Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರ್ತಾಭಾರತಿ ವಿಶೇಷ
  3. ಚಂದ್ರನ್ ಭಯದಲ್ಲೇ ದಿನದೂಡುತ್ತಿದ್ದ ಆ...

ಚಂದ್ರನ್ ಭಯದಲ್ಲೇ ದಿನದೂಡುತ್ತಿದ್ದ ಆ ದಿನಗಳು...

ದೇವಸ್ಥಾನದಲ್ಲಿ ಪೂಜೆ ಮಾಡುತ್ತಿದ್ದ ಅರ್ಚಕನೇ ಚಂದ್ರನ್ ಎಂದು ಗೊತ್ತಾದಾಗ! ► ಹೊಸ ತಲೆಮಾರಿಗೆ ಅಜ್ಜಿ ಹೇಳುತ್ತಿದ್ದ ಚಂದ್ರನ್ ಕತೆಗಳು

ವಾರ್ತಾಭಾರತಿವಾರ್ತಾಭಾರತಿ25 March 2025 4:15 PM IST
share
ಚಂದ್ರನ್ ಭಯದಲ್ಲೇ ದಿನದೂಡುತ್ತಿದ್ದ ಆ ದಿನಗಳು...

80-90ರ ದಶಕದಲ್ಲಿ ಕರಾವಳಿ ಭಾಗದ ಪ್ರತೀ ಮನೆಯಲ್ಲೂ ಸಂಜೆಯಾದರೆ ಒಂದು ಭಯ ಆವರಿಸುತ್ತಿತ್ತು. ಊರಿಡೀ ಸ್ಮಶಾನ ಮೌನ. ಜನರು ಆಚೆ ಬರಲು ಹಿಂದೆ ಮುಂದೆ ನೋಡುತಿದ್ದ ಸಮಯ. ಒಂದು ಸಪ್ಪಳ ಕೇಳಿದರೂ ಜನ ಎದೆ ಹೊಡೆದುಕೊಳ್ಳುತ್ತಿದ್ದ ಸಮಯ. ಅಷ್ಟರ ಮಟ್ಟಿಗೆ ಇಡೀ ಕರಾವಳಿಯ್ನೇ ನಡುಗಿಸಿದ್ದ ಆ ಭಯದ ಹೆಸರು ಚಂದ್ರನ್!

ಚಂದ್ರನ್ ಎಂಬ ದರೋಡೆಕೋರ, ಕಳ್ಳನ ಬಗ್ಗೆ ಸಾಕಷ್ಟು ರೋಚಕ ಮಾಹಿತಿಯನ್ನು ಹಿರಿತಲೆಮಾರುಗಳು ಕಿರಿಯರಿಗೆ ಹೇಳುತ್ತಿದ್ದರು. ಸಣ್ಣ ಮಕ್ಕಳನ್ನು ಊಟ ಮಾಡಿಸಲು ಅಜ್ಜಿಯಂದಿರು ಚಂದ್ರನ್ ಬರುತ್ತಾನೆ ಎಂದು ಹೇಳಿದ್ದೂ ಇದೆ. ಆದರೆ ಯಾರಿಗೂ ಆ ಅಗೋಚರ ಚಂದ್ರನ್ ಯಾರು ಎಂದು ತಿಳಿದಿರಲಿಲ್ಲ. ಆದರೆ ಆತ ಮಾಡುತ್ತಿದ್ದ ಅಮಾನುಷ ಕೃತ್ಯಗಳನ್ನು ಸಿಸಿಟಿವಿ ಇಲ್ಲದ ಕಾಲದಲ್ಲೂ ಕಣ್ಣಿಗೆ ಕಟ್ಟಿದಂತೆ ಜನರು ಹೆಣೆಯುತ್ತಿದ್ದರು.

ಚಂದ್ರನ್ ಮಾಡುತ್ತಿದ್ದ ಕೃತ್ಯಗಳೇ ಹಾಗೆ. ಹಾರೆ, ಸುತ್ತಿಗೆ, ಹರಿತ ಆಯುಧಗಳನ್ನು ಬಳಸಿ ದರೋಡೆಗೆ ಇಳಿಯುತ್ತಿದ್ದ ಚಂದ್ರನ್ ಚಿನ್ನ ಕಳ್ಳತನದ ವೇಳೆ ಕಿವಿಯನ್ನೇ ಕೊಯ್ದು ಚಿನ್ನ ಸಮೇತ ಪರಾರಿಯಾಗಿದ್ದ ಎಂದು ಆ ಭಯಾನಕತೆಯನ್ನು ವಿವರಿಸಿದ ಹಿರಿಯರೂ ಕರಾವಳಿಯಲ್ಲಿದ್ದರು.

ಅದು 1985-86ರ ಸಮಯದಲ್ಲಿ ಚಂದ್ರನ್ ಭಯ ಪೊಲೀಸರನ್ನೂ ಆವರಿಸಿತ್ತು. ಸ್ವತಃ ಬೀಟ್‌ ಪೊಲೀಸರು ಹೊರಗೆ ಹೋಗಲು ಹಿಂದೆ ಮುಂದೆ ನೋಡುತ್ತಿದ್ದ ಸಮಯದ ಅದು. ಒಂದು ವೇಳೆ ಹೊರಗೆ ಹೋಗುತ್ತಿದ್ದರೂ, ತಮ್ಮ ಪತ್ನಿ, ಮಕ್ಕಳನ್ನ ಜೊತೆಗೆ ಕರೆದುಕೊಂಡು ಹೋಗುತ್ತಿದ್ದರು.

ಇಂತಹ ಭೀತಿಯನ್ನು ಹುಟ್ಟುಹಾಕಿದ್ದ ಕ್ರಿಮಿನಲ್ ನ ಪೊಲೀಸ್ ದಾಖಲೆಯಲ್ಲಿನ ಹೆಸರು ಚಂದ್ರನ್ ಅಲಿಯಾಸ್ ರಿಪ್ಪರ್‌ ಚಂದ್ರನ್!

ಆತ ಮಾಡಿದ ಕರ್ಮ ಕಾಂಡ ಗಳು ಒಂದೋ ಎರಡೋ? ಆ ದಿನ ಸಂಜೆ ಕಳೆದು ಕತ್ತಲು ಆವರಿಸುತ್ತಿದ್ದ ಸಂದರ್ಭ. ಜನರೆಲ್ಲ ತಮ್ಮ ಮನೆ ಸೇರಿಕೊಂಡಿದ್ದರು. ಕಾಸರಗೋಡಿನ ಚೆಮ್ಮಾಡ್‌ ಸಮೀಪದ ಮನೆಯಲ್ಲಿ ಇನ್ನೂ ಬೆಳಕು ಉರಿಯುತ್ತಿತ್ತು. ಮನೆಯೊಡತಿ ರಮಣಿ ಮನೆಯೊಳಗಿದ್ದರು. ಅಷ್ಟರಲ್ಲೇ ಹೆಜ್ಜೆ ಸಪ್ಪಳ ಕೇಳಿಸಿತು. ತಿರುಗಿ ನೋಡುವಷ್ಟರಲ್ಲಿ ರಿಪ್ಪರ್‌ ಚಂದ್ರನ್. ಕ್ಷಣ ಮಾತ್ರದಲ್ಲೇ ರಮಣಿಯವರ ಕೊಲೆಗೈಯಲಾಗಿತ್ತು.

ಗಡಿನಾಡಿನ ಗ್ರಾಮದಲ್ಲಿ ನಡೆದ ಈ ಭೀಕರ ಘಟನೆಯ ಸುದ್ದಿ ಗಡಿಯಾಚೆಗೂ ಹರಡಿತ್ತು. ಬೆಳಗಾಗುವಷ್ಟರಲ್ಲಿ ರಮಣಿ ಮನೆ ಮುಂದೆ ಪೊಲೀಸರು, ಜನರು ಸೇರಿದ್ದರು. ಹತ್ಯೆಯ ಬಗ್ಗೆ ತನಿಖೆ ಆರಂಭವಾಯಿತು. ಈ ಹತ್ಯೆಯ ಭೀಕರತೆ ಜನರ ಮನಸ್ಸಿನಿಂದ ಮಾಯುವ ಮೊದಲೇ ಮತ್ತೊಂದು ಕಡೆ ಚಂದ್ರನ್‌ ಬೀಸಿದ್ದ ರಿಪ್ಪರ್‌ ಮತ್ತೊಬ್ಬ ಅಮಾಯಕನ ತಲೆಯನ್ನು ಸೀಳಿ ಹಾಕಿತ್ತು. ಇಲ್ಲೂ ನಡೆದದ್ದು ಕೂಡ ಸೇಮ್‌ ರಮಣಿ ರೀತಿಯದ್ದೇ ಹತ್ಯೆ. ಅದೇ ಭೀಕರತೆ, ಅದೇ ಅಮಾನುಷ ಕೃತ್ಯ.

ಕತ್ತಲಲ್ಲಿ ಪ್ರತ್ಯಕ್ಷವಾಗುತ್ತಿದ್ದ ಆ ಅನಾಮಿಕನ ಬಗ್ಗೆ ಕಾಸರಗೋಡು, ವಯನಾಡ್‌, ದಕ್ಷಿಣ ಕನ್ನಡ ಜಿಲ್ಲೆಯ ಗಡಿ ಭಾಗಗಳಲ್ಲಿ ಎಲ್ಲ ಊರುಗಳಲ್ಲೂ ಆ ಬಳಿಕ ಭಯ ಶುರುವಾಗಿತ್ತು. ರಮಣಿ ಕೊಲೆ ಪ್ರಕರಣ ನಡೆದು ಒಂದು ತಿಂಗಳು ಆಗುವಷ್ಟರಲ್ಲೇ ಮಂಜೇಶ್ವರದಲ್ಲಿ ಒಂದೇ ಮನೆಯಲ್ಲಿದ್ದ ಒಂದು ಕುಟುಂಬದ ಮೂವರನ್ನು ತಲೆಗೆ ಗುದ್ದಲಿಯಿಂದ ಹೊಡೆದು ಕೊಲೆಗೈದಿದ್ದ ಘಟನೆ‌ ನಡೆದಿತ್ತು... ಆ ದಿನಗಳಲ್ಲಿ ಜನರಿಗೆ ಎಷ್ಟು ಭಯ ಇದ್ದಿರಬಹುದು ನೀವೇ ಊಹಿಸಿ...

ಮಂಜೇಶ್ವರದಲ್ಲಿ ಮೂವರ ಹತ್ಯೆ ಘಟನೆ ಬೆನ್ನಲ್ಲೇ ಮನೆಯೊಂದಕ್ಕೆ ನುಗ್ಗಿ ಮನೆಯ ಯಜಮಾನ ಮತ್ತು ಕೆಲಸಗಾರನನ್ನು ಬಹಳ ಕ್ರೂರವಾಗಿ ಕೊಲೆಗೈಯಲಾಯಿತು. ನರಸಪ್ಪಯ್ಯ ಹಂದೆ ಎಂಬವರ ಮನೆಗೆ ನುಗ್ಗಿದ್ದ ಚಂದ್ರನ್, ನರಸಪ್ಪಯ್ಯ, ಮನೆ ಕೆಲಸದ ವಿಶ್ವನಾಥನ್ ಎಂಬವರ ಭೀಕರ ಹತ್ಯೆಗೈದಿದ್ದ. ಅವರ ಪತ್ನಿ ಈ ದಾಳಿಯಲ್ಲಿ ಗಾಯಗೊಂಡಿದ್ದರು. ಅವರ ಚಿನ್ನಾಭರಣ ದೋಚಿದ್ದ ಚಂದ್ರನ್ ಕತ್ತಲೆಯಲ್ಲಿ ಮರೆಯಾಗಿದ್ದ.

ಸರಣಿ ಹತ್ಯೆಗಳ ಈ ರೀತಿ ಭೀಕರವಾಗಿ ನಡೆಯುತ್ತಿದ್ದರೂ ಇದರ ಹಿಂದಿನ ಕಾಣದ ಕೈ ಯಾರು ಎಂದು ಒಂದು ಸಣ್ಣ ಸುಳಿವೂ ಸಿಗುತ್ತಿರಲಿಲ್ಲ. ಮನೆಯಲ್ಲಿ ಮಹಿಳೆಯರಿದ್ದರೆ ಸುತ್ತಿಗೆ ಅಥವಾ ಹಾರೆಯಿಂದ ತಲೆಗೆ ಹೊಡೆಯುತ್ತಿದ್ದ ಈತ ಕೆಲವೊಂದು ಪ್ರಕರಣಗಳಲ್ಲಿ ಅತ್ಯಾಚಾರಗೈದಿದ್ದ. ಚಿನ್ನಾಭರಣ, ಹಣ ದರೋಡೆ ಮಾಡಿದ್ದ.

ಸಣ್ಣ ಸುತ್ತಿಗೆಯಿಂದ ಅಮಾಯಕರ ತಲೆಗೆ ಹೊಡೆದು ಕೊಲೆ ಮಾಡ್ತಾ ಇದ್ದ ರಿಪ್ಪರ್ ಚಂದ್ರನ್ ದಾಳಿಯಿಂದ ಬದುಕುಳಿದು ನರಕಯಾತನೆ ಅನುಭವಿಸಿದವರೂ ಹಲವರಿದ್ದರು. ಹೀಗೇ ದಿನ ಕಳೆದಂತೆ ರಿಪೋರ್ಟ್ ಆದ ಒಂದೊಂದು ಪ್ರಕರಣಗಳು ಜನರ ಭಯ ಹೆಚ್ಚಿಸುತ್ತಲೇ ಇತ್ತು.

ಎಲ್ಲಿ ನೋಡಿದರೂ, ಎಲ್ಲಿ ಕೇಳಿದರೂ ಚಂದ್ರನ್‌ ನ ಕತೆಯೇ... ಯಾರೂ ಸಂಜೆಯ ಬಳಿಕ ಮನೆ ಬಿಟ್ಟು ಹೊರಗೆ ಬರುತ್ತಲೇ ಇರಲಿಲ್ಲ. ಇನ್ನು ಮನೆಯಲ್ಲಿದ್ದರೂ ಸುತ್ತಮುತ್ತ ಏನಾದರೊಂದು ಶಬ್ಧವಾದರೆ ವಿಚಿತ್ರ ಭಯ. ತಮ್ಮ ಕುಟುಂಬವನ್ನು ಮನೆಯಲ್ಲಿ ಬಿಟ್ಟು ಕೆಲಸಕ್ಕೆ ಹೋಗಲೂ ಜನ ಭಯಪಡುತ್ತಿದ್ದರು. ಚಂದ್ರನ್‌ ನ ಸುತ್ತ ಹಲವು ಕಥೆಗಳೂ ಇದೇ ಸಂದರ್ಭದಲ್ಲಿ ಹೆಣೆಯಲಾಯಿತು.

ಸೋಶಿಯಲ್‌ ಮೀಡಿಯಾ ಇಲ್ಲದಿದ್ದ ಆ ಕಾಲದಲ್ಲಿ ಮನುಷ್ಯರ ಬಾಯಿಯಿಂದ ಬಾಯಿಗೆ ಹೋದ ಕಥೆಗಳು ವಿಚಿತ್ರವಾಗಿ ಮಾರ್ಪಟ್ಟಿದ್ದವು. ಚಂದ್ರನ್‌ ಸಾಮಾನ್ಯ ಕಳ್ಳನಲ್ಲ, ಆತನಲ್ಲಿ ಅತಿಮಾನುಷ ಶಕ್ತಿಯಿದೆ. ಆತ ಎದುರಲ್ಲಿ ಕಂಡ ತಕ್ಷಣ ಮಾಯವಾಗುತ್ತಾನೆ. ಆತ ಮಾಟಗಾರ ಒಂದೇ ಸಮಯದಲ್ಲಿ ಬೇರೆ ಬೇರೆ ಕಡೆ ಪ್ರತ್ಯಕ್ಷ ಆಗುತ್ತಾನೆ. ಹೀಗೆ ವಿಚಿತ್ರ ಕಥೆಗಳು ಚಂದ್ರನ್‌ ನ ಹೆಸರಿನಲ್ಲಿ ಸೃಷ್ಟಿಯಾಯಿತು.

ಎಲ್ಲೆಲ್ಲೋ ದೂರ ತೆರಳಬೇಕೆಂದೇನಿಲ್ಲ. ಒಂದು ದಿನ ಬಂಟ್ವಾಳದ ಬಳಿ ದರೋಡೆ ನಡೆದರೆ ಇನ್ನೊಂದು ದಿನ ಬ್ರಹ್ಮಾವರ, ಕಾಸರಗೋಡು, ಮತ್ತೊಮ್ಮೆ ವಯನಾಡು.

ಊರಿನಲ್ಲಿದ್ದ ಕೆಲವು ಪುಡಿಗಳ್ಳರು ಅಲ್ಲಲ್ಲಿ ಕಳ್ಳತನ ಮಾಡಿ ಅದಕ್ಕೂ ಚಂದ್ರನ್‌ ನ ಹೆಸರು ಹಾಕಿ ಕಥೆ ಕಟ್ಟಲು ಪ್ರಾರಂಭಿಸಿದ್ದರು. ಚಂದ್ರನ್‌ ನ ಈ ಪ್ರಕರಣ ಪೊಲೀಸರಿಗೆ ತಲೆನೋವಾಯ್ತು. ಎಲ್ಲಿಯವರೆಗೆಂದರೆ ಪತ್ತೆಹಚ್ಚಲು ತೆರಳಬೇಕಾಗಿದ್ದವರು ಭಯದಿಂದ ಮನೆಯಲ್ಲೇ ಕೂರುವಂತಾಗಿತ್ತು. ಯಾವಾಗ ಎಲ್ಲೇನಾಗುತ್ತೆ ಅನ್ನೋದರ ಬಗ್ಗೆ ಯಾರಿಗೂ ಅರಿವಿರಲಿಲ್ಲ. ಅಷ್ಟೇ ಭಯವೂ ಇತ್ತು.

ಚಂದ್ರನ್‌ ಜನಿಸಿದ್ದು ಒಂದು ಬಡ ಕುಟುಂಬದಲ್ಲಾಗಿತ್ತು. 10ನೇ ವಯಸ್ಸಿನಲ್ಲಿ ತಂದೆ ಮೃತಪಟ್ಟ ಬಳಿಕ 14 ನೇ ವಯಸ್ಸಿಗೆ ಮನೆಬಿಟ್ಟಿದ್ದ. ಕೇರಳದಿಂದ ಕರ್ನಾಟಕಕ್ಕೆ ಬಂದ ಚಂದ್ರನ್‌ ಆರಂಭಿಸಿದ್ದೇ ಕಳ್ಳತನ. ಅಲ್ಲಲ್ಲಿ ಕಳ್ಳತನ ಮಾಡಿ ಕೈತುಂಬಾ ಹಣದೊಂದಿಗೆ ತನ್ನ ಮನೆಗೆ ಬರುತ್ತಿದ್ದ. ಇವನಿಗೆ ಕರ್ನಾಟಕದಲ್ಲೆಲ್ಲೋ ಒಳ್ಳೆ ಕೆಲಸ ಇರಬಹುದು ಎಂದು ಮನೆಯವರು ಸುಮ್ಮನಾಗಿಬಿಟ್ಟಿದ್ದರು. ಸಣ್ಣ ಪುಟ್ಟ ಕಳ್ಳತನದಿಂದ ಪ್ರಾರಂಭಿಸಿದ್ದ ಚಂದ್ರನ್‌ 1984ರ ಆಸುಪಾಸಿನಲ್ಲಿ ದರೋಡೆಕೋರ ತಿಮ್ಮಯ್ಯನನ್ನು ಭೇಟಿಯಾಗಿದ್ದ. ಅಲ್ಲಿಂದ ದರೋಡೆ, ಕೊಲೆ, ಸುಲಿಗೆ ಪ್ರಾರಂಭಿಸಿದ್ದ. ಇದಕ್ಕೆ ಸಿಕ್ಕ ಮೊದಲ ಬಲಿಯೇ ರಮಣಿ.

ಹೆದ್ದಾರಿಗಳ, ರೈಲು ಮಾರ್ಗಗಳ ಸಮೀಪದ ಮನೆಗಳು ಈತನ ಸುಲಭ ಟಾರ್ಗೆಟ್‌ ಆಗಿತ್ತು. ಮನೆಗೆ ನುಗ್ಗಿದವನೇ ಮಹಿಳೆ ಮಕ್ಕಳೆನ್ನದೇ ಸುತ್ತಿಗೆಯಿಂದ ಅಥವಾ ಹಾರೆಯಿಂದ ತಲೆಗೆ ಹೊಡೆದು ಅವರನ್ನು ಕೊಲೆ ಮಾಡುತ್ತಿದ್ದ. ಒಂದೇ ವರ್ಷದಲ್ಲಿ ರಿಪ್ಪರ್‌ ಚಂದ್ರನ್‌ ಒಟ್ಟು 14 ಕೊಲೆ ಮಾಡಿದ್ದ.

ಹೀಗಿರುವಾಗ ಒಮ್ಮೆ ಚಂದ್ರನ್‌ ನ್ನು ಪೊಲೀಸರು ಹಿಡಿದರೂ, ಆತನ ಬೆರಳಚ್ಚು ಪಡೆದುಕೊಂಡು ಬಿಟ್ಟುಬಿಟ್ಟರು. ಆತನೇ ಚಂದ್ರನ್‌ ಎನ್ನುವ ಬಗ್ಗೆ ಅವರಿಗೆ ಖಾತರಿ ಇರಲಿಲ್ಲ. ಅದಾಗಿ ಒಂದೇ ದಿನದಲ್ಲಿ ಕೇರಳದ ತಳಿಪ್ಪರಂಬದಲ್ಲಿ ಒಂಟಿ ಮಹಿಳೆಯಿದ್ದ ಮನೆಯ ಮೇಲೆ ದಾಳಿಯಾಗಿತ್ತು. ಅಲ್ಲಿ ಮಹಿಳೆಯನ್ನು ಅತ್ಯಾಚಾರಗೈದು ಕೊಲೆ ಮಾಡಿದ್ದ.

ಆ ಮನೆಯೊಳಗಿದ್ದ ಆರು ವರ್ಷದ ಮಗು ಮನೆಯ ಹೊರಗಡೆ ಹೋಗಿ ಮರದಡಿಯಲ್ಲಿ ಕುಳಿತು ಇದನ್ನೆಲ್ಲಾ ದಿಗ್ಭ್ರಾಂತಿಯಿಂದ ನೋಡುತ್ತಿತ್ತು. ಚಂದ್ರನ್‌ ಕೃತ್ಯವೆಸಗಿ ಮನೆ ಹೊರಗಡೆ ಮದ್ಯ ಕುಡಿದದ್ದೂ ಈ ಮಗು ನೋಡಿತ್ತು. ಈ ಮಗುವಿನ ಸಾಕ್ಷಿ ಪ್ರಕರಣದಲ್ಲೊಂದು ತಿರುವಾಯ್ತು ಮಾತ್ರವಲ್ಲ. ಮದ್ಯದ ಬಾಟಲಿಯಲ್ಲಿದ್ದ ಬೆರಳಚ್ಚು ಹಿಂದಿನ ದಿನ ಹಿಡಿದಿದ್ದ ಆಗಂತುಕನ ಬೆರಳಚ್ಚು ತಾಳೆಯಾಗುತ್ತಿತ್ತು.

ಇನ್ನೂ ಪೊಲೀಸರಿಗೆ ಚಂದ್ರನ್‌ ನನ್ನು ಹಿಡಿಯಲು ಸಾಧ್ಯವಾಗಿರಲಿಲ್ಲ. ಕೊನೆಗೆ, ಕರ್ನಾಟಕ ಮತ್ತು ಕೇರಳ ಪೊಲೀಸರು ಜಂಟಿ ಕಾರ್ಯಾಚರಣೆ ಪ್ರಾರಂಭಿಸಿದ್ದರು. ಆ ವೇಳೆ ಚಿಕ್ಕಮಗಳೂರಿನ ಕೊಟ್ಟಿಗೆಹಾರದ ಸಮೀಪ ಮುತ್ತುಸ್ವಾಮಿ ಗುಡಿಯೊಂದಿತ್ತು. ಆ ಗುಡಿ ಹತ್ತಿರವೇ ಪೂಜಾರಿಗಳ ಮನೆಯಿತ್ತು. ದೈನಂದಿನ ಪೂಜಾಕರ್ಮಗಳನ್ನು ಮಾಡಿಕೊಂಡು ಬದುಕುತ್ತಿದ್ದ ರಮೇಶ್‌ ಪೂಜಾರಿ ಎಂಬ ವ್ಯಕ್ತಿಯೇ ಸರಣಿ ಹತ್ಯೆಗಳನ್ನು ಮಾಡಿದ್ದ ರಿಪ್ಪರ್‌ ಚಂದ್ರನ್‌ ಎಂದು ಆ ವೇಳೆಗಾಗಲೇ ಪೊಲೀಸರಿಗೆ ಗೊತ್ತಾಗಿತ್ತು.

ಕೊನೆಗೂ ಕರ್ನಾಟಕ-ಕೇರಳವನ್ನು ನಡುಗಿಸಿದ್ದ ರಿಪ್ಪರ್‌ ಚಂದ್ರನನ್ನು 1986ರ ಫೆ.26ರಂದು ಪೊಲೀಸರು ಬಂಧಿಸಿದರು. ಆದರೂ ಸಂಜೆ ಆಗುತ್ತಿದ್ದಂತೆ ಮನೆ ಸೇರುತ್ತಿದ್ದ ಜನರ ಭಯ ವರ್ಷ ಕಳೆದರೂ ಹೋಗಿರಲಿಲ್ಲ. 1987ರಲ್ಲಿ ಚಂದ್ರನ್‌ ಅಪರಾಧಿ ಎಂಬುವುದು ಸಾಬೀತಾಗಿ, ಗಲ್ಲುಶಿಕ್ಷೆ ಪ್ರಕಟವಾಯಿತು. ನಾಲ್ಕು ವರ್ಷಗಳ ಕಾಲ ಏಕಾಂತ ಜೈಲುವಾಸ ಅನುಭವಿಸಿದ ಬಳಿಕ, ಜೈಲಿನ ಅಧಿಕಾರಿಗಳು ನೀಡಿದ ಒಂದು ಕಪ್‌ ಚಹಾ ಹೀರಿದ ರಿಪ್ಪರ್‌ ಚಂದ್ರನ್‌ ಅನ್ನು 1991ರ ಜುಲೈ 6ರಂದು ನೇಣಿಗೇರಿಸಲಾಗಿತ್ತು. ಆತನ ಮೃತದೇಹವನ್ನು ಯಾರೂ ಸ್ವೀಕರಿಸಲು ಮುಂದಾಗದ ಕಾರಣ ಪೊಲೀಸರೇ ದಫನ ಮಾಡಿದ್ದರು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X