Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರ್ತಾಭಾರತಿ ವಿಶೇಷ
  3. ಹನುಮಂತನ ಶೋಭಾಯಾತ್ರೆಗೂ ಮುಸ್ಲಿಂ...

ಹನುಮಂತನ ಶೋಭಾಯಾತ್ರೆಗೂ ಮುಸ್ಲಿಂ ಮಹಿಳೆಯರಿಗೂ ಏನು ಸಂಬಂಧ ?

ದ್ವೇಷ ಕಾರುವವರ ವಿರುದ್ಧ ಕ್ರಮಕ್ಕೆ ರಾಜಕೀಯ ಲೆಕ್ಕಾಚಾರ ಯಾಕೆ ? ► ಸಾವಿರಾರು ಹೆಣ್ಣು ಭ್ರೂಣ ಹತ್ಯೆಯ ಬಗ್ಗೆ ಮಾತಾಡದ ಪ್ರಭಾಕರ್ ಭಟ್ !

ಆರ್. ಜೀವಿಆರ್. ಜೀವಿ27 Dec 2023 6:25 PM IST
share
ಹನುಮಂತನ ಶೋಭಾಯಾತ್ರೆಗೂ ಮುಸ್ಲಿಂ ಮಹಿಳೆಯರಿಗೂ ಏನು ಸಂಬಂಧ ?

​ಮಂಡ್ಯ ಜಿಲ್ಲೆ ಮೊನ್ನೆ ಮೊನ್ನೆ ಭಾರೀ ಸುದ್ದಿಯಾಗಿತ್ತು. ಅಲ್ಲಿನ ಆಲೆಮನೆಯೊಂದರಲ್ಲಿ ನೂರಾರು ಹೆಣ್ಣು ಭ್ರೂಣ ಹತ್ಯೆ ನಡೆದಿತ್ತು ಎಂಬುದು ಬಹಿರಂಗವಾಗಿತ್ತು. ಆಮೇಲೆ ನೋಡಿದರೆ ಅಂತಹದೊಂದು ಬೃಹತ್ ಜಾಲವೇ ರಾಜ್ಯದಲ್ಲಿ ಸಕ್ರಿಯವಾಗಿದ್ದು ಕಳೆದ ಮೂರು ವರ್ಷಗಳಲ್ಲಿ ಸುಮಾರು ಮೂರು ಸಾವಿರ ಹೆಣ್ಣು ಭ್ರೂಣ ಹತ್ಯೆ ನಡೆದಿರಬಹುದು ಎಂಬ ಬೆಚ್ಚಿ ಬೀಳಿಸುವ ವಾಸ್ತವ ಬಹಿರಂಗವಾಯಿತು.

ಹಾಗೆ ಮಾರಣ ಹೋಮವಾದ ಮೂರು ಸಾವಿರ ಹೆಣ್ಣು ಭ್ರೂಣಗಳಲ್ಲಿ ದೊಡ್ಡ ಸಂಖ್ಯೆ ಹಿಂದೂ ಹೆಣ್ಣು ಮಕ್ಕಳದ್ದು. ಆದರೆ ಆಗ ರಾಜ್ಯದಲ್ಲಿ ಇದೊಂದು ದೊಡ್ಡ ವಿಷಯವಾಗಲೇ ಇಲ್ಲ. ನೂರಾರು, ಸಾವಿರಾರು ಹಿಂದೂ ಹೆಣ್ಣು ಮಕ್ಕಳನ್ನು ಭೂಮಿಗೆ ಬರುವ ಮೊದಲೇ ಮುಗಿಸಿಬಿಡಲಾಗುವ ಅತ್ಯಂತ ಅನಾಗರಿಕ ಕೆಲಸ ನಮ್ಮ ನಡುವೆಯೇ ಎಗ್ಗಿಲ್ಲದೆ ಹೇಗೆ ನಡೆಯುತ್ತಿದೆ ಎಂದು ಬಿಜೆಪಿ, ಸಂಘ ಪರಿವಾರದ ಮಂದಿ ಬೀದಿಗಿಳಿಯಲಿಲ್ಲ.

ಟಿವಿ ಚಾನಲ್ ಗಳು ಆ ಬಗ್ಗೆ ದಿನವಿಡೀ ಮಾತಾಡಿದ್ರೂ ಕಡಿಮೆಯಿತ್ತು. ಆದರೂ ಅಲ್ಲೆಲ್ಲೂ ಅಂತಹ ಗಂಭೀರ ಚರ್ಚೆ, ಕಳವಳ ಕಂಡು ಬರಲೇ ಇಲ್ಲ. ಈಗ ಅದೇ ಮಂಡ್ಯ ಮತ್ತೊಮ್ಮೆ ಸುದ್ದಿಯಾಗಿದೆ. ಅಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಆರೆಸ್ಸೆಸ್ ನ ಕಲ್ಲಡ್ಕ ಪ್ರಭಾಕರ್ ಭಟ್ ಮಾತಾಡಿದ್ದಾನೆ. ಆದರೆ ಆತ ಮಂಡ್ಯದ ಆಲೆಮನೆಯಲ್ಲಿ ನಡೆದಿರುವ ಹಿಂದೂ ಹೆಣ್ಣು ಮಕ್ಕಳ ಮಾರಣ ಹೋಮದ ಬಗ್ಗೆ ಮಾತಾಡಿಲ್ಲ. ಅದನ್ನು ಖಂಡಿಸಿಲ್ಲ. ಅದು ಅಕ್ಷಮ್ಯ ಅಪರಾಧ ಎಂದು ಹೇಳಿಲ್ಲ. ಅದರ ವಿರುದ್ಧ ತಕ್ಷಣ ಕಾನೂನು ಕ್ರಮಕ್ಕೆ ಆಗ್ರಹಿಸಿಲ್ಲ.

ಆತ ಅಲ್ಲಿ ಮಾತಾಡಿರುವುದು ಮುಸ್ಲಿಂ ಹೆಣ್ಣು ಮಕ್ಕಳ ಬಗ್ಗೆ. ಹನುಮಂತನ ಶೋಭಾ ಯಾತ್ರೆಗೂ ಮುಸ್ಲಿಂ ಹೆಣ್ಣು ಮಕ್ಕಳಿಗೂ ಏನು ಸಂಬಂಧ ?.

ಕನಿಷ್ಠ ಅಲ್ಲಾದರೂ ಹೆಣ್ಣು ಮಕ್ಕಳ ಭ್ರೂಣ ಹತ್ಯೆ ವಿರುದ್ಧ ಮಾತಾಡಬಹುದಿತ್ತು. ಹಿಂದೂ ಹೆಣ್ಣು ಮಕ್ಕಳು ಹೀಗೆ ಭೂಮಿಗೆ ಬರುವ ಮೊದಲೇ ಬಲಿಯಾಗುತ್ತಿರುವ ಘೋರ ಅನ್ಯಾಯದ ವಿರುದ್ಧ ಧ್ವನಿ ಎತ್ತಬಹುದಿತ್ತು. ಸ್ವತಃ ವೈದ್ಯಕೀಯ ಪದವೀಧರನೂ ಆಗಿರುವ ಈ ವ್ಯಕ್ತಿ ಅಲ್ಲಾದರೂ ಭ್ರೂಣ ಹತ್ಯೆ ವಿರುದ್ಧ ಜಾಗೃತಿ ಮೂಡಿಸಬೇಕಿತ್ತು.

ಆದರೆ ಆತನಿಗೆ ಧಾರ್ಮಿಕ ನಂಬಿಕೆಗೂ , ಹಿಂದೂ ಧರ್ಮಕ್ಕೂ, ಹಿಂದೂ ಮಹಿಳೆಯರಿಗೂ ಒಳಿತು ಮಾಡುವ ಯಾವುದೇ ಉದ್ದೇಶ ಇರಲಿಲ್ಲ.

ಆತನಿಗೆ ಇದ್ದಿದ್ದು ಹನುಮಂತನ ಹೆಸರಲ್ಲಿ ಮುಸ್ಲಿಂ ದ್ವೇಷ ಹರಡುವ ಅಜೆಂಡಾ. ಕೋಮು ರಾಜಕೀಯ ಮಾಡುವ ಗುರಿ. ಹಾಗಾಗಿ ಆತ ಹನುಮಂತನ ಶೋಭಾ ಯಾತ್ರೆಯಲ್ಲಿ ಹೋಗಿ ಮುಸ್ಲಿಂ ಮಹಿಳೆಯರ ಬಗ್ಗೆ ಮಾತಾಡಿದ್ದಾನೆ.

ಮುಸ್ಲಿಮರು ಮತ್ತು ಮುಸ್ಲಿಂ ಮಹಿಳೆಯರ ವಿಚಾರದಲ್ಲಿನ ಕಲ್ಲಡ್ಕ ಪ್ರಭಾಕರ್ ಭಟ್ ಹೇಳಿಕೆಗಳು ಆತನಂಥ ವ್ಯಕ್ತಿಗಳ ಬಾಯಿಂದ ಮಾತ್ರವೇ ಬರಲು ಸಾಧ್ಯ. ಕಲ್ಲಡ್ಕ ಹೇಳಿಕೆಯಲ್ಲಿ ಮೊದಲನೆಯದು, ತ್ರಿವಳಿ ತಲಾಖ್ ರದ್ದು ಮಾಡುವ ಮೂಲಕ ಮೋದಿ ಮುಸ್ಲಿಂ ಮಹಿಳೆಯರಿಗೆ ಮಹದುಪಕಾರ ಮಾಡಿದ್ದಾರೆ ಎಂಬುದನ್ನು ಬಿಂಬಿಸಲು ​ಆತ ಆಡಿರುವ ಅತ್ಯಂತ ಕೀಳು ಮಟ್ಟದ ಮಾತು.

ಎರಡನೆಯದು, ಮುಸ್ಲಿಂ ಯುವಕ ಯುವತಿಯರ ಮೇಲೆ ಲವ್ ಜಿಹಾದ್ ಆಪಾದನೆ. ಅಂದರೆ, ​ನಾವು ಕಳವಳ ಪಡಬೇಕಾಗಿರುವುದು ಇಂಥವರು ಹೇಗೆ ಬೇಕಾದರೂ ಮುಸ್ಲಿಂ ಸಮುದಾಯದ ಬಗ್ಗೆ ಮಾತಾಡಬಹುದು. ಯಾವ ಮಟ್ಟಕ್ಕೂ ಇಳಿದು ಮಾತನಾಡಬಹುದು​ ಎಂಬಂತಹ ಸ್ಥಿತಿಯ ಬಗ್ಗೆ.

ಮುಸ್ಲಿಂ ಸಮುದಾಯದ ದೊಡ್ಡ ಬೆಂಬಲ ಪಡೆದು ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಸರಕಾರ ಇರುವಲ್ಲಿಯೇ, ಮುಸ್ಲಿಂ ಸಮುದಾಯದ ಬಗ್ಗೆ ಇಷ್ಟೊಂದು ಅವಹೇಳನಕಾರಿಯಾದ ಹೇಳಿಕೆಗಳು ಇಂಥವರ ಬಾಯಿಂದ​ ಯಾವುದೇ ಅಡೆತಡೆ ಇಲ್ಲದೆ ಬರುತ್ತಿವೆ. ಮುಸ್ಲಿಮರ ಬಗ್ಗೆ, ಮುಸ್ಲಿಂ ಮಹಿಳೆಯರ ಬಗ್ಗೆ ಯಾರು ಬೇಕಾದರೂ ಏನು ಬೇಕಾದರೂ ಮಾತಾಡುವ ಲೈಸೆನ್ಸ್ ಕೊಟ್ಟಂತಹ ವಾತಾವರಣ ಈಗ ನಿರ್ಮಾಣವಾಗಿದೆ.

ಮುಂದಿನ ದಿನಗಳಲ್ಲಿ ಇದು ಇನ್ನಷ್ಟು ಹೆಚ್ಚುತ್ತಲೇ ಹೋಗುವುದು ಖಚಿತ. ಕಾನೂನು​, ನಿಯಮ​, ಪೊಲೀಸ್​, ಬಂಧನ, ಎಫ್ಐಆರ್ ​- ಇವೆಲ್ಲವೂ ಒಂದಿಷ್ಟೂ ತಡವಾಗದೆ ಜಾರಿಯಾಗುವುದು ಮು​ಸ್ಲಿಮರ ​ವಿರುದ್ಧ ಮಾತ್ರ ಎಂಬಂತಹ ಸ್ಥಿತಿಯನ್ನು ಇಲ್ಲಿ ನೋಡುತ್ತಿದ್ದೇವೆ. ಇದೇ ಕಲ್ಲಡ್ಕ ಪ್ರಭಾಕರ್ ಭಟ್ ಮುಸ್ಲಿಂ ಮಹಿಳೆಯರ ಬಗ್ಗೆ ಆಡಿದಂಥದೇ ಮಾತನ್ನು ಯಾರೂ ಯಾವ ಮಹಿಳೆಯರ ಬಗ್ಗೆಯೂ ಆಡಲು ಸಾಧ್ಯವಿಲ್ಲ, ಆಡಲೂಬಾರದು.

​

ಅಕಸ್ಮಾತ್ತಾಗಿ ಯಾರಾದರೂ ಆಡಿದ್ದಿದ್ದರೆ ಇಷ್ಟು ಹೊತ್ತಿಗೆ ರಾಜ್ಯದಲ್ಲಿ ಏನಾಗಿಬಿಡುತ್ತಿತ್ತು ಎಂಬುದನ್ನು​ ಬಹಳ ಸುಲಭವಾಗಿ ಊಹಿಸಬಹುದು.

ಆದರೆ, ಮುಸ್ಲಿಂ ಮಹಿಳೆಯರ ಬಗ್ಗೆ ಮಾತ್ರ ಇಷ್ಟೊಂದು ಅವಹೇಳನಕಾರಿಯಾಗಿ ಮಾತನಾಡಿದರೂ ಯಾರೂ ಅದರ ವಿರುದ್ಧ ದನಿಯೆತ್ತುವುದೇ ಇಲ್ಲ. ​ಸೋಮವಾರ ಬೆಳಗ್ಗೆ ಈ ವೀಡಿಯೊ ರೆಕಾರ್ಡಿಂಗ್ ಆಗುವವರೆಗೂ ಪ್ರಭಾಕರ್ ಭಟ್ ನೀಡಿರುವ ಅವಹೇಳನಕಾರಿ ಹೇಳಿಕೆ ವಿರುದ್ಧ ಯಾವುದೇ ಕಾನೂನು ಕ್ರಮವಾಗಿರುವ ವರದಿಯಿಲ್ಲ.

ಸರ್ಕಾರದಲ್ಲಿರುವ ಯಾರಿಗೂ ಅದರ ಬಗ್ಗೆ ಪ್ರತಿಕ್ರಿಯಿಸಬೇಕು, ಅದನ್ನು ಖಂಡಿಸಬೇಕು ಎಂದು ಅನಿಸುವುದೇ ಇಲ್ಲ. ಜಾಣ ಕಿವುಡು ಈ ಸರ್ಕಾರಕ್ಕೂ ಚೆನ್ನಾಗಿಯೇ ಇದೆ ಎಂಬುದರಲ್ಲಿ ಅನುಮಾನವೇ ಇಲ್ಲ. ಸಿದ್ದರಾಮಯ್ಯನವರ ಸರಕಾರವಿರುವಾಗಲೂ ಇಂತಹ ಜನರು ಹಾದಿ ಬೀದಿಯಲ್ಲಿ ಹೀಗೆ ಮಾತಾಡಿಕೊಂಡು ದಕ್ಕಿಸಿಕೊಳ್ಳುವುದು ಸಾಧ್ಯವಿದೆ ಎಂದಾದರೆ, ಇನ್ನಾವ ಸರ್ಕಾರದ ಮೇಲೆ ನಂಬಿಕೆ ಇಡುವುದು ಸಾಧ್ಯವಿದೆ?

ಅಲ್ಪಸಂಖ್ಯಾತ ಇಲಾಖೆಗೆ ಅನುದಾನ ಹೆಚ್ಚಿಸುವ ಇಂಗಿತವನ್ನು ಸಿದ್ದರಾಮಯ್ಯ ವ್ಯಕ್ತಪಡಿಸಿದ ಕೂಡಲೇ ಎಲ್ಲರೂ ಎದ್ದುಬಿದ್ದು ಬಂದು ಅದಕ್ಕೆ​ ಭಾರೀ ವಿರೋಧ ವ್ಯಕ್ತಪಡಿಸುತ್ತಾರೆ. ತಮಗೆ ಸಲ್ಲಬೇಕಾದುದನ್ನು ಕಸಿದು ಮುಸ್ಲಿಂ ಸಮುದಾಯಕ್ಕೆ ಕೊಡಲಾಗುತ್ತಿದೆ ಎನ್ನುವಂತೆ ಒಬ್ಬರ ಬೆನ್ನಲ್ಲೊಬ್ಬರು ಮಾತನಾಡುವುದು ನಡೆಯುತ್ತದೆ.

ಎಲ್ಲವನ್ನೂ ತೆಗೆದು ಮುಸ್ಲಿಮರಿಗೆ ಹಂಚಿಬಿಡಲಾಯಿತು ಎನ್ನುವಂತೆ​ ಸುಳ್ಳು ಸುಳ್ಳೇ ಪ್ರಚಾರ ಮಾಡಲಾಗುತ್ತದೆ. ಸಿದ್ದರಾಮಯ್ಯ ಅವರು ಮುಸ್ಲಿಮರಿಗೆ ನ್ಯಾಯ ಒದಗಿಸುವ ಬಗ್ಗೆ ಮಾತಾಡಿದಾಗ, ಮುಸ್ಲಿಂರು ಸೇರಿದಂತೆ ಯಾರಿಗೂ ಅನ್ಯಾಯವಾಗಲು ಬಿಡುವುದಿಲ್ಲ ಎಂದು ಹೇಳಿದಾಗ ಅದನ್ನು ಯಾವ ಪರಿ ತಿರುಚಿ, ಏನೇನೋ ಬಣ್ಣ ಹಚ್ಚಿ ಕೆಟ್ಟ ರಾಜಕೀಯ ಮಾಡಲಾಯಿತು ಎನ್ನೋದನ್ನು ನೋಡಿದ್ದೇವೆ.

ಬಿಜೆಪಿಯವರು ಒಂದೆಡೆಯಾದರೆ, ಅವರಿಗಿಂತ ಕಡಿಮೆಯಿಲ್ಲ ಎನ್ನುವಂತೆ ​ಹೆಚ್ಚಿನ ಮಾಧ್ಯಮಗಳು ಕೂಡ ಅತ್ಯಂತ ಹೊಲಸು ರಾಜಕೀಯ ಮಾಡಿದ್ದನ್ನು ನೋಡಿದ್ದೇವೆ. ಮಾತೆತ್ತಿದರೆ ಮುಸ್ಲಿಂ ತುಷ್ಠೀಕರಣ ಎಂದು ಕಾಂಗ್ರೆಸ್ ವಿರುದ್ಧ ಆರೋಪ ಮಾಡುವ ಈ ಮಂದಿ, ನಿಜವಾಗಿಯೂ ಈಗಿನ ಸರ್ಕಾರ ಮುಸ್ಲಿಂರಿಗೆ ಏನು ಮಹಾ ಕೊಟ್ಟಿದೆ, ಬೇರೆ ಸರ್ಕಾರಗಳು ಕೊಡದೇ ಇರುವಂಥದ್ದೇನನ್ನಾದರೂ ವಿಶೇಷವಾಗಿ ಮಾಡಿದೆಯಾ ಎಂದು ಕೇಳಿಕೊಳ್ಳುವುದೇ ಇಲ್ಲ.

ಈಗ ಕಲ್ಲಡ್ಕ ಥರದವರು ಮುಸ್ಲಿಂ ಸಮುದಾಯದ ಕುರಿತು ಇಷ್ಟೊಂದು ಅವಹೇಳನಕಾರಿಯಾಗಿ ಮಾತನಾಡಿದಾಗ ಸರ್ಕಾರ ಏನೂ ಕ್ರಮ ತೆಗೆದುಕೊಳ್ಳದೆ ಸುಮ್ಮನೆ ಇರುವುದನ್ನು ಕೂಡ ಅದೇ ಮಾಧ್ಯಮಗಳು ನೋಡುತ್ತಿವೆ. ಸರ್ಕಾರ ಏನಾದರೂ ಕ್ರಮ ತೆಗೆದುಕೊಂಡರೆ ಅದನ್ನು ಹಿಂದೂಗಳ ವಿರುದ್ಧ ಇರುವ ಸರ್ಕಾರ ಎಂದು ಬಿಂಬಿಸಲು ಬಳಸಿಯಾವೇ ಹೊರತು, ಈಗ ಮುಸ್ಲಿಂರ ಕುರಿತ ಅವಹೇಳನಕ್ಕೆ ಅವು ಯಾವ ಪ್ರತಿಕ್ರಿಯೆಯನ್ನೂ ಕೊಡುವುದಿಲ್ಲ. ಬದಲಾಗಿ ಕಲ್ಲಡ್ಕ ಪ್ರಭಾಕರ್ ಭಟ್ ಹೇಳಿಕೆಯನ್ನು ಹೆಚ್ಚು ಉತ್ಸಾಹದಿಂದ ಪ್ರಸಾರ ಮಾಡುತ್ತವೆ, ಪ್ರಚಾರ ಮಾಡುತ್ತವೆ.

ಇದು ಸದ್ಯ ಈ ರಾಜ್ಯದಲ್ಲಿರುವ ಸ್ಥಿತಿ. ಫೆಲೆಸ್ತೀನ್ ಪರ ಪ್ರತಿಭಟನೆ ಸಂದರ್ಭದಲ್ಲಿ ಕಾಂಗ್ರೆಸ್ ಸರ್ಕಾರವಿದ್ದ ಇದೇ ಕರ್ನಾಟಕದಲ್ಲಿ ಪೊಲೀಸರು ಏನೆಲ್ಲ ಮಾಡಿದರು ಎಂಬುದನ್ನು ನೋಡಿದ್ದೇವೆ. ರಾಜ್ಯದಲ್ಲಿ ಫೆಲೆಸ್ತೀನ್ ಪರ ಮಾತನಾಡಿದರೂ ಪೊಲೀಸರು ಕೇಸ್ ಹಾಕಿದರು. ಶಾಂತಿಯುತ ಪ್ರತಿಭಟನೆ ನಡೆಸಿದರೂ ಕೇಸ್ ದಾಖಲಿಸಲಾಯಿತು.

ಅಂತಾರಾಷ್ಟ್ರೀಯ ವಿಚಾರವಾಗಿರುವುದರಿಂದ ಪ್ರತಿಭಟನೆ ನಡೆಸುವುದರಿಂದ ಕಾನೂನು ಸುವ್ಯವಸ್ಥೆಗೆ ಧಕ್ಕೆ ಎಂದೆಲ್ಲ ನೆಪಗಳನ್ನು ಹೇಳಲಾಯಿತು. ರಾಷ್ಟ್ರಮಟ್ಟದಲ್ಲಿ ಕಾಂಗ್ರೆಸ್ ಫೆಲೆಸ್ತೀನ್ ಪರ ನಿಲುವನ್ನು ಪ್ರಕಟಿಸಿದ್ದರೂ, ಇಂಡಿಯಾ ಒಕ್ಕೂಟ ಕೂಡ ಫೆಲೆಸ್ತೀನ್ ಪರ ಹೇಳಿಕೆ ನೀಡಿದ್ದರೂ, ಕರ್ನಾಟಕದಲ್ಲಿನ ಕಾಂಗ್ರೆಸ್ ಸರಕಾರ ಫೆಲೆಸ್ತೀನ್ ಪರ ಶಾಂತಿಯುತ ಪ್ರದರ್ಶನಕ್ಕೆ ಅವಕಾಶ ನೀಡಲಿಲ್ಲ. ಪ್ರತಿಭಟನಾಕಾರರ ಮೇಲೆ ಕೇಸ್ ಹಾಕಲಾಯಿತು.

ಸಿದ್ದರಾಮಯ್ಯನವರ ನದರಿನಡಿಯಲ್ಲಿಯೇ ಹೀಗೆಲ್ಲ ಆಗಿತ್ತು. ​ಫೆಲೆಸ್ತೀನ್ ಗಾಗಿ ಪ್ರಾರ್ಥಿಸಿ ಎಂದು ಹೇಳಿದವರನ್ನು ಗಂಟೆಗಳೊಳಗೆ ಬಂಧಿಸಿ ಜೈಲಿಗಟ್ಟಲಾಯಿತು. ಆಗ, ಫೆಲೆಸ್ತೀನ್ ಪರ ನಿಲುವು ತೋರಿದವರ​ ಶಾಂತಿಯುತ ನಾಗರಿಕರ ವಿರುದ್ಧ ತೀವ್ರ ಗತಿಯಲ್ಲಿ ಕ್ರಮ ತೆಗೆದುಕೊಂಡವರು ಈಗೇಕೆ ಸುಮ್ಮನಿದ್ದಾರೆ?. ​

ಹೀಗಿರುವಾಗ, ತೀರಾ ಹೇಳಲು ಕೇಳಲು ಕೂಡ ಅಸಹ್ಯವಾಗುವ ಅನಾಗರಿಕ ಮಾತು ಆಡಿದವರ ವಿರುದ್ಧ ಮಾತ್ರ ಇಲ್ಲಿ ಕ್ರಮ ಜರುಗುತ್ತಲೇ ಇಲ್ಲ, ಯಾಕೆ?. ಇಂತಹ ಜನರು ಹಾಗೂ ಕೃತ್ಯಗಳ ವಿರುದ್ಧ ಕ್ರಮ ತೆಗೆದುಕೊಳ್ಳುವುದು ಕೂಡ ರಾಜಕೀಯ ಲೆಕ್ಕಾಚಾರವನ್ನು ಅವಲಂಬಿಸಿದೆಯೆ?.

ಒಂದು ವೇಳೆ ಇದೇ ನಿಜವಾದರೆ, ಅದಕ್ಕಿಂತ ಹೇಸಿಗೆ ಮತ್ತೊಂದಿದೆಯೆ?​. ಹಾಗಾದರೆ, ಸಿದ್ದರಾಮಯ್ಯ ಅವರಿಗೆ ಹಾಕಿದ ಆ ಒಂದು ಮತ ವ್ಯರ್ಥ ಎಂದೇ ಜನ ಹೇಳುತ್ತಿರುವುದು ತಪ್ಪಲ್ಲ ಎಂದೇ ಅಭಿಪ್ರಾಯ ಪಡಬೇಕಾಗುತ್ತದೆ. ಅಲ್ಪಸಂಖ್ಯಾತರನ್ನು ರಕ್ಷಿಸುವ ಸರ್ಕಾರ, ಅವರಿಗೆ ಅನ್ಯಾಯವಾಗಲು ಬಿಡದ ಸರ್ಕಾರ ತಮ್ಮದು ಎಂದು ಹೇಳಿಕೊಳ್ಳುವವರು ಈಗೇನು ಮಾಡುತ್ತಿದ್ದಾರೆ?. ಇವರ ರಕ್ಷಣೆಯೂ ಬರೀ ಹೇಳಿಕೆಗಳಲ್ಲಿ ಮಾತ್ರವೆ ಆಗಿದೆಯೆ ಹಾಗಾದರೆ?.

share
ಆರ್. ಜೀವಿ
ಆರ್. ಜೀವಿ
Next Story
X