕಾಂಗ್ರೆಸ್ ಹೀನಾಯವಾಗಿ ಸೋತ ಬಳಿಕ ಅದೇ ಹಿಂದಿ ಬೆಲ್ಟ್ ನಲ್ಲಿ ರಾಹುಲ್ ಗಾಂಧಿಯನ್ನು ಮತ್ತೆ ಯಾತ್ರೆಗೆ ಕಳಿಸಿದರೆ ಅವರ ರಾಜಕೀಯ ಜೀವನವೇ ಫಿನಿಷ್ ಆಗಿ ಬಿಡಲಿದೆ ಎಂಬ ಭಯ ಕಾಂಗ್ರೆಸ್ ಮುಖಂಡರನ್ನು ಆವರಿಸಿತ್ತು.

ಹಾಗಾಗಿ ಅವರು ಮೊನ್ನೆ ಸಿ ಡಬ್ಲ್ಯೂ ಸಿ ಮೀಟಿಂಗ್ ನಲ್ಲಿ ಯಾತ್ರೆಯ ಪ್ರಸ್ತಾವ ಮಾತ್ರ ಇಟ್ಟು ಅದರ ನಿರ್ಧಾರ ಸಂಪೂರ್ಣವಾಗಿ ರಾಹುಲ್ ಗಾಂಧಿ ಅವರದ್ದೇ ಎಂದು ಬಿಟ್ಟರು. ಈಗ ರಾಹುಲ್ ಗಾಂಧಿ ತಮ್ಮ ರಾಜಕೀಯ ಜೀವನದಲ್ಲೇ ಅತಿದೊಡ್ಡ ಸವಾಲನ್ನು ಎದುರಿಸಲು ಸಜ್ಜಾಗಿ ಕಣಕ್ಕಿಳಿದೇ ಬಿಟ್ಟಿದ್ದಾರೆ.

ಈವರೆಗಿನ ಅತಿ ದೊಡ್ಡ ರಾಜಕೀಯ ರಿಸ್ಕ್ ಅನ್ನು ಅವರು ಸ್ವೀಕರಿಸಿ ಅಖಾಡಕ್ಕೆ ಇಳಿದೇ ಬಿಟ್ಟಿದ್ದಾರೆ. ನೀವು ಏನೇ ಹೇಳಿ, ಕಾಂಗ್ರೆಸ್ ಹಾಗು ಇಂಡಿಯಾ ಮೈತ್ರಿಕೂಟ ಪಾಲಿಗೆ ಸದ್ಯಕ್ಕೆ ಇರುವ ಇಡೀ ದೇಶದಲ್ಲಿ ಮುಖವಾಗಬಲ್ಲ ಏಕೈಕ ನಾಯಕ ರಾಹುಲ್ ಗಾಂಧಿ. ಅದರಲ್ಲಿ ಸಂಶಯವೇ ಇಲ್ಲ.

ಈಗವರು ಜನವರಿ 14 ರಿಂದ ಎರಡನೇ ಹಂತದ ಭಾರತ್ ಜೋಡೋ ಯಾತ್ರೆಯನ್ನು ಘೋಷಿಸಿದ್ದಾರೆ. ಈ ಬಾರಿ ಅದು ಭಾರತ್ ಜೋಡೋ ಯಾತ್ರೆ ಅಲ್ಲ, ಅದೀಗ ಭಾರತ್ ನ್ಯಾಯ ಯಾತ್ರೆಯಾಗಿ ಬದಲಾಗಿದೆ. ಇತ್ತೀಚಿನ ದಿನಗಳಲ್ಲಿ ಎಲ್ಲೆಡೆ ನ್ಯಾಯಕ್ಕಾಗಿ ಆಗ್ರಹವೇ ಕೇಳಿ ಬರುತ್ತಿರುವಾಗ ರಾಹುಲ್ ತಮ್ಮ ಯಾತ್ರೆಗೆ ಅದೇ ಹೆಸರು ಇಟ್ಟಿದ್ದಾರೆ.

ಸಂಸತ್ತಿನಲ್ಲಿ ಸಂಸದರನ್ನೇ ಅಮಾನತು ಮಾಡಿದಾಗ , ಹೆಣ್ಣು ಮಕ್ಕಳ ಪೀಡಕನೇ ಮತ್ತೆ ತಾನೇ ಮಹಾ ಪ್ರಭಾವೀ ಎಂದು ಘೋಷಿಸಿಕೊಂಡಾಗ, ಮಾನವ ಹಕ್ಕುಗಳ ಹೋರಾಟಗಾರರ ಮೇಲೆ ದಾಳಿಯಾಗುತ್ತಿರುವಾಗ, ಪತ್ರಕರ್ತರನ್ನು ಸುಮ್ಮನಾಗಿಸುತ್ತಿರುವಾಗ, ವಿಪಕ್ಷಗಳಿಗೆ ರಾಜಕೀಯವಾಗಿ ಸಮಾನ ಸ್ಪರ್ಧೆಯ ಅವಕಾಶವನ್ನೇ ನಿರಾಕರಿಸುತ್ತಿರುವಾಗ - ಈಗ ಎಲ್ಲೆಡೆ ಕೇಳಿ ಬರುತ್ತಿರುವ ಆಗ್ರಹ - ನ್ಯಾಯದ ಆಗ್ರಹ.

ಅದೇ ಹೆಸರಲ್ಲಿ ರಾಹುಲ್ ಗಾಂಧಿ ತಮ್ಮ ಯಾತ್ರೆಯನ್ನು ಹೊರಟಿದ್ದಾರೆ. ಜನವರಿ 14ಕ್ಕೆ ಮಣಿಪುರದಲ್ಲಿ ಪ್ರಾರಂಭವಾಗಿ ನಾಗಾಲ್ಯಾಂಡ್‌, ಅಸ್ಸಾಂ, ಮೇಘಾಲಯ, ಪಶ್ಚಿಮ ಬಂಗಾಳ, ಬಿಹಾರ, ಜಾರ್ಖಂಡ್‌, ಒಡಿಶಾ, ಛತ್ತೀಸಗಢ, ಉತ್ತರ ಪ್ರದೇಶ, ಮಧ್ಯಪ್ರದೇಶ, ರಾಜಸ್ಥಾನ, ಗುಜರಾತ್‌ ಮಾರ್ಗವಾಗಿ ಮಾರ್ಚ್ 20 ರಂದು ಮುಂಬೈಯಲ್ಲಿ ರಾಹುಲ್ ಅವರ ಭಾರತ್ ನ್ಯಾಯ ಯಾತ್ರೆ ಸಮಾರೋಪಗೊಳ್ಳಲಿದೆ.

ಜನವರಿ 22 ರಂದು ಅಯೋಧ್ಯೆಯಲ್ಲಿ ಪ್ರಾಣ ಪ್ರತಿಷ್ಠಾಪನೆ ಮಾಡುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಪರೋಕ್ಷವಾಗಿ 2024 ರ ಲೋಕಸಭಾ ಚುನಾವಣಾ ಪ್ರಚಾರವನ್ನು ಆರಂಭಿಸುತ್ತಿದ್ದಾರೆ ಎಂದೇ ವಿಶ್ಲೇಷಿಸಲಾಗುತ್ತಿದೆ. ಆದರೆ ಈ ಬಾರಿಯ ಲೋಕಸಭಾ ಚುನಾವಣೆಯ ಪ್ರಚಾರವನ್ನು ಜನವರಿ 22 ಅಲ್ಲ, ಜನವರಿ 14 ರಂದೇ ಆರಂಭವಾಗಲಿದೆ. ರಾಹುಲ್ ಗಾಂಧಿಯ ಭಾರತ್ ನ್ಯಾಯ ಯಾತ್ರೆ ಬೇರೆ ಏನೂ ಅಲ್ಲ. ಅದು 2024ರ ಲೋಕಸಭಾ ಚುನಾವಣೆಯಲ್ಲಿ ಅವರು ನರೇಂದ್ರ ಮೋದಿ ನೇತೃತ್ವದ ಎನ್ ಡಿ ಎ ವಿರುದ್ಧ ಅವರು ತೊಡೆತಟ್ಟಿ ಕಣಕ್ಕಿಳಿದ ಘೋಷಣೆ.

ರಾಹುಲ್ ಗಾಂಧಿ ಅದೆಷ್ಟು ದೊಡ್ಡ ರಿಸ್ಕ್ ತೆಗೆದುಕೊಂಡಿದ್ದಾರೆ ಎಂಬುದಕ್ಕೆ ಕೆಲವು ಅಂಕಿ ಅಂಶಗಳನ್ನು ನೋಡಿದ್ರೆ ಸ್ಪಷ್ಟವಾಗುತ್ತೆ. ರಾಹುಲ್ ಗಾಂಧಿ ತಮ್ಮ ಯಾತ್ರೆ ಪ್ರಾರಂಭಿಸ್ತಾ ಇರೋದು ಮಣಿಪುರದಲ್ಲಿ. ಅಲ್ಲಿಂದ ನಾಗಾಲ್ಯಾಂಡ್‌, ಅಸ್ಸಾಂ, ಮೇಘಾಲಯಕ್ಕೆ ಹೋಗ್ತಾರೆ. ಆರೆಸ್ಸೆಸ್ 'ಈಸ್ಟ್ ಫರ್ಸ್ಟ್' ಎಂಬ ತನ್ನ ಮಂತ್ರದೊಂದಿಗೆ ಬಹಳ ಹಿಂದೆಯೇ ಕೆಲಸಕ್ಕಿಳಿದ ರಾಜ್ಯಗಳು ಇವು. ಆ ಕೆಲಸದ ಪೂರ್ಣ ಲಾಭ ಬಾಚಿಕೊಂಡಿದ್ದು ಬಿಜೆಪಿ.

ಈಗ ಇಡೀ ಈಶಾನ್ಯ ರಾಜ್ಯಗಳಲ್ಲಿ ಇರುವ ಒಟ್ಟು 11 ಲೋಕಸಭಾ ಕ್ಷೇತ್ರಗಳಲ್ಲಿ ಐದು ಬಿಜೆಪಿ ಕೈಯಲ್ಲಿದೆ. ಕೇವಲ ಒಂದು ಮಾತ್ರ ಕಾಂಗ್ರೆಸ್ ಕೈಯ್ಲಲಿದೆ. ಇನ್ನು ರಾಹುಲ್ ಗಾಂಧಿಯ ಯಾತ್ರೆ ಹಾದು ಹೋಗುವ 85 ಜಿಲ್ಲೆಗಳಲ್ಲಿ ಇರುವ ಒಟ್ಟು 98 ಲೋಕಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಬಳಿ ಇರುವುದು ಕೇವಲ 5 ಸೀಟು. ಅಲ್ಲಿನ ಬಹಳ ದೊಡ್ಡ ಸಂಖ್ಯೆಯ ಸೀಟುಗಳಿರುವುದು ಬಿಜೆಪಿ ಬಳಿ.

ಇನ್ನು ರಾಹುಲ್ ಗಾಂಧಿಯ ಯಾತ್ರೆ ಹಾದು ಹೋಗುವ ರಾಜ್ಯಗಳ ಪೂರ್ಣ ಚಿತ್ರಣ ತೆಗೆದುಕೊಂಡರೆ ಅಲ್ಲಿ ಒಟ್ಟು 355 ಲೋಕಸಭಾ ಸೀಟುಗಳಿವೆ. ಆ ಪೈಕಿ 236 ಸೀಟುಗಳು ಬಿಜೆಪಿ ಕೈಯಲ್ಲಿವೆ. ಕೇವಲ ಅಂದ್ರೆ ಕೇವಲ 14 ಸೀಟುಗಳಲ್ಲಿ ಕಾಂಗ್ರೆಸ್ ಸಂಸದರಿದ್ದಾರೆ. ಇನ್ನು ರಾಹುಲ್ ಯಾತ್ರೆ ಹೋಗುವ ರಾಜ್ಯಗಳಲ್ಲಿ ನವೀನ ಪಟ್ನಾಯಕ್ ಅವರ ಒಡಿಶಾ, ಮಮತಾ ಬ್ಯಾನರ್ಜಿಯ ಪಶ್ಚಿಮ ಬಂಗಾಳ , ನಿತೀಶ್ ಕುಮಾರ್ ಹಾಗು ತೇಜಸ್ವಿ ಯಾದವ್ ಅವರ ಬಿಹಾರ, ಹೇಮಂತ್ ಸೊರೇನ್ ಅವರ ಜಾರ್ಖಂಡ್, ಅಖಿಲೇಶ್ ಯಾದವ್ ರ ಉತ್ತರ ಪ್ರದೇಶ ಹಾಗೂ ಶರದ್ ಪವಾರ್ ಹಾಗು ಉದ್ಧವ್ ಠಾಕ್ರೆಯ ಮಹಾರಾಷ್ಟ್ರಗಳಿವೆ.

ಅಂದ್ರೆ, ಈ ಇಡೀ ಯಾತ್ರೆಯ ಹಾದಿಯಲ್ಲಿ ರಾಹುಲ್ ರನ್ನು ಸ್ವಾಗತಿಸಲು, ಅವರ ಜೊತೆ ಹೆಜ್ಜೆ ಹಾಕಲು ಒಬ್ಬೇ ಒಬ್ಬ ಕಾಂಗ್ರೆಸ್ ಮುಖ್ಯಮಂತ್ರಿಯಿಲ್ಲ. ಅಷ್ಟೇ ಅಲ್ಲ ಈ ಎಲ್ಲ ರಾಜ್ಯಗಳಲ್ಲಿರುವ ಕಾಂಗ್ರೆಸ್ ಸಂಸದರ ಸಂಖ್ಯೆಯೂ ತೀರಾ ಕಡಿಮೆ. ಕೆಲವು ರಾಜ್ಯಗಳಲ್ಲಿ ಇಂಡಿಯಾ ಮೈತ್ರಿಕೂಟದ ಘಟಾನುಘಟಿ ಪ್ರಾದೇಶಿಕ ನಾಯಕರಿದ್ದಾರೆ. ಒಂದೆರಡು ರಾಜ್ಯಗಳಲ್ಲಿ ಎನ್ ಡಿ ಎ ಜೊತೆ ಪರೋಕ್ಷವಾಗಿ ಗುರುತಿಸಿಕೊಂಡಿರುವ ಪ್ರಾದೇಶಿಕ ನಾಯಕರಿದ್ದಾರೆ.

ಪಂಚ ರಾಜ್ಯಗಳ ವಿಧಾನ ಸಭಾ ಚುನಾವಣಾ ಫಲಿತಾಂಶ ಬಂದ ಮೇಲಂತೂ ಕಾಂಗ್ರೆಸ್ ಪಾಲಿಗೆ ಈ ರಾಜ್ಯಗಳಲ್ಲಿ ಪರಿಸ್ಥಿತಿ ಚಿಂತಾಜನಕವಾಗಿದೆ.

ಈ ಪರಿಸ್ಥಿತಿಯಲ್ಲಿ ರಾಹುಲ್ ಗಾಂಧಿ ಅದೇ ರಾಜ್ಯಗಳಲ್ಲಿ ಬೀದಿಗಿಳಿಯಲು ಹೊರಟಿದ್ದಾರೆ. ಜನರೊಂದಿಗೆ ಮಾತಾಡಲು ಸಿದ್ಧವಾಗಿದ್ದಾರೆ. ಅವರ ಮಾತುಗಳನ್ನು ಆಲಿಸಲು ನಡೆಯಲಿದ್ದಾರೆ. ಏನಾಗಬಹುದು ರಾಹುಲ್ ಗಾಂಧಿಯವರ ಈ ಭಾರತ್ ನ್ಯಾಯ ಯಾತ್ರೆಯ ಪರಿಣಾಮ ?.

ಏನೂ ಆಗಬಹುದು. ಜನವರಿ 22 ರ ಅಯೋಧ್ಯಾ ಕಾರ್ಯಕ್ರಮ ಮುಗಿಸಿದ ಕೂಡಲೇ ಪ್ರಧಾನಿ ಮೋದಿಯವರು ಸರಕಾರಿ ಕಾರ್ಯಕ್ರಮಗಳ ಹೆಸರಲ್ಲೇ ದೇಶಾದ್ಯಂತ ಪ್ರಯಾಣಿಸ್ತಾರೆ. ರಾಜ್ಯ ರಾಜ್ಯಗಳಲ್ಲಿ ಸಮಾವೇಶ, ಕಾರ್ಯಕ್ರಮ ಮಾಡ್ತಾರೆ. ಅದು ಖಚಿತ. ಆದರೆ ಅದಕ್ಕಿಂತಲೂ ಹತ್ತು ದಿನ ಮೊದಲೇ ರಾಹುಲ್ ಗಾಂಧಿ ಬೀದಿಗಿಳಿದಿರುತ್ತಾರೆ. ಹದಿನಾಲ್ಕು ರಾಜ್ಯಗಳಲ್ಲಿ ಅದರಲ್ಲೂ ಪ್ರಮುಖ ಹಿಂದಿ ರಾಜ್ಯಗಳಲ್ಲಿ ಅವರು ಪ್ರತಿದಿನ ಬೀದಿ ಬೀದಿಯಲ್ಲಿ ಜನರನ್ನು ಭೇಟಿಯಾಗುತ್ತಾರೆ. ಆ ಮೂಲಕ ಆಯಾ ರಾಜ್ಯಗಳ ಕಾಂಗ್ರೆಸ್ ಸಂಘಟನೆಯನ್ನು, ಕಾರ್ಯಕರ್ತರನ್ನು ಚುರುಕುಗೊಳಿಸುತ್ತಾರೆ.

ಆದರೆ ಇದರ ಫಲಿತಾಂಶ ಏನಾಗಬಹುದು ?. ಪ್ರಧಾನಿ ಮೋದಿ, ಅಮಿತ್ ಶಾ ಹಾಗು ಬಿಜೆಪಿಯ ರಣತಂತ್ರದ್ದೇ ಕೈ ಮೇಲಾದರೆ ಬಿಜೆಪಿ ಮತ್ತೆ ಪ್ರಚಂಡ ಬಹುಮತ ಗಳಿಸಿ ಹ್ಯಾಟ್ರಿಕ್ ಜಯಭೇರಿ ಬಾರಿಸಬಹುದು. ಕಳೆದ ಬಾರಿಗಿಂತಲೂ ಹೆಚ್ಚೇ ಸೀಟು ಗಳಿಸಲೂ ಬಹುದು.

ಹಾಗಾದಲ್ಲಿ ಅದು ರಾಹುಲ್ ಗಾಂಧಿಯ ರಾಜಕೀಯ ಜೀವನದ ಅಂತ್ಯವೇ ಆಗಲಿದೆ. ಅವರ ಎರಡೂ ಭಾರತ್ ಯಾತ್ರೆಗಳಿಗೆ ಯಾವ ಮಹತ್ವವೂ ಇಲ್ಲ ಎಂದು ದಾಖಲಾಗಲಿದೆ. ಕಾಂಗ್ರೆಸ್ ಕಳೆದ ಬಾರಿಯಷ್ಟೇ ಅಥವಾ ಅದಕ್ಕಿಂತಲೂ ಕಡಿಮೆ ಸ್ಥಾನ ಗಳಿಸಿದರೆ ಅಲ್ಲಿಗೆ ಕಾಂಗ್ರೆಸ್ ಪ್ರಮುಖ ವಿಪಕ್ಷವಾಗಿಯೂ ಉಳಿಯೋದು ಕಷ್ಟವಾಗಲಿದೆ.

ಆದರೆ, ರಾಹುಲ್ ಗಾಂಧಿಯ ನ್ಯಾಯದ ಆಗ್ರಹ , ಅವರ ನಡಿಗೆ , ಅವರ ಮಾತುಗಳು, ಅವರು ಸ್ವೀಕರಿಸಿರುವ ಈ ಸವಾಲು - ಆ ಹದಿನಾಲ್ಕು ರಾಜ್ಯಗಳಲ್ಲಿ ಮಾತ್ರವಲ್ಲ ಇಡೀ ದೇಶದಲ್ಲಿ ಒಂದು ರಾಜಕೀಯ ಸಂಚಲನ ಮೂಡಿಸುವಲ್ಲಿ ನಿಜವಾಗಿಯೂ ಯಶಸ್ವಿಯಾದರೆ, ಅಂತಹದೊಂದು ರಾಜಕೀಯ ಪವಾಡ ನಡೆದು ಹೋದರೆ ಮುಂದಿನ ಚುನಾವಣೆಯಲ್ಲಿ ಏನೂ ಆಗಬಹುದು.

303 ರಲ್ಲಿರುವ ಬಿಜೆಪಿಯ 40 ರಿಂದ 45 ಸೀಟುಗಳನ್ನು ಕಸಿದುಕೊಂಡರೆ ಬಿಜೆಪಿ ಬಹುಮತಕ್ಕಿಂತ ಕೆಳಗೆ ಬಂದು ನಿಂತು ಬಿಡಬಹುದು. ಇದು ಹೇಳಿದಷ್ಟು ಸುಲಭವಲ್ಲ. ಬಿಜೆಪಿಯ ರಣತಂತ್ರ, ಹಿಂದುತ್ವದ ಮಂತ್ರ, ಮೋದಿಯ ವರ್ಚಸ್ಸು, ಸಂಘ ಪರಿವಾರದ ಸಂಘಟನೆ, ಪ್ರಚಾರದ ಭರಾಟೆ, ಭಾರೀ ಬಂಡವಾಳದ ಆಸರೆ - ಇವೆಲ್ಲವನ್ನೂ ಮೀರಿ ನಿಲ್ಲೋದು ಅಂದ್ರೆ ತಮಾಷೆಯ ಮಾತಲ್ಲ.

ಆದರೆ ರಾಜಕೀಯದಲ್ಲಿ ಯಾವುದೂ ಅಸಾಧ್ಯವೂ ಅಲ್ಲ. ಇಲ್ಲಿ ಪರಿಸ್ಥಿತಿ ಬದಲಾಗಲು ಹೆಚ್ಚು ಸಮಯ ತೆಗೆದುಕೊಳ್ಳೋದಿಲ್ಲ. ಜನ ಮನಸ್ಸು ಮಾಡಿದರೆ ಯಾವ ನಾಯಕನೂ ಹೀರೊ ಆಗಬಹುದು, ಯಾರೂ ಇಲ್ಲಿ ಝೀರೋ ಆಗಬಹುದು. ಅದಕ್ಕೆ ಹೆಚ್ಚು ಹೊತ್ತು ಬೇಕಾಗಿಲ್ಲ.

2024 ರ ಲೋಕಸಭಾ ಚುನಾವಣೆ ಅಂತಿಂತಹ ಚುನಾವಣೆ ಅಲ್ಲ. ಅದು ಈ ದೇಶದ ದಿಕ್ಕು ನಿರ್ಧರಿಸಲಿರುವ ಅತ್ಯಂತ ಮಹತ್ವದ ಚುನಾವಣೆ.

ರಾಹುಲ್ ಗಾಂಧಿ ಅದನ್ನು ಬಹಳ ಚೆನ್ನಾಗಿಯೇ ತಿಳಿದುಕೊಂಡಿದ್ದಾರೆ. ಅದಕ್ಕಾಗಿ ಅವ್ರು ತಮ್ಮ ರಾಜಕೀಯ ವೃತ್ತಿ ಬದುಕನ್ನೇ ಪಣಕ್ಕಿಟ್ಟು ಬೀದಿಗಿಳಿದಿದ್ದಾರೆ. ಪ್ರತಿಯೊಂದು ಅಂಶವೂ ಅವರಿಗೆ, ಅವರ ಪಕ್ಷಕ್ಕೆ ಪ್ರತಿಕೂಲವೇ ಆಗಿರುವಾಗಲೂ ಈ ಧೈರ್ಯ ತೋರಿಸಿದ್ದಕ್ಕಾಗಿ ಅವರನ್ನು ಅಭಿನಂದಿಸೋಣ. ಈ ಯಾತ್ರೆ ಹಾಗು ಆ ಬಳಿಕ ನಡೆಯುವ ಚುನಾವಣೆ - ಈ ದೇಶದ ಭವಿಷ್ಯವನ್ನು ನಿರ್ಧರಿಸಲಿದೆ. ಜೊತೆಗೆ ರಾಹುಲ್ ಗಾಂಧಿಯ ರಾಜಕೀಯ ಭವಿಷ್ಯವೂ ಅಲ್ಲೇ ಅಡಗಿದೆ.

share
ಆರ್. ಜೀವಿ
ಆರ್. ಜೀವಿ
Next Story
X