2026ರ ಟಿ-20 ವಿಶ್ವಕಪ್ ಟೂರ್ನಿಯ ಟಿಕೆಟ್ ಗಳ ಮಾರಾಟ ಆರಂಭ

Photo Credit : ICC
ಹೊಸದಿಲ್ಲಿ, ಡಿ.11: ಮುಂಬರುವ 2026ರ ಆವೃತ್ತಿಯ ಟಿ-20 ವಿಶ್ವಕಪ್ ಟೂರ್ನಿಗಾಗಿ ಟಿಕೆಟ್ಗಳ ಮಾರಾಟ ಆರಂಭವಾಗಿದೆ ಎಂದು ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್(ಐಸಿಸಿ)ಗುರುವಾರ ಪ್ರಕಟಿಸಿದೆ.
ಕ್ರಿಕೆಟ್ ಅಭಿಮಾನಿಗಳು ಗುರುವಾರ ಸಂಜೆ 6:45ರಿಂದ ಪಂದ್ಯಗಳ ಟಿಕೆಟ್ಗಳನ್ನು ಖರೀದಿಸಲು ಆರಂಭಿಸಬಹುದು ಎಂದು ಐಸಿಸಿ ಸಾಮಾಜಿಕ ಮಾಧ್ಯಮದಲ್ಲಿ ನೀಡಿರುವ ಹೇಳಿಕೆಯೊಂದರಲ್ಲಿ ತಿಳಿಸಿದೆ.
10ನೇ ಆವೃತ್ತಿಯ ಟಿ-20 ಪಂದ್ಯಾವಳಿಯು ಭಾರತ ಹಾಗೂ ಶ್ರೀಲಂಕಾದ ಜಂಟಿ ಆತಿಥ್ಯದಲ್ಲಿ ಫೆಬ್ರವರಿ 7ರಿಂದ ಮಾರ್ಚ್ 8ರ ತನಕ ನಡೆಯಲಿದೆ.
ಕೊಲಂಬೊದಲ್ಲಿ ಫೆಬ್ರವರಿ 7ರಂದು ನೆದರ್ಲ್ಯಾಂಡ್ಸ್ ಹಾಗೂ ಪಾಕಿಸ್ತಾನ ತಂಡಗಳು ಸ್ಪರ್ಧಾವಳಿಯ ಆರಂಭಿಕ ಪಂದ್ಯವನ್ನು ಆಡಲಿವೆ. ಆ ನಂತರ ಬಾಂಗ್ಲಾದೇಶ ತಂಡವು ವೆಸ್ಟ್ಇಂಡೀಸ್ ವಿರುದ್ಧ ಹಾಗೂ ಸಹ ಆತಿಥ್ಯವಹಿಸಿರುವ ಭಾರತ ತಂಡವು ಅಮೆರಿಕ ಕ್ರಿಕೆಟ್ ತಂಡವನ್ನು ಮುಖಾಮುಖಿಯಾಗಲಿದೆ.
ಅಮೆರಿಕ ಹಾಗೂ ವೆಸ್ಟ್ಇಂಡೀಸ್ನಲ್ಲಿ 2024ರಲ್ಲಿ ನಡೆದಿದ್ದ ವಿಶ್ವಕಪ್ ಟೂರ್ನಿಯಲ್ಲಿ ಪ್ರಶಸ್ತಿ ಗೆದ್ದಿರುವ ಭಾರತ ತಂಡವು ಸದ್ಯ ಹಾಲಿ ಚಾಂಪಿಯನ್ ಆಗಿದೆ.





