Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರ್ತಾಭಾರತಿ ವಿಶೇಷ
  3. ಬಿಜೆಪಿಯಲ್ಲಿ ತಳಮಳ ತಂದಿರುವ "ಮೋದಿ ನಂತರ...

ಬಿಜೆಪಿಯಲ್ಲಿ ತಳಮಳ ತಂದಿರುವ "ಮೋದಿ ನಂತರ ಯಾರು" ಪ್ರಶ್ನೆ

► ಆನಂದಿಬೆನ್ ಅಳಿಯನ ಕಂಪೆನಿ ಮೇಲೆ ಐಟಿ ದಾಳಿ ಆಗಿದ್ದು ಹೇಗೆ ? ► ಕೇಂದ್ರ ಗೃಹ ಸಚಿವರ ವಿರುದ್ಧ ಪಟೇಲರ ಬಂಡಾಯ ?

ಆರ್. ಜೀವಿಆರ್. ಜೀವಿ8 Dec 2023 6:24 PM IST
share
ಬಿಜೆಪಿಯಲ್ಲಿ ತಳಮಳ ತಂದಿರುವ ಮೋದಿ ನಂತರ ಯಾರು ಪ್ರಶ್ನೆ

ನವೆಂಬರ್ 7 ರಂದು ಬೆಳ್ಳಂಬೆಳಿಗ್ಗೆ ಮುಂಬೈ ಮತ್ತು ದೆಹಲಿಯಿಂದ ಆದಾಯ ತೆರಿಗೆ ಅಧಿಕಾರಿಗಳ ತಂಡ ಅಹಮದಾಬಾದ್ ತಲುಪಿತು.

ಅಹಮದಾಬಾದ್‌ನಲ್ಲಿ 15 ರಿಂದ 20 ಸ್ಥಳಗಳಲ್ಲಿ ಐಟಿ ಅಧಿಕಾರಿಗಳ ದಾಳಿ ನಡೆಯಿತು. ದಾಳಿ ನಡೆದದ್ದು ಕಾಂಗ್ರೆಸ್ ಅಥವಾ ಆಮ್ ಆದ್ಮಿ ಪಕ್ಷದ ನಾಯಕರ ಮೇಲೆ ಅಲ್ಲ. ಈ ದಾಳಿ ನಡೆದದ್ದು ಅದಾನಿ ಮತ್ತು ಅಂಬಾನಿಯನ್ನು ವಿರೋಧಿಸುವ ಉದ್ಯಮಿಗಳ ಕಚೇರಿಗಳ ಮೇಲೂ ಅಲ್ಲ.

ಹಾಗಾದ್ರೆ ಈ ದಾಳಿ ನಡೆದಿರೋದು ಯಾರ ಮೇಲೆ ? ಅಲ್ಲೇ ಇರೋದು ವಿಶೇಷ. ಈ ದಾಳಿ ನಡೆದ ಕೂಡಲೇ ಗುಜರಾತ್ ನ ಬಿಜೆಪಿ ಘಟಾನುಘಟಿಗಳ ಬೆವರಿಳಿದಿದೆ.

ಈ ದಾಳಿ ನಡೆದಿದ್ದು ಶುಕ್ರ ಫಾರ್ಮಾಸ್ಯುಟಿಕಲ್ಸ್ ಮೇಲೆ . ಶುಕ್ರ ಫಾರ್ಮಾಸ್ಯುಟಿಕಲ್ಸ್ ಜಯೇಶ್ ಪಟೇಲ್ ಎಂಬವರ ಒಡೆತನದಲ್ಲಿದೆ.

ಜಯೇಶ್ ಪಟೇಲ್ ಗುಜರಾತ್ ನ ಮಾಜಿ ಸಿಎಂ, ಮಾಜಿ ರಾಜ್ಯಪಾಲೆ ಆನಂದಿ ಬೆನ್ ಅವರ ಅಳಿಯ. ಆನಂದಿ ಬೆನ್ ಅವರ ಮಗಳು ಅನರಾ ಪಟೇಲ್ ರ ಪತಿ. ಆನಂದಿ ಬೆನ್‌ಗೆ ಸಂಜಯ್ ಪಟೇಲ್ ಎಂಬ ಮಗನಿದ್ದಾನೆ.

ಇವರದ್ದು ರಿಯಲ್ ಎಸ್ಟೇಟ್‌ ಉದ್ಯಮ. ಜಯೇಶ್ ಪಟೇಲ್ ರಿಯಲ್ ಎಸ್ಟೇಟ್ ಮತ್ತು ಫಾರ್ಮಾ ಕ್ಷೇತ್ರದಲ್ಲಿದ್ದಾರೆ. ಜಯೇಶ್ ಪಟೇಲ್ ನಿರ್ದೇಶಕರಾಗಿರುವ ಕಂಪನಿಯ ಮೇಲಿನ ಆದಾಯ ತೆರಿಗೆ ದಾಳಿ ಗುಜರಾತ್ ರಾಜಕೀಯದಲ್ಲಿ ತಲ್ಲಣ ಸೃಷ್ಟಿಸಿದೆ. ಆ ಕಂಪೆನಿಯ ಆದಾಯ ಇಷ್ಟು ವೇಗವಾಗಿ ಹೇಗೆ ಹೆಚ್ಚಾಯಿತು ಎಂಬ ಆರೋಪ ಈ ಹಿಂದೆ ಕೇಳಿ ಬಂದಿತ್ತು

ಈ ಬಗ್ಗೆ ಹಿರಿಯ ಪತ್ರಕರ್ತ ಅಶೋಕ್ ವಾಂಖೆಡೆಯವರು ನೀಡಿರುವ ಮಾಹಿತಿ ಹಾಗು ವಿಶ್ಲೇಷಣೆ ಹೀಗಿದೆ. ಜಯೇಶ್ ಪಟೇಲ್ ಗುಜರಾತಿನಲ್ಲಿ ಸಾಕಷ್ಟು ಭೂಮಿಯನ್ನು ಹೊಂದಿದ್ದಾರೆ. ಅವರಿಗೆ ಎನ್ ಜಿ ಓ ಹೆಸರಲ್ಲಿ ಸಾಕಷ್ಟು ಭೂಮಿ ಸಿಕ್ಕಿದೆ. ಗುಜರಾತ್‌ನಲ್ಲಿ ಭೂಮಿ ಇದೆ ಅಂದರೆ ಅದು ಬಹಳ ದೊಡ್ಡ ವ್ಯವಹಾರ. ಅದೂ ಬೆಳೆಯುತ್ತಿರುವ ಗಾಂಧಿ ನಗರದ ಸುತ್ತಮುತ್ತಲ ಜಮೀನು ಅಂದ್ರೆ ಅದಕ್ಕೆ ಇನ್ನಿಲ್ಲದ ಬೇಡಿಕೆ.

ಜಯೇಶ್ ಪಟೇಲ್ ನ ಭೂಮಿ ಇರುವಲ್ಲೇ ಇನ್ನೂ ಒಂದು ಹಗರಣ ನಡೆದಿತ್ತು. ಅಲ್ಲಿನ ಭಾರೀ ಪ್ರಮಾಣದ ಭೂಮಿಯನ್ನು ಬಿಲ್ಡರ್ ಗಳಿಗೆ ಬೇಕಾದಂತೆ ನಿಯಮ ಉಲ್ಲಂಘಿಸಿ ರೈತರಲ್ಲದವರಿಗೆ ರೈತರು ಎಂದು ಪ್ರಮಾಣ ಪತ್ರ ನೀಡಿದ್ದಕ್ಕೆ ಐ ಎ ಎಸ್ ಅಧಿಕಾರಿ ಲಾಂಗಾ ಎಂಬವರ ಬಂಧನವೂ ಆಗಿದೆ.

ಅಲ್ಲಿ ನಿಯಮ ಪ್ರಕಾರ ರಿಯಲ್ ಎಸ್ಟೇಟ್ ಉದ್ಯಮಕ್ಕೆ ಬಳಸಲು ಸಾಧ್ಯವೇ ಇಲ್ಲದಿದ್ದ ಜಮೀನನ್ನು, ಭಾರೀ ಪ್ರಭಾವದಿಂದ ಬೇಕಾದಂತೆ ನಿಯಮ ಬದಲಾಯಿಸಿ, ಅಲ್ಲೊಂದು ದೊಡ್ಡ ನಗರವೇ ನಿರ್ಮಾಣ ಆಗುತ್ತಿದೆ. ಈ ನಿರ್ಮಾಣದ ಹಿಂದಿರುವ ಬಿಲ್ಡರ್‌ ಗುಜರಾತಿನ ರಾಜಕೀಯದ ಅತ್ಯಂತ ಪ್ರಭಾವೀ , ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಆಪ್ತ ಎಂದು ಹೇಳಲಾಗುತ್ತಿದೆ ಎನ್ನುತ್ತಾರೆ ಅಶೋಕ್ ವಾಂಖೆಡೆ.

ಈ ವಿಷಯವೇ ಈಗ ಅಮಿತ್ ಶಾ ಹಾಗು ಆನಂದಿ ಬೆನ್ ಪಟೇಲ್ ನಡುವೆ ತೀವ್ರ ವೈಷಮ್ಯಕ್ಕೆ ಕಾರಣವಾಗಿದೆ ಎನ್ನುತ್ತಾರೆ ಅಶೋಕ್ ವಾಂಖೆಡೆ.

ಇವರಿಬ್ಬರೂ ಗುಜರಾತ್ ನಲ್ಲಿ ನರೇಂದ್ರ ಮೋದಿ ಸಂಪುಟದಲ್ಲಿ ಸಚಿವರಾಗಿದ್ದಾಗಿನಿಂದ ಇಬ್ಬರ ನಡುವೆ ಜಿದ್ದಾಜಿದ್ದಿ ನಡೆಯುತ್ತಲೇ ಬಂದಿದೆ. ಈಗ ಅದು ಪರಾಕಾಷ್ಠೆಗೆ ತಲುಪಿದೆ ಎನ್ನಲಾಗುತ್ತಿದೆ.

ಆನಂದಿ ಬೆನ್‌ಗೆ ಮೋದಿ ಆಪ್ತರಾಗಿದ್ದರು. ಮೋದಿ ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ, ಆನಂದಿ ಬೆನ್ ಎಲ್ಲಾ ವ್ಯವಹಾರವನ್ನು ನೋಡಿಕೊಳ್ಳುತ್ತಿದ್ದರು ಮತ್ತು ಅಮಿತ್ ಶಾ ರಾಜಕೀಯವನ್ನು ನೋಡಿಕೊಳ್ಳುತ್ತಿದ್ದರು ಎಂದು ಹೇಳಲಾಗುತ್ತದೆ. ಮೋದಿಜಿ ಪ್ರಧಾನಿ ಆದ ನಂತರ ಅಮಿತ್ ಶಾ ಅವರನ್ನು ಜೊತೆಗೆ ಕರೆದುಕೊಂಡು ದಿಲ್ಲಿಗೆ ಬಂದರು, ಗುಜರಾತ್ ಅನ್ನು ಆನಂದಿ ಬೆನ್ ಗೆ ಒಪ್ಪಿಸಿದರು. ಆನಂದಿ ಬೆನ್ ಸಿಎಂ ಆದಮೇಲೆ ಅಮಿತ್ ಶಾ ಹಾಗು ಅವರ ನಡುವಿನ ದ್ವೇಷ ಇನ್ನಷ್ಟು ಹೆಚ್ಚಾಯಿತು.ನಂತರ ಆನಂದಿ ಬೆನ್ ಮುಖ್ಯಮಂತ್ರಿ ಸ್ಥಾನ ತೊರೆಯಬೇಕಾಯಿತು. ಉತ್ತರ ಪ್ರದೇಶದ ರಾಜ್ಯಪಾಲರಾದ ನಂತರವೂ ಗುಜರಾತ್ ರಾಜಕೀಯದಲ್ಲಿ ಆನಂದಿ ಬೆನ್ ಪ್ರಭಾವ ಹಾಗೆಯೇ ಉಳಿದಿತ್ತು.

ಸಿ ಆರ್ ಪಾಟೀಲ್ ಹಾಗು ಆನಂದಿ ಬೆನ್ ಸೇರಿಕೊಂಡು ಚುನಾವಣೆಗೆ ಮುನ್ನ ಗುಜರಾತ್ ನಲ್ಲಿ ಇಡೀ ಸರ್ಕಾರ ಬದಲಿಸುವಲ್ಲಿ ಮುಖ್ಯ ಪಾತ್ರ ವಹಿಸಿದ್ದರು. ಅಲ್ಲಿ ಅಮಿತ್ ಶಾ ಮತ್ತು ಅವರ ಬೆಂಬಲಿಗರನ್ನು ಬದಿಗೆ ಸರಿಸಲಾಯಿತು. ಇದು ಅವರಿಬ್ಬರ ದ್ವೇಷಕ್ಕೆ ಇನ್ನಷ್ಟು ತುಪ್ಪ ಸುರಿಸಿದಂಗಾಯಿತು.ಮೋದಿಜಿ ನಂತರ ನಾನೇ ಎಂದು ಅಮಿತ್ ಶಾ ಭಾವಿಸಿದ್ದರು. ಆದರೆ ಮಧ್ಯದಲ್ಲಿ ಆದಿತ್ಯನಾಥ್ ಬಂದು ಬಿಟ್ಟರು.

ಅಮಿತ್ ಶಾ ವಿರುದ್ಧ ಆದಿತ್ಯನಾಥ್, ಆನಂದಿ ಬೆನ್, ಒಗ್ಗಟ್ಟಾಗಿ ನಡೆಸಿದ ಆಟದಿಂದಾಗಿ ಈ ವೈಷಮ್ಯ ಗುಜರಾತ್ ನ ಮಣ್ಣಿನಿಂದ ಉತ್ತರ ಪ್ರದೇಶದ ಮಣ್ಣಿಗೆ ಬಂದು ತಲುಪಿತ್ತು . ಉತ್ತರ ಪ್ರದೇಶದಲ್ಲಿ ಹಿಂದುಳಿದ ವರ್ಗಗಳ ನಾಯಕರು ಆದಿತ್ಯನಾಥ್ ಅವರನ್ನು ವಿರೋಧಿಸಿ ಹೇಳಿಕೆ ನೀಡುವ ಬೆಳವಣಿಗೆ ನಡೆಯಿತು. ವಿಶೇಷವಾಗಿ ಓಂ ಪ್ರಕಾಶ್ ರಾಜಭರ್ ಅವರು ಆದಿತ್ಯನಾಥ್ ವಿರುದ್ಧ ತೊಡೆ ತಟ್ಟಿದ್ದರು. ಅವರ ಹಿಂದೆ ಅಮಿತ್ ಶಾ ಇದ್ದರು ಎಂದು ಮೂಲಗಳನ್ನು ಉಲ್ಲೇಖಿಸಿ ಹೇಳುತ್ತಾರೆ ಅಶೋಕ್ ವಾಂಖೆಡೆ.

ಮಹಾರಾಷ್ಟ್ರದಲ್ಲೂ ಅದೇ ನಡೆಯಿತು . ಮಹಾರಾಷ್ಟ್ರದಲ್ಲಿ ದೇವೇಂದ್ರ ಫಡ್ನವಿಸ್ ಸಿಎಂ ಆಗಿ ಖ್ಯಾತಿ ಗಳಿಸಿದ್ದರು. ನರೇಂದ್ರ ನಂತರ ದೇವೇಂದ್ರ ಎಂಬ ಘೋಷಣೆಗಳು ಮೊಳಗಲು ಶುರುವಾಗಿದ್ದವು. ಆಗಲೇ ಸಿಎಂ ಆಗಿದ್ದ ದೇವೇಂದ್ರ ಫಡ್ನವಿಸ್ ಡಿಸಿಎಂ ಆಗುವಂತೆ ಮಾಡಲಾಯಿತು. ಅವರ ಪ್ರಭಾವ ಕುಗ್ಗಿ ಹೋಗುವಂತೆ ಮಾಡಲಾಯಿತು. ಇದರ ಹಿಂದೆಯೂ ಅಮಿತ್ ಶಾ ಅವರೇ ಇದ್ದಾರೆ ಎಂದು ಹೇಳುತ್ತವೆ ರಾಜಕೀಯ ಮೂಲಗಳು.

ಉತ್ತರ ಪ್ರದೇಶದ ನಂತರ ಬಿಜೆಪಿಗೆ ಅತಿ ಹೆಚ್ಚು ಸ್ಥಾನಗಳನ್ನು ನೀಡುವ ರಾಜ್ಯ ಮಹಾರಾಷ್ಟ್ರ. ಹೀಗಾಗಿ ದೇವೇಂದ್ರರನ್ನು ದಾರಿಯಿಂದ ದೂರವಿಟ್ಟ ನಂತರ, ಈಗ ನೇರವಾಗಿ ಆದಿತ್ಯನಾಥ್ ಜೊತೆ ಅಮಿತ್ ಶಾ ಜಿದ್ದಾಜಿದ್ದಿ ನಡೆಯುತ್ತಿದೆ ಎಂದು ಹೇಳಲಾಗುತ್ತಿದೆ.

ಶುಕ್ರ ಫಾರ್ಮಾ ಮೇಲೆ ದಾಳಿ ನಡೆದಿರುವುದೂ ಇದೇ ಜಗಳದ ಕಾರಣದಿಂದಾಗಿ ಎಂದು ಈಗ ಕೇಳಿ ಬರುತ್ತಿರುವ ವಿಷಯ. ಇದೇನು ದೊಡ್ಡ ತೆರಿಗೆ ವಿಚಾರವಾಗಿದ್ದರಿಂದ ಈ ದಾಳಿ ನಡೆದಿಲ್ಲ. ಆನಂದ್ ಬೆನ್ ಪಟೇಲ್ ಅವರಿಗೆ ತಾಕತ್ತು ತೋರಿಸುವ ಪ್ರಯತ್ನದ ಭಾಗವಾಗಿ ಈ ದಾಳಿ ನಡೆದಿದೆ ಎಂದು ಹೇಳಲಾಗುತ್ತಿದೆ.

ಆದರೆ, ಆನಂದ್ ಬೆನ್ ಪಟೇಲ್ ಕೂಡ ರಾಜಕೀಯ ಪರಿಣತರಾಗಿದ್ದು, ಹೇಗೆ ತಿರುಗೇಟು ನೀಡಬೇಕು ಎಂದು ಅವರಿಗೆ ಚೆನ್ನಾಗಿ ಗೊತ್ತು.

ಆದಾಯ ತೆರಿಗೆ ದಾಳಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಆನಂದ್ ಬೆನ್ ಪಟೇಲ್ ಅವರು ಮೋದೀಜಿ ಬಳಿ ದೂರಿದ್ದಾರೆ. ಆದರೆ ಮೋದಿ ಕೈ ಎತ್ತಿ ಅಸಹಾಯಕತೆ ವ್ಯಕ್ತ ಪಡಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಇದರಿಂದ ಸಿಟ್ಟಾಗಿರುವ ಆನಂದಿ ಬೆನ್ ಪಟೇಲ್ ನನ್ನ ಹೋರಾಟ ನಾನೇ ಮಾಡುತ್ತೇನೆ. ಇದರ ಮಧ್ಯೆ ಯಾರ ಹಸ್ತಕ್ಷೇಪವೂ ನಮಗೆ ಬೇಡ ಎಂದಿದ್ದಾರೆ ಎಂಬ ಸುದ್ದಿಯಿದೆ.

ಈಗ ಈ ರಾಜಕೀಯ ಕದನ ಮತ್ತೆ ಗುಜರಾತ್ ಕಡೆಗೆ ಸಾಗಿದೆ. ಆನಂದಿ ಬೆನ್ ಪಟೇಲ್ ಈಗ ಅಮಿತ್ ಶಾ ವಿರುದ್ಧ ಗುಜರಾತ್ ನ ಎಲ್ಲ ಪಟೇಲರನ್ನು ಒಟ್ಟುಗೂಡಿಸಲು ಹೊರಟಿದ್ದಾರೆ. ಇದು ಬಿಜೆಪಿ ಪಾಲಿಗೆ ಗುಜರಾತ್ ನಲ್ಲಿ ಹೊಸ ತಲೆನೋವಾಗಲಿದೆ. ಇನ್ನೊಂದೆಡೆ ಪ್ರಧಾನಿ ನರೇಂದ್ರ ಮೋದಿ ಅವರು ಇಂಡಿಯಾ ಒಕ್ಕೂಟದ ವಿರುದ್ಧ ಹೋರಾಡಲು ಅಣಿಯಾಗುತ್ತಿದ್ದಾರೆ. ಅವರು ಎನ್ ಡಿಎ ಯನ್ನು ವಿಸ್ತರಿಸಲು ಹೊರಟಿದ್ದಾರೆ.

ಅವರು ರಾಹುಲ್ ಗಾಂಧಿಯ ರಾಜಕೀಯ ಟೀಕೆಗಳ ವಿರುದ್ಧ ಹೋರಾಡ ಬೇಕಿದೆ. ಅದಾನಿ ಮೇಲೆ ನಡೆಯುತ್ತಿರುವ ದಾಳಿಯಿಂದ ಅದಾನಿಯನ್ನು ಉಳಿಸಬೇಕಿದೆ. 2024 ರಲ್ಲಿ ಅವರು ಮತ್ತೆ 300 ಸ್ಥಾನಗಳ ಗುರಿಯನ್ನು ದಾಟಲೇ ಬೇಕಾಗಿದೆ. ಈಗಿನ ಪರಿಸ್ಥಿತಿಯಲ್ಲಿ ದಕ್ಷಿಣ ಭಾರತದಲ್ಲಿ ಭರವಸೆಯೇ ಇಲ್ಲದಿರುವಾಗ ಉತ್ತರ ಭಾರತ ಬಿಜೆಪಿಗೆ ಕೇಂದ್ರವಾಗಿದ್ದು, ಅಲ್ಲಿಂದ ಸೀಟುಗಳನ್ನು ಪಡೆಯಲೇಬೇಕು ಎಂಬ ಯೋಚನೆಯಲ್ಲಿದ್ದಾರೆ.

ಆದರೆ ಬಿಹಾರದಲ್ಲಿ ನಿತೀಶ್, ಬಂಗಾಳದಲ್ಲಿ ಮಮತಾ, ಮಹಾರಾಷ್ಟ್ರದಲ್ಲಿ ಶರದ್ ಪವಾರ್, ಉದ್ಧವ್ ಠಾಕ್ರೆ ಘರ್ಜಿಸುತ್ತಿದ್ದಾರೆ. ಬಿಜೆಪಿಯೊಳಗೆ ನೋಡಿದರೆ ಮೋದಿ ನಂತರ ಯಾರು ಎಂಬ ಪ್ರಶ್ನೆ ಉದ್ಭವಿಸಿದೆ. ಹಾಗಾಗಿ ಈಗ ಮೋದಿಜಿಗೆ ಬಿಜೆಪಿ ಹೊರಗಿರುವ ರಾಜಕೀಯ ಪ್ರತಿಸ್ಪರ್ಧಿಗಳನ್ನು ನಿಭಾಯಿಸುವ ಜೊತೆಜೊತೆಗೆ ಪಕ್ಷದ ಒಳಗೇ ಇರುವ ಈ ಆಂತರಿಕ ಕಲಹವನ್ನೂ ಮ್ಯಾನೇಜ್ ಮಾಡಬೇಕಿದೆ.

ಆನಂದಿ ಬೆನ್ ಅವರ ಆಪ್ತ ಸಂಬಂಧಿ ಜಯೇಶ್ ಪಟೇಲ್ ಅವರ ಮೇಲಿನ ಆದಾಯ ತೆರಿಗೆ ದಾಳಿ ಅಮಿತ್ ಶಾ ಅವರ ಮಗನ ವರೆಗೂ ತಲುಪುತ್ತದೆಯೇ?. ಇಡಿ , ಸಿಬಿಐನಲ್ಲಿಯೂ ಅಮಿತ್ ಶಾ ಪರ ಹಾಗೂ ಅಮಿತ್ ಶಾ ವಿರುದ್ಧ ಎರಡು ಗುಂಪಿನ ಅಧಿಕಾರಿಗಳಿದ್ದಾರೆ ಎಂದು ಹೇಳಲಾಗುತ್ತಿದೆ. ಹಾಗಾಗಿಯೇ ಅಲ್ಲಿಂದಲೂ ಕೆಲವು ಸುದ್ದಿಗಳು, ದಾಖಲೆಗಳು ಸೋರಿಕೆಯಾಗುತ್ತಿವೆ.

ಆದರೆ ಇದೆಲ್ಲ ಸುದ್ದಿ ಯಾವುದೇ ಟಿವಿ ಚಾನಲ್ ಗಳಲ್ಲಿ ಬರೋದಿಲ್ಲ. ಅಲ್ಲೇನಿದ್ದರೂ ಮೋದೀಜಿ ಅವರ ಗುಣಗಾನ ಹಾಗು ವಿಪಕ್ಷಗಳ ವಿರುದ್ಧ ವಿನಾಕಾರಣ ಟೀಕಾ ಪ್ರಹಾರ. ಅಷ್ಟೇ. ಹಾಗಾದರೆ ಬಿಜೆಪಿಯೊಳಗಿನ ಉತ್ತರಾಧಿಕಾರಿ ಜಗಳದಲ್ಲಿ ಯಾರು ದಡ ಸೇರುತ್ತಾರೆ? ಕಾದು ನೋಡಬೇಕು.

share
ಆರ್. ಜೀವಿ
ಆರ್. ಜೀವಿ
Next Story
X